Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರವು 2018 ರಲ್ಲಿ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ, ಬಡವರು ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಎಷ್ಟು ಉಚಿತ ಚಿಕಿತ್ಸೆಯನ್ನು ಪಡೆಯಬಹುದು? ಯೋಜನೆಯ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಗೋಲ್ಡನ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ತೋರಿಸುವ ಮೂಲಕ, ಫಲಾನುಭವಿಗಳು ಪಟ್ಟಿ ಮಾಡಲಾದ ಆಸ್ಪತ್ರೆಗಳಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ್ ಗೋಲ್ಡನ್ ಕಾರ್ಡ್ ದೇಶಾದ್ಯಂತ 13,000 ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾನ್ಯವಾಗಿದೆ. ಆಯುಷ್ಮಾನ್ ಗೋಲ್ಡನ್ ಕಾರ್ಡ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಮಾಡಬಹುದು. ಈ ಕಾರ್ಡ್ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳು ಸೇರಿದಂತೆ ಸುಮಾರು 1500 ಕಾಯಿಲೆಗಳಿಗೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ, ಫಲಾನುಭವಿ 5 ಲಕ್ಷ ರೂ.ಗಳವರೆಗೆ…
ಕನ್ನಡ ಚಿತ್ರರಂಗಕ್ಕೆ ಇರುವ ಕಂಟಕ ದೂರಾಗಲೆಂದು ಇತ್ತೀಚೆಗಷ್ಟೆ ಕಲಾವಿದರ ಸಂಘದ ವತಿಯಿಂದ ಹೋಮ, ಹವನ ವಿವಿಧ ರೀತಿಯ ಪೂಜೆಗಳನ್ನು ಮಾಡಿಸಲಾಯ್ತು. ನಟ ದೊಡ್ಡಣ್ಣ ದಂಪತಿ ಕಲಾವಿದರ ಪರವಾಗಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಕಲಾವಿದರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಗ್ಗೆ ಚಿತ್ರರಂಗದಲ್ಲಿ ಹೆಚ್ಚಿನ ಟೀಕೆಗಳೇನೂ ವ್ಯಕ್ತವಾಗಿರಲಿಲ್ಲ. ಆದರೆ ಈಗ ಸಾಮಾಜಿಕ ಕಾರ್ಯಕರ್ತರೊಬ್ಬರು ಕಲಾವಿದರ ಸಂಘದ ವಿರುದ್ಧ ಭ್ರಷ್ಟಾಚಾರ, ಅನೀತಿ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ನಟ ದೊಡ್ಡಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಾಮಾಜಿಕ ಹೋರಾಟಗಾರ, ರಾಜಕಾರಣಿ ಎನ್.ಆರ್.ರಮೇಶ್ ಈ ಬಗ್ಗೆ ಮಾತನಾಡಿದ್ದು, ‘ಸಹಕಾರ ಸಂಘಗಳ ನಿಯಮದ ಅನುಸಾರ ಕಲಾವಿದರ ಸಂಘಕ್ಕೆ ಚುನಾವಣೆಗಳನ್ನು ನಡೆಸಲಾಗಿಲ್ಲ. ಕಲಾವಿದರ ಸಂಘದ ಯಾವೊಬ್ಬ ಪದಾಧಿಕಾರಿಯೂ ಸಹ ಸೂಕ್ತವಾಗಿ ಜವಾಬ್ದಾರಿಗಳನ್ನು ನಿಭಾಯಿಸಿಲ್ಲ. ನಿಯಮದ ಪ್ರಕಾರ ಲೆಕ್ಕ ಪರಿಶೋಧನಾ ವರದಿಯನ್ನು ಸಹ ಸಲ್ಲಿಸಿಲ್ಲ. ದೊಡ್ಡಣ್ಣ ಕಲಾವಿದರ ಸಂಘದ ಖಜಾಂಚಿ ಆಗಿದ್ದಾರೆ ಆದರೆ ಉಳಿದ ಪದಾಧಿಕಾರಿಗಳು ಯಾರು? ಅವರ ಕಾರ್ಯವೇನು ಎಂಬುದು ಯಾರಿಗೂ ಗೊತ್ತಿಲ್ಲ’…
ತುಮಕೂರು: ಸಿರಾ ತಾಲ್ಲೂಕು ಹೊಯಿಲ್ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ವಿದ್ಯುತ್ ಅವಘಡದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ ಬಗ್ಗೆ ನಮ್ಮತುಮಕೂರು ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದಾರೆ. ಇಲ್ಲಿ ತೀರಾ ಅವೈಜ್ಙಾನಿಕವಾಗಿ ಟ್ರಾನ್ಸ್ ಫರ್ಮರ್ ಅಳವಡಿಸಿದ್ದು, ಬೆಸ್ಕಾಂನ ತಳಮಟ್ಟದ ಅಧಿಕಾರಿಗಳ ನಿರ್ಲಕ್ಷ ಹಾಗೂ ಮೇಲಿನ ಅಧಿಕಾರಿಗಳ ಬೇಜಾವ್ದಾರಿತನದಿಂದ ಒಂದು ಮಗುವಿನ ಜೀವ ಬಲಿಯಾಗಿದೆ. ಗ್ರಾಮಸ್ಥರು ಹಲವು ಬಾರಿ ಈ ಬಗ್ಗೆ SO / AEE ಗಮನಕ್ಕೆ ತಂದರೂ ಈ ಬಗ್ಗೆ ಗಮನಹರಿಸಿಲ್ಲ ಎನ್ನುವುದು ತಿಳಿದು ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಈ ರೀತಿ ನಾಲ್ಕು ಮಕ್ಕಳು ಬಲಿಯಾಗಿದ್ದಾರೆ. ಆಯೋಗ ಈಗಾಗಲೇ ರಾಜ್ಯದ್ಯಂತ…
ತುಮಕೂರು: ಪ್ರಸಿದ್ಧ ನಟ ವಿಕ್ರಂ ರವಿಚಂದ್ರನ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಸ್ನೇಹಿತರ ಬಳಗವು ಶೆಟ್ಟಿಹಳ್ಳಿಯಲ್ಲಿರುವ ಸ್ಪಂದನ ಅನಾಥಾಶ್ರಮದಲ್ಲಿ ಆಯೋಜಿಸಿತು. ಈ ಸಂದರ್ಭದಲ್ಲಿ ವಿಕ್ರಂರವರ ಆಪ್ತ ಸ್ನೇಹಿತರು, ಜಗದೀಶ್, ರಮೇಶ್, ಪರಮೇಶ್, ಸಿದ್ಧಲಿಂಗಪ್ಪ, ಬಾಬು ಮತ್ತು ಇತರ ಸದಸ್ಯರು ಭಾಗವಹಿಸಿದ್ದರು. ಅನಾಥಾಶ್ರಮದ ಮಕ್ಕಳಿಗೆ ವಿಶೇಷ ಭೋಜನವನ್ನು ವಿತರಿಸುವ ಮೂಲಕ ವಿಕ್ರಂ ಅವರ ಸ್ನೇಹಿತರು ಅವರು ಆಪ್ತವಾದ ಗೆಳೆಯನ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮವಣ್ಣ ಅವರಿಗೆ ತುಮಕೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನೀಡಲಾಗಿದ್ದ ಹಳೆಯ ಪರಿವೀಕ್ಷಣಾ ಕಟ್ಟಡವನ್ನು ದುರಸ್ತಿಗೊಳಿಸಿ ಕಚೇರಿಯನ್ನಾಗಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಸಚಿವ ಸೋಮಣ್ಣ ಅವರಿಗೆ ಕಚೇರಿಗೆ ಉಪಯೋಗಕ್ಕೆ ನೀಡಲು ನೀಡಲಾಗಿದ್ದ, ಅನುಮೋದನೆಯನ್ನು ಹಿಂಪಡೆಯಲಾಗಿದೆ ಎಂದು ಆಗಸ್ಟ್ 16 ರಂದು ಹೊರಡಿಸಲಾಗಿರುವ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಆಗಸ್ಟ್ ೩ರಂದು ಸರಕಾರದ ಅಧೀನ ಕಾಯದರ್ಶಿ ಎಂ.ಜಿ. ರಾಜಶೇಖರ್ ಹೊರಡಿಸಿರುವ ಆದೇಶ ಪತ್ರದಲ್ಲಿ ವಿ. ಸೋಮಣ್ಣ ಅವರ ಅಧಿಕಾರಾವಧಿ ಮುಗಿಯುವವರೆಗೆ ಕಚೇರಿ ಉಪಯೋಗಕ್ಕಾಗಿ ನೀಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಉಜನಿ ಗ್ರಾಮದಲ್ಲಿರುವ ಪ್ರೇಮಾಂಜಲಿ ಪ್ರೌಢಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಳ್ಳುವ ದಿನ ಇದಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಷಯವು ‘ವಿಕ್ಷಿತ್ ಭಾರತ,’ ಅಥವಾ ‘ಅಭಿವೃದ್ಧಿ ಹೊಂದಿದ ಭಾರತ’ ಆಗಿದೆ. ವಸಾಹತುಶಾಹಿ ಆಡಳಿತದಿಂದ ವಿಮೋಚನೆ ಪಡೆಯಲು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ, ಬಲಿದಾನ ಮಾಡಿದ ಎಲ್ಲಾ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಕೂಡ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ ಎಂದು ಸಂದೇಶ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಸರಿತಾ, ಸಿದ್ದಪ್ಪ, ಗಣಪತಿ, ರಫೀದ್, ವೆಂಕಟ್ ಪಾಟೀಲ್, ಸರೋಜಿನಿ ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಅರವಿಂದ್ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಕೊರಟಗೆರೆ: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ, ಎಲ್ಲಿ ನೋಡಿದರೂ ಸಡಗರ ಸಂಭ್ರಮ ಕಂಡು ಬಂತು. ಪ್ರತಿಯೊಂದು ಮನೆಯಲ್ಲೂ ಅವರವರ ಅನುಕೂಲಕ್ಕೆ ತಕ್ಕಂತೆ ಭಕ್ತಾದಿಗಳು ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ಕರ್ನಾಟಕ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗಟ್ಟಿತು. ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಅಲಂಕಾರ, ಪುಷ್ಪ ಅಲಂಕಾರದೊಂದಿಗೆ ತಾಯಿ ಮಹಾಲಕ್ಷ್ಮೀಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಪಂಚಾಭಿಷೇಕ ನಡೆಯಿತು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಕ್ಷೇತ್ರದಲ್ಲಿ ಮುಂಜಾನೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಎಲೆ ರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ತಾಯಿಯ ದರ್ಶನ ಪಡೆದರು. ತಾಯಿಯ ದರ್ಶನವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಗ್ಗೆ 5ಯಿಂದ ಸಂಜೆ 9 ಗಂಟೆವರೆಗೆ ದರ್ಶನದ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿದೆ. ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
“ಪ್ರತಿಶೋಧ” ಎಂಬ ಕಥೆ, ಪುರಾತನ ಕಾಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತದೆ, ಮತ್ತು ಕಲೆಯ ಶ್ರೇಷ್ಠತೆಯ ಮೇಲೆ ಪ್ರಾಮುಖ್ಯತೆ ನೀಡುತ್ತದೆ. ಈ ಕಥೆ, ಕಲಾವಿದರ ಮೂಲಕ ತರ್ಕ ಮತ್ತು ನ್ಯಾಯವನ್ನು ಪ್ರತಿಪಾದಿಸುವ ಶ್ರೇಷ್ಠ ಉದಾಹರಣೆಯಾಗಿದೆ. ಕಲೆಯ ಪ್ರಭಾವ ಮತ್ತು ಸಾಮರ್ಥ್ಯ: ಕಥೆಯ ಪ್ರಮುಖ ಪಾತ್ರಗಳು ರಾಮಸೇನ ಮತ್ತು ವಿಷ್ಣುಸೇನ, ಅವರು ತಮ್ಮ ಚಿತ್ರಕಲೆಯ ಮೂಲಕ ಸಮುದಾಯದಲ್ಲಿ ಕೀರ್ತಿಯನ್ನೂ, ಪ್ರಭಾವವನ್ನೂ ಸಾಧಿಸಿದ್ದಾರೆ. ಈ ಕಾಲದಲ್ಲಿ, ಚಿತ್ರಕಲೆಯು ಸಾಮಾಜಿಕ ಇಷ್ಟಗಳು ಮತ್ತು ಪ್ರಭಾವವನ್ನು ನಿಭಾಯಿಸುವ ಶಕ್ತಿ ಹೊಂದಿತ್ತು. ರಾಮಸೇನ ಮತ್ತು ವಿಷ್ಣುಸೇನ ಅವರ ಕಲೆ, ಶ್ರೇಷ್ಠತೆಯನ್ನು ತಲುಪುವುದು ಮಾತ್ರವಲ್ಲದೆ, ಅವರು ಬರೆದ ಚಿತ್ರಗಳಲ್ಲಿ ನೈತಿಕ ಪಾಠಗಳನ್ನು ಓದುಗರಿಗೆ ನೀಡುತ್ತದೆ. ಮೋಸ ಮತ್ತು ಪ್ರತಿಶೋಧ: ಕಥೆಯ ಸೆಟ್ಟಿಂಗ್ ನಲ್ಲಿ, ತಂತ್ರ ಮತ್ತು ಮೋಸಗಳು ಶ್ರೇಷ್ಠ ಕಲೆಯ ಮೇಲೆ ನೆಲೆಸಿದ ಪ್ರಸ್ತಾಪವನ್ನು ಒಳಗೊಂಡಂತೆ, ಅನುಕೇತು ತನ್ನ ಚತುರತೆಯನ್ನು ಪ್ರದರ್ಶಿಸುತ್ತದೆ. ತನ್ನ ನಷ್ಟವನ್ನು ಮರೆಮಾಡಲು, ಅವನು ರಾಮಸೇನನ ಪ್ರತಿಷ್ಠಿತ ಚಿತ್ರಕಲೆಯು ಚಿತ್ರೀಕೃತವಾದ ಪಾರಿವಾಳಗಳನ್ನು ಹಕ್ಕಿಗಳು ಎಂದು ಹೋಲಿಸುತ್ತಾನೆ.…
ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯಲಾಗುತ್ತದೆ. ಪವಾಡಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಅನೇಕ ದೇವಾಲಯಗಳು ಇಲ್ಲಿವೆ. ವಿಶಿಷ್ಟವಾದ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಹೆಸರುವಾಸಿಯಾದ ಇಂತಹ ಅನೇಕ ದೇವಾಲಯಗಳಿವೆ. ಅಂತಹ ಒಂದು ವಿಶಿಷ್ಟವಾದ ದೇವಾಲಯವು ಉತ್ತರಾಖಂಡದಲ್ಲಿದೆ. ಉತ್ತರಾಖಂಡದ ಬಾನ್ಸಿ ನಾರಾಯಣ ದೇವಾಲಯವು ಹಿಮಾಲಯದ ಮಡಿಲಲ್ಲಿರುವ ದೇವಾಲಯವಾಗಿದ್ದು, ತನ್ನ ವೈಶಿಷ್ಟ್ಯದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರಕ್ಷಾಬಂಧನದ ದಿನದಂದು ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ಕಾರಣಕ್ಕಾಗಿ ಇದು ನಿಗೂಢ ಮತ್ತು ಪವಿತ್ರ ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ. ಈ ದಿನ ಇಲ್ಲಿ ವಿಶೇಷ ಪೂಜೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನ ಇಲ್ಲಿಗೆ ಬಂದು ಪೂಜಿಸುವುದು ವಿಶೇಷವಾಗಿ ಮಂಗಳಕರವೆಂದು ನಂಬಲಾಗಿದೆ ಮತ್ತು ಈ ದಿನವು ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುವುದು ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಇಲ್ಲಿ ಮಾಡುವ ಪೂಜೆ ಮತ್ತು ದರ್ಶನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ನಂಬಲಾಗಿದೆ. ರಕ್ಷಾಬಂಧನದ ದಿನದಂದು ಇಲ್ಲಿ ದರ್ಶನಕ್ಕಾಗಿ ಭಕ್ತಾದಿಗಳು ಉದ್ದನೆಯ ಸರತಿ ಸಾಲಿನಲ್ಲಿ…
ಮಧುಗಿರಿ: ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತರುವ ಮೂಲಕ ಸಣ್ಣ ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವಕಾಶ ಕಲ್ಪಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ಪಟ್ಟಣದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಮಧುಗಿರಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು. ಕೆ. ಎನ್. ರಾಜಣ್ಣನವರು ಸಹಕಾರಿ ಕ್ಷೇತ್ರದಲ್ಲಿ ತಂದಿರುವ ಮೀಸಲಾತಿ ಇಡೀ ರಾಜ್ಯ ವ್ಯಾಪ್ತಿಗೆ ಅನ್ವಯವಾಗಲಿದ್ದು, ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಿದೆ ಇದರಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ ಆಶಯ ಸಾಕಾರಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ರಾಜಣ್ಣ ರವರು ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ಸಂಕಲ್ಪಿಸಿದ್ದು, ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ 18 ಎಕರೆ ಜಾಗ ನಿಗದಿಪಡಿಸಿದ್ದಾರೆ, ತಾಲೂಕಿನಲ್ಲಿ 67988 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿ 134 ಕೋಟಿ…