Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಬೀದರ್: ಜಿಲ್ಲಾ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮ ಪಂಚಾಯಿತಿಯಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಪರಮೇಶ್ವರ ಮೆತ್ರೆ, ಗ್ರಾ.ಪಂ. ಸದಸ್ಯರು ದೇವಿದಾಸ ಮಾಳಗೆ, ಗ್ರಾಪಂ ಸದಸ್ಯರು ಕರಬಸಪ್ಪಾ ಸೊರಾಳೆ, ಮಾಜಿ ಗ್ರಾಪಂ ಸದಸ್ಯ ಎಮ್.ಡಿ ನಯೂಮ್, ಎಸ್ ಡಿ ಎಮ್ ಸಿ.ಅಧ್ಯಕ್ಷ ಮಹೇಶ ಚಾಂಬೋಳೆ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ನಾಡಿನಾದ್ಯಂತ ಇಂದು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಶ್ರಾವಣ ಮಾಸವೂ ಹೌದು. ಚಿನ್ನಾಭರಣ ಖರೀದಿ ಮಾಡುವ ಮನಸ್ಸು ಮಾಡುವುದು ಸಹಜ. ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ ಎಷ್ಟಿದೆ ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ. ಬೆಂಗಳೂರು ಚಿನಿವಾರ ಪೇಟೆಯಲ್ಲಿ ನಿನ್ನೆ ವಹಿವಾಟು ಕೊನೆಗೊಂಡಾಗ ಸ್ಟಾಂಡರ್ಡ್ ಚಿನ್ನ (99.5 ಪರಿಶುದ್ಧ) 10 ಗ್ರಾಂಗೆ 72,600 ರೂಪಾಯಿ ಇತ್ತು. ಆಭರಣ ಚಿನ್ನದ ದರ ಗ್ರಾಂಗೆ 6,715 ರೂಪಾಯಿ ಇತ್ತು. ಇನ್ನು ಬೆಳ್ಳಿ ಸ್ಪಾಟ್ಗೆ ಕಿಲೋ ಒಂದರ ದರ 82,900 ರೂಪಾಯಿ ಇತ್ತು. ಇದೇ ವೇಳೆ ಮುಂಬಯಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿದರ ಕಿಲೋಗೆ 80,921 ರೂಪಾಯಿ ಇತ್ತು. ಸ್ಟಾಂಡರ್ಡ್ ಚಿನ್ನದ (99.5 ಪರಿಶುದ್ಧ) ದರ 10 ಗ್ರಾಂಗೆ 70,510 ರೂಪಾಯಿ, ಅಪರಂಜಿ ಚಿನ್ನ 10 ಗ್ರಾಂಗೆ 70,793 ರೂಪಾಯಿ ಇತ್ತು. ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ ಬೆಂಗಳೂರು- 71,500 ರೂಪಾಯಿ. ಮಂಗಳೂರು- 71,500…
ಔರಾದ: ತಾಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 78ನೇಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದಂತ ವೈದ್ಯಾಧಿಕಾರಿಗಳಾದ ರೇಣುಕಾ ನಾಗರಾಳಕರ್ ಧ್ವಜಾರೋಣ ನೆರವೇರಿಸಿದರು. ಆಡಳಿತ ವೈದ್ಯಾಧಿಕಾರಿಗಳಾದ ಡಾ.ಅಬ್ದುಲ್ ವಾಜಿದ್ ರವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗುರು ಅಂಕಲಗಿ ವೈಜಿನಾಥ ಚನ್ನಶೆಟ್ಟಿ ಗೋರಕ್ ನಾಥ್ ಮಚ್ಚೆಂದರ್ ಪಾಂಡು ಅರುಣ್ ಕುಮಾರ್ ಆಕಾಶ್ ಶ್ರೀಕಾಂತ್ ಟಿಎಂ ಮಚ್ಚಿ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೀದರ್: ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವ ಈಶ್ವರ್ ಖಂಡ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಜಿಲ್ಲೆಯ ಜನರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಸ್ವಾತಂತ್ರ್ಯ ಸಂಭ್ರಮಾಚರಣೆ – 2024 ಹಿನ್ನೆಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಕೇಂದ್ರ ಸಚಿವಾಲಯ ಕೊಡಮಾಡುವ ‘ವಿಶಿಷ್ಟ ಸೇವಾ ಪದಕ’ ಮತ್ತು ‘ಶ್ಲಾಘನೀಯ ಸೇವಾ ಪದಕ’ಕ್ಕೆ ಕರ್ನಾಟಕ ರಾಜ್ಯದಿಂದ 19 ಮಂದಿ ಭಾಜನರಾಗಿದ್ದಾರೆ. ಕೇಂದ್ರ ಗೃಹ ಇಲಾಖೆಯುವ ಕೊಡಮಾಡುವ ಪುರಸ್ಕಾರಗಳಿಗೆ ಈ ಕೆಳಗಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಪಾತ್ರರಾಗಿದ್ದಾರೆ. ಯಾರು ಯಾವ ಪುರಸ್ಕಾರ ಪಡೆಯಲಿದ್ದಾರೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ. ವಿಶಿಷ್ಟ ಸೇವಾ ಪದಕ ಪುರಸ್ಕೃತರು * ಚಂದ್ರಶೇಖರ್ ಎಂ, IPS, ADGP, ISD, ಬೆಂಗಳೂರು ಶ್ಲಾಘನೀಯ ಸೇವಾ ಪದಕ ಪುರಸ್ಕೃತರು * ಜೋಶಿ ಶ್ರಿನಾಥ್ ಮಹಾದೇವ, IPS ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ (ಬೆಂಗಳೂರು) * ಸಿ.ಕೆ. ಬಾಬಾ, IPS ಪೊಲೀಸ್ ಅಧೀಕ್ಷಕರು (ಬೆಂಗಳೂರು ಗ್ರಾಮಾಂತರ) * ರಾಮಗೊಂಡ ಬಿ.ಬಸರಗಿ, ಅಪರ ಪೊಲೀಸ್ ಅಧಿಕ್ಷರು (ಬಳ್ಳಾರಿ ಜಿಲ್ಲೆ) * ಎಂ.ಡಿ.ಶರತ್, ಪೊಲೀಸ್ ಅಧೀಕ್ಷರು, ಸಿಐಡಿ (ಬೆಂಗಳೂರು) * ವಿ.ಸಿ.ಗೋಪಾಲರೆಡ್ಡಿ, DCP, ಸಿಎಆರ್ ಪಶ್ಚಿಮ (ಬೆಂಗಳೂರು ನಗರ) *…
ತುಮಕೂರು: ಸರ್ಕಾರದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯ ಮಾಡಬೇಕು ಎಂದು ತುಮಕೂರು ತಾಲ್ಲೂಕು ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಾರದಮ್ಮ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ನಗರದ ಎಂ.ಜಿ.ರಸ್ತೆಯ ಬಾಲ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತಮ ಬಾಂಧವ್ಯ ಹೊಂದಿರಬೇಕು. ಸರ್ಕಾರ ರೂಪಿಸುವ ಎಲ್ಲ ಯೋಜನೆಗಳ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ನರೇಗಾ, ಇ–ಸ್ವತ್ತು, ಜಲ್ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಮ್. ಯೋಜನೆಗಳಿಂದ ದೊರೆಯುವಂತಹ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ತಲುಪಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಸುರೇಶ್ಗೌಡ ಅವರು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಹಾತ್ಮ ಗಾಂಧೀಜಿ…
ತುಮಕೂರು: ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ 2024–25ನೇ ಸಾಲಿನ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಸೆಪ್ಟೆಂಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816–2251736 ನ್ನು ಸಂಪರ್ಕಿಸಬೇಕೆಂದು ತುಮಕೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಯುಜಿಸಿ ಅನುಮೋದಿತ ಕೋರ್ಸ್ ಗಳ ಜುಲೈ ಆವೃತ್ತಿಯ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತುಮಕೂರು ಪ್ರಾದೇಶಿಕ ನಿರ್ದೇಶಕ ಡಾ. ಆರ್. ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ.. ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಲ್.ಐ.ಎಸ್ಸಿ., ಬಿ.ಎಸ್ಸಿ., ಎಂ.ಎ.. ಎಂ.ಸಿ.ಜೆ., ಎಂ.ಕಾಂ., ಎಂ.ಎಲ್.ಐ.ಎಸ್ಸಿ, ಎಂ.ಬಿ.ಎ., ಬಿ.ಎಸ್.ಡಬ್ಲ್ಯೂ/ಎಂ.ಎಸ್.ಡಬ್ಲ್ಯೂ/ಎA.ಸಿ.ಎ. ಹಾಗೂ ಪಿ.ಜಿ. ಸರ್ಟಿಫಿಕೇಟ್, ಡಿಪ್ಲೋಮಾ ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು ಕರಾಮುವಿ ಪ್ರಾದೇಶಿಕ ಕೇಂದ್ರ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ: ೦೮೧೬-೨೯೫೫೫೮೦, ಮೊ.ಸಂ: ೯೮೪೪೫೦೬೬೨೯, ೯೮೮೬೧೧೨೪೩೪, ೭೩೪೯೪೭೪೩೩೯ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ತುಮಕೂರು: ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ 78ನೇ ಸ್ವತಂತ್ರ್ಯ ದಿನಾಚರಣೆಯನ್ನ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಪಡೆ. ಗೃಹರಕ್ಷಕದಳ, ಎನ್ ಸಿಸಿ ತಂಡ, ಸ್ಕೌಟ್ಸ್ &ಗೈಡ್ಸ್ ತಂಡಗಳಿಂದ ಪಥಸಂಚಲ ಧ್ವಜ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಭಾರತ ಸರ್ವಜನಾಂಗದ ಶಾಂತಿಯ ತೋಟ, ಈ ದೇಶದಲ್ಲಿ ಹಲವಾರು ಜಾತಿಧರ್ಮಗಳು ಇದ್ದರೂ, ವಿವಿಧತೆಯಲ್ಲಿ ಏಕತೆಯನ್ನ ಕಾಣುತ್ತೇವೆ. ದೇಶದ ಐಕ್ಯತೆ ಸಾರ್ವಭೌಮವಿಷಯದಲ್ಲಿ ಪ್ರತಿಯೊಬ್ಬ ಭಾರತೀಯನೂ ಒಗ್ಗಟಿನಿಂದ ಇರಬೇಕು ಎಂದರು. ಅಂಗಾಂಗ ದಾನ ಶ್ರೇಷ್ಟದಾನವಾಗಿದೆ. ನಮ್ಮ ತಾಲ್ಲೂಕಿನ ಚಂದನ ಅಪಘಾತದಲ್ಲಿ ಮರಣಹೊಂದಿದರು ಅಂಗಾಂಗದಾನಮಾಡಿ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಆಕಸ್ಮಿಕ ಸಾವು ಸಂಭವಿಸಿದಾಗ ಅಂಗಾಂಗಳನ್ನ ಮಣ್ಣುಪಾಲು ಮಾಡುವ ಬದಲು ಹಲವರಿಗೆ ಜೀವದಾನ ಮಾಡಬಹುದು, ಆದರಿಂದ ಅಂಗಾಂಗ ದಾನದ ಅರಿವುಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ, ಭಾರತ ಪುಣ್ಯಭೂಮಿ ಈ ಪವಿತ್ರ ಭೂಮಿಸಲ್ಲಿ ಹುಟ್ಟಿದ ನಾವೇ ಪುಣ್ಯವಂತರು. ಸರ್ವರಿಗೂ ಸಮಪಾಲು ಸರ್ವರಿಗೂ…
ವಿಜ್ಞಾನಿಗಳು ಮಂಗಳ ಗ್ರಹದ ಮೇಲೆ ದ್ರವ ನೀರಿನ ಜಲಾಶಯವನ್ನು ಕಂಡುಹಿಡಿದಿದ್ದಾರೆ. ಮಂಗಳ ಗ್ರಹದ ಮೇಲಿರುವ ಬಂಡೆಕಲ್ಲಿನ ಕೆಳಗಡೆ ಈ ಸರೋವರಗಳಿವೆ ಎಂದು ನಾಸಾ ತಿಳಿಸಿದೆ. ಈ ಆವಿಷ್ಕಾರಗಳು ನಾಸಾದ ಮಾರ್ಸ್ ಇನ್‌ಸೈಟ್ ಲ್ಯಾಂಡರ್‌ನಿಂದ ಡೇಟಾದ ಹೊಸ ವಿಶ್ಲೇಷಣೆಯಿಂದ ಬಂದಿವೆ. ಈ ಲ್ಯಾಂಡರ್‌ಅನ್ನು ನಾಸಾ 2018ರಲ್ಲಿ ಮಂಗಳ ಗ್ರಹಕ್ಕೆ ತಲುಪಿಸಿದೆ. ಈ ಲ್ಯಾಂಡರ್ ಭೂಕಂಪಮಾಪಕವನ್ನು ಕೂಡ ತೆಗೆದುಕೊಂಡುಹೋಗಿತ್ತು. ಇದು ಕೆಂಪು ಗ್ರಹದ ಆಳದಿಂದ ನಾಲ್ಕು ವರ್ಷಗಳ ಭೂಕಂಪನಗಳನ್ನು ಕೂಡ ದಾಖಲು ಮಾಡಿದೆ. ಆ ಭೂಕಂಪಗಳನ್ನು ವಿಶ್ಲೇಷಿಸುವುದು ಮತ್ತು ನಿಖರವಾಗಿ ಗ್ರಹವು ಹೇಗೆ ಚಲಿಸುತ್ತದೆ ಎನ್ನುವ ಪರಿಶೀಲನೆ ವೇಳೆ ದ್ರವ ನೀರಿನ “ಭೂಕಂಪನ ಸಂಕೇತಗಳನ್ನು” ಬಹಿರಂಗಪಡಿಸಿದೆ. ಮಂಗಳದ ಧ್ರುವಗಳಲ್ಲಿ ಹೆಪ್ಪುಗಟ್ಟಿದ ನೀರು ಮತ್ತು ವಾತಾವರಣದಲ್ಲಿ ಆವಿಯ ಪುರಾವೆಗಳಿದ್ದರೂ, ಗ್ರಹದಲ್ಲಿ ದ್ರವ ನೀರು ಕಂಡುಬಂದಿರುವುದು ಇದೇ ಮೊದಲಾಗಿದೆ ಸಂಶೋಧನೆಗಳು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾಗಿವೆ. ಲ್ಯಾಂಡರ್ ನಾಲ್ಕು ವರ್ಷಗಳ ಕಾಲ “ಮಂಗಳ ಗ್ರಹದ ನಾಡಿ”ಯನ್ನು ಸದ್ದಿಲ್ಲದೆ ಆಲಿಸಿದ ನಂತರ, ಡಿಸೆಂಬರ್ 2022 ರಲ್ಲಿ…