Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಮಂಡ್ಯ: ರಾಜ್ಯ ಸರಕಾರ ಎಲ್ಲಾ ಜಲಾಶಯಗಳ ಕ್ರಸ್ಟ್ ಗೇಟ್ ಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಾಕ್ ತುಂಡಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇದು ದೊಡ್ಡ ಅನಾಹುತ. 19ನೇ ಕ್ರಸ್ಟ್ ಗೇಟ್ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಒಳ್ಳೆಯ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆ ಆಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 70 ವರ್ಷಗಳ ಹಿಂದೆಯೇ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್ ಲಾಕ್…
ಶಿರಸಿ: ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 35 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಹಂಪನಕಟ್ಟಾ ಲೈಟ್ ಹೌಸ್ ಹಿಲ್ ರಸ್ತೆಯ ಬಿ.ಐ.ಮೊಹಮ್ಮದ್ ರಫೀಕ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ತಾಲ್ಲೂಕಿನ ಹುಲೇಕಲ್ ಸಮೀಪದ ಹೆಂಚರಟಾದ ಅಬ್ದುಲ್ ಮತಿನ‌್ ಅಬ್ದುಲ್ ಗಫಾರ ಸಾಬ್, ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ ಹಾಗೂ ನಾಝೀಯಾ ಅಬ್ದುಲ್ ಮತೀನ್ ವಂಚನೆ ಎಸಗಿದ ಆರೋಪಿಗಳಾಗಿದ್ದಾರೆ. ಈ ಮೂವರು ರಫೀಕ್ ಗೆ ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ 35 ಲಕ್ಷ ರೂ. ಪಡೆದು, ಅಂಗಡಿ ಕೊಡಿಸದೇ, ಪಡೆದ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ನವದೆಹಲಿ: ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಹನ್ನೊಂದು ಬಾಂಗ್ಲಾದೇಶಿ ಪ್ರಜೆಗಳ ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ BSF ಭಾನುವಾರ ತಿಳಿಸಿದೆ. ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮೇಘಾಲಯದ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ನುಸುಳಲು ನುಸುಳುಕೋರರು ಯತ್ನಿಸಿದ್ದರು. ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ. ಭಾರತಕ್ಕೆ ನುಸುಳುತ್ತಿದ್ದ 11 ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿಯಲ್ಲಿ ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಗಡಿಯಿಂದ ತಲಾ ಇಬ್ಬರನ್ನು ಬಂಧಿಸಲಾಗಿದ್ದು, ಮೇಘಾಲಯ ಗಡಿಯಿಂದ ಏಳು ಮಂದಿಯನ್ನು ಬಂಧಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ಕೃಷಿಕರೊಂದಿಗೆ ಆತ್ಮೀಯವಾಗಿ ಬೆರೆತರು. ಸಚಿವರಿಗೆ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡಿದರು. ಇದೇ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, 2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ಸೀತಾಪುರ ಗ್ರಾಮದಲ್ಲೇ ಭತ್ತ ನಾಟಿ ಮಾಡಿದ್ದೆ. ಅಂದು ಕೂಡ ಆಗಸ್ಟ್ 11ರಂದೇ ಭತ್ತದ ನಾಟಿ ಮಾಡಿದ್ದೆ. ಈಗ ಅದೇ ದಿನಾಂಕದಲ್ಲಿ ಮತ್ತೆ ಭತ್ತ ನಾಟಿ ಮಾಡಿದೇನೆ. ಇದು ಕಾಕತಾಳೀಯ ಅನ್ನಿಸುತ್ತಿದೆ. ಈಗ ಕೇಂದ್ರ ಸಚಿವನಾಗಿ, ಮಂಡ್ಯ ಜಿಲ್ಲೆ ಸಂಸದನಾಗಿ ಭತ್ತ ನಾಟಿ ಮಾಡಿದ್ದೇನೆ. ಇದಕ್ಕಿಂತ ಮಹಾಭಾಗ್ಯ ಏನಿದೆ? ಎಂದರು. ರೈತ ಮಹಿಳೆಯರ ಜತೆಗೂಡಿ ಭತ್ತದ ನಾಟಿ ಮಾಡಿದ್ದೇನೆ. ಈ ಭಾಗದ ರೈತರು ನಾಯಕರು ಮತ್ತೆ ನಾಟಿಗೆ ಬನ್ನಿ ಎಂದು ಪ್ರೀತಿಯಿಂದ ಕರೆದರು. ಸಿಎಂ ಆಗಿದ್ದಾಗ ಮೊದಲ ಬಾರಿಗೆ ನಾಟಿ ಮಾಡಿದ್ದೆ. ಈಗ ಕೇಂದ್ರದ ಮಂತ್ರಿ ಆಗಿದ್ದೇನೆ. ರೈತರಿಗೆ ಆತ್ಮಸೈರ್ಯ ತುಂಬಲು ಈ…
ಬೀದರ್: ಜಿಲ್ಲೆಯ ಹುಲಸೂರಿನಲ್ಲಿ ಪತ್ರಕರ್ತರೆಂದು ಹೇಳಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಲಸೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಬೇಲೂರು ಗ್ರಾಮದ ನಿವಾಸಿ ಸುಧಾಕರ ಸೂಯ೯ವಂಶಿ ಹಾಗೂ ಬೇಟಬಾಲಕುಂದಾ ಗ್ರಾಮದ ನಿವಾಸಿ ವಿಶ್ವನಾಥ ಸಂಗಪ್ಪ ಕರಸಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ರಕರ್ತರ ಹೆಸರಿನಲ್ಲಿ ಬೆದರಿಕೆ ಆರೋಪ ಇಬ್ಬರ ವಿರುದ್ಧ ಹುಲಸೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌರ್ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪತ್ರಕರ್ತರ ಹೆಸರಿನಲ್ಲಿ ಈ ಇಬ್ಬರು ಆರೋಪಿಗಳು ಶಾಲೆಯ ದೃಶ್ಯವನ್ನು ಸೆರೆ ಹಿಡಿದು ಹಾಗೂ ಪೋಟೊ ತೆಗೆದು ಶಿಕ್ಷಕರಿಗೆ ಹೆದರಿಸುತ್ತಿದ್ದರು. ಶಾಲೆಯ ಸುರಕ್ಷಿತೆ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಶಿಕ್ಷಕ ಸುಧಾಕರ ಮಹೇಂದ್ರಕರ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಆರೋಪಿತರು ಬೇಲೂರು ಗೌರ್ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಾವು ಪತ್ರಕರ್ತರೆಂದು ಹೇಳಿ ಜನರಿಗೆ ಹೆದರಿಸಿ ಸಮಾಜದಲ್ಲಿ ಶಾಂತಿಗೆ ಭಂಗ ತರುವಂತಹ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಮೇಗಳಪಾಳ್ಯ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ಪಠ್ಯಕ್ರಮದ ಎಡಿಪೈ ಶಾಲೆಯ ಕಟ್ಟಡ ನಿರ್ಮಾಣದ ಭೂಮಿಪೂಜೆ ಭಾನುವಾರದಂದು ನೆರವೇರಿತು. ನೇಕಾರ ಎಜುಕೇಷನ್ ಟ್ರಸ್ಟ್ ನ ವತಿಯಿಂದ ಸ್ಥಾಪನೆಗೊಳುತ್ತಿರುವಈ ಶಾಲೆಯು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಬೇಕು ಎಂದು ನ್ಯಾಯಾಧೀಶರಾದ ಜೆ.ಎ.ಮಂಜುನಾಥ ತಿಳಿಸಿದರು. ಶಾಲೆ ಕಟ್ಟುವುದು ಸುಲಭ ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಉತ್ತಮ ಜ್ಞಾನವಂತರನ್ನಾಗಿಸುವುದು ಶ್ರಮದ ವಿಷಯ. ಈ ಕಾರ್ಯದದಲ್ಲಿ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಯಶಸನ್ನು ಸಾಧಿಸಲಿ ಎಂದು ಹಾರೈಸುತ್ತೇನೆ ಎಂದರು. ಶ್ರೀ ಚೌಡೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಉಮೇಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿಬೆಳೆಸುವುದು ಸುಲಭದ ಮಾತಲ್ಲ. ಗೆಳೆಯರು ಆ ಕಾರ್ಯಕ್ಕೆ ಕೈಹಾಕಿ ಶ್ರಮಿಸುತ್ತಿದ್ದಾರೆ. ನಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಎಡಿಫೈ ಶಿಕ್ಷಣ ಸಂಸ್ಥೆಯ ಅಭಿಷೇಕ್ ಶರ್ಮ ಮಾತಾನಾಡಿ ಈ ಪ್ರದೇಶವು ಶಾಲೆಯ ರಚನೆಗೆ ಸೂಕ್ತವಾಗಿದ್ದು, ಪರಿಸರದ ನಡುವೆ ವಿದ್ಯಾರ್ಜನೆ ಉತ್ತಮವಾಗಿರುತ್ತದೆ ಎಂದರು. ನೇಕಾರ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ…
ಪುತ್ತೂರು: ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “ಬ್ರೈಟ್ ಭಾರತ್” ಸಂಸ್ಥೆ ಇದೀಗ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ. ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!? ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು 91 86185 14684ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಬ್ರೈಟ್ ಭಾರತ್ ಯೋಜನೆಯ ಬಗ್ಗೆ ಮಾಹಿತಿ ವಿಶೇಷವಾಗಿ ಇದೊಂದು ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳ ತಮ್ಮ ಉಳಿತಾಯದ ಸಾವಿರ ರೂಪಾಯಿಯನ್ನು ಇಪ್ಪತ್ತು ತಿಂಗಳು…
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ನಿನ್ನೆ (ಆಗಸ್ಟ್ 09) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಈ ಸಿನಿಮಾ ಪಡೆದುಕೊಂಡಿದೆ. ಪ್ರೇಕ್ಷಕರು ‘ಸಲಗ’ದೊಂದಿಗೆ ಹೋಲಿಸಿ ನೋಡುತ್ತಿದ್ದಾರೆ. ಪತ್ರಿಕೆಗಳಲ್ಲಿ ನೆಗೆಟಿವ್ ವಿಮರ್ಶೆಗಳು ಪ್ರಕಟವಾಗಿವೆ. ಇದರ ನಡುವೆಯೂ ಉತ್ತಮ ಮೊತ್ತವನ್ನೇ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆ ಹಾಕಿದೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸುಮಾರು 9 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಮೊದಲ ದಿನ 9-10 ಕೋಟಿ ಗಳಿಕೆ ಮಾಡಿರುವುದು ‘ಭೀಮ’ ಪಾಲಿಗೆ ಬಹಳ ಒಳ್ಳೆಯ ಮೊತ್ತವೇ ಆಗಿದೆ. ‘ಭೀಮ’ ಸಿನಿಮಾ, ಡ್ರಗ್ಸ್ ವಿರುದ್ಧ ನಿಲವು ತಳೆದ ಲೋಕಲ್ ರೌಡಿಯೊಬ್ಬನ ಕತೆ ಒಳಗೊಂಡಿದೆ. ಬೆಂಗಳೂರಿನಲ್ಲಿ ಗಾಂಜಾ ಹೇಗೆ ಪ್ರಸಾರ ಆಗುತ್ತಿದೆ, ಹೇಗೆ ಯುವಕರು ನಶೆಯ ಜಾಲದೊಳಕ್ಕೆ ಬೀಳುತ್ತಿದ್ದಾರೆ ಎಂಬುದನ್ನು…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾಪಾಗಿದೆ. ಇನ್ನು ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ವಿಜಯಲಕ್ಷ್ಮಿ ಪತಿಗಾಗಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಕೂಡ ಹಲವೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಸಹ ಮಾಡಿಸುತ್ತಿದ್ದಾರೆ. ನಟ ದರ್ಶನ್ ಯಾವಾಗ ಬಿಡುಗಡೆ ಆಗುತ್ತಾರೆ ಎಂದು ದೇವಸ್ಥಾನದ ಅರ್ಚಕರೇ ದೈವದ ಮೊರೆ ಹೋಗಿರುವ ಘಟನೆ ನಡೆದಿದೆ. ಹಾಗಾದರೆ ದೈವ ನುಡಿದ ಭವಿಷ್ಯ ಏನು ಎಂದು ಇಲ್ಲಿ ತಿಳಿಯಿರಿ. ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದ ಅರ್ಚಕರ ಮಗಳ ಮೂಲಕ ಕುಟ್ಟೊ ಕಲ್ಲು ಮೂಲವಾಗಿ ದರ್ಶನ್ ಬಗ್ಗೆ ಓಂ ಶಕ್ತಿ ಶಾರದಾಂಬೆ ದೇವಿ ಭವಿಷ್ಯ ನುಡಿದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ಓಂ ಶಕ್ತಿ ಶಾರದಾಂಬೆ ಬಿಸುವ ಕಲ್ಲು ಮೂಲಕ ಭವಿಷ್ಯ ನುಡಿದ ದೈವ, ದರ್ಶನ್ ಸದ್ಯ ಮೀನ ರಾಶಿಯಲ್ಲಿದ್ದಾರೆ. ಯಾವುದಕ್ಕೂ ಗ್ರಹಚಾರ ಸರಿಯಾಗಿಲ್ಲ. ಗುರುಬಲ ಇಲ್ಲದೇ ಇರುವುದರಿಂದ ಕೆಟ್ಟ ದೆಸೆ ನಡೆಯುತ್ತಿದೆ, ಶನಿ ಬಂದು ಕೂತಿದ್ದಾನೆ…
ಭಾರತದಲ್ಲಿ ರಮ್ ಮದ್ಯವನ್ನು ಬಡವರ ಮದ್ಯ ಎಂದೇ ಕರೆಯುತ್ತಾರೆ. ಇಲ್ಲೊಂದು ಬೆಲ್ಲದ ರಮ್ ಕುಡಿಯಲು ಸಿದ್ಧವಾಗಿದೆ. ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ಇದೀಗ ಭಾರತ ತನ್ನದೇ ಆದ ವಿಶೇಷ ರಮ್ ತಯಾರಿಸಿದೆ. ಇದು ನಮ್ಮ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ ಅನ್ನೋದು ಮತ್ತೊಂದು ವಿಶೇಷ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ಮೂಲಕ ಇದೀಗ ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹುಲಿ ರಮ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೊದಲ ಭಾರಿಗೆ ಭಾರತ ಬೆಲ್ಲದ ಡಿಸ್ಟಿಲ್ಲರ್ ಮೂಲಕ ಈ ಮದ್ಯ ತಯಾರಿಸಲಾಗಿದೆ. ನಂಜನಗೂಡಿನಲ್ಲಿ ಈ ವಿಶೇಷ ಮದ್ಯ ತಯಾರಾಗಿದೆ. ಆಗಸ್ಟ್ 15ರಂದು ಈ ಮದ್ಯ ದೇಶಾದ್ಯಂತ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕುರಿತು ಅರುಣ್ ಅರಸ್ ಹಾಗೂ ಚಂದ್ರಾ ಎಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹುಲಿ ರಮ್ ಭಾರತದಲ್ಲಿ ಉತ್ಪಾದನೆಯಾದ ರಮ್. ಇದು ಹುಲಿ ಕನ್ನಡ ಪದ. ಭಾರತದಲ್ಲಿ ಮೊದಲ ಬಾರಿಗೆ ತಯಾರಾದ ಮೈಕ್ರೋ ಡಿಸ್ಟಲರಿಯಲ್ಲಿ ತಯಾರಿಸಿದ ವಿಶ್ವದರ್ಜೆಯ ಬೆಲ್ಲದ ರಮ್ ಇದಾಗಿದೆ. ನಮ್ಮ…