Author: admin

ಸರಗೂರು: ತಾಲೂಕು ಕೇಂದ್ರದಲ್ಲಿ ಸರ್ಕಾರದ ಎಲ್ಲಾ ಕಚೇರಿಗಳು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಕಚೇರಿಗಳನ್ನು ತೆರೆಯುವಂತೆ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಜಮೀನಲ್ಲಿ ಕೃಷಿ ಮಾಡುತ್ತಾ ಕಳೆದ 50–60 ವರ್ಷಗಳಿಂದ ಸ್ವಾಧೀನನುಭವದಲ್ಲಿರುವ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಕಂದಾಯ ಮತ್ತು ಅರಣ್ಯ ಜಂಟಿ ಸರ್ವೇ ನಡೆಸಿ ರೈತರಿಗೆ ಸಾಗುವಳಿ ಪತ್ರವನ್ನು ನೀಡಬೇಕು ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಎಚ್ಚರಿಸಿದರು. ತಾಲ್ಲೂಕಿನ ಪಟ್ಟಣದ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಸೋಮವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಕಾರರು ಜಮಾಯಿಸಿ ವಿವಿಧ ಘೋಷಣೆ ಕೂಗಿ ಸಭೆ ಕುರಿತು ಮಾತನಾಡಿದರು. ಭಾರತ ಹಳ್ಳಿಗಳ ದೇಶ ಹಳ್ಳಿ ಉದ್ದಾರ ಆಗದೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ, ಏಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆಗಳ ಸರ್ಕಾರಿ ಮೂಲಭೂತ ಸೌಲಭ್ಯ ಮತ್ತು ಅಗತ್ಯ ವಸ್ತುಗಳ ಕೇಂದ್ರ ಸ್ಥಾನಗಳೇ ಹಳ್ಳಿಗಳು. ಪಟ್ಟಣಗಳು ಕೇವಲ ಆಡಳಿತ…

Read More

ಔರಾದ–ಬಿ ಪಟ್ಟಣದ ಎ.ಪಿ.ಎಂ.ಸಿ ಕ್ರಾಸ್ ಹತ್ತಿರ ಮೂರು ವರ್ಷದ ಮಗುವೊಂದು ತನ್ನ ಪಾಲಕರಿಂದ ಆಕಸ್ಮಿಕವಾಗಿ ದಾರಿ ತಪ್ಪಿ ಬಂದಿರುವ ಬಗ್ಗೆ ಮಾಹಿತಿಯ ಮೇರೆಗೆ ಎಸ್.ಜೆ.ಪಿ.ಯು ಘಟಕದ ಅಧಿಕಾರಿಯಾದ ವಾಶೀಂ ಪಟೇಲ್, ಪಿಎಸ್ ಐ, ಔರಾದ ಪೊಲೀಸ್ ಠಾಣೆ ಇವರು ಮಹಿಳಾ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಕೇವಲ ಒಂದು ಗಂಟೆಯೊಳಗೆ ಪೋಷಕರ ಮಡಿಲು ಸೇರಿಸಿದ್ದಾರೆ. ಮಗುವಿನ ಪಾಲಕರ ಬಗ್ಗೆ ಮಾಹಿತಿ ಪಡೆದು ಠಾಣೆಗೆ ಕರೆಸಿಕೊಳ್ಳಲಾಯಿತು. ಬಳಿಕ ಮಗು ತನ್ನ ಪಾಲಕರಿಗೆ ಗುರುತಿಸಿದ್ದರಿಂದ ಮಗುವನ್ನು ಪಾಲಕರ ಮಡಿಲಿಗೆ ಒಪ್ಪಿಸಲಾಯಿತು. ಪಾಲಕರಿಂದ ಬೇರ್ಪಟ್ಟ ಮಗುವಿನ ಪಾಲಕರಿಗೆ ಕೇವಲ ಒಂದು ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಮರಳಿಸಿದ ಔರಾದ ಠಾಣೆಯ ಎಸ್.ಜೆ.ಪಿ.ಯು ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಪ್ರದೀಪ ಗುಂಟಿ ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು ಬೀದರ್ ಶ್ಲಾಘಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ಪಾವಗಡ: ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ಮರಿದಾಸನ ಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಚರಂಡಿ ವ್ಯವಸ್ಥೆ ಮತ್ತು ಸಿಸಿ ರಸ್ತೆ ಇಲ್ಲದೆ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಣ್ಣು ಮಕ್ಕಳು ಪಾತ್ರೆ ತೊಳೆಯುವ ನೀರು, ಬಟ್ಟೆ ಒಗೆಯುವ ನೀರು ಮತ್ತು ಬಚ್ಚಲು ನೀರು ಮುಖ್ಯರಸ್ತೆಯಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಗ್ರಾಮದ ವೃದ್ಧರು ಮಕ್ಕಳು ಜನಸಾಮಾನ್ಯರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಕೀಲರು ಹಾಗೂ ಭಾರತೀಯ ಪರಿವರ್ತನ ಸಂಘ(ಬಿಪಿಎಸ್) ದ ರಾಜ್ಯಾಧ್ಯಕ್ಷರು ಆದ ಹರಿರಾಮ್ ಎ. ಹಾಗೂ ಕನ್ನಡ ಮತ್ತು ತೆಲುಗು ಚಲನಚಿತ್ರ ನಾಯಕ ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಡೆಂಗ್ಯೂ ಮಲೇರಿಯಾ ಕಾಯಿಲೆಗಳು ಇತ್ತೀಚಿಗೆ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಮರಿದಾಸನಹಳ್ಳಿ ಗ್ರಾಮದ ಜನರು ನೆಮ್ಮದಿ ಜೀವನ ಹಾಗೂ ಸುಸಜ್ಜಿತ ಆರೋಗ್ಯ ಕಾಪಾಡಿಕೊಳ್ಳಲು ಆದಷ್ಟು ಬೇಗ ಜನತಾ ಕಾಲೋನಿಯ ಮೂರು ವಠಾರಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ…

Read More

ಪಾವಗಡ: ಕಾಡುಪ್ರಾಣಿಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಆದ್ದರಿಂದ ಸರ್ಕಾರವು ತಕ್ಷಣ ರೈತರ ನೆರವಿಗೆ ಬಂದು ಬೆಳೆ ನಷ್ಟ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ಪ್ರತಿಭಟಿಸಿ ನಂತರ ತಾಲ್ಲೂಕು ಕಚೇರಿಯ ಗ್ರೇಟ್-2 ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಪತ್ರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಪೂಜಾರಪ್ಪ, ತಾಲ್ಲೂಕಿನ ಕಸಬಾ ಹೋಬಳಿಯ ಗುಂಡಾರ್ಸಹಳ್ಳಿ ಗ್ರಾಮದ ಸರ್ವೆ ನಂಬರಿನ 105ರಲ್ಲಿ ಒಟ್ಟು 5 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲಾಗಿದ್ದು ಇದರಲ್ಲಿ ಎಕರೆಗಿಂತ ಹೆಚ್ಚು ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಯನ್ನು ಜಿಂಕೆ, ಕಾಡು ಹಂದಿ ಆಗ ನವಿಲುಗಳು ಪ್ರತಿದಿನ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ಈ ಬಗ್ಗೆ ಕೃಷಿ, ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಅರಣ್ಯ ಇಲಾಖೆ…

Read More

ತುಮಕೂರು: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಕೆಲವು ತಪ್ಪು ಮಾಹಿತಿಗಳನ್ನು ಕೊಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಇನ್ನುಮುಂದೆ ಈ ರೀತಿಯಾದರೆ ಸಹಿಸುವುದಿಲ್ಲ. ಸಭೆಗೆ ಬರುವ ಮುನ್ನ ಇಲಾಖೆಯ ತಯಾರಿ ಮಾಡಿಕೊಂಡು ಬರಬೇಕು. ಸಭೆಯಲ್ಲಿ ಸರಿಯಾದ ಉತ್ತರ ನೀಡದಿದ್ದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಜವಾಬ್ಧಾರಿಯಿಂದ ಬರಬೇಕು ಎಂದು ಗೃಹ ಸಚಿವ ಪರಮೇಶ್ವರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ  2024–25ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಬಳಿಕ ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಚರ್ಚಿಸಲಾದ ಅಂಶಗಳನ್ನು ಬರೆದುಕೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಗಂಭೀರವಾಗಿ ಪರಿಗಣಿಸದಿದ್ದರೆ ಕಷ್ಟವಾಗುತ್ತದೆ. ಆಡಳಿತ ಚುರುಕಾಗಬೇಕು. ಚುನಾವಣೆ ಎಲ್ಲ ಮುಗಿದಿವೆ.‌ ಜನರ ಕೆಲಸ ಮಾಡದಿದ್ದರೆ ಇನ್ನು ಏನು ಮಾಡುತ್ತೀರಿ ಇಂದು ಆಕ್ರೋಶ ವ್ಯಕ್ತಪಡಿಸಿದರು. ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹ ಮಾಡಬೇಕು. ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ.‌ ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಬರುವುದಿಲ್ಲ, ಪಾಠವನ್ನು ಮಾಡುವುದಿಲ್ಲ. ಡಿಡಿಪಿಐ ಮತ್ತು ಬಿಇಒ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು…

Read More

ತುಮಕೂರು: ಬಾಂಗ್ಲಾದೇಶದಲ್ಲಿ ಪ್ರಸ್ತುತ ಆರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿರುವ ಹಿಂದುಗಳ ಮೇಲೆ ಭಾರೀ ದೌರ್ಜನ್ಯ ನಡೆಯುತ್ತಿದೆ ಇದನ್ನು ತಪ್ಪಿಸಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ಸಮಿತಿ ಕಾರ್ಯಕರ್ತರು ಬಾಂಗ್ಲಾದೇಶದಲ್ಲಿರುವ ಹಿಂದುಗಳ ವ್ಯಾಪಾರ ವಹಿವಾಟು ಮನೆಗಳು ಆಗುವ ಆಸ್ತಿಪಾಸ್ತಿಯ ಮೇಲೆ ದಾಳಿ ನಡೆಯುತ್ತಿದ್ದು, ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟುವ ನೈಟಿನಲ್ಲಿ ಹಾಗೂ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕೆಂದು ಒತ್ತಾಯಿಸಿದರು. ಮುಸ್ಲಿಂ ಫಂಡಮೆಂಟಲ್ ಗಳು ಅಶಾಂತಿಯಾವ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಅದೇ ರೀತಿ ಬಾಂಗ್ಲಾದೇಶದಲ್ಲಿಯೂ ಕೂಡ ನಡೆಯುತ್ತಿದೆ ಎಂದು ಶಾಸಕ ಜ್ಯೋತಿ ಗಣೇಶ್ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಿದ್ದಾರೆ ಎಂದು ಹೇಳಿದರು. ಏನೋ ಭಾರತದಲ್ಲಿರುವ ಬುದ್ಧಿಜೀವಿಗಳು ಯಾಕೆ ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಹಿಂದುಗಳ ರಕ್ಷಣೆ ಕುರಿತು ಮಾತನಾಡುತ್ತಿಲ್ಲ ಪ್ರಶ್ನಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಮಗನ ಮದುವೆ ಸಂಭ್ರಮದಲ್ಲಿರುವ ತರುಣ್‌ ಸುಧೀರ್‌ ತಾಯಿ ಮಾಲತಿ ಸುಧೀರ್‌ ತಮ್ಮ ಬಹು ದಿನದ ಕನಸು ನನಸಾದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮಗ ಇಷ್ಟು ಚೆನ್ನಾಗಿದ್ದಾನೆ, ಇಷ್ಟು ಸುಂದರವಾಗಿದ್ದಾನೆ. ಇಷ್ಟು ಕ್ರಿಯೆಟಿವ್ ಆಗಿದ್ದಾನೆ. ಅವನಿಗೆ ಯಾಕೆ ಕಂಕಣ ಬಲ ಕೂಡಿ ಬಂದಿಲ್ಲ. ಅವನಿಗೆ ಯಾಕೆ ಯಾರೂ ಇಷ್ಟವಾಗುತ್ತಿಲ್ಲ. ಇವನು ಯಾಕೆ ಮದುವೆ ಎನ್ನುವ ಬಂಧನಕ್ಕೆ ಹೋಗುತ್ತಿಲ್ಲ ಎನ್ನುವ ನೋವಿತ್ತು. ಹೀಗೆ ಇದ್ದು ಬಿಡ್ತಾನೋ ಅಂತಾ ಭಯ ಇತ್ತು. ಏನಪ್ಪಾ ಮೋದಿಯಾಗಿ ಬಿಡ್ತಿಯಾ ಅಂತಾ ನಾನೇ ಕೇಳುತ್ತಿದ್ದೆ. ಆದರೆ ಈಗ ಮದುವೆಯಾಗುತ್ತಿದ್ದಾನೆ. ಇದು ಬಹಳ ಸಂತೋಷ. ಬಹಳ ಹೆಮ್ಮೆ ಎಂದರು. ತಮ್ಮ ಸೊಸೆ ಸೋನಲ್ ಮೊಂಥೆರೋ ಬಗ್ಗೆ ಮಾತನಾಡಿದ ಅವರು, ಸೊಸೆ ಅಷ್ಟೊಂದು ಕ್ಲೋಸ್‌ ಆಗಿಲ್ಲ. ನಾರ್ಮಲ್‌ ಆಗಿ ಆಕೆ ಜೊತೆಗೆ ಮಾತನಾಡುತ್ತೇನೆ ಬಿಟ್ಟರೆ ಬೇರೆ ಏನನ್ನೂ ಇನ್ನೂ ಮಾತನಾಡಿಲ್ಲ. ಒಂದು ಎರಡು ಮೂರು ತಿಂಗಳ ಹಿಂದೆ ನನಗೆ ಗೊತ್ತಾಯ್ತು ಅಷ್ಟೇ. ಇವರು ಮದುವೆಯಾಗುತ್ತಾರೆ ಎಂದು, ಅವರ ಆತ್ಮೀಯ ಸ್ನೇಹಿತರೊಬ್ಬರಿಂದ ಈ ವಿಷಯ…

Read More

ಮೆಟ್ರೋ ಮಾರ್ಗವನ್ನ ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದೀಗ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ (BIEC) ದವರೆಗೆ ವಿಸ್ತರಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಿದ್ಧತೆ ನಡೆದಿದೆ. ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯಾತ್ಮಕ ಕಾರ್ಯಾಚರಣೆ ಅಕ್ಟೋಬರ್‌ನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಮೆಟ್ರೋ ಹಸಿರು ಮಾರ್ಗವನ್ನ ಮಾದಾವರದವರೆಗೆ ವಿಸ್ತರಣೆ ಮಾಡುತ್ತಿರುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (BMRCL)ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌ ದೃಢಪಡಿಸಿದ್ದಾರೆ. ಸದ್ಯ ಮೆಟ್ರೋದ 2ನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅದರ ಭಾಗವಾಗಿ ನಾಗಸಂದ್ರದಿಂದ ಮಾದಾವರದವರೆಗೆ 3 ಕಿಮೀ ವಿಸ್ತರಣೆ ಮಾಡಲಾಗುತ್ತಿದೆ.. ಹಸಿರು ಮಾರ್ಗವನ್ನ ವಿಸ್ತರಣೆ ಮಾಡಿದಾಗ ಹೊಸ ಮೂರು ಮೆಟ್ರೋ ಸ್ಟೇಷನ್‌ಗಳು ಸೇರ್ಪಡೆಯಾಗುತ್ತವೆ. ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರಗಳಲ್ಲಿ ಮೆಟ್ರೋ ಸ್ಟೇಷನ್‌ಗಳು ಇರಲಿವೆ. ಮಾರ್ಗ ವಿಸ್ತರಣೆ, ಸ್ಟೇಷನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ, ಮೆಟ್ರೋ ರೈಲ್ವೆ ಸೇಫ್ಟಿ ಆಯುಕ್ತರಿಂದ ಸುರಕ್ಷತೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಯಲಿದೆ. ಅವರಿಂದ ಒಪ್ಪಿಗೆ ಸಿಕ್ಕ…

Read More

ಕರ್ನಾಟಕ ರಾಜ್ಯದಲ್ಲಿಂದ ನೆರೆಯ ಗೋವಾ ರಾಜ್ಯಕ್ಕೆ ರೈಲು ಸಂಚಾರ ಕಲ್ಪಿಸುವ ಮಾರ್ಗದಲ್ಲಿ ಗೂಡ್ಸ್ ರೈಲು ದೂಧ್ ಸಾಗರ ಬಳಿ ಹಳಿ ತಪ್ಪಿದೆ. ರೈಲು ಹಳಿಯಿಂದ ಗೂಡ್ಸ್ ರೈಲು ತೆರವು ಕಾರ್ಯಾಚರಣೆ ಕಾರ್ಯ ಮುಂದುವರೆದಿದ್ದು, ಇಂದು ಕೂಡ ಕರ್ನಾಟಕ – ಗೋವಾ ರೈಲು ಸಂಚಾರ ಇರುವುದಿಲ್ಲ ಎಂದು ನೈರುತ್ಯ ಇಲಾಖೆ ತಿಳಿಸಿದೆ. ಧೂದ್ ಸಾಗರ್ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ದಿನಗಳಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕರ್ನಾಟಕ ಮತ್ತು ಗೋವಾ ನಡುವಿನ ಎಲ್ಲ ರೈಲುಗಳ ಸಂಚಾರ ಬಂದ್ ಆಗಿತ್ತು. ಇಂದು ಶಾಲಿಮಾರ್ – ವಾಸ್ಕೋ ಡ ಗಾಮಾ ರೈಲು ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಿದ್ದು, ಹುಬ್ಬಳ್ಳಿಯಿಂದ ರೈಲು ಪ್ರಯಾಣಿಕರಿಗೆ ಪರ್ಯಾಯವಾಗಿ ಬಸ್ಸಿನಲ್ಲಿ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 1,200 ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ನಿಗಮದ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 25 ಬಸ್‌ಗಳನ್ನು ವಿಶೇಷ ವ್ಯವಸ್ಥೆಯ ಮೂಲಕ ರೈಲು ಪ್ರಯಾಣಿಕರನ್ನು…

Read More

ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ ನಿಂದ ವಿಚ್ಛೇದನ ಪಡೆದಿದ್ದು, ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಸಾನಿಯಾ ಮಿರ್ಜಾ ಯಾವಾಗ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಸಾನಿಯಾ ಅವರು ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರನ್ನು ವರಿಸುತ್ತಾರೆ ಎಂದು ಸುದ್ದಿಯಾಗಿತ್ತು. ಶಮಿ ಕೂಡ ತಮ್ಮ ಪತ್ನಿಗೆ ವಿಚ್ಛೇದನಾ ನೀಡಿದ್ದಾರೆ. ಇಬ್ಬರು ಒಂದೇ ಧರ್ಮದವರಾಗಿರುವುದರಿಂದ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದು ಕೇವಲ ವದಂತಿಯಷ್ಟೇ ಎಂದು ಇಬ್ಬರು ತಾರೆಯರು ಸ್ಪಷ್ಟನೆ ನೀಡಿದ್ದಾರೆ. ಮದುವೆಯ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಅವರ ಮಹತ್ವದ ಘೋಷಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್ ​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾನಿಯಾ ಅವರು ಟೆನ್ನಿಸ್ ತರಬೇತಿಯ ಬಗ್ಗೆ ಚರ್ಚಿಸಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು 2013ರ ಮಾರ್ಚ್ ತಿಂಗಳಲ್ಲಿ ಭಾರತೀಯ ಟೆನ್ನಿಸ್ ಆಟಗಾರರಿಗೆ ಉನ್ನತ ದರ್ಜೆಯ ಟೆನ್ನಿಸ್​ ತರಬೇತಿ ನೀಡುವ…

Read More