Author: admin

ತುಮಕೂರು: ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸೇರಿ ಮೂವರಿಗೆ ತುಮಕೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶ್ರೀಕಿ,  ರಮೇಶ್, ರಬೀನ್ ಖಂಡೇಲ್ ವಾಲಗೆ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣ ಸಂಬಂಧ  ಈ ಮೂವರೂ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್ಸಿ ಕೋರ್ಟ್ ನ ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ಜಾಮೀನು ಮಂಜೂರು ಮಾಡಿದ್ದಾರೆ. ಬಿಟ್ ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ 60 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸದ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಾಮೀನು  ಮಂಜೂರು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಹಿಂಸಾಚಾರ ನಡೆಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹುನಿರೀಕ್ಷಿತ ಒಲಿಂಪಿಕ್ಸ್ 2024 ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಒಲಿಂಪಿಕ್ಸ್ನಲ್ಲಿ ಇಸ್ರೇಲ್ ಕೂಡ ಭಾಗವಹಿಸಲಿದೆ ಎಂಬುದು ಗಮನಾರ್ಹ. ಮಂಗಳವಾರ ಬಿಡುಗಡೆಯಾದ ವೀಡಿಯೊದಲ್ಲಿ, ಮುಖವಾಡ ಧರಿಸಿದ ವ್ಯಕ್ತಿ ಫ್ರಾನ್ಸ್ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಪ್ಯಾಲೆಸ್ಟೈನ್ ನೊಂದಿಗಿನ ಗೊಂದಲದ ಮಧ್ಯೆ ‘ಝಿಯಾನಿಸ್ ಆಡಳಿತದ’ ಪರವಾಗಿ ನಿಂತಿದ್ದಕ್ಕಾಗಿ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಬೆದರಿಕೆ ಹಾಕುತ್ತಾನೆ. ಕಪ್ಪು ಬಟ್ಟೆ ಧರಿಸಿ, ಎದೆಯ ಮೇಲೆ ಪ್ಯಾಲೆಸ್ಟೈನ್ ಧ್ವಜವನ್ನು ಸುತ್ತಿಕೊಂಡಿರುವ ವ್ಯಕ್ತಿ, ಪ್ಯಾರಿಸ್ ಮೂಲಕ ‘ರಕ್ತದ ಹೊಳೆ ಹರಿಯುತ್ತವೆ’ ಎಂದು ಘೋಷಿಸುತ್ತಾನೆ, ಇದು ತಕ್ಷಣದ ದಾಳಿಯನ್ನು ಸೂಚಿಸುತ್ತದೆ. ವ್ಯಕ್ತಿಯು ನಕಲಿ ಕತ್ತರಿಸಿದ ತಲೆಯನ್ನು ಹಿಡಿದಿರುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಹಮಾಸ್ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವರು ಊಹಿಸಿದ್ದರೂ, ವೀಡಿಯೊವನ್ನು ಗುಂಪಿಗೆ ಸಂಪರ್ಕಿಸುವ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಮತ್ತು ಇದನ್ನು…

Read More

ಔರಾದ: ಸಮಾಜ ಸೇವಕ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರೆ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ. ಸಮಾಜ ಸೇವಕ ಧನರಾಜ ಮುಸ್ತಾಪೂರೆಯವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ತೆಲಂಗಾಣದ ಜಹಿಬಾದ್ ನಲ್ಲಿ ತುಲೂಸ ಮೆಕ್ಸಿಕೋ ವಿವಿಯಿಂದ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದೆ. ಕಾರ್ಯಾಚರಣೆ ವೇಳೆ ಮತ್ತೊಂದು ಶವ ಸಿಕ್ಕಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ. ಒಂದೆಡೆ ಬಿಟ್ಟು ಬಿಡದ ಮಳೆ, ಮತ್ತೊಂದೆಡೆ ಪದೇ ಪದೇ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣು. ಇದರ ನಡುವೆ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಿದೆ ರಕ್ಷಣಾ ತಂಡ. ಈಗ ಸಣ್ಣಿ ಹನುಮಂತ ಗೌಡ (67) ಮಹಿಳೆ ಶವ ಸಿಕ್ಕಿದೆ. ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನೂ ಮೂವರಿಗೆ ಶೋಧ ಕಾರ್ಯ ಮುಂದುವರಿದಿದೆ. ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ ಪತ್ತೆಯಾಗಿಲ್ಲ.…

Read More

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಒಳ್ಳೆ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ರಾಮನಗರದ ತಾಯಿ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಪಾಲ್ಗೊಂಡು ಮೊದಲಿಗೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಕೃತಿ ನಮ್ಮ ಪರವಾಗಿದೆ. ಆದ್ದರಿಂದ ರಾಜ್ಯದಲ್ಲಿ ಮಳೆ ಚೆನ್ನಾಗಿದೆ. ನನ್ನ ಕಾಲ ಗುಣದಿಂದಲೇ ಉತ್ತಮ ಮಳೆ ಆಗ್ತಿದೆ ಎಂದು ಹೇಳುವುದಿಲ್ಲ. ಇಂಥಾ ಮೌಡ್ಯದಲ್ಲಿ ನನಗೆ ನಂಬಿಕೆ ಇಲ್ಲ ಎಂದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರ ಕಾಲ ಗುಣದಿಂದ ರಾಜ್ಯದಲ್ಲಿ ಮಳೆ ಆಗಲ್ಲ ಎನ್ನುವವರಿಗೆ ಟಾಂಗ್ (ಅಣಕಿಸಿದರು) ಕೊಟ್ಟರು. ರಾಮನಗರ ಜಿಲ್ಲೆ ಅಭಿವೃದ್ಧಿಗೆ ಸಕಲ ನೆರವು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ನೀಡಲು ನಾನು ಬದ್ದವಾಗಿದ್ದೇನೆ. ರಾಜ್ಯದ ಏಳೂವರೆ ಕೋಟಿ ಜನರ ಅಭಿವೃದ್ಧಿ ನನ್ನ ಗುರಿ ಎಂದರು. ಶಾಸಕ ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಬಾಲಕೃಷ್ಣ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮ್ಮತುಮಕೂರಿನ…

Read More

ಸಿನಿಮಾಗಳ ಮೂಲಕ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಲ್ಲಿ ಜಾನ್ವಿ ಕಪೂರ್ ಮೊದಲಿಗರು. ಜಾನ್ವಿಯ ಆ ಬೋಲ್ಡ್ ಲುಕ್ ಗಳಿಗೆ ಮಾರುಹೋಗದವರೇ ಇಲ್ಲ ಬಿಡಿ. ಆದರೀಗ ನಟಿ ಜಾನ್ವಿ ಮದುವೆ, ಬ್ರೇಕಪ್ ಕುರಿತು ಮಾತನಾಡಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಕೆಟ್ ಮಾಡಿದೆ. ಈ ಹಿಂದೆ ಜಾನ್ವಿ ಕಪೂರ್ ಶಿಖರ್ ಶಿಂಧೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು. ಶಿಖರ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಜಾನ್ವಿ ಕಪೂರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ ನಂತದಲ್ಲೀ ಜಾನ್ವಿ ಕಪೂರ್ ನಂತರ ಶಿಖರ್ ಶಿಂಧೆ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರು. ಇದೀಗಷ ಈ ಕುರಿತು ನಟಿ ಜಾಹ್ನವಿ ಕಪೂರ್ ಮನ ಬಿಚ್ಚಿ ಮಾತನಾಡಿದ್ದಾರೆ. ಪಿರಿಯಡ್ಸ್‌ನಿಂದ ಲವ್ ಬ್ರೇಕ್ ಆಗಿತ್ತು ಎಂದು ಹೇಳಿದ್ದಾರೆ. ಮುಟ್ಟಿನ ಆರಂಭದಲ್ಲಿ ನನ್ನ ಮನಸ್ಸಿ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಪ್ರತಿ ತಿಂಗಳ ಮುಟ್ಟಿನ ವೇಳೆ ಲವ್ ಬ್ರೇಕ್ ಅಪ್ ಆಗುತ್ತಿತ್ತು. ಪ್ರತಿ…

Read More

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ  ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋರ್ಟ್‌ ಸಾರಾ ಸಗಟಾಗಿ ತಿರಸ್ಕರಿಸಿದೆ. ನಿರೀಕ್ಷೆಯಂತೆಯೇ ನೀಟ್ ಮರು ಪರೀಕ್ಷೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಯಲಾಗಿರುವ ಹಿನ್ನೆಲೆ ಮೇ 5 ರಂದು ನಡೆಸಲಾಗಿದ್ದ ನೀಟ್‌ ಪರೀಕ್ಷೆಯನ್ನು ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಹೊಸದಾಗಿ ಮತ್ತೆ ಪರೀಕ್ಷೆ ನಡೆಸುವುದು ಈಗ ಇರುವ 20 ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಕ್ರಮ ದೇಶವ್ಯಾಪಿ ನಡೆದಿಲ್ಲ. ಮರು ಪರೀಕ್ಷೆಗೆ ಆದೇಶಿಸಲು ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಹೇಳಿದೆ. ಇಡೀ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೃಢವಾದರೆ ಮಾತ್ರ ಮರು ಪರೀಕ್ಷೆ ನಡೆಸಬಹುದು” ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ತಿಳಿಸಿದ್ದಾರೆ. “ವಿವಾದ…

Read More

ವಕೀಲೆಯೊಬ್ಬರಿಗೆ ಕೋರ್ಟ್‌ ಆವರಣದಲ್ಲೇ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಮಂಗಳವಾರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ನಡೆದಿದೆ. ಗಾಯಾಳು ವಕೀಲೆ ವಿಮಲಾ ಅವರ ಪರಿಸ್ಥಿತಿ ಗಂಭೀರವಾಗಿದೆ. ಕೃತ್ಯವೆಸಗಿದ ಆರೋಪಿ ಜಯರಾಮ ರೆಡ್ಡಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಕೀಲೆ ವಿಮಲಾ ಅವರಿಗೆ ಪರಿಚಯಸ್ಥನಾದ ಜಯರಾಮ ಹಂತ ಹಂತವಾಗಿ ಸುಮಾರು ಒಂದೂವರೆ ಕೋಟಿ ರೂ.ಗಿಂತಲೂ ಹೆಚ್ಚು ಹಣ ನೀಡಿದ್ದ. ಇತ್ತೀಚೆಗೆ ಇವರಿಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಹೆಜ್ಜಾಲ ಬಳಿ ಇರುವ ಪ್ರಾಪರ್ಟಿ ವಿಚಾರವಾಗಿ ಇಬ್ಬರು ಕಿರಿಕ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಮಲಾ ದೌರ್ಜನ್ಯದ ಜತೆಗೆ ಪ್ರಾಪರ್ಟಿ ವಿಚಾರವಾಗಿಯೂ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಏಕಾಏಕಿ ಕೋರ್ಟ್ ಹಾಲ್‌ನ ಒಂದನೇ ಎಸಿಎಂಎಂ ಬಳಿ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ವಿಮಲಾ ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಲಸೂರುಗೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಬೆಂಗಳೂರಿನ ದೊಡ್ಡ ದೊಡ್ಡ ರೌಡಿಶೀಟರ್‌ ಗಳಿಗೆ ಬಿಲ್ಡಪ್‌ ಕೊಡೋ ರೀತಿ ರೀಲ್ಸ್‌ ಮಾಡುತ್ತಿದ್ದ ಪುಡಿರೌಡಿಗಳಿಗೆ ಸಿಸಿಬಿ ಪೊಲೀಸರು ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಸುಮಾರು 60 ಇನ್‌ ಸ್ಟ್ರಾಗ್ರಾಂ ಹಾಗೂ ಯುಟ್ಯೂಬ್‌ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ರೌಡಿಗಳ ಹೆಸರಿನಲ್ಲಿ ಫ್ಯಾನ್ಸ್‌ ಪೇಜ್‌ ಗಳನ್ನು ತೆರೆದು ರೌಡಿಗಳ ವಿಡಿಯೋ ಮತ್ತು ಫೋಟೋಗಳಿಗೆ ಬೆಂಕಿ, ಲಾಂಗು ಮಚ್ಚು, ಎಫೆಕ್ಟ್ ಗಳನ್ನು ಹಾಕಿ ಸಿನಿಮಾ ಶೈಲಿಯಲ್ಲಿ ಹೊಗಳುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಿಸಿಬಿಗೆ ಹತ್ತಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಪೇಜ್‌ ಗಳು ಹಾಗೂ ಯುಟ್ಯೂಬ್‌ ಅಡ್ಮಿನ್‌ ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಅಡ್ಮಿನ್‌ ಗಳು ಪೈಕಿ ಬಹುತೇಕ ಮಂದಿ ಅಪ್ರಾಪ್ತರು ಎಂಬುದು ಗೊತ್ತಾಗಿದೆ. ವಿಲ್ಸನ್‌ ಗಾರ್ಡನ್‌ ನಾಗ, ಮಾರತ್‌ ಹಳ್ಳಿ ರೋಹಿತ್‌, ಸೈಲೆಂಟ್‌ ಸುನೀಲ, ಕುಣಿಗಲ್ ಗಿರಿ ಸೇರಿ ಹಲವಾರು ರೌಡಿಗಳ…

Read More

ಶ್ರೀಮಂತ ಮನೆಯ ತನಗಿಂತ ಚಿಕ್ಕವಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಪೋಷಕರು ಯುವಕನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಕ್ಷಣೆ ಕೋರಿ ನವ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಎಂಬವರ ಮೊರೆ ಹೋಗಿದ್ದಾರೆ. ದೇವನಹಳ್ಳಿ ತಾಲೂಕಿನ ಸಿ.ಎನ್. ಹೊಸೂರು ಗ್ರಾಮದ ವಿಜಯ್ ಕುಮಾರ್ (39 ವರ್ಷ) ಹಾಗೂ ಬೆಂಗಳೂರು ಉತ್ತರದ ಅಮೃತ್ ಹಳ್ಳಿ ಮೂಲದ ಹಂಸಲೇಖಾ (21 ವರ್ಷ) ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದಾರೆ. ಅಲ್ಲದೆ ವಿಜಯ್ ಕುಮಾರ್ ಮಧ್ಯಮವರ್ಗದ ಫೋಟೋಗ್ರಾಫರ್ ಆಗಿದ್ದು, ಶ್ರೀಮಂತಳಾದ ಹಂಸಲೇಖಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಮದುವೆಗೆ ಹಂಸಲೇಖಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಂಸಲೇಖಾಳಿಗಿಂತ ವಿಜಯ್ ಕುಮಾರ್ ವಯಸ್ಸಿನಲ್ಲಿ ದೊಡ್ಡವನಿದ್ದಾನೆ, ಹಾಗೆ ಆತ ಆರ್ಥಿಕವಾಗಿ ಸದೃಡವಾಗಿಲ್ಲ. ಅಲ್ಲದೆ ಇದು ಅಂತರ್ಜಾತಿ ವಿವಾಹವೆಂದು ಹಂಸಲೇಖಾ ಪೋಷಕರು ಈ ಮದುವೆ ವಿರೋಧ ವ್ಯಕ್ತಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆ. ನವ ಜೋಡಿ ಪೊಲೀಸರ ಮೊರೆ ಹೋಗುತ್ತಿದ್ದಂತೆ ಠಾಣೆಗೆ ಏಕಾಏಕಿ…

Read More