Author: admin

ಸರಗೂರು:  ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರ ಜೀವನ ಕಷ್ಟಕರವಾಗಿದೆ, ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಬರುತ್ತಿಲ್ಲ’ ಹಾಗೂ ರೈತರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ವಿರುದ್ಧ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಮಂಗಳವಾರದಂದು ಅರಣ್ಯ ಇಲಾಖೆ  ಕಚೇರಿ ಮುಂಭಾಗ ವಿವಿಧ ಘೋಷಣೆ ಕೂಗಿ ಎಸಿಎಫ್ ಸತೀಶ್ ರವರನ್ನು  ವರ್ಗಾವಣೆ ಮಾಡಬೇಕು ಪ್ರತಿಭಟನೆ ಒತ್ತಾಯಿಸಿದರು. ನಂತರ ಸಭೆ ಕುರಿತು ಮಾತನಾಡಿದ ರೈತ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಳೆಹೆಗ್ಗುಡಿಲು ನವೀನ್,  ಸೆ.10ರಂದು ರೈತ ಸಭೆಯಲ್ಲಿ “ರೈತರು ನಿಮಗೆ ನಾಚಿಕೆಯಾಗಬೇಕು” ಎಂದು ಅವಹೇಳನಾಕಾರಿಯಾಗಿ ಮಾತನಾಡಿರುವ ಈ ಭಾಗದ ಸಹಾಯಕ ಸಂರಕ್ಷಣಾಧಿಕಾರಿ ರೈತರ ಬಗ್ಗೆ ಅರಿವು ಇಲ್ಲದಂತೆ ಮಾತನಾಡಿದ ವ್ಯಕ್ತಿಯನ್ನು ಅಮಾನತು ಮತ್ತು ವರ್ಗಾವಣೆ ಮಾಡಿ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ದಸಂಸ ಮುಖಂಡ ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎ‌.ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ನಿರಂತರವಾಗಿ…

Read More

ಕೊರಟಗೆರೆ : ತಾಲೂಕಿನ ಮಾವತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡದ ಕಾರಣಕ್ಕೆ ಸಭೆ ರದ್ದಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪–೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಏರ್ಪಡಿಸಲಾಗಿತ್ತು. ವಾರ್ಷಿಕ ಸಭೆ ನಡೆಸಲು ಸರ್ವ ಸದಸ್ಯರಿಗೆ ೧೫ ದಿನ ಮುಂಚೆಯೇ ಆಹ್ವಾನ ಪತ್ರಿಕೆ ನೀಡಬೇಕಾಗಿತ್ತು ಸಂಘದ ಎರಡು ಬಣದ ಸದಸ್ಯರ ನಡುವೆ ಮಾತಿನ ಜಟಾಪಟಿಯಿಂದ ರೈತರಿಗೆ ಸೇರಿದ ೩೦ ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಆಯೋಜಿಸಿದ್ದ ಸಭೆಯನ್ನ ರದ್ದುಪಡಿಸಲಾಗಿದೆ. ರೈತರಿಗೆ ಕಳೆದ ೪ ವರ್ಷದಿಂದ ಸಹಕಾರ ಸಂಘದಿಂದ ಯಾವುದೇ ಸಾಲ ಸೌಲಭ್ಯ ನೀಡಲಾಗಿದೆ ಎಂದು ರೈತರ ಪಹಣಿಯಲ್ಲಿ ಉಲ್ಲೇಖವಾಗಿದೆ. ಹಾಗೂ ಒಂದು ಮೂಟೆ ಗೊಬ್ಬರವನ್ನು ಮಾರಾಟ ಮಾಡಿಲ್ಲ ಎಂದು ರೈತರು ಸಭೆಯಲ್ಲಿ ಸದಸ್ಯರನ್ನ ತರಾಟೆ ತೆಗೆದುಕೊಂಡರು. ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಧನಂಜಯ…

Read More

ಕೊರಟಗೆರೆ: ಕೊರಟಗೆರೆ ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರು ಮತ್ತು ಆಡಳಿತ ಮಂಡಳಿ ನಡುವೆ ಉತ್ತಮ ಸಹಕಾರವಿದ್ದು, ಸಾರ್ವಜನಿಕರು ಠೇವಣಿಗಳನ್ನು ಸಹಕಾರ ಸಂಘದಲ್ಲಿ ಇಟ್ಟರೆ ಅದು ರೈತರಿಗೆ ಉಪಯೋಗವಾಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ವಿನಯ್‌ಕುಮಾರ್ ತಿಳಿಸಿದರು. ಕೊರಟಗೆರೆ ಪಟ್ಟಣದಲ್ಲಿ ಕಸಬಾ ಪ್ರಾಥಮಿಕ ಸಹಾಕಾರ ಸಂಘ ಏರ್ಪಡಿಸಿದ್ದ ೨೦೨೪–೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕಸಬಾ ವಿ.ಎಸ್.ಎಸ್.ಎನ್. ಸಂಘವು ಬಹಳ ಸಂಕಷ್ಠದಲ್ಲಿದ್ದು ನಂತರ ಚೇತರಿಕೆ ಕಂಡಿದೆ, ತಾಲೂಕಿನಲ್ಲೇ ಹೆಚ್ಚಿನ ಸದಸ್ಯರನ್ನು ಹಾಗೂ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಡೆದಿದೆ, ಈ ಹಿಂದೆ ಸಂಘದಲ್ಲಿ ಜಿಡಿಪಿ ಸಾಲಗಳನ್ನು ನೀಡಿದ್ದು ಅವುಗಳನ್ನು ವಸೂಲಿ ಮಾಡುವುದು ಪ್ರಸ್ತುತವಿರುವ ಆಡಳಿತ ಮಂಡಳಿಗೆ ತಲೆ ನೋವಾಗಿದೆ, ಆದರೂ ಎಲ್ಲರೂ ಒಟ್ಟಾಗಿ ಸಾಲ ಮರುಪಾವತಿಗೆ ಶ್ರವಹಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಕೆಸಿಸಿ ಸಾಲದಲ್ಲಿ ರೈತರು ಮರಣ ಹೊಂದಿದ್ದಾಗ ಅದನ್ನು ಮತ್ತೆ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಿ…

Read More

ಮಧುಗಿರಿ: ಚಿತ್ರ ನಿರ್ದೇಶಕ ರವಿ ಆರ್.ರಗಣಿ ರವರು ಜೆಡಿಎಸ್ ಪಕ್ಷದ ಬಗ್ಗೆ ಹಾಗೂ ನಮ್ಮ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದ್ದು ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿಜವರ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 3 ಬಾರಿ ಶಾಸಕರನ್ನು ಕೊಟ್ಟ ಜೆಡಿಎಸ್ ಪಕ್ಷವು ಸಧೃಡವಾಗಿದ್ದು, ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ, ರವಿ ಆರ್. ಗರಣಿಯವರು ಅಭಿವೃದ್ಧಿ ನೋಡಿ ಮಾತನಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಗೆ ವಿರೋಧ ಪಕ್ಷವೇ ಇಲ್ಲ. ಎಲ್ಲವೂ ರಾಜಣ್ಣನವರ ಪರವಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಈವರೆಗೂ ಮೂವರು ಶಾಸಕರು ಆಯ್ಕೆಯಾಗಿರುವುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದರು. ಮುಖಂಡ ಸಿಡ್ರಗಲ  ಶ್ರೀನಿವಾಸ್ ಮಾತನಾಡಿ, ರವಿ ಆರ್. ಗರಣಿ ಎಂಬ ವ್ಯಕ್ತಿ ಜೆಡಿಎಸ್ ಎಲ್ಲಿದೆ, ವಿರೋಧ ಪಕ್ಷ ಇಲ್ಲ ಎಂದಿದ್ದಾರೆ. ರವಿ ಮೊದಲು…

Read More

ಬೆಂಗಳೂರು: ಸಿನಿಮಾ ಟಿಕೆಟಿಗೆ ಗರಿಷ್ಟ 200 ರೂ. ದರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ  ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾ. ರವಿ ಹೊಸಮನಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ. ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಟಿಕೆಟ್‌ ದರ ಗರಿಷ್ಠ 200 ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂದು ಕೋರಿ ಅರ್ಜಿದಾರರು ಮನವಿ ಮಾಡಿದ್ದರು. ಟಿಕೆಟ್‌ ದರ ನಿಗದಿ ಸಂಬಂಧ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು–2025’ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್‌ ತಕಾರರು ಅರ್ಜಿ ತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ…

Read More

ತುಮಕೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ ಟಿ) ದರ ಪರಿಷ್ಕರಣೆ ಮೂಲಕ ಬಡವರು, ಮಧ್ಯಮ ವರ್ಗದ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ನಗರದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಜಿಎಸ್‌ ಟಿ 2.0 ವಿಜಯೋತ್ಸವದಲ್ಲಿ ಮಾತನಾಡಿದರು. ಭಾರತದ ಬೆಳವಣಿಗೆಯ ವೇಗ ನಿಯಂತ್ರಿಸಲು ಅಮೆರಿಕದಂತಹ ದೇಶಗಳು ಹೊಂಚು ಹಾಕುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ತೆರಿಗೆ ಸುಧಾರಣೆ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸ್ವದೇಶಿ ವಸ್ತು ಉತ್ಪಾದನೆ ಮತ್ತು ಬಳಕೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಕೆ.ಧನುಷ್‌, ಮುಖಂಡರಾದ ಟಿ.ಎಚ್‌.ಹನುಮಂತರಾಜು, ಎಸ್.ಪಿ.ಚಿದಾನಂದ್, ಬ್ಯಾಟರಂಗೇಗೌಡ, ವಿರುಪಾಕ್ಷಪ್ಪ, ರವೀಶಯ್ಯ, ಬಾಲಾಜಿ, ಮಧು, ಕುಮಾರ್, ಶಿವರಾಜು, ಗಂಗೇಶ್, ಅಖಿಲ್, ವೆಂಕಟೇಶ್‌, ವರ್ತಕರಾದ ಗಿರೀಶ್, ದರ್ಶನ್‌, ಪ್ರಸನ್ನ, ಪ್ರಶಾಂತ್, ನಂದಕಿಶೋರ್ ಇತರರು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುರುವೇಕೆರೆ: ಸಾಹಿತ್ಯ ಎಲ್ಲರನ್ನು ಆಕರ್ಷಣೆ ಮಾಡುವ ಸಂವೇದನಾಶೀಲ ಕ್ಷೇತ್ರ. ಸಮ್ಮೇಳನ ಕನ್ನಡದ ಪ್ರಜ್ಞೆ ವಿಸ್ತರಿಸುವ ಕೆಲಸ ಮಾಡಬೇಕು ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು. ವೈ.ಟಿ.ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸೋಮವಾರ ನಡೆದ ತುರುವೇಕೆರೆ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ಅಂತರಿಕ ಒಳ ನೋಟದಲ್ಲಿ ಕನ್ನಡವನ್ನು ಬಳಸುವ, ಉಳಿಸುವ, ಬೆಳೆಸುವ ಪ್ರಜ್ಞೆ ಮುಖ್ಯ. ನೀವು ಕನ್ನಡಿಗರನ್ನು ಉಳಿಸಿದರೆ ಆ ಜನಸಮುದಾಯ ತಾನಾಗಿಯೇ ಕನ್ನಡ ಭಾಷೆ ಉಳಿಸುತ್ತಾರೆ. ಕನ್ನಡ ಓದುವ ಕಾರಣಕ್ಕಾಗಿ ಅವರು ನಿರುದ್ಯೋಗಿಗಳಾಗಂದತೆ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯದಲ್ಲಿ ಚಿಂತನಶೀಲ ವೇದಿಕೆಯಾಗಿದ್ದ ಸೂಫಿಗಳು ಮತ್ತು ಸಂತರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಮನುಷ್ಯ ಸಂಬಂಧಗಳ ಬೆಸೆಯುವ ಕೆಲಸ ಮಾಡಿದರು. ಕನ್ನಡ ಭಾಷೆ, ಸಾಹಿತ್ಯ ಜನತಾರತಮ್ಯ ಕೆರಳಿಸದೆ ಎಲ್ಲರೊಡನೆ ಸೌಹಾರ್ದ, ಸಮಾನತೆ ಉಂಟು ಮಾಡಿ ಮಾನವೀಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸು ಕೆಲಸ ಮಾಡಿದೆ ಎಂದರು. ಸಮ್ಮೇಳನಾಧ್ಯಕ್ಷ ಪ್ರೊ.ಸಂಪಿಗೆ ತೋಂಟಾದಾರ್ಯ ಮಾತನಾಡಿ, ಸಹೃದಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ,…

Read More

ಕುಣಿಗಲ್: ತಾಲ್ಲೂಕಿನಲ್ಲಿ ಹದವಾಗಿ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕಾಗಿದೆ. ರೈತರು ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಭಾನುವಾರ ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮದಲ್ಲಿ ಹಿರಿಯರಿಗೆ ಎಡೆ ಬಿಡುವುದನ್ನು ಬಿಟ್ಟು ರಸಗೊಬ್ಬರಕ್ಕಾಗಿ ಕಾದ ರೈತರು ಗೊಬ್ಬರ ಸಿಗದೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ತಾಲ್ಲೂಕಿನಲ್ಲಿ ಖಾಸಗಿ ಮಾರಾಟಗಾರರು ಸೇರಿದಂತೆ 11 ರೈತರ ಸೇವಾ ಸಹಕಾರ ಸಂಘಗಳಲ್ಲಿ ಗೊಬ್ಬರದ ಮಾರಾಟ ವ್ಯವಸ್ಥೆ ಇದ್ದರೂ, ಬೇಡಿಕೆ ತಕ್ಕಂತೆ ಮತ್ತು ಸಕಾಲದಲ್ಲಿ ರಸಗೊಬ್ಬರ ಸಿಗದ ಕಾರಣ ರೈತರು ಪರದಾಟ ಮುಂದುವರೆದಿದೆ. ಒಂದೆಡೆ ಖಾಸಗಿ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದರೂ, ಮಾರಾಟಗಾರರು ಕಂಪನಿಗಳ ಹಿಡಿತದಲ್ಲಿರುವುದರಿಂದ ಯೂರಿಯಾ ಜತೆ ಸಹ ಉತ್ಪಾದಕಗಳನ್ನು ಖರೀದಿಸುವಂತೆ ಕಡ್ಡಾಯಗೊಳಿಸಿರುವುದು ಸಮಸ್ಯೆಯಾಗುತ್ತಿದೆ ಎಂದು ಮಾರಾಟಗಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಟಿಎಪಿಎಂಎಸ್‌ ಸೇರಿದಂತೆ ರೈತರ ಸೇವಾ ಸಹಕಾರ ಸಂಘಗಳು ರಸಗೊಬ್ಬರ ಮಾರಾಟ ಮಾಡುತ್ತಿವೆ. ಬೇಡಿಕೆ ಅನುಸಾರ ಸರಬರಾಜಾಗದ ಕಾರಣ ಲೋಡ್ ಬಂದ ಕೂಡಲೇ ರೈತರು ಖರೀದಿಗೆ…

Read More

ಮೈಸೂರು: ಮುಂದಿನ ಒಲಿಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಸೋಮವಾರ ಉದ್ಘಾಟಿಸಿ ಸಿಎಂ ಮಾತನಾಡಿದರು. ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3,600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಶುಭಕೋರಿದ ಮುಖ್ಯಮಂತ್ರಿಗಳು, ಸೋಲು ಗೆಲುವುಗಳಿಗಿಂತ, ಕ್ರೀಡಾಮನೋಭಾವ ಮುಖ್ಯ. ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು ರೂ. 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ. ಕುಸ್ತಿ ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ ಸಾಮಾಜಿಕ ಅಡೆತಡೆಗಳು…

Read More

ಬೀದರ್:  ಸೋಮವಾರ ಸುರಿದ ಧಾರಾಕಾರ ಮಳೆಗೆ ಔರಾದ್‌ ತಾಲ್ಲೂಕಿನ ಮಮದಾಪುರ ಗ್ರಾಮದ ಬಡಾವಣೆಯೊಂದರ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಿಗ್ಗೆ ಬಿಸಿಲು ವಾತಾವರಣ ಇತ್ತು. ಸಂಜೆ ದಟ್ಟ ಮೋಡ ಕವಿದು ಆರಂಭವಾದ ಮಳೆ ಬಿಟ್ಟುಬಿಡದೆ ಸುರಿಯಿತು. ಮಳೆ ನೀರು ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ಹೊಳೆಯಂತೆ ಹರಿಯಿತು. ಮಳೆಯ ಮುನ್ಸೂಚನೆ ಇಲ್ಲದೆ ಬಡಾವಣೆಯ ಜನರಿಗೆ ಮಳೆ ನೀರು ಮನೆಗೆ ನುಗ್ಗಿದಾಗ ಆತಂಕಕ್ಕೆ ಒಳಗಾದರು. ತಗ್ಗು ಪ್ರದೇಶದಲ್ಲಿರುವ ಭೀಮರಾವ್‌ ಕೊಟಗೀರೆ, ಜೈವಂತ ಕೊಟಗೀರೆ, ಕೇರೋಬಾ ಸೇರಿದಂತೆ ಇತರರ ಮನೆಗಳಿಗೆ ನೀರು ನುಗ್ಗಿದೆ. ವಿಷಯ ತಿಳಿದು ತಹಶೀಲ್ದಾರ್‌ ಮಹೇಶ ಪಾಟೀಲ್‌ ಭೇಟಿ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮನೆಗಳಲ್ಲಿ ಸಿಲುಕಿದ ಮಹಿಳೆಯರು, ಮಕ್ಕಳಿಗೆ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಬೀದರ್‌ ಜಿಲ್ಲಾದ್ಯಂತ ಸೋಮವಾರ ಬಿರುಸಿನ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಬೀದರ್‌ ನಗರದ ಮುಖ್ಯ ರಸ್ತೆಗಳು ಜಲಾವೃತಗೊಂಡು ಸವಾರರು ಪರದಾಡಿದರು. ಮಳೆಯ ಮುನ್ಸೂಚನೆ ಇಲ್ಲದೆ ಬಡಾವಣೆಯ ಜನರಿಗೆ ಮಳೆ…

Read More