Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ತುಮಕೂರು: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವತಿಯಿಂದ ೨೦೨೪-೨೫ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೇವಾಸಿಂಧು ತಂತ್ರಾಂಶದ ಮೂಲಕ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಸಾಲ, ಗಂಗಾಕಲ್ಯಾಣ, ಅರಿವು–ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ, ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)ಗಳಡಿ ಸಾಲ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಸವಿತಾ ಮತ್ತು ಅದರ ಉಪಜಾತಿಗಳಿಗೆ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್, ತುಮಕೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆಗಸ್ಟ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್ www.kssd.karnataka.gov.in ಅಥವಾ ಸಹಾಯವಾಣಿ ಸಂಖ್ಯೆ: ೦೮೦-೨೨೩೭೪೮೩೨, ೮೦೫೦೭೭೦೦೦೪, ೮೦೫೦೭೭೦೦೦೫ ಅಥವಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ ೦೮೧೬-೨೦೦೫೦೦೮ನ್ನು ಸಂಪರ್ಕಿಸಬೇಕೆಂದು ನಿಗಮದ ಪಡೆದುಕೊಳ್ಳಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯನಾಗರಿಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ, ಸಾಹಿತ್ಯ, ಕಾನೂನು, ಪ್ರತಿಭೆ/ಕ್ರೀಡೆ, ಹಿರಿಯನಾಗರಿಕರ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯನಾಗರಿಕರಿಗೆ ೬ ವೈಯಕ್ತಿಕ ಹಾಗೂ ಹಿರಿಯನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ೧ ಸಂಸ್ಥೆ ಸೇರಿ ಒಟ್ಟು ೭ ಪ್ರಶಸ್ತಿಗಳನ್ನು ನೀಡಲಾಗುವುದು. ಆಸಕ್ತ ಹಿರಿಯ ನಾಗರಿಕರು/ಸಂಸ್ಥೆಗಳು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಂ.ಜಿ.ರಸ್ತೆ, ತುಮಕೂರು ಇವರಿಂದ ಅರ್ಜಿ ಪಡೆದು, ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ ೩೧ರೊಳಗಾಗಿ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಇಲಾಖೆಯ ಜಿಲ್ಲಾ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂ.ವಾ. ಸಂಖ್ಯೆ: ೦೮೧೬-೨೨೭೦೦೨೯ನ್ನು ಸಂಪರ್ಕಿಸಿ ಪಡೆಯಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಚಿದಾನಂದ ಮೂರ್ತಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್, ವಿ.ಎಂ.ಏ.ಪಿ.ಎಸ್. ಟೆಕ್ ಇಂಡಿಯಾ ಪ್ರೈ.ಲಿ. ಹಾಗೂ ಕರ್ನ್-ಲೀರ‍್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗಾರ್ಥಿಗಳಿಗಾಗಿ ಆಗಸ್ಟ್ 13ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಐ.ಟಿ.ಐ, ಡಿಪ್ಲೊಮಾ, ಯಾವುದೇ ಪದವಿ, ಎಂಎಸ್ಸಿ, ಬಿಎಡ್. ಹಾಗೂ ಎಂಕಾಂ. ಪಾಸಾದ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂಖ್ಯೆ ೦೮೧೬-೨೨೭೮೪೮೮, ೯೦೭೧೦೨೧೧೪೩ನ್ನು ಸಂಪರ್ಕಿಸಬೇಕೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ವಿವಿಧ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಡಿ ಅರ್ಹರಿಗೆ ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಫಾರಂಗೇಟ್ ಘಟಕ, ಕಡಿಮೆ ವೆಚ್ಚದಲ್ಲಿ ಹಣ್ಣು ಮಾಗಿಸುವ ಘಟಕ ನಿರ್ಮಾಣಕ್ಕೆ ಸಹಾಯಧನ ಕಲ್ಪಿಸಲಾಗುವುದು. ನೀರಿನಲ್ಲಿ ಕರಗುವ ರಸಗೊಬ್ಬರ ಘಟಕ, ಲಘು ಪೋಷಕಾಂಶಗಳ ಮಿಶ್ರಣ ಘಟಕ, ಹವಾಮಾನ ಆಧಾರಿತ ಘಟಕ, ಸೋಲಾರ್ ಪಂಪ್‌ಸೆಟ್, ಬೆಳೆ/ಹಣ್ಣು/ಹೂ ಹೊದಿಕೆ ಮತ್ತು ಮೋಹಕ/ಚಿಗುಟಾದ ಬಲೆಗಳ ಸೌಲಭ್ಯಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಪಹಣಿ, ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಹಿರಿಯ ಸಹಾಯಕ ನಿರ್ದೇಶಕ ಕಚೇರಿ ಅಥವಾ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು: ೦೮೧೬-೨೨೭೯೭೦೫, ಗುಬ್ಬಿ: ೦೮೧೩೧-೨೨೨೬೫೯, ಶಿರಾ: ೦೮೧೩೫-೨೭೬೩೧೦, ಕುಣಿಗಲ್: ೦೮೧೩೨-೨೨೧೯೮೧, ತಿಪಟೂರು: ೦೮೧೩೪-೨೫೧೪೨೪, ಚಿಕ್ಕನಾಯಕನಹಳ್ಳಿ: ೦೮೧೩೩-೨೬೭೪೫೭, ಮಧುಗಿರಿ: ೦೮೧೩೭-೨೮೨೪೧೭, ತುರುವೇಕೆರೆ: ೦೮೧೩೯-೨೮೮೩೫೦, ಕೊರಟಗೆರೆ: ೦೮೧೩೮-೨೩೨೯೨೦, ಪಾವಗಡ-೦೮೧೩೬-೨೪೪೦೬೪ನ್ನು ಸಂಪರ್ಕಿಸಬಹುದೆAದು ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ…
ತುಮಕೂರು: ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಜಿಲ್ಲಾ ಮಟ್ಟದ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ತಿಳಿಸಿದರು. ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವತಿಯಿಂದ ಟೌನ್ ಹಾಲ್, ಚರ್ಚ್ ಸರ್ಕಲ್, ಭದ್ರಮ್ಮ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತ ಸೇರಿ ನಗರ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಗೆ ಜವಾಬ್ದಾರಿವಹಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂದು ಸಂಜೆ 4:30 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುರೇಶ್ ಸಭೆಗೆ ಮಾಹಿತಿ ತಿಳಿಸಿದರಲ್ಲದೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ 9 ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ 3 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ತೋಟಗಾರಿಕೆ ಇಲಾಖೆಯಿಂದ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ವೇದಿಕೆ ಮುಂಭಾಗ ಹೂವಿನ ಕುಂಡ ಹಾಗೂ ಅಲಂಕಾರಿಕ ಗಿಡಗಳ ವ್ಯವಸ್ಥೆ ಮಾಡಲು ಸೂಚನೆ…
ತುಮಕೂರು: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿ ಒಟ್ಟು ೪೧ ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಅಪಘಾತ ಸ್ಥಳಗಳಲ್ಲಿ ಎಚ್ಚರಿಕೆ–ಸೂಚನಾ ಫಲಕಗಳು, ಸ್ಪೀಡ್ ಬ್ರೇಕರ್, ಮಾರ್ಗ ಸೂಚಕಗಳನ್ನು ಅಳವಡಿಸಿ ಅಪಘಾತ ಪ್ರಮಾಣ ತಗ್ಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಕಾರಣ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು. ರಾಜ್ಯದ ವಿವಿಧ ಜಿಲ್ಲೆಯ ಸಾರಿಗೆಗಳು ಜಿಲ್ಲೆಯಲ್ಲಿರುವ ರಾಷ್ಟ್ರೀಯ…
ತುಮಕೂರು: ಮದ್ಯಪಾನ ಬಿಟ್ಟು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ಜೀವನ ಪ್ರಾರಂಭಿಸಿ, ಡಾ.ಡಿ.ವಿರೇಂದ್ರ ಹೆಗ್ಗಡೆರವರು ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಮದ್ಯ ಸೇವಿಸಿ ತಮ್ಮ ಜೀವನವನ್ನು ಹಾಳುಮಾಡಿಕೊಂಡ ಜನರನ್ನು ಒಂದೆಡೆ ಸೇರಿಸಿ 8 ದಿನಗಳ ಕಾಲ ಸಾರ್ವಜನಿಕರು, ದಾನಿಗಳ ಸಹಕಾರದೊಂದಿಗೆ ಶಿಬಿರ ಏರ್ಪಡಿಸಿ ಕುಡಿತವನ್ನು ಬಿಡಿಸಿ ಲಕ್ಷಾಂತರ ಜನರಿಗೆ ಉತ್ತಮ ಜೀವನವನ್ನು ಕಟ್ಟಿಕೊಟ್ಟವರು. ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ, ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸಿ ಎಂದು ಹಿರೇಮಠದ ಡಾ.ಶ್ರೀ ಶ್ರೀ ಶಿವನಾಂದಶಿವಾಚಾರ್ಯಸ್ವಾಮೀಜಿಗಳು ಆಶೀರ್ವದಿಸಿದರು. ಭೀಮಸಂದ್ರ ಗಣಪತಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ೧೮೩೩ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವಾರಾಧ್ಯರವರು ಎಲ್ಲರೂ ಜೀವನದಲ್ಲಿ ಮದ್ಯಪಾನ ಬಿಟ್ಟು…
ತುಮಕೂರು: ಮುಂಬರಲಿರುವ ಗಣೇಶನ ಹಬ್ಬದಲ್ಲಿ ಪರಿಸರಸ್ನೇಹಿ ಗಣಪತಿಗಳನ್ನು ಇಟ್ಟು, ಪೂಜಿಸಿ, ಕೆರೆಕಟ್ಟೆಗಳನ್ನ ಸಂರಕ್ಷಿಸಿ, ಯಾವುದೇ ವಾಯುಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಮಾಡದಂತೆ ದೇವರನ್ನು ಪ್ರಾರ್ಥಿಸಿ, ಪರಿಸರದ ಜೊತೆಗೆ ನಮ್ಮ ಹಬ್ಬಗಳು ಸಹ ಸಾಗಲಿ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್.ಕೆ.ಎಸ್. ಸ್ವಾಮಿ ಹಾರೈಸಿದ್ದಾರೆ. ಬರಲಿರುವ ಗಣೇಶನ ಹಬ್ಬಕ್ಕೆ ಈಗಾಗಲೇ ಬಣ್ಣ ಬಣ್ಣದ ವೈವಿಧ್ಯಮಯವಾದ ಗಣಪತಿಗಳನ್ನ ಕಲಾವಿದರು ತಯಾರು ಮಾಡಿ ಇಟ್ಟಿದ್ದಾರೆ, ಒಂದೇ ಸಾರಿ ಅವು ಮಾರುಕಟ್ಟೆಗೆ ಬಂದು ಲಗ್ಗೆ ಹಾಕುತ್ತವೆ. ಅದರಲ್ಲಿ ಬೇಕಾದಷ್ಟು ಬಣ್ಣಗಳನ್ನ ಹಚ್ಚಿ, ಅವು ಕೆಲವು ರಾಸಾಯನಿಕಗಳು ಇರಬಹುದು, ಇನ್ನೂ ಕೆಲವು ನೈಸರ್ಗಿಕವಾಗಿರಬಹುದು. ಅವೆರಡರ ವ್ಯತ್ಯಾಸ ತಿಳಿಯದಲೇ ಜನ ರಾಸಾಯನಿಕ ಇರುವ ಗಣಪತಿಗಳನ್ನೇ ಕೊಂಡು ಪೂಜೆ ಮಾಡಿ, ಒಂದೇ ದಿವಸದಲ್ಲಿ ಅಥವಾ ಮೂರನೇ ದಿವಸದಲ್ಲಿ ಸುತ್ತಮುತ್ತಲಿರುವ ಕೆರೆಗಳಿಗೆ, ನದಿಗಳಿಗೆ, ಸಮುದ್ರಗಳಿಗೆ ಬಿಡುತ್ತಿರುವುದರಿಂದ ನೀರಿನಲ್ಲಿ ಬಣ್ಣಗಳು ಕರಗಿ ಅಲ್ಲಿರುವ ಜಲಪ್ರಾಣಿಗಳಿಗೆ ವಿಷವಾಗಿ, ಅವುಗಳು ಸಾವನ್ನಪ್ಪುವುದನ್ನು ನಾವು ತಡೆಯಬೇಕು ಎಂದರು. ಹಬ್ಬ ಮಾಡುವ…
ತುಮಕೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ “ಕನ್ನಡ ನಡೆ ಶಾಲಾ ಕಾಲೇಜು ಕಡೆ” ಸಾಹಿತ್ಯ ದೀವಿಗೆ ಸಾಪ್ತಾಹಿಕ ೫ನೇ ಕಾರ್ಯಕ್ರಮ ತುಮಕೂರು ಕಸಬಾ, ಸಿದ್ಧಾರ್ಥನಗರದ, ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕುವೆಂಪುರವರ ಬಗ್ಗೆ ಕವಿ, ವಿದ್ವಾಂಸರಾದ ಮಹದೇವಯ್ಯ ಚಿಕ್ಕನಾರವಂಗಲರವರು ಮಾತನಾಡುತ್ತಾ ಕುವೆಂಪುರವರು ಪ್ರೌಢಶಾಲೆಯವರೆಗೆ ವಿಜ್ಞಾನ ವಿಷಯವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೂ, ತಮ್ಮ ಗುರುಗಳ ಪ್ರೇರಣೆಯಿಂದ ಕನ್ನಡ ಎಂ.ಎ., ಓದಿ ಕನ್ನಡ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿಸಿದ ಅಗ್ರಮಾನ್ಯ ಕವಿಗಳು ಕುವೆಂಪುರವರು. ಚಿಕ್ಕಂದಿನಿಂದಲು ಕೆಲವು ನಿರ್ಧಿಷ್ಟ ತತ್ವಗಳನ್ನು ಪಾಲಿಸಿಕೊಂಡು ಬಂದವರು. ತಾತ್ವಿಕ ಧೋರಣೆಗಳಿಗೂ ಬದುಕಿನ ಇರುವ ವಿಭಿನ್ನತೆ ಕುವೆಂಪುರವರಲ್ಲಿದ್ದಂತಹ ವೈಶಿಷ್ಠ್ಯತೆ ಇವರ ಮಾತು ಕೃತಿ ಒಂದೇ ಆಗಿತ್ತು. ಜೀವನದ ಮೌಲ್ಯಗಳನ್ನು ತರದ ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ಕನ್ನವೆಂದರೆ ಕುವೆಂಪು, ಕುವೆಂಪು ಎಂದರೆ ಕನ್ನಡ ಎಂಬಂತೆ ಇವರ ವೃತ್ತಿ ಸೇವೆ, ಸಾಹಿತ್ಯ ಸೇವೆ, ಜನಸಾಮಾನ್ಯರ ಅಪಾರ ಪ್ರೀತಿ, ಪ್ರಕೃತಿ ಬಗ್ಗೆ ಇದ್ದ…
ತುಮಕೂರು: ಪ್ರಾಯೋಗಿಕ ನಾಟಕಗಳನ್ನು ಪೇಕ್ಷಕರ ಮಂದೆ ಕಟ್ಟಿಕೊಡುವುದು ನಿರ್ದೇಶಕನಿಗೆ ಸವಾಲಿನ ಕೆಲಸ. ಸಾಮಾಜಿಕ, ಅದರಲ್ಲಿಯೂ ಪ್ರಾಯೋಗಿಕ ನಾಟಕಗಳಲ್ಲಿ ಸಂಭಾಷಣೆ, ಅಭಿನಯ, ಕಲಾವಿದರ ಭಾವಾಭಿನಯ ಎಲ್ಲವೂ ಒಟ್ಟಿಗೆ ಕೂಡಿದರೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಡಲು ಸಾಧ್ಯ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಪ್ರೊ.ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಕುಣಿ ಕುಣಿ ನವಿಲೆ ನಾಟಕವನ್ನು ಸಮ್ಮತ ಥಿಯೇಟರ್ ನ ಯಶವಂತ ಡಿ.ನಿರ್ದೇಶಿಸಿದ್ದು, ರಂಗ ನಿರ್ವಹಣೆ ಸುನಿಲ್ ಚೇತನ್ ಅವರದ್ದು, ನವೀನ್ ಭೂಮಿ ನಿನಾಸಂ ಅವರ ಬೆಳಕಿನ ವಿನ್ಯಾಸ ಮಾಡಿದ್ದು, ಪ್ರಸಾದನ ಹಂಸ ಪ್ರಿಯ, ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಪೌರಾಣಿಕ ನಾಟಕಗಳಲ್ಲಿ ಪದ್ಯ, ಕಂದ ಪದ್ಯಗಳ ಮೂಲಕ ಹೇಗೋ ನಾಟಕವನ್ನು ತೂಗಿಸಬಹುದು. ಆದರೆ ಸಾಮಾಜಿಕ ನಾಟಕಗಳಲ್ಲಿ ಕಥಾವಸ್ತುವೇ ಪ್ರಧಾನವಾಗಿರುವ ಕಾರಣ. ಕಲಾವಿದರು ಭಾವ ತುಂಬಿ ಅಭಿನಯಿಸಿದಾಗ ಮಾತ್ರ ಪ್ರೇಕ್ಷಕರಿಂದ ಚಪ್ಪಾಳೆ ಗೌರವ ಸಿಗಲು ಸಾಧ್ಯ ಎಂದರು. ಶಿವಕುಮಾರ್…