Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಮೆಟ್ರೋ ರೈಲು ನಿಗಮವು (BMRCL) ಅತ್ಯಧಿಕ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ಬರೆದಿದೆ. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಲು ಸಾಲು ರಜಾದಿನಗಳು ಇರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ 9.17ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2011ರಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಈವರೆಗೆ ಪ್ರತಿನಿತ್ಯ ಸರಾಸರಿ 6.36 ಲಕ್ಷ ಜನರು ಸಂಚಾರ ಮಾಡುತ್ತಾರೆ. ಕಳೆದ 2024ರ ಆಗಸ್ಟ್6, 2024 ರಂದು ನಮ್ಮ ಮೆಟ್ರೋ ರೈಲಿನಲ್ಲಿ 8.26 ಲಕ್ಷ ಪ್ರಯಾಣಿಕರು ಸಂಚಾರ ಮಾಡಿ ಈವರೆಗಿನ ಅತ್ಯಧಿಕ ದಾಖಲೆ ನಿರ್ಮಿಸಲಾಗಿತ್ತು. ಆದರೆ, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಆ.14ರಂದು ಊರಿನತ್ತ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದ ಪ್ರಯಾಣಿಕ ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ, ಲಾಲ್‌ಬಾಗ್‌ನಲ್ಲಿ ಆಯೋಜನೆ ಮಾಡಲಾಗಿರುವ ಫ್ಲವರ್ ಶೋ ಕಾರ್ಯಕ್ರಮ ವೀಕ್ಷಣೆಗೆ ಹೋಗುವವರ ಸಂಖ್ಯೆಯೂ ಅಧಿಕತವಾಗಿದೆ. ಈ ಹಿನ್ನೆಲೆಯಲ್ಲಿ ಆ.14ರಂದು ಬರೋಬ್ಬರಿ 9.17 ಲಕ್ಷ ಪ್ರಯಾಣಿಕರು ಸಂಚಾರ ಮಾಡುವ…
ತುಮಕೂರು: ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ೭೦ ಆಯ್ದ ಸರ್ಕಾರಿ ಶಾಲೆಗಳಿಗೆ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ (ILP) ಹಾಗೂ EPSON ಸಂಸ್ಥೆಗಳ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಬಹು ಆಯಾಮ ಕಲಿಕಾ ಅಂಗಳವಾಗಿ ಪರಿವರ್ತಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ತಿಳಿಸಿದರು. ಜಿಲ್ಲೆಯ ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಕೆ.ಮತ್ತಿಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಗೆ ಪೂರಕವಾಗುವಂತೆ ಲ್ಯಾಪ್ ಟಾಪ್, ಪ್ರೊಜೆಕ್ಟರ್, ಸ್ಪೀಕರ್ಸ್, ಪಿಪಿಟಿ ಆಧಾರಿತ ಡಿಜಿಟಲ್ ಕಂಟೆಂಟ್, ಸ್ಕ್ರೀನ್, ಸುಮಾರು 200 ವಿಜ್ಞಾನ ಪರಿಕಲ್ಪನೆಗಳನ್ನು ವಿವರಿಸಬಹುದಾದ, 150 ಅಧಿಕ ಪ್ರಯೋಗಗಳನ್ನು ಮಾಡಿಸಬಹುದಾದ ವಿಜ್ಞಾನ ಪ್ರಯೋಗ ಕಿಟ್ಗಳನ್ನು ಪ್ರತಿ ಶಾಲೆಗೆ 2 ಕಿಟ್ನಂತೆ 70 ಶಾಲೆಗಳಿಗೆ ನೀಡಲಾಗಿದೆ ಎಂದು ತಿಳಿಸಿದರು. ಕಲರ್ ಕೋಡಿಂಗ್ ಮಾಡಲಾದ ಸುಮಾರು 350 ಕ್ಕೂ ಅಧಿಕ ಪುಸ್ತಕಗಳು, ಬುಕ್ ರ‍್ಯಾಕ್, ರಿಜಿಸ್ಟರ್ ಪುಸ್ತಕ, ಮುಂತಾದ ಪರಿಕರಗಳನ್ನು…
ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ‘ನಮ್ಮಭಿಮಾನದ ಅಭಿನಂದನೆ’ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿದ್ದು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸೇರಿದಂತೆ ಹಲವು ಗಣ್ಯರಿಗೆ ಅಭಿನಂದನೆ ಸಲ್ಲಿಸಿ ಸರ್ಕಾರಿ ನೌಕರರ ಕುಂದುಕೊರತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಿ ಯಶ್ವಸಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಕರೆ ನೀಡಿದ್ದಾರೆ. ಬೆಂಗಳೂರು ನಗರದ ಅರಮನೆ ಮ್ಯೆದಾನದಲ್ಲಿ ಆಗಸ್ಟ್ 17ರ ಶನಿವಾರ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿರುವ ‘ನಮ್ಮಭಿಮಾನದ ಅಭಿನಂದನೆ’ ಸಮಾರಂಭದ ಕುರಿತು ವಿವಿಧ ಶಾಖೆಗಳ ಅಧ್ಯಕ್ಷರು, ಮತ್ತು ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಿಗೆ ಮಾಹಿತಿ ನೀಡಲಾಗಿದೆ. ಸರ್ಕಾರಿ ನೌಕರರ ಸಂಘದಿಂದ ನೀಡಿರುವ ಪೋಸ್ಟರ್ ಗಳನ್ನು ಎಲ್ಲಾ ಸರ್ಕಾರಿ ಕಛೇರಿ/ ಸಂಸ್ಥೆಗಳಲ್ಲಿ ಅಂಟಿಸುವ ಮೂಲಕ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದ್ದು, ರಾಜ್ಯ ಸಂಘದಿAದ ನೀಡಲಾಗಿರುವ ಇಮೇಜ್ ಅನ್ನು ಎಲ್ಲ ನೌಕರರು ತಮ್ಮ ಭಾವಚಿತ್ರ ಸಮೇತ ಮೊಬೈಲ್ ಡಿಪಿಯಲ್ಲಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ ಸರ್ಕಾರಿ ಸಾಗುವಳಿ ಜಮೀನನ್ನು ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಆದೇಶಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಲಾಯಿತು. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸರ್ಕಾರಿ ಸಾಗುವಳಿ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮಾರ್ಗಸೂಚಿ ನೀಡಬೇಕೆಂದು ಮನವಿ ಮಾಡಲಾಯಿತು. ನಂತರ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಹಿಂದೆ ಭೂಮಿ ಸಾಗುವಳಿ ಮಾಡುತ್ತಿದ್ದು ಸಾಗುವಳಿ ಚೀಟಿ ಮತ್ತು ಪಹಣಿ ಕೂಡ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಬಹಳಷ್ಟು ಪ್ರದೇಶಗಳನ್ನು ಪರಿಭಾವಿತರಣ್ಯ ಎಂದು ವರ್ಗಾವಣೆ ಮಾಡಿ ಕೆಲವೊಂದು ಮಂಜೂರು ಜಮೀನುಗಳನ್ನು ಅರಣ್ಯ ಎಂದು ಪರಿಗಣಿಸಿರುತ್ತಾರೆ. ಇತ್ತೀಚಿಗೆ ಅರಣ್ಯ ಸಚಿವರು ಅರಣ್ಯ ಜಮೀನನ್ನು ಕುಲ್ಲಾ ಮಾಡಬೇಕೆಂದು ಆದೇಶಿಸಿದ್ದು ಮಂಜೂರಾದ ಜಮೀನುಗಳನ್ನು ಹೆಚ್ಚಾಗಿ ಮಧ್ಯಮ ಮತ್ತು ಸಣ್ಣ ವರ್ಗದ ರೈತ ಬೆಳೆಗಾರರು ಹೊಂದಿದ್ದು ಒತ್ತುವರಿ ತೆರವಿನಿಂದ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ರೈತ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದಾಗ , ಅಲ್ಲೇ ಇದ್ದ ನ್ಅರಣ್ಯ…
ಗ್ರಾಹಕರು ಖಾದಿ ಅಂಗಡಿಯಲ್ಲಿ ರಾಷ್ಟ್ರಧ್ವಜ ಕೊಳ್ಳುವುದರ ಜೊತೆ ಜೊತೆಗೆ ತಮ್ಮ ದಿನನಿತ್ಯ ಬಳಕೆಗೂ ಸಹ ಖಾದಿ ವಸ್ತ್ರಗಳನ್ನ ಬಳಕೆ ಮಾಡುವುದನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ರಾಷ್ಟ್ರಪ್ರೇಮವನ್ನ, ಗ್ರಾಮೀಣ ಜನರಿಗೆ ತೋರುವ ಸಹಕಾರವನ್ನ, ತಮ್ಮ ಮೈಮೇಲೆ ಧರಿಸಿ, ಗ್ರಾಮೀಣ ಉದ್ಯೋಗಸ್ಥರಿಗೆ ನಮ್ಮ ಸಹಕಾರದ ಹಸ್ತವನ್ನ ಚಾಚಿದಂತಾಗುತ್ತದೆ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು. ನಗರದಲ್ಲಿರುವ ಪ್ರತಿಯೊಂದು ಖಾದಿ ಅಂಗಡಿಯಲ್ಲೂ ಸಹ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ದಾರ ತಯಾರಿಸುವುದನ್ನು ಜನರಿಗೆ ತೋರಿಸಿಕೊಟ್ಟರೆ, ಖಾದಿ ಬಗ್ಗೆ ಅಭಿಮಾನ ಹೆಚ್ಚಾಗಿ, ಇನ್ನು ಹೆಚ್ಚಾಗಿ ಖಾದಿಯನ್ನ ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪ್ರತಿ ಖಾದಿ ಅಂಗಡಿಯಲ್ಲೂ ಸಹ ಚರಕವನ್ನು ಇಟ್ಟು, ಅವುಗಳ ಪ್ರದರ್ಶನ ಮತ್ತು ಬಳಕೆಯನ್ನ ಜನಸಾಮಾನ್ಯರಿಗೆ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಮಾತ್ರ ಜನರು ಬಾವುಟ ಖರೀದಿಗೆ ಖಾದಿ ಅಂಗಡಿಗೆ ಬರುವುದು ಸಾಮಾನ್ಯ, ಆದರೆ ಇನ್ನುಳಿದ ದಿನಗಳಲ್ಲಿ…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ತುಮಕೂರು ಮತ್ತು ಹೇಮಾವತಿ ನಾಗರಿಕ ಹಿತರಕ್ಷಣಾ ವೇದಿಕೆ (ರಿ), ಟೂಡಾ ಲೇಔಟ್, ಹೇಮಾವತಿ ಬಡಾವಣೆ, ರಾಜೀವ್ ಗಾಂಧಿನಗರ, ತುಮಕೂರು ಇವರುಗಳ ಸಹಯೋಗದೊಂದಿಗೆ 78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಗುರುವಾರ ಬೆಳಗ್ಗೆ 8:15 ಗಂಟೆಗೆ ಆಯೋಜಿಸಲಾಗಿತ್ತು. ಪ್ರೊ. ಹೆಚ್. ಎಸ್. ಶಿವಯೋಗಿ, ವಿಶ್ರಾಂತ ಪ್ರಾಂಶುಪಾಲರು, (ನವೋದಯ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ, ತುಮಕೂರು) ಇವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಂತರ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯರಾದ ನಾವು ಸ್ವಾತಂತ್ರ್ಯ ಸಿಕ್ಕ ದಿನವನ್ನು ಪ್ರತಿ ದಿನ ನೆನೆಯಬೇಕು. ಅದರ ಮಹತ್ವ ತಿಳಿಯಬೇಕು. ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದ ಪ್ರಾಣತೆತ್ತ, ಬಲಿದಾನವಾದ ಎಲ್ಲಾ ವೀರರನ್ನು ನೆನೆದು ಅವರಿಗೆ ನಮನ ಸಲ್ಲಿಸಬೇಕಾಗಿದೆ. ಆದರೆ ಇಂದು ಕೇವಲ ಸ್ವಾತಂತ್ರೋತ್ಸವ ಆಚರಣೆಯ ದಿನ ಮಾತ್ರ ನೆನೆಯುತ್ತಿರುವುದು ನೋವಾಗುತ್ತಿದೆ. ಇಂದಿನ ಯುವ…
ತುಮಕೂರು: ಸ್ವಾತಂತ್ರ್ಯದ ನಂತರ ಭಾರತವು ಸ್ವಾವಲಂಬನೆಯನ್ನು ಕಂಡುಕೊಂಡಿದ್ದು, ವಿಶ್ವದ 5ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸಿದ್ಧಗಂಗಾ ಮಠದ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಾ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಬಳಿಕ ಬಡತನ ರೇಖೆಯಲ್ಲಿ ಗುರುತಿಸಿಕೊಂಡು, ಭಾರತವು ಅಭಿವೃದ್ಧಿಯತ್ತ ಸಾಗುವುದಿಲ್ಲ ಎಂದು ಹಲವು ದೇಶಗಳು ಭಾವಿಸಿದ್ದವು. ಕಳೆದ 77 ವರ್ಷಗಳಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು 5ನೇ ಆರ್ಥಿಕ ದೇಶವಾಗಿ ಬೆಳೆದು ನಿಂತಿದೆ. ವಿದೇಶದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ವಿಶ್ವಕ್ಕೆ ತಾಂತ್ರಿಕ ಸಂಪನ್ಮೂಲ ಕಲ್ಪಿಸುವ ಶಕ್ತಿ ಗಳಿಸಿರುವ ಭಾರತವು ಬಲಿಷ್ಠ ದೇಶವಾಗಿದೆ ಎಂದು ಹೇಳಿದರು. ಚಂದ್ರನ ಬಳಿ ಹೋಗುವ ಸಾಧನೆಯನ್ನು ಮಾಡಿದ್ದೇವೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತಹ ಆಶಯಗಳನ್ನು ಈಡೇರಿಸಲು ಇನ್ನು ಸಾಧ್ಯವಾಗಿಲ್ಲವೇನು ಎಂದು ಅನ್ನಿಸುತ್ತಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಹಕ್ಕುಗಳನ್ನು…
ತುಮಕೂರು: 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಚೇರಿಯ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಐಪಿಎಸ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಅಬ್ದುಲ್ ಖಾದರ್, ಕೆಎಸ್ಪಿಎಸ್, ಡಿಎಆರ್ ಅಧಿಕಾರಿಗಳು, ನಗರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು. ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನಾಳೆ ಗುರುವಾರ (ಆ. 15) ಸ್ವಾತಂತ್ರ್ಯ ದಿನಾಚರಣೆ ಇದೆ. ಭಾರತದ ಷೇರು ಮಾರುಕಟ್ಟೆಗೆ ಅಂದು ರಜೆ ಇದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎರಡೂ ಕೂಡ ಬಂದ್ ಆಗಿರಲಿವೆ. ಷೇರು ಮಾರುಕಟ್ಟೆಯ ಕೆಲವೇ ರಜಾ ದಿನಗಳಲ್ಲಿ ಆಗಸ್ಟ್ 15ರದ್ದೂ ಒಂದು. 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 14 ಸಾರ್ವತ್ರಿಕ ರಜಾ ದಿನಗಳು ಷೇರುಪೇಟೆಗೆ ಇವೆ. ಈ ಆಗಸ್ಟ್ ತಿಂಗಳಲ್ಲಿ ಇದೊಂದೇ ರಜೆ ಇರುವುದು. ಸೆಪ್ಟಂಬರ್ನಲ್ಲಿ ಯಾವ ರಜೆಯೂ ಇಲ್ಲ. ನಂತರ ರಜೆ ಸಿಗುವುದು ಅಕ್ಟೋಬರ್ ತಿಂಗಳಲ್ಲಿ, ನವೆಂಬರ್ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ. ಷೇರು ಮಾರುಕಟೆಯಲ್ಲಿ ಡಿಸೆಂಬರ್ 31ರವರೆಗೂ ಇರುವ ರಜಾ ದಿನಗಳು ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ಅಕ್ಟೋಬರ್ 2: ಗಾಂಧಿ ಜಯಂತಿ ನವೆಂಬರ್ 1: ದೀಪಾವಳಿ ನವೆಂಬರ್ 15: ಗುರುನಾನಕ್ ಜಯಂತಿ ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ ಈ ಮೇಲಿನವು ಸಾರ್ವತ್ರಿಕ ರಜಾ ದಿನಗಳು. ಇವುಗಳ ಜೊತೆಗೆ ಪ್ರತೀ ವಾರ ಶನಿವಾರ ಮತ್ತು…
ಭಾರತದ ಧ್ವಜ ಸಂಹಿತೆ 2002ರ ನಿಯಮದ ಪ್ರಕಾರ ಧ್ವಜವನ್ನು ಆಚರಿಸಲು ಅದರದ್ದೇ ಆದ ನಿಯಮಗಳಿದ್ದು, ಭಾರತೀಯ ನಾಗರಿಕರಾದ ನಾವು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಜೈಲೂಟ ಗ್ಯಾರಂಟಿ. ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು: ಧ್ವಜ ಸಂಹಿತೆ 2002ರ ಪ್ರಕಾರ, ತ್ರಿವರ್ಣ ಧ್ವಜ 3:2 ಅನುಪಾತದಲ್ಲಿ ಇರಬೇಕು. ತಿರಂಗಾವನ್ನು ತಲೆಕೆಳಗಾಗಿ ಪ್ರದರ್ಶಿಸಬಾರದು. ಕೇಸರಿ ಬಣ್ಣವು ಮೇಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೇಲೆ ಕೇಸರಿ, ಮಧ್ಯ ಬಳಿ, ಕೆಳಗೆ ಹಸಿರು ಬಣ್ಣ ಇರಬೇಕು. ಧ್ವಜವು ಗೌರವ ಸ್ಥಾನದಲ್ಲಿರಬೇಕು. ಧ್ವಜ ಹರಿದಿರಬಾರದು ಹಾಗೂ ಕೊಳಕು ಆಗಿರಬಾರದು. ಅದರ ಮೇಲೆ ಏನೂ ಬರೆಯಬಾರದು ಅಥವಾ ಮುದ್ರಿಸಬಾರದು. ಬೇರೆ ಯಾವುದೇ ಧ್ವಜವನ್ನೂ ತ್ರಿವರ್ಣ ಧ್ವಜಕ್ಕೆ ಸಮನಾಗಿ ಮತ್ತು ಎತ್ತರದಲ್ಲಿ ಹಾರಿಸಬಾರದು. ಬಾವುಟದ ಮಧ್ಯಭಾಗದಲ್ಲಿ 24 ಗೆರೆಗಳ ಅಶೋಕ ಚಕ್ರ ಹೊಂದಿರಬೇಕು. ಅದು ಕಡು ನೀಲಿಯದ್ದಾಗಿರಬೇಕು. ಒಂದು ವೇಳೆ ಮನೆಯಲ್ಲಿ ಧ್ವಜ ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರಿಗೆ ತಾಗದಂತೆ ನೋಡಿಕೊಳ್ಳಬೇಕು. ತ್ರಿವರ್ಣ ಧ್ವಜವನ್ನು ಲಂಬವಾಗಿ…