Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ತೋವಿನಕೆರೆಯ ಪ್ರಾಥಮಿಕ ಪಾಠಶಾಲೆ 2024 ನೇ ಸಾಲಿನ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷೆ ಹಾಗೂ ಸದಸ್ಯರನ್ನು ಪೋಷಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಂಜುನಾಥ್ TA. ಅವರನ್ನು ಅಧ್ಯಕ್ಷರಾಗಿ ಮತ್ತು ವಸಂತ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಎಸ್ ಡಿ ಎಂ ಸಿ ರಚನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ವಿ.ನಟರಾಜುರವರ ಮಾರ್ಗದರ್ಶನದಲ್ಲಿ ಸಿ.ಎನ್. ದುರ್ಗಾ ಹೋಬಳಿಯ ಶಿಕ್ಷಣ ಸಂಯೋಜಕರಾದ ಕಾಮರಾಜು ಬಿ.ಆರ್. ಅವರ ನೇತೃತ್ವದಲ್ಲಿ ಹರ್ಷ ಟಿ.ಡಿ ಸಿಆರ್ಪಿ ತೋವಿನಕೆರೆ ಹಾಗೂ ಮುಖ್ಯ ಶಿಕ್ಷಕರಾದ ಸಿದ್ದಪ್ಪ ಅವರು ಎಸ್ ಡಿ ಎಂ ಸಿ ರಚನೆಯನ್ನು ಕೈಗೊಳ್ಳಲಾಯಿತು. ಸಂದರ್ಭದಲ್ಲಿ ಸದಸ್ಯರುಗಳಾದ ಸಿದ್ದಲಿಂಗಯ್ಯ ಬೋರಪ್ಪನಟ್ಟಿ, ಕರೀಂ ಸಾಬ್, ಸೂರೆನಹಳ್ಳಿ ಸಿದ್ದರಾಜು, ಜೋನಿಗರಲ್ಲಿ, ರವಿ, ಸಿಎಸ್ ಜಿ ಪಾಳ್ಯ ಶ್ರೀನಿವಾಸ್ ಎನ್, ತೋವಿನಕೆರೆ ಹನುಮಂತ್ ರಾಜು ಟಿವಿ, ತೋವಿನಕೆರೆ ಅನುಸೂಯ, ಬಂಡೆಹಳ್ಳಿ ರಾಧಾ, ಸುರೇನಹಳ್ಳಿ ಶಾರದಮ್ಮ, ತೋವಿನಕೆರೆ ನೇತ್ರಾವತಿ, ತೋವಿನಕೆರೆ ಶ್ವೇತಾ, ತೋವಿನಕೆರೆ ಲಕ್ಷ್ಮಿ ದೇವಿ, ತೋವಿನಕೆರೆ ಶಬಾನಾ ಬಾನು, ತೋವಿನಕೆರೆ ಬಸವರಾಜು, ಗೊಲ್ಲರಹಟ್ಟಿ…
ಪಾವಗಡ: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸುಪ್ರಸಿದ್ಧಿ ಹೊಂದಿರುವ ದೇವಸ್ಥಾನ ತುಮಕೂರು ಜಿಲ್ಲೆಯ ಪಾವಗಡ ಶನಿ ಮಹಾತ್ಮನ ಕ್ಷೇತ್ರ. ಗಡಿಭಾಗದಲ್ಲಿರುವ ಪಾವಗಡದ ಶನೇಶ್ವರ ದೇವಸ್ಥಾನ. ಇಲ್ಲಿನ ವಿಶೇಷವೇನೆಂದರೆ ಇಲ್ಲಿಗೆ ಬರುವ ಭಕ್ತಾದಿಗಳು ಬಹುತೇಕ ಉತ್ತರ ಕರ್ನಾಟಕ ಸೀಮಾಂಧ್ರ ಮತ್ತು ತೆಲಂಗಾಣದಿಂದ ಬರುತ್ತಾರೆ, ಇಲ್ಲಿಗೆ ಬರುವಂತಹ ಭಕ್ತಾದಿಗಳು ಶನಿ ದೋಷ ನಿವಾರಣೆಗೆ ದೇವಸ್ಥಾನದಲ್ಲಿ ಸರ್ವ ಸೇವೆ, ನವಗ್ರಹ ಪೂಜೆ ತೈಲಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿವಿಧಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಶನೇಶ್ವರಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಸಾಮಾನ್ಯ ಜನರು, ರಾಜಕಾರಣಿಗಳು, ಸಿನಿಮಾ ತಾರೆಯರು, ಉದ್ಯಮಿಗಳು. ಸರ್ಕಾರಿ ಅಧಿಕಾರಿಗಳು ಎಲ್ಲ ವರ್ಗದವರು ಶನೇಶ್ವರ ಸ್ವಾಮಿ ದರ್ಶನ ಪಡೆಯುತ್ತಾರೆ. ಉದ್ಯೋಗ ಆಕಾಂಕ್ಷಿಗಳು, ಮಕ್ಕಳಿಲ್ಲದವರು, ಮದುವೆ ಯೋಗ ಇಲ್ಲದವರು ಸ್ವಾಮಿಯ ದೇವಾಲಯಕ್ಕೆ ಹರಕೆ ಹೊತ್ತು ಬರುತ್ತಾರೆ. 3 ತಿಂಗಳಲ್ಲಿ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವಿಶಿಷ್ಟ ಶಕ್ತಿದೇವತೆ ಸೀತಲಾದೇವಿಯು ಸಹ ದೇವಸ್ಥಾನದ ಪ್ರಾಂಗಣದ ಸನ್ನಿಧಿಯಲ್ಲಿದೆ. ಸ್ವಾಮಿಯ ದರ್ಶನಕ್ಕೆ ಭಕ್ತರ…
ಮೈಸೂರು: ಆ ಬಂಡೆಯಿಂದಲೇ ಸಿದ್ದರಾಮಯ್ಯನವರಿಗೆ ಸಮಸ್ಯೆ ಇರುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಬಂಡೆ ಸಿಎಂ ಸಿದ್ದರಾಮಯ್ಯನವರ ಜೊತೆಗಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ನಿಖಿಲ್, ನಿನ್ನೆ ಸಿದ್ದರಾಮಯ್ಯನವರ ಜೊತೆ ಈ ಬಂಡೆ ಇದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಆದರೆ ಆ ಬಂಡೆಯಿಂದಲೇ ಸಿದ್ದರಾಮಯ್ಯನವರಿಗೆ ಸಮಸ್ಯೆ. ಬಂಡೆಯೇ ಸಿದ್ದರಾಮಯ್ಯನವರಿಗೆ ಪ್ರಾಬ್ಲಂ ಎಂದು ಟಾಂಗ್ ನೀಡಿದರು. ಅದೇ ಬಂಡೆಯಿಂದ ತನಗೆ ಸಮಸ್ಯೆಯಾಗುತ್ತಿದೆ ಎಂಬುದು ಸ್ವತಃ ಸಿದ್ದರಾಮಣ್ಣನವರಿಗೂ ಗೊತ್ತು. ತನ್ನ ಜೊತೆಗಿರುವ ನಾಯಕರೇ ತನಗೆ ತೊಂದರೆ ಕೊಡುತ್ತಿದ್ದಾರೆ. ಯಾವ ಯಾವ ಕಾಂಗ್ರೆಸ್ ನಾಯಕರು ತನಗೆ ಸಮಸ್ಯೆಯಾಗಿದ್ದಾರೆ ಎಂಬುದು ಕೂಡ ಅವರಿಗೆ ತಿಳಿದಿದೆ ಎಂದು ನಿಖಿಲ್ ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಳಗಾವಿ: ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದ ಪೊಲೀಸರ ತಂಡ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ದಾಳಿ ನಡೆಸಿದ್ದು, ಜೈಲು ನಿಯಮದ ಪ್ರಕಾರ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು. 260 ಪೊಲೀಸರು ದಾಳಿ ಏಕ ಕಾಲದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಜೈಲಿನ ಒಳಗೆ ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹೀಟರ್ ವೈರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಸೇರಿ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು, ಪತ್ತೆಯಾದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದರು. ನಸುಕಿನ ಜಾವ 5 ಗಂಟೆಗೆ ತಂಡದೊಂದಿಗೆ ಆಗಮಿಸಿದ ಕಮಿಷನರ್ ಸಂಪೂರ್ಣ ಪರಿಶೀಲನೆ ನಡೆಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಮುಂದಾಳತ್ವದಲ್ಲಿ ಗಂಟೆಗಟ್ಟಲೇ ಪರಿಶೀಲನೆ ನಡೆಸಿದ ಪೊಲೀಸರು ಮೆಟಲ್ ಡಿಟೆಕ್ಟರ್, ಶ್ವಾನದಳಗಳ ಮೂಲಕ ತಪಾಸಣೆ ನಡೆಸಿದರು. ಜೈಲಿನಲ್ಲಿ ನಿಷೇಧಿತ ಅಕ್ರಮ ವಸ್ತುಗಳ ಬಳಕೆ ಬಗ್ಗೆ ದೂರುಗಳು ಬಂದ ಹಿನ್ನೆಲೆ ಜೈಲಿನ ಮೇಲೆ ದಾಳಿ ನಡೆಸಿರುವುದಾಗಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರಲ್ಲದೇ…
ವಯನಾಡ್: ಭೀಕರ ಭೂಕುಸಿತದಿಂದ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಜನ ನೆಲೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡಿಗೆ ಶನಿವಾರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ, ದುರಂತ ಸ್ಥಳವಾದ ಚೂರಲ್ ಮಲ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಮೀಕ್ಷೆ ವೇಳೆ ಪ್ರಧಾನಿ ಅವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಿಜೆಪಿ ಸಂಸದ ಸುರೇಶ್ ಗೋಪಿ ಇದ್ದರು. ವೈಮಾನಿಕ ಸಮೀಕ್ಷೆ ನಂತರ ಕಲ್ಪೆಟ್ಟಾದಲ್ಲಿರುವ ಎಸ್ ಕೆಎಂಜೆ ಹೈಯರ್ ಸೆಕೆಂಡರಿ ಶಾಲೆ ಸಮೀಪ ಹೆಲಿಕಾಪ್ಟರ್ ಬಂದಿಳಿಯಲಿದ್ದು, ಅಲ್ಲಿಂದ ಅವರು ರಸ್ತೆ ಮಾರ್ಗವಾಗಿ ಕೆಲವು ಭೂಕುಸಿತ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಮೈಸೂರು: ನನ್ನ ವಿರುದ್ಧದ ಆರೋಪಗಳನ್ನು ಎದುರಿಸುತ್ತೇನೆ, ರಾಜಕೀಯ ಹಾಗೂ ಕಾನೂನಿನ ಮೂಲಕ ಪ್ರತ್ಯುತ್ತರ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ತಮ್ಮ ನಿವಾಸದ ಬಳಿ ಪತ್ರಕರ್ತರ ಜೊತೆಗೆ ಅವರು ಮಾತನಾಡಿದರು. ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಜನರ ಮುಂದೆ ಇಡುತ್ತೇನೆ ಎಂದು ಅವರು ತಿಳಿಸಿದರು. ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಕೆಲವು ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಮಾತನಾಡುತ್ತೇನೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ ಎಂದು ಸಿಎಂ ಹೇಳಿದರು. ಬಿಜೆಪಿ- ಜೆಡಿಎಸ್‌ನವರು ಪಾದಯಾತ್ರೆ ಮಾಡಿದ್ದಕ್ಕೆ ನಾವು ಜನಾಂದೋಲನ ಸಮಾವೇಶ ಮಾಡಿದೆವು. ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದು ತಿಳಿಸಲು ಜನಾಂದೋಲನ ಸಮಾವೇಶ ನಡೆಸಿದೆವು. ನನಗೆ ಮಸಿ ಬಳಿಯಲು ವಿರೋಧ ಪಕ್ಷದವರು ಪ್ರಯತ್ನ ಪಡುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದದಿಂದ ಬಂದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ…
ಶಿವಮೊಗ್ಗ: ಬಿ.ವೈ.ವಿಜಯೇಂದ್ರ ಮಾರಿಷಸ್ ಗೆ 10 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ ಅಂತ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಹ ಹೋರಾಟ ಮಾಡುತ್ತೇವೆ. ನ್ಯಾಯಾಂಗ ಹೋರಾಟ ಮಾಡುತ್ತೇವೆ. ಬಿಜೆಪಿಯವರ ವಿರುದ್ದ ಜನರ ಬಳಿ ಹೋಗುತ್ತೇವೆ. ಅವರ ಕಾಲದಲ್ಲಿ 25 -– 30 ಹಗರಣ ನಡೆದಿವೆ ಅದನ್ನು ಜನರ ಮುಂದೆ ತಿಳಿಸುತ್ತೇವೆ ಎಂದು ಅವರು ಹೇಳಿದರು. ಮುಡಾ ಹಗರಣ ನಡೆದಾಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಅವರ ಪಕ್ಷದ ಶಾಸಕರೇ ಇದ್ದರು. ಮುರುಗೇಶ ನಿರಾಣಿ, ಕುಮಾರಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಆ ಪ್ರಕರಣ ಏನಾಯ್ತು? ಕೋವಿಡ್ ವೇಳೆ ಎರಡು ಸಾವಿರ ಕೋಟಿ ಹಗರಣ ಆಗಿದೆ. ಯಡಿಯೂರಪ್ಪ, ಸುಧಾಕರ್ ಹಗರಣ ಮಾಡಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಃ ಕಾರಣ ಹೋರಾಟ ಮಾಡುತ್ತಿದ್ದಾರೆ. 40…
ಬೆಂಗಳೂರು: ರೇಣುಕಾಸ್ವಾಮಿ ಕೇಸ್ ಗೆ ಸಂಬಂಧಿಸಿದಂತೆ ಇಂದು ನಟ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಲಾಗುತ್ತಿದೆಯಂತೆ ಹತ್ಯೆಯ ದಿನ ಸ್ಪೋನಿ ಬ್ರೂಕ್ ಪಬ್ ನಲ್ಲಿ ನಟ ದರ್ಶನ್, ಪ್ರದೋಷ್ ಜೊತೆಗೆ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ನಂತರ ಚಿಕ್ಕಣ್ಣ ತನ್ನ ಮನೆಗೆ ಹೋಗಿದ್ದರು. ಈ ಬಗ್ಗೆ ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಿದ್ದರು, ಇದೀಗ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಚಿಕ್ಕಣ್ಣ ಹೇಳಿಕೆ ದಾಖಲಿಸಲಿದ್ದಾರೆ. ಆ ದಿನ ಪಾರ್ಟಿ ಮುಗಿಸಿ ಚಿಕ್ಕಣ್ಣ ಸೀದಾ ತನ್ನ ಮನೆಗೆ ತೆರಳಿದ್ದರು. ದರ್ಶನ್ ಜೊತೆಗೆ ಚಿಕ್ಕಣ್ಣ ಶೆಡ್ ಗೆ ಹೋಗಿರಲಿಲ್ಲ. ಹಾಗಾಗಿ ಈ ಕೇಸ್ ನಲ್ಲಿ ಚಿಕ್ಕಣ್ಣ ಅವರ ಪಾತ್ರವಿರಲಿಲ್ಲ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ ಹಾಗೂ ಸಿಬ್ಬಂದಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆಯನ್ನು ಬಡಿಸಿ, ಪ್ರಾರ್ಥನೆ ಮಾಡಿಸಿ ವಿಡಿಯೋ ಮಾಡಿಸಿಕೊಂಡ ಬಳಿಕ ಕೈಯಿಂದ ಮೊಟ್ಟೆಯನ್ನು ಕಿತ್ತುಕೊಂಡ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಕ್ಕಳ ಕೈಯಿಂದ ಅಂಗನವಾಡಿ ಸಿಬ್ಬಂದಿ ಮೊಟ್ಟೆಯನ್ನು ಕಿತ್ತುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗುಂಡೂರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಮಕ್ಕಳು ಆಸೆಯಿಂದ ಮೊಟ್ಟೆ ತಿನ್ನಲು ತಟ್ಟೆಗೆ ಕೈ ಹಾಕಿದಾಗ ಅಡುಗೆ ಸಿಬ್ಬಂದಿ ಮಕ್ಕಳ ಕೈಯಿಂದ ಮೊಟ್ಟೆ ಕಸಿದುಕೊಳ್ಳುತ್ತಿದ್ದಾರೆ. ಈ ವೇಳೆ ಮಕ್ಕಳು ನಿರಾಸೆಯಿಂದ ನೋಡುತ್ತಿರುವ ದೃಶ್ಯ ಸಾರ್ವಜನಿಕರ ಮನಕರಗಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚಿತ್ರದುರ್ಗ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಅದು ಹಿಂದೂ ಧರ್ಮದ ಭಾಗವಲ್ಲ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ 30ನೇ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಭಾಗ ಲಿಂಗಾಯತ ಧರ್ಮ ಎನ್ನುವುದು ಸರಿಯಲ್ಲ ಎಂದರು ಹಿಂದೂ ಧರ್ಮದಲ್ಲಿರುವ ವೇದ, ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲಗಳಲ್ಲ ಎಂದಿರುವ ಅವರು, ಹಿಂದೂ ಎನ್ನುವುದು ಅನೈತಿಕ, ಅನಾಚಾರಗಳಿಂದ ಒಳಗೊಂಡಿದೆ. ಇಂಥ ಧರ್ಮವನ್ನು ಶರಣರು ನಿರಾಕರಿಸಿ ಜಾತ್ಯತೀತ ತತ್ವಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವನ್ನು ನಾಡಿಗೆ ಬಿತ್ತರಿಸಿ ಸಾಕ್ಷಾತ್ಕರಿಸಿದ್ದಾರೆ. ಹಾಗಾಗಿ ಯಾವತ್ತೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296