Subscribe to Updates
Get the latest creative news from FooBar about art, design and business.
- ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
- ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
- ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
- ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
- ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
- ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
- ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ: ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
- ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ: ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
Author: admin
ಕ್ಷುಲಕ ಕಾರಣಕ್ಕೆ ಪ್ರೇಮಿಗಳ ನಡುವೆ ಗಲಾಟೆ ನಡೆದಿದ್ದು, ಇದರಿಂದ ನೊಂದು ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಪ್ರಿಯತಮನೂ ನೇಣಿಗೆ ಶರಣಾದ ಘಟನೆ ಮೈಸೂರಿನ ದಟ್ಟಗಳ್ಳಿ ಹಾಗೂ ಜ್ಯೋತಿ ನಗರದಲ್ಲಿ ನಡೆದಿದೆ. ಮೋನಿಕಾ(20) ಹಾಗೂ ಮನು(22) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಇಬ್ಬರ ನಡುವೆ ಸಣ್ಣ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನ ಆಸ್ಪತ್ರೆಗೆ ಕರೆತಂದಿದ್ದಾನೆ. ಆದ್ರೆ ಮೋನಿಕಾ ಮೃತಪಟ್ಟಿದ್ದಳು. ಮೋನಿಕಾ ಸಾವಿಗೆ ಮನನೊಂದ ಮನು ತಾನೂ ಸಹ ಜ್ಯೋತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಇತ್ತೀಚೆಗೆ ಬಹುಕೋಟಿ ಭೂ ಹಗರಣ ಆರೋಪಗಳು ಒಂದರ ಹಿಂದೆ ಒಂದರಂತೆ ತೆರೆದುಕೊಳ್ಳುತ್ತಿವೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಭೂಗಳ್ಳರ ಪಾಲಾಗುತ್ತಿದೆ ಎಂದು ಆರೋಪಿಸಲಾಗಿದೆ. ನೂರಾರು ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಲಾಗಿದ್ದು ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಭೂಗಳ್ಳರಿಗೆ ಅಕ್ರಮ ಪರಭಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಚೆಲುವನಾರಾಯಣ ಸ್ವಾಮಿಯ ಭಕ್ತರಾಗಿರುವ ರವಿಕುಮಾರ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿ 21.5 ಎಕರೆ ಭೂಮಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 396, 397, 398 ಹಾಗೂ 399ಕ್ಕೆ ಸೇರಿದ ಭೂಮಿಯನ್ನು ಮಂಡ್ಯ ಜಿಲ್ಲೆ ನಗುವಿನಹಳ್ಳಿ ಗ್ರಾಮದ ಗೋಸೇಗೌಡ ಕುಟುಂಬ ದೇಗುಲಕ್ಕೆ ದೇಣಿಗೆಯಾಗಿ ನೀಡಿತ್ತು. ಆದರೆ ದೇವಾಲಯಕ್ಕೆ ಸೇರಿದ ಈ ಜಮೀನನ್ನು ಅನ್ಯರಿಗೆ ಪರಭಾರೆ ಮಾಡುವಲ್ಲಿ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮೀನನ್ನ ಮತ್ತೆ ದೇವಾಲಯದ ಹೆಸರಿಗೆ…
ಮನೆ ಮುಂದೆ ಬೀಗ ಹಾಕಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯೊಬ್ಬ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತನ್ನ ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬೆಂಗಳೂರಿನ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಫ್ಟ್ ವೇರ್ ಎಂಜಿನಿಯರ್ ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಸರುಘಟ್ಟ ನಿವಾಸಿ ಅಶೋಕ್(30) ಮತ್ತು ಆತನ ಸಹಚರ ಸತೀಶ್ ಅಲಿಯಾಸ್ ಸತ್ಯ (34) ಎಂಬವರನ್ನು ಬಂಧಿಸಿದ್ದರು. ಅವರಿಂದ 10.71 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಅಶೋಕ್ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆತನ ಪತ್ನಿ ದೂರವಾಗಿದ್ದರು. ಈ ವೇಳೆ ಆತನ ಸ್ನೇಹಿತ ತನ್ನ ಮನೆಗೆ ಕರೆದೊಯ್ದು ಕೆಲ ದಿನಗಳ ಕಾಲ…
ಬೈಕ್ ಗಳಿಗೆ ದುಬಾರಿ ಬೆಲೆಯ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ 150ಕ್ಕೂ ಹೆಚ್ಚು ಬೈಕ್ ಸೈಲೆನ್ಸರ್ ಗಳನ್ನು ರೋಡ್ ರೋಲರ್‌ನಿಂದ ನಾಶಪಡಿಸುವ ಮೂಲಕ ಕೋಲಾರ ಪೊಲೀಸರು ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ವೇಳೆ ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ಹಾಕಿದ್ದೇವೆ ಎಂದು ಎಸ್.ಪಿ ನಿಖಿಲ್ ತಿಳಿಸಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರ ನಿರ್ದೇಶನದಂತೆ ನಗರದ ಅಮ್ಮವಾರಿಪೇಟೆ ವೃತ್ತದ ರಸ್ತೆಯಲ್ಲಿ ಕರ್ಕಶ ಶಬ್ದ ಮಾಡುವಂತಹ 6.50 ಲಕ್ಷ ರೂಪಾಯಿ ಮೌಲ್ಯದ 150ಕ್ಕೂ ಹೆಚ್ಚು ಬೈಕ್ ಗಳ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ನಾಶಪಡಿಸಲಾಯಿತು. ಇದೇ ವೇಳೆ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಎಸ್ ಪಿ ನಿಖಿಲ್ ನೀಡಿದ್ದಾರೆ ಎನ್ನಲಾಗಿದೆ. ಎಸ್ ಪಿ ನಿಖಿಲ್ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಕರ್ಕಶ ಸೈಲೆನ್ಸರ್ ಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದೆವು. ಕೋಲಾರ ಮತ್ತು ಮುಳಬಾಗಿಲು…
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿಭಾಗವು 200 ಜೂನಿಯರ್ ಅಸಿಸ್ಟೆಂಟ್ ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್ ಸೈಟ್ lichousing.com ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಲೈಫ್ ಕಾರ್ಪೊರೇಶನ್ ಆಫ್ ಇಂಡಿಯಾ (LIC – Life Corporation of India) ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (HFL -Housing Finance Limited ) ಜೂನಿಯರ್ ಅಸಿಸ್ಟೆಂಟ್ ಗಳ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್ ಸೈಟ್ lichousing.com ನಲ್ಲಿ 200 ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ 14, 2024 LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. LIC HFL ಜೂನಿಯರ್ ಅಸಿಸ್ಟೆಂಟ್ ಪರೀಕ್ಷೆ ದಿನಾಂಕವು ಸೆಪ್ಟೆಂಬರ್ 24 ಎಂದು ಪ್ರಕಟಣೆಯಲ್ಲಿ ತಿಳಿಸಿದೆ. LIC HFL…
ಪೊಲೀಸ್ ಹೆಡ್ ಕಾನ್’ಸ್ಟೇಬಲ್ ಒಬ್ಬರು ಪ್ರೇಯಸಿಯೊಂದಿಗೆ ಇದ್ದಾಗಲೇ ರೆಡ್’ಹ್ಯಾಂಡಾಗಿ ಪತ್ನಿ ಕೈಗೆ ಸಿಕ್ಕಿಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ. ಪ್ರೇಯಸಿಯೊಂದಿಗೆ ವಾಸಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಸಿಕ್ಕಿಬಿದ್ದ ವ್ಯಕ್ತಿ ಎನ್ನಲಾಗಿದೆ. ಸಿರವಾರ ಪೊಲೀಸ್ ಠಾಣೆ ಹೆಡ್ ಕಾನ್’ಸ್ಟೇಬಲ್ ಆಗಿರುವ ರಾಜ್ ಮಹಮ್ಮದ್ ಸಿರವಾರದಲ್ಲಿ ಪ್ರೇಯಸಿಗಾಗಿ ಮನೆ ಮಾಡಿದ್ದ. ದೇವದುರ್ಗ ಠಾಣೆ ಪೊಲೀಸ್ ಕಾನ್’ಸ್ಟೇಬಲ್ ಆಗಿರುವ ಪತ್ನಿ ಪ್ಯಾರಿ ಬೇಗಂ ಅವರನ್ನ ಪ್ರೀತಿಸಿ ಮದುವೆಯಾಗಿದ್ದ ರಾಜ್ ಮಹಮ್ಮದ್ ಕಳೆದ ನಾಲ್ಕು ವರ್ಷಗಳಿಂದ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಪೊಲೀಸ್ ಹಿರಿಯ ಅಧಿಕಾರಿಗಳು ಬುದ್ದಿವಾದ ಹೇಳಿದರೂ ತಿದ್ದಿಕೊಂಡಿರಲಿಲ್ಲ. ಗಂಡ ಮತ್ತು ಆತನ ಪ್ರೇಯಸಿಯನ್ನು ಮನೆಯಲ್ಲಿ ಲಾಕ್ ಮಾಡಿದ ಮಹಿಳಾ ಪೇದೆ ಪ್ಯಾರಿ ಬೇಗಂ ಸ್ಥಳದಲ್ಲೇ ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಎಸ್ಪಿ ಸೂಚನೆಯ ಮೇರೆಗೆ ಸ್ಥಳಕ್ಕೆ ಬಂದ ಸಿರವಾರ ಠಾಣೆ ಪಿಎಸ್ ಐ ಗುರುಚಂದ್ರ ಯಾದವ್ ಮನೆ ಬೀಗ ಓಪನ್ ಮಾಡಿಸಿ ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
ಜುಲೈ 26, 1999, ನಮ್ಮ ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನ. ಈ ದಿನ, ಭಾರತದ ಸೇನೆ, ಪಾಕಿಸ್ತಾನಿ ಆಕ್ರಮಣವನ್ನು ತಿರಸ್ಕರಿಸಿ, ಕಾರ್ಗಿಲ್ ಬೆಟ್ಟಗಳನ್ನು ಮತ್ತೆ ತನ್ನದಾಗಿಸಿಕೊಂಡಿತು. ಈ ವಿಜಯ, ಶೌರ್ಯ, ತ್ಯಾಗ ಮತ್ತು ದೇಶಭಕ್ತಿ ಪರಮಾವಧಿಯ ಉದಾಹರಣೆಯಾಗಿದೆ. ಕಾರ್ಗಿಲ್ ವಿಜಯ್ ದಿನವನ್ನು ನಾವು ಪ್ರತಿವರ್ಷ ಆಚರಿಸುತ್ತೇವೆ, ನಮ್ಮ ವೀರ ಯೋಧರ ತ್ಯಾಗ ಮತ್ತು ಸಾಹಸಗಳನ್ನು ಗೌರವಿಸುತ್ತೇವೆ. ಕಾರ್ಗಿಲ್ ಯುದ್ಧವು ತೀವ್ರ ಮತ್ತು ಕಠಿಣ ಸವಾಲಿನ ಸಂದರ್ಭಗಳಲ್ಲಿ ಭಾರತೀಯ ಸೈನಿಕರು ತೋರಿದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಅಪಾರ ತೊಂದರೆಗಳ ನಡುವೆಯೂ, ನಮ್ಮ ಯೋಧರು ದೇಶದ ಭದ್ರತೆಗೆ ಮೀರಿ, ಜೀವ ಬಲಿದಾನ ಮಾಡಿ, ಇತಿಹಾಸದಲ್ಲಿ ಅಜರಾಮರರಾದರು. ಅವರ ಶೌರ್ಯ ಮತ್ತು ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದು, ಕಾರ್ಗಿಲ್ ವಿಜಯ್ ದಿನವನ್ನು ಆಚರಿಸುವಾಗ, ನಾವು ನಮ್ಮ ವೀರ ಯೋಧರ ತ್ಯಾಗವನ್ನು ಗೌರವಿಸುತ್ತೇವೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಸೈನಿಕರ ಶೌರ್ಯ ಮತ್ತು ದೇಶಭಕ್ತಿ ಕುರಿತಾದ ಮಹತ್ವವನ್ನು ತಿಳಿಸುತ್ತೇವೆ. ಈ ದಿನದಂದು, ಸರ್ಕಾರದ ಸತ್ಕಾರ, ವೀರ…
ತುಮಕೂರು: ಜಿಲ್ಲಾಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ ರಾಷ್ಟ್ರೀಯ ಗುಣಮಟ್ಟ ಭರವಸೆ(NQAS – National Quality Assurance Standards) ಪ್ರಮಾಣೀಕರಣ ಹೊಂದಿರಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯು 2000 ರಿಂದ ಈವರೆಗೂ NQAS ಪ್ರಮಾಣೀಕರಣ ಹೊಂದಿರುವುದಿಲ್ಲ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳು NQAS ಪ್ರಮಾಣೀಕರಣ ಹೊಂದಿರುವುದು ಕಡ್ಡಾಯ. ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಸೊಳ್ಳೆಗಳಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ರೋಗಿಗಳ ಆರೋಗ್ಯ ಹಿತ ದೃಷ್ಟಿಯಿಂದ NQAS ಪ್ರಮಾಣೀಕರಣ ಹೊಂದುವುದು ಅಗತ್ಯವೆಂದು ತಿಳಿಸಿದರು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳನ್ನು ಪಾಲಿಸಬೇಕು. ನ್ಯೂನ್ಯತೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮಕೈಗೊಂಡು ವರದಿ…
ಸರಗೂರು: ತಾಲ್ಲೂಕಿನ ಪಟ್ಟಣದಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಭಾರೀ ಗಾಳಿ-ಮಳೆಗೆ ಒಂದೇ ಕಡೆಯಲ್ಲಿ ಮೂರು ವಾಸದ ಮನೆಯು ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಮೂರನೇ ವಾರ್ಡಿನಲ್ಲಿ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ 10 ರಿಂದ ಸಂಜೆಯವರೆಗೂ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹೊರಗೆ ಯಾರೂ ಬಾರದಂತೆ ಮನೆಯಲ್ಲಿಯೇ ಜನರನ್ನು ದಿಗ್ಬಂಧನ ಮಾಡಿದಂತಿತ್ತು. ಸತತವಾಗಿ ಮೂರು ದಿನಗಳಿಂದ ಮಳೆಗೆ ಬುಧವಾರ ದಂದು ರಾತ್ರಿ ವೇಳೆಯಲ್ಲಿ ಮಲಗಿದ್ದ ಸಮಯದಲ್ಲಿ ನಡೆದು ಮೂರನೇ ವಾರ್ಡಿನ ಪುಟ್ಟಸಿದ್ದಮ್ಮ, ಚಿಕ್ಕತಾಯಮ್ಮ, ಹೆಜ್ಜೂರಮ್ಮ, ದೇವಮಣಿ ಎಂಬುವವರ ಮನೆ ಏಕಾಏಕಿ ಕುಸಿದು ಬಿದ್ದಿದೆ. ಸದ್ಯ ಮನೆ ಕಳೆದುಕೊಂಡು, ಜೀವನೋಪಾಯಕ್ಕೆ ಇದ್ದ ಮನೆಯನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬವು ಒತ್ತಾಯ ಮಾಡಿದೆ. ಮನೆ ಬಳಕೆ ವಸ್ತುಗಳಾದ ಟಿವಿ, ಬಟ್ಟೆ ಬರೆ ಇತ್ಯಾದಿ ವಸ್ತುಗಳನ್ನೂ ತೆಗೆದುಕೊಂಡು ಉಳಿಸಿಕೊಂಡು ಹೋಗಲು ಕೂಡ ಮನೆಯವರಿಂದ ಸಾಧ್ಯವಾಗಿಲ್ಲ, ಈ ಮನೆಯ ಮಾಲಕರು ಮನೆಯ ಜತೆಗೆ ವಸ್ತುಗಳನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.…
ಕೆಲ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ಇದೇ ರೀತಿಯ ವಸ್ತ್ರವನ್ನು ಧರಿಸಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ಅದೇ ರೀತಿ ಇದೀಗ ಶಾರದಾ ಪೀಠ ಶೃಂಗೇರಿಯಲ್ಲಿ ಶಾರದ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಬರಲು ಶಾರದಾ ಪೀಠ ಶೃಂಗೇರಿಯ ಆಡಳಿತ ಅಧಿಕಾರಿಗಳು ತಿಳಿಸಿದ್ದು, ಮನವಿ ಮಾಡಿದ್ದಾರೆ. ಈ ಮೂಲಕ ಶೃಂಗೇರಿಯ ಭಕ್ತಾಧಿಗಳು ಇನ್ನು ಮುಂದೆ ದೇವರ ದರ್ಶನಕ್ಕೆ ಹೋಗುವಾಗ ಈ ಕೆಳಕಂಡ ಭಾರತೀಯ ಸಂಪ್ರದಾಯದಂತೆ ವಸ್ತ್ರವನ್ನು ಧರಿಸಿಯೇ ಹೊಗಬೇಕು.ಇದೀಗ ಶೃಂಗೇರಿಯ ಸುಪ್ರಸಿದ್ಧ ಶಾರದಾ ದೇವಿ ದರ್ಶನಕ್ಕೆ ಬರುವ ಭಕ್ತಾದಿಗಳು ಇದೇ ರೀತಿಯ ವಸ್ತ್ರ ಸಂಹಿತೆಯಲ್ಲಿ ಬರಬೇಕು. ಈ ಕುರಿತು ಶಾರದಾ ಪೀಠ ಶೃಂಗೇರಿಯ ಆಡಳಿತ ಅಧಿಕಾರಿಗಳು ಮಾಹಿತಿ ನೀಡದ್ದು, ಆಗಷ್ಟ್ 15ರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳು ಇದೇ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊಂಡು ಬರಬೇಕು ಎಂದು ತಿಳಿಸಿದೆ. ಪುರುಷರು ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯ ಧರಿಸಿಕೊಂಡು ಬರಬೇಕು. ಅದೇ ರೀತಿ ಮಹಿಳೆಯರು ಸೀರೆ ರವಿಕೆ, ಸಲ್ವಾರ್…