Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಕೋಲ್ಕೊತ್ತಾ: ಕರ್ತವ್ಯದಲ್ಲಿದ್ದ ವೈದ್ಯಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತೀವ್ರತೆ ಪಡೆಯುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಭೀಕರ ಅಂಶಗಳು ಬಯಲಾಗಿದ್ದುದೆ. ಕೋಲ್ಕೊತ್ತಾದ ಆರ್ ಜಿಕರ್ ಹಾಸ್ಪಿಟಲ್ ನಲ್ಲಿ 31 ವರ್ಷದ ಡ್ಯೂಟಿ ಡಾಕ್ಟರ್ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವೈದ್ಯೆಯ ಕಣ್ಣು, ಬಾಯಿ ಮತ್ತು ಖಾಸಗಿ ಅಂಗಾಂಗದಲ್ಲಿ ರಕ್ತ ಸೋರಿಕೆಯಾಗುತ್ತಿತ್ತು. ಅವಳ ತುಟಿ, ಹೊಟ್ಟೆ ಮತ್ತು ತೊಡೆಯಲ್ಲಿ ಗಾಯದ ಗುರುತುಗಳಿವೆ. ಈ ಎಲ್ಲಾಅಂಶಗಳನ್ನೂ ಈಗ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ಜೋರಾಗಿದ್ದು, ಪ್ರಿನ್ಸಿಪಾಲ್ ರಾಜೀನಾಮೆ ನೀಡಿದ್ದಾರೆ. ಬೆಳಗಿನ ಜಾವ 3 ರಿಂದ 6 ಗಂಟೆಯೊಳಗಾಗಿ ಕೃತ್ಯ ನಡೆದಿದೆ. ಕರ್ತವ್ಯದಲ್ಲಿದ್ದ ವೈದ್ಯೆ ಊಟ ಮಾಡಿದ ಬಳಿಕ ಕೆಲವು ಹೊತ್ತು ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್ ಗೆ ಹೋಗಿದ್ದಾಗ ಆರೋಪಿ ಕೃತ್ಯವೆಸಗಿದ್ದಾನೆ. ಬಳಿಕ ತನ್ನ ಮನೆಗೆ ಹೋಗಿದ್ದ ಆರೋಪಿ ಕೆಲವು ಕಾಲ ಮಲಗಿ ನಿದ್ರೆ ಮಾಡಿದ್ದಾನೆ. ಬಳಿಕ ತನ್ನ ಬಟ್ಟೆಗಳನ್ನೆಲ್ಲಾ ತೊಳೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಆದರೆ…
ಪಾವಗಡ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಯನ್ನು ಚಿರತೆಯೊಂದು ಕೊಂದು ತಿಂದ ಘಟನೆ ಸೋಮವಾರ ಬೆಳಗಿನ ಜಾವ 3:30ರ ಸಂದರ್ಭದಲ್ಲಿ ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಅಗಸರ ತಿಮ್ಮಣ್ಣ ಎನ್ನುವರ ಜಮೀನಿನಲ್ಲಿ ಜರಗಿದೆ. ಎಂದಿನಂತೆ ಭಾನುವಾರವು ಸಹ ತಮ್ಮ ಜಮೀನಿನಲ್ಲಿ ಇರುವಂತಹ ಕೊಟ್ಟಿಗೆ ಬಳಿ ಎಮ್ಮೆಯನ್ನು ಕಟ್ಟಿ ಹಾಕಿ ಕೊಟ್ಟಿಗೆಯಲ್ಲಿ ಮಲಗಿದ್ದರು ರಾತ್ರಿ ಏಕಾಏಕಿ ಚಿರತೆಯೊಂದು ದಾಳಿ ನಡೆಸಿ ಎಮ್ಮೆಯನ್ನು ಅಟ್ಟಾಡಿಸಿಕೊಂಡು ಸಾಯಿಸಿ ಸಂಪೂರ್ಣ ಹಿಂಭಾಗವನ್ನು ಕಿತ್ತು ತಿಂದಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಹಸುವಿನ ಕರುವೂಂದನ್ನು ಹುಣಸೆ ಮರದ ಮೇಲಕ್ಕೆ ಎಳೆದೊಯ್ದು ತಿಂದಿತ್ತು. ಅದಾದ ಬಳಿಕ ಈಗ ಎಮ್ಮೆಯ ಮೇಲೆ ಚಿರತೆ ದಾಳಿ ನಡೆಸಿರುವುದು ಈ ಭಾಗದ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಅಗಸರ ತಿಮ್ಮಣ್ಣ ಮನವಿ ಮಾಡಿಕೊಂಡಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತಂಗಲ್ಲಪಲ್ಲಿ: ನವಿಲು ಕರಿ ಮಾಡುವುದು ಹೇಗೆ ಅಂತ ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್ ವೊಬ್ಬ ಇದೀಗ ಜೈಲು ಸೇರಿದ್ದು, ರಾಷ್ಟ್ರಪಕ್ಷಿಯನ್ನು ಕೊಂದು ಅಡುಗೆ ಮಾಡಿದ ಯೂಟ್ಯೂಬರ್ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಪ್ರಣಯ ಕುಮಾರ್ ಎಂಬಾತ ನವಿಲು ಕರಿ ರೆಸಿಪಿ ಹೆಸರಿನಡಿ ವಿಡಿಯೋ ಮಾಡಿದ್ದ. ಈ ವಿಡಿಯೋ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಸಿರಿಸಿಲ್ಲಾ ಜಿಲ್ಲೆಯ ಎಸ್ಪಿ ರಾಜಣ್ಣ ಪ್ರಕರಣ ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಣಯ್‌ಕುಮಾರ್ ಯೂಟ್ಯೂಬ್ ಚಾನೆಲ್ ನನ್ನು ಪರಿಶೀಲನೆ ನಡೆಸಿದ ವೇಳೆ ಕಾಡು ಹಂದಿಯ ಕರಿ ಮಾಡುವುದು ಹೇಗೆ ಅಂತಲೂ ಈತ ವಿಡಿಯೋ ಮಾಡಿರುವುದು ಬಯಲಾಗಿದೆ. ಸದ್ಯ ಈ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದ್ದು, ಆತನ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಕ್ರಿಯೇಟರ್ಸ್ ಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಯಾವುದೇ ವಿಡಿಯೋಗಳನ್ನು ಪೋಸ್ಟ್ ಮಾಡಬೇಕಾದರೂ, ನಮ್ಮ ನೆಲದ ಕಾನೂನು ಅರಿತು ವಿಡಿಯೋಗಳನ್ನು ಪೋಸ್ಟ್ ಮಾಡಬೇಕಿದೆ.…
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ನಟ ದರ್ಶನ್ ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ವರದಿಗಳ ಪ್ರಕಾರ, ಇಂದು ಅಥವಾ ನಾಳೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಆಶೀರ್ವಾದ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಲುಕಿದ್ದಾರೆ. ಮದುವೆಯ ದಿನ ತರುಣ್ ಸುಧೀರ್ ಮತ್ತು ನಟಿ ಸೋನಲ್ ದರ್ಶನ್ ಅವರ ಅನುಪಸ್ಥಿತಿಯನ್ನು ನೆನೆದು ಭಾವುಕರಾಗಿದ್ದರು. ತರುಣ್ ಸುಧೀರ್ ಮತ್ತು ನಟಿ ಸೋನಲ್ ಜೋಡಿ ಒಂದಾಗಲು ನಟ ದರ್ಶನ್ ಅವರು ಕಾರಣರಾಗಿದ್ದರು. ಹೀಗಾಗಿ ಮೊದಲ ಆಮಂತ್ರಣ ಪತ್ರಿಕೆ ನಟ ದರ್ಶನ್ ಅವರಿಗೆ ನೀಡಲಾಗಿತ್ತು. ಇದೀಗ ಪರಪ್ಪನ ಅಗ್ರಹಾರಕ್ಕೆ ತೆರಳಿ ಆಶೀರ್ವಾದ ಪಡೆಯಲು ಜೋಡಿ ಮುಂದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಓದಲು ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳು ತರಗತಿಯಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಕಂಡು ಪೋಷಕರು ಆತಂಕ್ಕೀಡಾಗುವಂತಾಗಿದೆ. ನಿಶಾಂತ್ ಶರ್ಮಾ (ಭಾರದ್ವಾಜ್) ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇರಿಸುಮುರುಸು ಉಂಟಾಗುವಂತಹ ವರ್ತನೆಯಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಒಬ್ಬಳು ಹುಡುಗಿ ಮತ್ತು ಹುಡುಗ ತರಗತಿಯಲ್ಲಿ ತಮ್ಮ ಸಹಪಾಠಿಗಳ ಎದುರೇ ಸರಸ ಸಲ್ಲಾಪದಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಕಲಿಕೆಗೆ ಬರುವ ವಿದ್ಯಾರ್ಥಿಗಳು ತಮ್ಮ ಸಣ್ಣ ವಯಸ್ಸಿನಲ್ಲೇ ಈ ರೀತಿಯ ವರ್ತನೆ ತೋರುತ್ತಿರುವ ವಿಡಿಯೋ ವೈರಲ್ ಆಗಿರುವುದು ಪೋಷಕರು ಆತಂಕಪಡುವಂತೆ ಮಾಡಿದೆ. हमारे देश का भविष्य आगे बढ़ रहा है, मां बापू का नाम रोशन कर रहा है, इस लिए क्लासरूम में ही काम चल रहा है!#viralvideo pic.twitter.com/ESDx8TNlhK — निशान्त शर्मा (भारद्वाज) (@Nishantjournali) August 11, 2024 ನಮ್ಮತುಮಕೂರಿನ ಕ್ಷಣ…
ಬೇಲೂರು: ಮರವೊಂದಕ್ಕೆ ಸಿಡಿಲು ಬಡಿದ ಪರಿಣಾಮ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 13 ಮಹಿಳೆಯರು ಸಿಡಿಲಿನ ಆಘಾತಕ್ಕೊಳಗಾದ ಘಟನೆ ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿ ಕೋರಲುಗದ್ದೆ ಗ್ರಾಮದಲ್ಲಿ ನಡೆದಿದೆ. ಒಟ್ಟು 13 ಜನರು ಸಿಡಿಲಿನ ಆಘಾತಕ್ಕೊಳಗಾಗಿದ್ದು, ಈ ಪೈಕಿ ಲತಾ W/O ಪ್ರೇಮ್ ಕುಮಾರ್ ಎಂಬವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಸಮೀಪದ ಜಮೀನನಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಏಕಾಏಕಿ ಮರದ ಕೊಂಬೆಗೆ ಸಿಡಿಲು ಬಡಿದಿದೆ. ಪರಿಣಾಮವಾಗಿ ಜಮೀನಿನಲ್ಲಿದ್ದವರು ಸಿಡಿಲಿನ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಭಾನುವಾರ ರಾತ್ರಿಯೇ ತಹಶೀಲ್ದಾರ್ ಮಮತ.ಎಂ, PSI ಸರ್ದಾರ್ ಪಾಷಾರವರೊಂದಿಗೆ ಆಸ್ಪತ್ರೆಗೆ ಧಾವಿಸಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ವಿದೇಶಿ ಪ್ರಜೆಗಳ ಡೆಟೆಕ್ಷನ್ ಸೆಂಟರ್ ಕೇಂದ್ರದಿಂದ ಇಬ್ಬರು ಪರಾರಿಯಾಗಿರುವ ಘಟನೆ ನಡೆದಿದ್ದು, ಇಬ್ಬರು ಮಹಿಳಾ ವಿದೇಶಿಗಳು ಪರಾರಿಯಾಗಿದ್ದಾರೆ. ತುಮಕೂರಿನ ದಿಬ್ಬೂರು ಕೇಂದ್ರದಿಂದ ಮಹಿಳೆಯರು ಎಸ್ಕೇಪ್ ಆಗಿದ್ದು, ರೇಷ್ಮಾ (45), ಲಿಝಾ (25) ತಪ್ಪಿಸಿಕೊಂಡವರು ಅಂತ ತಿಳಿದು ಬಂದಿದೆ. ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ನಿರಾಶ್ರಿತರ ಕೇಂದ್ರದಲ್ಲಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಭಾರತದಲ್ಲಿರುವಷ್ಟು ವಿಶೇಷ, ವಿಚಿತ್ರ ಸಂಪ್ರದಾಯ ಆಚರಣೆಗಳು ಬೇರೆ ಎಲ್ಲಿಯೂ ನೀವು ನೋಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ನಮ್ಮ ಊಹೆಗೂ ಮೀರಿರುವ ಅಚ್ಚರಿಗಳು, ಕುತೂಹಲಗಳಿಗೂ ಈ ದೇವಾಲಯಗಳೂ ಕಾರಣವಾಗುತ್ತದೆ. ತಮಿಳುನಾಡಿನಲ್ಲಿ ದೇವಾಲಯಗಳ ಸಂಖ್ಯೆಗೆ ಕಡಿಮೆ ಇಲ್ಲ. ಅತೀ ಹೆಚ್ಚು ದೇವಾಲಯಗಳಿರುವುದು ತಮಿಳುನಾಡಿನಲ್ಲಿಯೇ. ಏಲಿಯನ್‌ಗಳ ಕುರಿತು ಭಾರತದ ಇತಿಹಾಸದಲ್ಲಿಯೂ ಉಲ್ಲೇಖಗಳಿರುವುದನ್ನು ನೋಡಬಹುದು. ಅದರೆ ತಮಿಳುನಾಡಿನಲ್ಲಿ ಏಲಿಯನ್‌ಗೆ ದೇವಾಲಯವೇ ಇದೆ. ಹಾಗಾದ್ರೆ ಈ ದೇವಾಲಯ ಎಲ್ಲಿದೆ? ಯಾವ ಕಾರಣಕ್ಕೆ ನಿರ್ಮಿಸಲಾಗಿದೆ? ತಮಿಳುನಾಡಿನ ಸೇಲಂನಲ್ಲಿ ಲೋಕನಾಥನ್ ಎಂಬಾತ ಈ ಏಲಿಯನ್ ದೇವಾಲಯ ನಿರ್ಮಿಸಿದ್ದಾರೆ. ಮಲ್ಲಮೂಪ್ಪಂಪಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದಾನೆ ಎಂದು ತಿಳಿದುಬಂದಿದೆ. ಅವರು ಶ್ರೀ ಶಿವ ಕೈಲಾಸ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು, ಅದಕ್ಕಾಗಿ ಅವರು ಎರಡು ವರ್ಷಗಳ ಹಿಂದೆ ನಿರ್ಮಾಣವನ್ನು ಪ್ರಾರಂಭಿಸಿದರು. ಆದರೆ ಲಿಂಗ ಕೆತ್ತೆನೆ ಕಾರ್ಯ ಇನ್ನೂ ಪ್ರಕ್ರಿಯೆಯಲ್ಲಿದೆ, ಅದನ್ನು ನೆಲ ಅಂತಸ್ತಿನಲ್ಲಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಏಲಿಯನ್ ಮುಖ ಹೋಲುವ ಪ್ರತಿಮೆಯನ್ನೂ ಸಹ ಸ್ಥಾಪಿಸಲಾಗಿದೆ. ನೆಲಮಾಳಿಗೆಯಲ್ಲಿ ಬೇರೆ ಬೇರೆ…
ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲು ಅಮೆರಿಕಾ ಷಡ್ಯಂತ್ರ ಕಾರಣ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಶುರುವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಭಾರತದಲ್ಲಿ ರಾಜಾಶ್ರಯ ಪಡೆದಿರುವ ಹಸೀನಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಗಲು ಹಾಗೂ ಪ್ರಧಾನಿ ಸ್ಥಾನದಿಂದ ತಾವು ಕೆಳಗಿಳಿಯಲು ಅಮೆರಿಕಾ ಷಡ್ಯಂತ್ರವೇ ಕಾರಣ ಎಂದಿದ್ದಾರೆ. ಎಕನಾಮಿಕ್ ಟೈಮ್ಸ್‌ಗೆ ಪ್ರತಿಕ್ರಿಯಿಸಿರೋ ಶೇಕ್ ಹಸೀನಾ, ನಾನು ಸೇಂಟ್ ಮಾರ್ಟಿನ್ ದ್ವೀಪವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳಕೊಲ್ಲಿಯ ಮೇಲೆ ಅಮೆರಿಕದ ಹಿಡಿತಕ್ಕೆ ಅವಕಾಶ ನೀಡಿದ್ದರೆ ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದಿದ್ದಾರೆ. ಜೊತೆಗೆ . ನಾನು ದೇಶದಲ್ಲಿಯೇ ಉಳಿದಿದ್ದರೇ ಮತ್ತಷ್ಟು ಹಿಂಸಾಚಾರ ನಡೆಯುತ್ತಿತ್ತು. ಆದ್ದರಿಂದ ರಾಜೀನಾಮೆ ನೀಡಿದೆ ಎಂದು ಹಸೀನಾ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪಾವಗಡ: ತಾಲೂಕಿನಲ್ಲಿ ಪ್ರಮುಖ ಬೆಳೆಯಾಗಿರುವಂತಹ ಶೇಂಗಾ ಬೆಳೆಗೆ ಸದ್ಯ ಕಾಡಂದಿಗಳ ಕಾಟ ಹೆಚ್ಚಾಗಿ ಬೆಳೆಯನ್ನು ನಾಶ ಮಾಡುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಹೇಳಿದ್ದಾರೆ. ಗುಡ್ಲಹಳ್ಳಿ ಸರ್ವೆ ನಂಬರ್ 105ರಲ್ಲಿ ಪೂಜಾರಪ್ಪ ಅವರು ಶೇಂಗಾ ಬೆಳೆಯನ್ನು ಬೆಳೆದಿದ್ದು ಶುಕ್ರವಾರ ಮತ್ತು ಶನಿವಾರ ರಾತ್ರಿ ಕಾಡಂದಿಗಳು ಹೊಲಕ್ಕೆ ನುಗ್ಗಿ ಬೆಳೆಯನ್ನು ನಾಶ ಮಾಡಿವೆ. ಈ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಅವರು ಇದು ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದರೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಮಾಹಿತಿ ನೀಡಿದರೆ 15 ಸಾವಿರದಷ್ಟು ಪರಿಹಾರ ಬರುವುದು ಎಂದು ತಿಳಿಸಿದ್ದಾರೆ. ಈ ಬೆಳೆಗೆ ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದು ಪರಿಹಾರದ ಮೊತ್ತವನ್ನು 50 ಸಾವಿರದಿಂದ 1 ಲಕ್ಷದವರೆಗೂ ಹೆಚ್ಚಿಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ…