Subscribe to Updates
Get the latest creative news from FooBar about art, design and business.
- ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
- ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
- ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
- ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ: ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
- ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ: ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
- ತುಮಕೂರು: ಆ. 2ರಂದು ಪೊಲೀಸ್ ಕಾನ್ಸ್’ಟೇಬಲ್ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆ: ನಿಷೇಧಾಜ್ಞೆ ಜಾರಿ
- ಪತ್ರಕರ್ತರು ಸಮಾಜದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಲಿ: ಶಾಸಕ ಪ್ರಭು ಚವ್ಹಾಣ
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
Author: admin
ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನಲ್ಲಿರುವ ಪಿಜಿಯೊಂದರಲ್ಲಿ ಯುವತಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲಕ ಕೃತಿ ಕುಮಾರಿ ಎಂಬ 24 ವರ್ಷದ ಯುವತಿಯೇ ಕೊಲೆಯಾದವಳು. ಕಳೆದ ರಾತ್ರಿ 11.10 ರಿಂದ 11.30ರ ಸಂದರ್ಭದಲ್ಲಿ ಯುವಕನೋರ್ವ ಲೇಡಿಸ್ ಪಿಜಿಗೆ ನುಗ್ಗಿದ್ದಾನೆ. ಪಿಜಿಯ ಮೂರನೇ ಮಹಡಿಯಲ್ಲಿದ್ದ ಯುವತಿ ಕೃತಿ ಕುಮಾರಿ ಕೊಠಡಿಗೆ ನುಗ್ಗಿರುವ ಯುವಕ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆ ಯುವಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೃತಿ ಕುಮಾರಿಗೆ ಪರಿಚಯವಿರುವ ಯುವಕನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಪಿಜಿ ಮಾಲೀಕನ ನಿರ್ಲಕ್ಷ್ಯದಿಂದ ಆ ಯುವಕ ಪಿಜಿಗೆ ನುಗ್ಗಿದ್ದು, ಯುವತಿಯ ಕೊಲೆಗೆ ಕಾರಣವಾಗಿದೆ. ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಪಿಜಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ಫುಟೇಜ್‌ಗಳನ್ನು ಪಡೆದಿರುವ ಪೊಲೀಸರು, ಅದರ ಆಧಾರದ ಮೇಲೆ ಆರೋಪಿಯ ಪತ್ತೆಗೆ…
ಬಿಗ್ ಬಾಸ್ ಖ್ಯಾತಿಯ ಹಳ್ಳೀಕಾರ್ ಒಡೆಯ ವರ್ತೂರ್ ಸಂತೋಷ್ ಅವರು ಇತ್ತೀಚೆಗೆ ಯಾಕೋ ಬರೀ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಅವರ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದೆ. ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯ ಎಂದು ಹೆಸರು ಬರಲು ಕಾರಣ ನಾನೇ ಎಂದು ಹೇಳಿರುವ ವೀರೇಶ್ ಹೊಸಕೋಟೆಯವರು ಸಂತೋಷ್ ಮೇಲೆ ಗಂಭೀರವಾದ ಆರೋಪ ಮಾಡಿದ್ದು ‘ವರ್ತೂರು ಸಂತೋಷ್ ವಯಸ್ಸಾದ ಹಸುಗಳನ್ನು ಕೂಯಿಸಲು ಕಳುಹಿಸುತ್ತಾನೆ, ಇದರಿಂದ ನನಗೆ ನಿದ್ದೆಯೇ ಬರದಂತಾಗಿದೆ’ ಎಂದು ಹೇಳಿದ್ದಾರೆ. ಅಲ್ಲದೆ ತಲೆ ಇಲ್ಲದ ಜನರು ಅವನ ಬಳಿ ಹೋಗುತ್ತಿದ್ದಾರೆ ಆತ ಚೆನ್ನಾಗಿ ಟೋಕನ್ ಹೊಡೆಯುತ್ತಿದ್ದಾನೆ. ರೈತರಿಗೆ ದೊಡ್ಡ ಮೋಸ ಮಾಡುತ್ತಿದ್ದಾನೆ ಚೀಲದಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದಾನೆ. ನಾವು ಎಷ್ಟೇ ಫೋನ್ ಮಾಡಿದರೂ ಅವರು ಫೋನ್ ತೆಗೆಯುತ್ತಿಲ್ಲ, ನಾನು ವರ್ತೂರ್ ಸಂತೋಷ್ ವಿರುದ್ಧ ಆರೋಪ ಮಾಡಿದ್ದು ಸತ್ಯ. ಹಾಗಿದ್ದ ಮೇಲೆ ಆತ ಕರೆ ಮಾಡಿ ನನ್ನನ್ನು ಕೇಳಬೇಕಿತ್ತು. ಒಂದು ಕಡೆ ಮಾತನಾಡಿದರೆ ಮತ್ತೊಂದು ಕಡೆ ಮಾತನಾಡುವುದಿಲ್ಲ ಆತ ಪಕ್ಕಾ…
ಪ್ರತಿದಿನ 5 ಬಾರಿ ನಮಾಜ್ ಮಾಡವುದು ಮುಸ್ಲಿಂಮರ ಸಂಪ್ರದಾಯ. ಆಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಗಾಗಿ ಮುಸ್ಲಿಮರು ನಮಾಜ್ ಮಾಡುತ್ತಾರೆ. ಇದುವರೆಗೂ ನಾವೆಲ್ಲರೂ ಈ ನಮಾಜ್ ಎಂಬ ಪದ ಉರ್ದು ಭಾಷೆಯಿಂದ ಬಂದಿರಬಹುದು ಅಂತ ಭಾವಿಸಿದ್ದೆವು. ಆದ್ರೆ ಇದು ಸಂಸ್ಕೃತ ಪದವಂತೆ!! ಇದನ್ನ ಸ್ವತಃ ಮುಸ್ಲಿಂ ಧರ್ಮಗುರುಗಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲ್ಯಾಸಿ ಅವರು ಸಂದರ್ಶನವೊಂದರಲ್ಲಿ ನಮಾಜ್ ಎಂಬುದು ಸಂಸ್ಕೃತ ಪದ, ನಮಾಜ್ ಎಂಬ ಪದದ ಮೂಲ ಭಾರತದ್ದು, ಅದು ಸಂಸ್ಕೃತ ಪದವಾದ ನಮಃ ದಿಂದ ಬಂದಿದೆ. ಅದರ ಅರ್ಥ ಈಶ್ವರನಿಗೆ ತಲೆ ಬಾಗಿ ನಮಸ್ಕರಿಸುವುದು, ಈಶ್ವರನಿಗೆ ಶರಣಾಗುವುದು ಅಂತಾ ಹೇಳಿದ್ದಾರೆ. ಇಷ್ಟೇ ಅಲ್ಲದೆ ಅರಬ್ ದೇಶದವರ ಬಳಿ ನೀವು ನಮಾಜ್ ಮಾಡಿದಿರಾ ಎಂದು ಕೇಳಿದರೆ ಅವರು ಏನೂ ಹೇಳೊಲ್ಲಾ. ಏಕೆಂದರೆ ನಮಾಜ್ ಎಂಬ ಪದದ ಬಗ್ಗೆ ಅವರಿಗೆ ಗೊತ್ತಿಲ್ಲ. ಅವರು ಪ್ರಾರ್ಥನೆಗೆ ಸಲಾಹ್ ಎಂದು…
ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಮೈ ನಡುಕ ಹುಟ್ಟಿಸುತ್ತವೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ವಿಡಿಯೋ ಕೂಡ ಇದಕ್ಕೇ ಸಂಬಂಧಿಸಿದ್ದು. ಬಯಲು ಶೌಚಕ್ಕೆಂದು ಪೊದೆಯ ಬಳಿ ಹೋಗಿ ಕುಳಿತ ವ್ಯಕ್ತಿಯೊಬ್ಬನ ಮೇಲೆ ದೈತ್ಯ ಹೆಬ್ಬಾವೊಂದು ಅಟ್ಯಾಕ್ ಮಾಡಿದೆ. ಅಷ್ಟೇ ಅಲ್ಲದೆ ಅವನನ್ನು ನುಂಗಲು ಯತ್ನಿಸಿದೆ. ಕೊನೆಗೆ ಆ ವ್ಯಕ್ತಿಯನ್ನು ಸುತ್ತುವರಿದಿದ್ದ ಹೆಬ್ಬಾವನ್ನು ಕೊಂದು, ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಭೀಕರ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅಂದಹಾಗೆ ಕೃಷ್ಣ ಬಿಹಾರಿ ಸಿಂಗ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ 13 ಅಡಿ ಉದ್ದದ ಹೆಬ್ಬಾವು ಶೌಚಕ್ಕೆ ಕುಳಿತ ವ್ಯಕ್ತಿಯ ಕುತ್ತಿಗೆಯನ್ನು ಸುತ್ತುವರೆದ ದೃಶ್ಯವನ್ನು ಕಾಣಬಹುದು. ಹೀಗೆ ಬಿಟ್ಟರೇ ಹಾವು ಆ ವ್ಯಕ್ತಿಯನ್ನೇ ಜೀವಂತವಾಗಿ ನುಂಗಿಬಿಡುತ್ತೇ ಎಂದು ಭಾವಿಸಿದ ಸ್ಥಳೀಯರು ಬೇರೆ ದಾರಿ ತೋರದೆ, ಕೊಡಲಿ ಏಟು ಕೊಟ್ಟು ಹೆಬ್ಬಾವನ್ನು ಸಾಯಿಸಿ ಆ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದಾರೆ. ಇನ್ನು ಜುಲೈ 22 ರಂದು…
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದಕ್ಕಾಗಿ ಈ ದಂಪತಿಗಳು ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಇಲ್ಲಿಂದ ಅವರ ಡಿವೋರ್ಸ್ ರೂಮರ್ಸ್ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ವಿಚ್ಛೇದನದ ಪೋಸ್ಟ್’ವೊಂದನ್ನು ಲೈಕ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಹೀಗೆ ವಿಚ್ಛೇದನ ಸುದ್ದಿಗೆ ಪುಷ್ಠಿ ನೀಡುವಂತೆ ಒಂದಾದ ಮೇಲೊಂದು ಮಾಹಿತಿ ಹರಿದುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಂತೆ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಐಶ್ವರ್ಯಾ ತನ್ನ ಮತ್ತು ಅಭಿಷೇಕ್ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ನಾವಿಬ್ಬರೂ ತುಂಬಾ ಬಲವಾದ, ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿದ್ದೇವೆ. ನಾವು ಇನ್ನೂ ವಾದ ಮತ್ತು ಚರ್ಚೆಯ ನಡುವಿನ ವ್ಯತ್ಯಾಸವನ್ನು ಕಲಿಯುತ್ತಿದ್ದೇವೆ. ಹೀಗಾಗಿ ಎಂತದ್ದೇ ವಿಚಾರಗಳಿದ್ದರೂ ವಾದಕ್ಕಿಂತ ಮೊದಲು ಚರ್ಚೆ ಮಾಡುತ್ತೇವೆ. ಅಭಿಷೇಕ್ ಜೊತೆ…
ಭುವನೇಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಸೆಂಚುರಿ ಸ್ಟಾರ್ ಅವರ 131 ನೇ ಚಿತ್ರದ ಶೂಟಿಂಗ್ ಆಗಸ್ಟ್ ನಲ್ಲಿ ಆರಂಭವಾಗಲಿದೆ. ಶಿವಣ್ಣನ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಿರ್ಮಾಣ ತಂಡವು ಈಗ ಚಿತ್ರದ ಶೂಟಿಂಗ್ ಆರಂಭಿಸಲು ಸಜ್ಜಾಗಿದೆ. ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್ ಎಸ್ ರೆಡ್ಡಿ ಮತ್ತು ಸುಧೀರ್, ಛಾಯಾಗ್ರಾಹಕ ಎಜೆ ಶೆಟ್ಟಿ ಮತ್ತು ಸಂಕಲನಕಾರ ದೀಪು ಎಸ್ ಕುಮಾರ್ ಸೇರಿದಂತೆ ಇಡೀ ತಂಡವು ಶಿವರಾಜಕುಮಾರ್ ಅವರ ನಿವಾಸದಲ್ಲಿ ಸಭೆ ಸೇರಿದ್ದು, ಆಗಸ್ಟ್‌ನಲ್ಲಿ ಚಿತ್ರೀಕರಣ ಶೂಟಿಂಗ್ ಆರಂಭಿಸಲು ನಿರ್ಧರಿಸಿದೆ. ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆಯಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ, ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಘೋಸ್ಟ್’ ಖ್ಯಾತಿಯ ವಿ.ಎಂ.ಪ್ರಸನ್ನ ಹಾಗೂ ‘ಸೀತಾರಾಮಂ’ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ. ವಿಕ್ರಂ ವೇದ, ಆರ್ ಡಿಎಕ್ಸ್, ಖೈದಿ…
ಇದೀಗ ಮೆಟಾ ಒಡೆತನದ ಕಂಪನಿಯೂ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದ್ದು, ಈ ಬಾರಿಯೂ ಹೊಸ ವೈಶಿಷ್ಟ್ಯವನ್ನು ತರಲು ಸಿದ್ಧತೆ ನಡೆಸಿದೆ. ಮೆಟಾ ಒಡೆತನದ ಕಂಪನಿಯೂ ಇದೀಗ ಇಂಟರ್ನೆಟ್ ಇಲ್ಲದೇ ಡಾಕ್ಯೂಮೆಂಟ್, ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಹೊಸ ಒಫೀಚರ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ಯಾವುದೇ ಫೈಲ್ ಗಳನ್ನು ಸುಲಭವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ಆರಂಭದಲ್ಲಿ ಈ ಹೊಸ ಫೀಚರ್ ಅನ್ನು ಆಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ನೀಡಲು ಮುಂದಾಗಿದ್ದು, ಆ ಬಳಿಕ ಆಯಪಲ್ ಬಳಕೆದಾರರಿಗೆ ಪರಿಚಯಿಸಲು ಸಂಸ್ಥೆ ಮುಂದಾಗಿದೆ. ಫೈಲ್ ಹಂಚಿಕೊಳ್ಳಲು, ನೀವು ಮತ್ತೊಬ್ಬ ವ್ಯಕ್ತಿಯ ಮೊಬೈಲ್ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ವೈ-ಫೈ ಅಥವಾ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಈ ಮೂಲಕ ನೀವು ಇಂಟರ್ನೆಟ್ ಇಲ್ಲದೆ ನಿಮ್ಮ ಸುತ್ತಲಿನ ಜನರಿಗೆ ಫೈಲ್‌ಗಳನ್ನು ಕಳುಹಿಸಬಹುದು. ಇಂಟರ್ನೆಟ್ ವೇಗವು ನಿಧಾನವಾಗಿರುವ ಅಥವಾ ಕಾರ್ಯನಿರ್ವಹಿಸದಿರುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ…
ಪ್ರೇಯಸಿ ಕೈ ಕೊಟ್ಟಳು, ಮೋಸ ಮಾಡಿದಳು, ಮದುವೆ ಆಗಲು ಒಪ್ಪಲಿಲ್ಲ, ಬೇರೊಬ್ಬನ ಸಂಘ ಬಯಸಿದಳು ಎಂಬ ಕಾರಣಗಳಿಗೆ ಕೊಲೆಗಳು ನಡೆದ ಅನೇಕ ಪ್ರಸಂಗಗಳನ್ನು ನಾವು ನೋಡಿದ್ದೇವೆ. ಆದರೆ ಮದುವೆ ಆಗು ಎಂದು ದುಂಬಾಲು ಬಿದ್ದ ಪ್ರಿಯತಮೆಯನ್ನೇ ಪಾಪಿ ಪ್ರಿಯಕರ ಕೊಂದ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಸೃಜನ್ ಸೌಮ್ಯಳನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಅಂದಹಾಗೆ ತೀರ್ಥಹಳ್ಳಿಯಲ್ಲಿ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಕೂಡ ಮಾತನಾಡಿಕೊಂಡಿದ್ದರು. ಆದರೆ ಇಬ್ಬರದ್ದು ಬೇರೆ ಬೇರೆ ಸಮುದಾಯ ಆಗಿದ್ದರಿಂದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಜು.2 ರಂದು ತೀರ್ಥಹಳ್ಳಿಗೆ ಹೋಗುತ್ತೇನೆ…
ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಸೌರ್ಯ ಏರ್ ಲೈನ್ಸ್ ವಿಮಾನ 9N-AME (CRJ 200) ಪತನಗೊಂಡಿದ್ದು, ವಿಮಾನದಲ್ಲಿದ್ದ 19 ಮಂದಿ ಪೈಕಿ 18 ಮಂದಿ ಸಾವನ್ನಪ್ಪಿದ ಘಟನೆ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದೆ. ಸದ್ಯ 13 ಜನರ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಮಾನದ ಪೈಲಟ್ 37 ವರ್ಷದ ಮನೀಶ್ ಶಾಕ್ಯಾ ಅವರನ್ನು ಅವಶೇಷಗಳಿಂದ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಿನಮಂಗಲದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಮಾಹಿತಿ ನೀಡಿದೆ. ವಿಮಾನವು ರನ್‌ವೇಯ ದಕ್ಷಿಣದ ತುದಿಯಿಂದ ಟೇಕಾಫ್ ಆಗುತ್ತಿದ್ದಾಗ, ರೆಕ್ಕೆಯ ತುದಿಯು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಇದ್ದಕ್ಕಿದ್ದಂತೆ ಪಲ್ಟಿಯಾಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡ ವಿಮಾನವು ನಂತರ ರನ್‌ವೇಯ ಪೂರ್ವ ಭಾಗದಲ್ಲಿರುವ ಕಮರಿಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್…
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 1,351 ಸ್ಥಳಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬ ಭಯಾನಕ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಭೂಕುಸಿತ ಘಟನೆಗಳ ಕುರಿತು ಬಿಜೆಪಿ ಎಂಎಲ್ ಸಿಗಳಾದ ಸಿಟಿ ರವಿ, ಎನ್.ರವಿಕುಮಾರ್, ಛಲವಾದಿ ಟಿ. ನಾರಾಯಣಸ್ವಾಮಿ ಅವರು ಮಂಡಿಸಿದ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, ‘ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಎದುರಿಸುತ್ತಿರುವ ಹೆಚ್ಚಿನ ಸ್ಥಳಗಳಿಗೆ ಶೀಘ್ರದಲ್ಲಿಯೇ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದರು. ತೀವ್ರವಾದ ಅಲ್ಪ ಮಳೆ, ಮೇಘ ಸ್ಫೋಟಗಳು, ನೈಸರ್ಗಿಕ ಇಳಿಜಾರುಗಳೊಂದಿಗೆ ಮಧ್ಯಪ್ರವೇಶಿಸುವುದು ಮತ್ತು ರಸ್ತೆ ನಿರ್ಮಾಣಗಳಂತಹ ಅಭಿವೃದ್ಧಿ ಕಾರ್ಯಗಳಿಗಾಗಿ ನದಿಗಳು ಮತ್ತು ತೊರೆಗಳ ನೈಸರ್ಗಿಕ ಹರಿವನ್ನು ತಿರುಗಿಸುವುದು ಭೂಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕೊಡಗು…