ಸರಗೂರು: ತಾಲೂಕು ಕೇಂದ್ರದಲ್ಲಿ ಸರ್ಕಾರದ ಎಲ್ಲಾ ಕಚೇರಿಗಳು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಕಚೇರಿಗಳನ್ನು ತೆರೆಯುವಂತೆ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಜಮೀನಲ್ಲಿ ಕೃಷಿ ಮಾಡುತ್ತಾ ಕಳೆದ 50–60 ವರ್ಷಗಳಿಂದ ಸ್ವಾಧೀನನುಭವದಲ್ಲಿರುವ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಕಂದಾಯ ಮತ್ತು ಅರಣ್ಯ ಜಂಟಿ ಸರ್ವೇ ನಡೆಸಿ ರೈತರಿಗೆ ಸಾಗುವಳಿ ಪತ್ರವನ್ನು ನೀಡಬೇಕು ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಎಚ್ಚರಿಸಿದರು.
ತಾಲ್ಲೂಕಿನ ಪಟ್ಟಣದ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಸೋಮವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಕಾರರು ಜಮಾಯಿಸಿ ವಿವಿಧ ಘೋಷಣೆ ಕೂಗಿ ಸಭೆ ಕುರಿತು ಮಾತನಾಡಿದರು.
ಭಾರತ ಹಳ್ಳಿಗಳ ದೇಶ ಹಳ್ಳಿ ಉದ್ದಾರ ಆಗದೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ, ಏಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆಗಳ ಸರ್ಕಾರಿ ಮೂಲಭೂತ ಸೌಲಭ್ಯ ಮತ್ತು ಅಗತ್ಯ ವಸ್ತುಗಳ ಕೇಂದ್ರ ಸ್ಥಾನಗಳೇ ಹಳ್ಳಿಗಳು. ಪಟ್ಟಣಗಳು ಕೇವಲ ಆಡಳಿತ ನಡೆಸುವ ಕೇಂದ್ರ ಸ್ಥಾನಗಳಾಗಿವೆ ಎಂದು ತಿಳಿಸಿದರು .
ಜಿಲ್ಲಾ ಉಪ ಪ್ರದಾನ ಸಂಚಾಲಕ ದೊಡ್ಡ ಸಿದ್ದು ಮಾತನಾಡಿ, ಭಾರತ ಸರ್ಕಾರ ತನ್ನ ಆಡಳಿತ ಯಂತ್ರ ಸುಗಮವಾಗಲು ಸಂವಿಧಾನಾತ್ಮಕವಾಗಿ ಆಡಳಿತವನ್ನು ವಿಕೇಂದ್ರೀಕರಣ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ, ಜಿಲ್ಲೆ, ತಾಲೂಕು ಕೇಂದ್ರಗಳನ್ನಾಗಿ ವಿಂಗಡಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಆಯಾಯ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಕಚೇರಿಗಳು ಕೇಂದ್ರ ಸ್ಥಾನಗಳಲ್ಲೇ ಕೆಲಸ ನಿರ್ವಹಿಸಬೇಕೆಂಬ ಆದೇಶಿಸಿದೆ, ಎಲ್ಲಾ ಸರ್ಕಾರಿ ಕಚೇರಿಗಳು ಕೇಂದ್ರ ಸ್ಥಾನಗಳಲ್ಲಿ ಇರಬೇಕಾದದ್ದು ಸರಿಯಷ್ಟೇ. ತಾಲ್ಲೂಕಿನ ಶಾಸಕರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ಸಾರ್ವಜನಿಕರು ಹಾಗೂ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ಗಮನಹರಿಸಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಇದರ ಹೊಣೆಗಾರಿಕೆಯೂ ಆಡಳಿತ ಸರ್ಕಾರದ ಜವಾಬ್ದಾರಿಯು ಕೂಡ ಆದರೆ ಸರ್ಕಾರ ಕೇವಲ ತಾಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡಿ ಕಚೇರಿಗಳೆಲ್ಲ ಕೆಲಸ ಕಾರ್ಯಗಳನ್ನು ಬೇರೆ ತಾಲೂಕಿನಲ್ಲಿ ನಿರ್ವಹಿಸುವುದಾದರೆ ಹೊಸ ತಾಲೂಕಿನ ಘೋಷಣೆ ಏಕೆ…? ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬೇರೆ ತಾಲೂಕು ಕೇಂದ್ರಗಳಿಗೆ ಹೋಗುವುದಾದರೆ ಹೊಸ ತಾಲೂಕಿನ ಅವಶ್ಯಕತೆ ಏನಾದರೂ ಇದೆಯಾ..? ಎನ್ನುವುದು ಜನಸಾಮಾನ್ಯ ಪ್ರಶ್ನೆಯಾಗಿದೆ ಎಂದರು.
ದಸಂಸ (ಅಂಬೇಡ್ಕರ್ ವಾದ)ತಾಲ್ಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, ಕಳೆದ 2014 –15ರಲ್ಲಿ ಸರ್ಕಾರ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂದು ತಾಲೂಕಿನ ದೊಡ್ಡ ಹೋಬಳಿಯಾದ ಸರಗೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಸುಮಾರು 9 ವರ್ಷಗಳೇ ಕಳೆದಿವೆ. ಆದರೆ 9 ವರ್ಷಗಳಿಂದಲೂ ಸಹ ತಾಲೂಕು ಕೇಂದ್ರ ಸ್ಥಾನದಲ್ಲಿ ತಹಶೀಲ್ದಾರ್ ರವರ ಕಚೇರಿ, ತಾಲೂಕು ಪಂಚಾಯಿತಿ, ಪಶು ಇಲಾಖೆ, ನೀರಾವರಿ ಇಲಾಖೆ, ಎ ಪಿ ಎಂ ಸಿ, ಉಪಖಜಾನೆ ಪಟ್ಟಣ ಪಂಚಾಯಿತಿ ಬಿಟ್ಟರೆ ಬೇರೆ ಯಾವ ಕಚೇರಿಗಳು ಸಹ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಸಾರ್ವಜನಿಕರು ತಮ್ಮ ದಿನನಿತ್ಯದ ಉಳಿದ ಕಚೇರಿಯ ಕೆಲಸ ಕಾರ್ಯಗಳಿಗೆ ಹೆಚ್ ಡಿ ಕೋಟೆಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗೊಂದಲಕ್ಕೊಳಗಾಗಿರುವ ಸಾರ್ವಜನಿಕರು ಸರಗೂರು ತಾಲೂಕು ಎನ್ನುವುದನ್ನು ಮರೆತು ಹೆಚ್ ಡಿ ಕೋಟೆ ತಾಲೂಕು ಎನ್ನುವಂತಾಗಿದ್ದಾರೆ ಎಂದರು.
ಶಿವಪುರ, ಕಲ್ಲಂಬಾಳು ಗ್ರಾಮಗಳಲ್ಲಿ ಸರ್ಕಾರದಿಂದ ಬೀದಿ ದೀಪ ಚರಂಡಿ ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರು ಸಹ ಸರ್ಕಾರದಿಂದ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ ಹಾಗೂ ತಾಲೂಕಿನ ವಿವಿಧ ಕಡೆ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿಯನ್ನು ನೀಡಿರುವುದಿಲ್ಲ ಕೂಡಲೆ ಸರ್ಕಾರ ಈ ಸಮಸ್ಯೆಗಳನ್ನು ಶಾಸಕರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕು ಒತ್ತಾಯಗಳು:
ಸರಗೂರು ತಾಲ್ಲೂಕಿನ 2022-23 ನೇ ಸಾಲಿನ ಪ್ರಕೃತಿ ವಿಕೋಪದಿಂದ ಮನೆಗಳು ಕಳೆದುಕೊಂಡು ಫಲಾನುಭವಿಗಳಿಗೆ ಸರ್ಕಾರಿ ಮನೆ ಮಂಜೂರು ಮಾಡಬೇಕು.
ಸರಗೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ಠಾಣಾ ಜಾಗಗಳು ಇದ್ದು ಅದನ್ನು ಒತ್ತುವರಿ ಮಾಡಿರುವುದರಿಂದ ತೆರವುಗೊಳಿಸಬೇಕು.ನಿವೇಶನ ಹಕ್ಕುಪತ್ರ ವಿತರಣೆ ನೀಡಿ ಹಲವಾರು ವರ್ಷಗಳು ಕಳೆದರೂ ಕೂಡ. ಜಾಗವನ್ನು ಗುರುತಿಸಿ ಕೊಟ್ಟಿಲ್ಲಾ. ಸಿದ್ದಾಪುರ ಗ್ರಾಮದ ಸರ್ವೇ ನಂ 3 ರಲ್ಲಿ 3.12 ಎಕರೆ ಗ್ರಾಮ ಠಾಣಾ ಜಾಗ ಇದ್ದು ಗ್ರಾಮಗಳಲ್ಲಿ ವಾಸಿಸುವ ಮನೆ ಇಲ್ಲದೆ ಕಾರಣ ಅವರಿಗೆ ಜಾಗವನ್ನು ಗುರುತಿಸಿ ಗ್ರಾಮ ಪಂಚಾಯಿತಿ ವರ್ಗಾವಣೆ ಮಾಡಬೇಕು.
ಸರಗೂರು ತಾಲೂಕಿನ ಕಲ್ಲಂಬಾಳು, ಬಾವಿಕೇರೆ ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುವ ನಿರ್ಗತಿಕ ಬಡವರಿಗೆ ಸರ್ಕಾರದಿಂದ ಹಕ್ಕು ಪತ್ರಗಳನ್ನು ನೀಡಬೇಕು.ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಇಲ್ಲದೆ ಅಂತ್ಯಸಂಸ್ಕಾರ ಮಾಡಲು ಜನರು ಪರದಾಡುತ್ತಿದ್ದಾರೆ. ಅಂತಹ ಗ್ರಾಮಗಳಿಗೆ ಸ್ಮಶಾನ ಕಲ್ಪಿಸಿಕೊಡಬೇಕು.ಶಾಂತಿಪುರ ಗ್ರಾಮದ ದಲಿತ ಜನಾಂಗದ ರೈತರು ಹಾಲುಗಡ ಜಾತ್ರಾ ಮಾಳದ ಬಳಿ 4 ಎಕರೆ ಜಮೀನಿಗೆ ಸರ್ಕಾರ ಸಾಗುವಳಿ ಪತ್ರ ನೀಡಿದ್ದು ಈ ಜಮೀನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಹಾಲುಗಡ ಜಾತ್ರಾ ಸಮಿತಿಯವರು ಈ ಜಮೀನು ನಮಗೆ ಸೇರಿದೆ ಎಂದು ಕಿರುಕುಳ ನೀಡುತ್ತಿದ್ದು. ಸರ್ವೇ ಮಾಡಿ ಅವರ ಜಮೀನನ್ನು ಬಿಡಿಸಿಕೊಡ ಬೇಕು.ಬೀದರಹಳ್ಳಿ ಗ್ರಾಮದ ಸರ್ವೇ ನಂ 83 ರಲ್ಲಿ ದಲಿತ ಕುಟುಂಬದ 16 ಜನ ರೈತರು ಸುಮಾರು 20 ವರ್ಷಗಳಿಂದ ತಲ 2 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಬೆಂಗಳೂರು ಮೂಲದ ವ್ಯಕ್ತಿಗಳು ಬಂದು ಇದು ನಮ್ಮ ಜಮೀನು ಎಂದು ಕಿರುಕುಳ ನೀಡುತ್ತಿದ್ದಾರೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.ಇವರ ಮೇಲೆ ಸರಗೂರು ಪೋಲಿಸ್ ಠಾಣೆಗೆ ದೂರ ನೀಡಿದರು ಕೂಡಾ ಪೋಲಿಸ್ ಅಧಿಕಾರಿಗಳು ಬೆಂಗಳೂರು ಮೂಲದ ವ್ಯಕ್ತಿಗಳ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ದಲಿತ 16 ಕುಟುಂಬದವರಿಗೆ ಅನ್ಯಾಯ ಆಗಿದ್ದು ನ್ಯಾಯ ಸಿಗಬೇಕು.
ಎಚ್ ಡಿ ಕೋಟೆ ತಾಲ್ಲೂಕು ಸಂಚಾಲಕ ಕಟ್ಟೆಮನಹಳ್ಳಿ ಸಣ್ಣ ಕುಮಾರ್.ರೈತ ಸಂಘದ ಕಾರ್ಯಾಧ್ಯಕ್ಷ ಬಿರ್ವಾಳ್ ಮಹಲಿಂಗು.ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ.ಗ್ರಾಪಂ ಸದಸ್ಯ ಶಿವಲಿಂಗಯ್ಯ ಯಶವಂತಪುರ,ಮಾತನಾಡಿದ್ದರು.
ಕೂಡಲೆ ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿ ಒತ್ತಾಯಿಸುತ್ತದೆ ತಪ್ಪಿದರೆ ಹಂತ ಹಂತವಾಗಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನೆ ಸಂಚಾಲಕರು ಮಹದೇವಸ್ವಾಮಿ, ಮೊಳೆಯೂರು ಕಾವಲ್ ನಾಗೇಂದ್ರ,ಮಣಿಕಂಠ, ಮಹೇಶ್, ವೆಂಕಟರಾಮು,ಕೆಂಪರಾಜು,ರೈತ ಸಂಘದ ಅಧ್ಯಕ್ಷ ಬಿರ್ವಾಳ್ ಚನ್ನನಾಯಕ, ಕರ್ನಾಟಕ ಭೀಮಾ ಸೇನೆ ತಾಲ್ಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ, ಕಾರ್ಯದರ್ಶಿ ಹಳಿಯೂರು ಮೂರ್ತಿ, ಗ್ರಾಪಂ ಸದಸ್ಯರು ಶಿವಚನ್ನ ನಾಗರಾಜು, ಮುಳ್ಳೂರು ಲೋಕೇಶ್,ಮಸಹಳ್ಳಿ ನವೀನ್, ತಾಲ್ಲೂಕಿನ ಸಂಚಾಲಕರು ಮಹೇಶ್, ಆನಂದ, ರವಿ,ಕಾಳಪ್ಪಾಜಿ, ರಾಜಣ್ಣ,ಕಳ್ಳಿ ಮುದ್ದನಹಳ್ಳಿ ಚಂದ್ರು ,ವಾಟಾಳ್ ನಾಗರಾಜು ,ಬೊಮ್ಮೇನಹಳ್ಳಿ ಕುಮಾರ್ , ಸೋಮಯ್ಯ ಕೆ ಆರ್ ನಗರ, ಕಟ್ಟೆ ಮಳೆಲವಾಡಿ ಜಿಲ್ಲಾ ಮಹಿಳಾ ಒಕ್ಕೂಟದ ಮಹಾದೇವಮ್ಮ,ಮಹೇಶ್ ,ಕಾರ್ಯಾ ಚಯಶಂಕರ್ , ಚಿಕ್ಕ ಚೆಲುವ, ಮಹದೇವಸ್ವಾಮಿ, ಇಂದ್ರಕುಮಾರ್, ಆರ್ ಪಿ ಐ ಮಹಿಳಾ ಜಿಲ್ಲಾ ಅಧ್ಯಕ್ಷೆ ಅನುಷಾ,ಇನ್ನೂ ವಿವಿಧ ಗ್ರಾಮಗಳಿಂದ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296