Author: admin

ಆಕೆ ಅಮೆರಿಕದ ಫ್ಲೋರಿಡಾ ರಾಜ್ಯದ 45 ವರ್ಷದ ಮಹಿಳೆ ಜೊತೆ ರಾಜಸ್ಥಾನ ರಾಜ್ಯದ ಅಜ್ಮೇರ್ ನಗರದ ವ್ಯಕ್ತಿ ಮಾನವ್ ಸಿಂಗ್ ರಾಥೋಡ್ ಎಂಬಾತ ಫೇಸ್‌ಬುಕ್ ಮೂಲಕ ಗೆಳೆತನ ಮಾಡಿಕೊಂಡಿದ್ದ ಎನ್ನಲಾಗಿದೆ. ವೃತ್ತಿಯಲ್ಲಿ ವಕೀಲನಾಗಿದ್ದ ರಾಥೋಡ್ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿ ನೀಚ ಕೃತ್ಯ ಎಸಗಿದ್ದಾನೆ. ಮಾನವ್ ಸಿಂಗ್ ರಾಥೋಡ್‌ನ ಪ್ರೀತಿಯ ಬಲೆಗೆ ಬಿದ್ದ ಅಮೆರಿಕ ಮಹಿಳೆ ಆತನ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದಳು. ಇದೇ ವರ್ಷ 2024ರ ಏಪ್ರಿಲ್‌ನಲ್ಲಿ ಭಾರತಕ್ಕೆ ಬಂದಿದ್ದ ಆಕೆಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿದ್ದ ರಾಥೋಡ್, ನೇರವಾಗಿ ರಾಜಸ್ಥಾನದ ಜೈಪುರಕ್ಕೆ ಕರೆದೊಯ್ದಿದ್ದ. ಐಷಾರಾಮಿ ಹೋಟೆಲ್‌ಗಳಲ್ಲಿ ಆಕೆಯ ಜೊತೆ ತಂದಿದ್ದ ರಾಥೋಡ್, ತಾನು ಅವಿವಾಹಿತ ಎಂದು ಹೇಳಿಕೊಂಡಿದ್ದ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆ ಆಗುತ್ತೇನೆ ಎಂದು ನಂಬಿಸಿದ. ಇವರಿಬ್ಬರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಬಳಿಕ ಜೈಪುರಕ್ಕೆ ಕರೆದೊಯ್ದ ರಾಥೋಡ್, ಅಲ್ಲಿಯೂ ಐಷಾರಾಮಿ ಹೋಟೆಲ್‌ಗಳಲ್ಲಿ ಆಕೆಯ ಜೊತೆ ವೈಯಕ್ತಿಕ ಕ್ಷಣಗಳನ್ನ ಕಳೆದಿದ್ದ ಎನ್ನಲಾಗಿದೆ. ಹಲವು ತಿಂಗಳ ಕಾಲ ಭಾರತದಲ್ಲಿಯೇ…

Read More

ಡೆಂಗ್ಯೂಗೆ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಯಲಹಂಕದ ದಲ್ಲಿ ಡೆಂಗ್ಯೂ ಬಾಧಿತರಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಹೇಳಿಕೆ ನೀಡಿದ್ದಾರೆ. ಯಲಹಂಕದ ಶಿಂಗೇನಹಳ್ಳಿಯಲ್ಲಿ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು. ಸೋಮವಾರ ಹಾಗೂ ಮಂಗಳವಾರ ಅಧಿಕಾರಿಗಳು ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಅನುಷ್ಠಾನ ಆಗಿರುವ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ. ಎರಡಕ್ಕಿಂತ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಗೋಚರಿಸಿದರೆ ಡೆಂಗ್ಯೂ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಂಡುಬಂದರೆ ಅಲ್ಲಿ ಫೀವರ್ ಕ್ಲಿನಿಕ್ ಗಳನ್ನ ತೆರೆದು, ಜ್ವರ ಕಾಣಿಸಿಕೊಳ್ಳುವ ಎಲ್ಲರನ್ನ ಡೆಂಗ್ಯೂ ಟೆಸ್ಟಿಂಗ್ ಗೆ ಒಳಪಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಶಾಲಾ ಮಕ್ಕಳ ಬಸ್ ಚಾಲನೆ ಮಾಡುತ್ತಿರುವ ವೇಳೆ ಚಾಲಕನಿಗೆ ಹೃದಯಾಘಾತವಾಗಿದೆ. ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಶಾಲಾ ಮಕ್ಕಳ ಜೀವ ಉಳಿಸಿ ಕೊನೆಗೆ ಬಸ್ಸಿನಲ್ಲೇ ಚಾಲಕ ಮೃತಪಟ್ಟ ಮನಕಲಕುವ ಘಟನೆ ತಮಿಳುನಾಡಿನಲ್ಲಿ ಸಂಜೆ ನಡೆದಿದೆ. ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿಯಾದ ಮಲಯಪ್ಪನ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಲಯಪ್ಪನ್ ವೆಲ್ಲಕೋಯಿಲ್‌ನಲ್ಲಿರುವ ಖಾಸಗಿ ಶಾಲೆಯ ಬಸ್ಸಿನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಹೊರಟಿದ್ದಾರೆ. ಈ ವೇಳೆ ಬಸ್ ವೆಲ್ಲಕೋಯಿಲ್-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ, ಕೂಡಲೇ ಎಚ್ಚೆತ್ತ ಚಾಲಕ ಮಲಯಪ್ಪನ್ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಸೀಟ್ ನಲ್ಲಿ ಕುಳಿತಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆ ಬಳಿಕ ಅಲ್ಲಿನ ಸ್ಥಳೀಯರು ಬಸ್ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪರಿಶೀಲಿಸಿದ ವೈದ್ಯರು ಮಲಯಪ್ಪನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಾವಿನ ದವಡೆಯಲ್ಲೂ ಮಲಯಪ್ಪನ್ ಶಾಲಾ ಬಸ್ಸಿನಲ್ಲಿದ್ದ ಮಕ್ಕಳ ಜೀವ ಉಳಿಸುವಲ್ಲಿ ಸಮಯ ಪ್ರಜ್ಞೆ…

Read More

ಕಾಲೇಜಿನಲ್ಲಿ ನಡೆದ ಕ್ರೂರವಾದ ರ‍್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಆಂಧ್ರಪ್ರದೇಶದ ಪಲ್ನಾಡಿನ ಎಸ್ ಎಸ್ ಎನ್ ಕಾಲೇಜಿನಲ್ಲಿ ನಡೆದಿದೆ. ಎನ್‍ ಸಿಸಿ ತರಬೇತಿ ನೆಪದಲ್ಲಿ ಸೀನಿಯರ್ ವಿದ್ಯಾರ್ಥಿಗಳ ಗುಂಪು ಮಧ್ಯರಾತ್ರಿಯಲ್ಲಿ ಜೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆದು ಕೋಲುಗಳಿಂದ ಹೊಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಜೂನಿಯರ್ ವಿದ್ಯಾರ್ಥಿಗಳನ್ನು ಹೊಡೆಯುವ ಮುನ್ನ ಅವರನ್ನು ಮಲಗಿಸಿ ನಂತರ ಕೋಲುಗಳಿಂದ ಎಲ್ಲರೂ ಹೊಡೆಯುತ್ತಾರೆ. ಸೀನಿಯರ್ ವಿದ್ಯಾರ್ಥಿಗಳು ತಾವು ಮಾಡಿದ ಕಾರ್ಯಕ್ಕೆ ನಗುತ್ತಾ ತಮಾಷೆ ಮಾಡಿಕೊಳ್ಳುತ್ತಿದ್ದರೆ ಪೆಟ್ಟು ತಿಂದ ಜೂನಿಯರ್ ವಿದ್ಯಾರ್ಥಿಗಳು ಅಳುತ್ತಿದ್ದಾರೆ. ಜೊತೆಗೆ ಇದನ್ನು ವಿಡಿಯೋ ಮಾಡಿ ಸಂತೋಷ ಪಟ್ಟಿದ್ದಾರೆ. ಈ ವಿಡಿಯೊವನ್ನು ವೈಎಸ್ ಆರ್ ಸಿಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿವೆ. ಪೊಲೀಸರ ಪ್ರಕಾರ, ಫೆಬ್ರವರಿ 2ರಂದು ಆರು ಅಂತಿಮ ವರ್ಷದ ವಿದ್ಯಾರ್ಥಿಗಳು…

Read More

ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರೊಬ್ಬರು ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ವೇಶ್ಯಾವಾಟಿಕೆ ನಡೆಯುವ ಕೇಂದ್ರಗಳಿಗೆ ರಕ್ಷಣೆ ಕೊಡಿ ಎಂದು ವಕೀಲರೊಬ್ಬರು ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಇನ್ನು ಈ ಘಟನೆ ತಮಿಳುನಾಡಿನ, ಕನ್ಯಾಕುಮಾರಿಯಲ್ಲಿ ನಡೆದಿದೆ. ಮಧುರೈ ಪೀಠದ ನ್ಯಾಯಮೂರ್ತಿ ಅರ್ಜಿ ಸಲ್ಲಿಸಿದ ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಆದೇಶವನ್ನೂ ನೀಡಲಾಗಿದೆ. ವಾಸ್ತವವಾಗಿ, ಕನ್ಯಾಕುಮಾರಿ ನಾಗರಕೋಯಿಲ್‌ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಕೀಲರೊಬ್ಬರ ವಿರುದ್ಧ ಪೊಲೀಸರು ಎಫ್‌ ಐಆರ್ ದಾಖಲಿಸಿದ್ದರು. ಇದೀಗ ಅರ್ಜಿದಾರರು ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವೇಶ್ಯಾವಾಟಿಕೆ ನಡೆಸುತ್ತಿರುವುದಕ್ಕೆ ರಕ್ಷಣೆ ಬೇಕು ಎಂದು ಹೈಕೋರ್ಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ವಕೀಲರ ಈ ಅರ್ಜಿ ನೋಡಿ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು ಅರ್ಜಿದಾರನಿಗೆ 10,000 ರೂಪಾಯಿ ದಂಡ ವಿಧಿಸಿ, ಮನವಿಯನ್ನು ಮದ್ರಾಸ್ ಹೈಕೋರ್ಟ್‌ ವಜಾಗೊಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ಸ್ಥಳಮಾಜರಿಗೆ ಕರೆದುಕೊಂಡು ಹೋಗಿದ್ದ ರೌಡಿಶೀಟರ್ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಪೊಲೀಸರಿಂದ ರೌಡಿ ಶೀಟರ್ ಮನು ಎಂಬಾತನ ಕಾಲಿಗೆ ಗುಂಡೇಟು ತಗುಲಿದೆ. ತುಮಕೂರು ನಗರದ ದಿಬ್ಬೂರು ಬಳಿ ಘಟನೆ ನಡೆದಿದ್ದು, ತುಮಕೂರು ನಗರ ಪೊಲೀಸ್ ಠಾಣೆ ಸಿಪಿಐ ದಿನೇಶ್ ರಿವಲ್ವಾರ್ನಿಂದ ರೌಡಿಶೀಟರ್ ಮನು ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರಿಗೆ ಶರಣಾಗುವಂತೆ ಎರಡು ಬಾರಿ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್  ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರಿಗೆ ಶರಣಾಗದೇ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮನು ಯತ್ನಿಸಿದನು. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್ ಮನು ಕಾಲಿಗೆ ಗುಂಡು ಹೊಡೆದು  ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ರೌಡಿಶೀಟರ್ ಮನುಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಸನ್ನಿ ಲಿಯೋನ್ ಫೋಟೋಗಳಿಗಾಗಿ, ವೀಡಿಯೋಗಳಿಗಾಗಿ ಇಂಟರ್ನೆಟ್‌ ನಲ್ಲಿ ಹುಡುಕುವವರ ಸಂಖ್ಯೆ ಕಡಿಮೆಯೇನಿಲ್ಲ.ಅಂಥ ಸನ್ನಿ ಲಿಯೋನ್ ಈಗ ಸಿನಿಮಾ ನಟಿಯಾಗಿ ಬದಲಾಗುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ನಿ ಮೊದಲು ಹಾಟ್ ಸ್ಟಾರ್ ಪಟ್ಟದಲ್ಲಿದ್ದರು. ಈಗ ನಟಿಯಾಗಿ ಬದಲಾಗಿದ್ದಾರೆ. ಭಾರತದಲ್ಲಿ ನಾರ್ತ್–ಸೌತ್ ಬೇಧವಿಲ್ಲದೇ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಸಿಕ್ಕ ಆಫರ್ ಬಿಟ್ಟುಕೊಡದೇ ನಟಿಸುತ್ತಿದ್ದಾರೆ. ಏಕೆಂದರೆ, ಸನ್ನಿ ಲಿಯೋನ್ ಅವರಿಗೆ ಈಗ ತಮ್ಮ ಇಮೇಜ್ ಇನ್ನೂ ಹೆಚ್ಚು ಬದಲಿಸಿಕೊಳ್ಳಬೇಕಿದೆ. ಈಗಾಗಲೇ ಬ್ಲೂ ಫಿಲಂ ನಟಿ ಇಮೇಜ್‌ ನಿಂದ ಹೊರಬಂದಿರುವ ನಟಿ ಸನ್ನಿ ಲಿಯೋನ್, ಎಲ್ಲರಂತೆ ನಟಿ ಪಟ್ಟಕ್ಕೆ ಲಗ್ಗೆ ಇಟ್ಟಾಗಿದೆ. ಇನ್ನೇನಿದ್ದರೂ ಅವರ ಗುರಿ ‘ಕಲಾವಿದೆ’ ಪಟ್ಟ ಎನ್ನಲಾಗಿದೆ. ಕೆನಡಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದ ಸನ್ನಿ ಲಿಯೋನ್ ಅವರು ತಾವು ಶ್ರೀಮಂತೆ ಆಗಲು ವಯಸ್ಕರ ಸಿನಿಮಾ ನಟಿಯಾಗಿ ಬದಲಾದರು ಎನ್ನಲಾಗಿದೆ. ಆದರೆ, ಒಂದು ಹಂತದಲ್ಲಿ ದುಡ್ಡು ಎಲ್ಲವೂ ಅಲ್ಲ, ಜೀವನ ಹಾಗೂ ಸಮಾಜದಲ್ಲಿ ಗೌರವ ಮುಖ್ಯ ಎನಿಸಿತಂತೆ. ಈ ಕಾರಣಕ್ಕೆ ಅದೊಂದು ಚಿನ…

Read More

ಆಗಸ್ಟ್‌ ಎಂದರೆ ಏನೋ ಸಂಭ್ರಮ, ಏಕೆಂದರೆ ಆ ಮಾಸದಿಂದ ಅಲ್ವೇ ಹಬ್ಬಗಳು ಶುರುವಾಗುವುದು. ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ವರಲಕ್ಷ್ಮಿ ವ್ರತ ಹೀಗೆ ಸಾಲು ಸಾಲು ಹಬ್ಬಗಳ ಮಾಸವಿದು. ಇದರ ಜೊತೆಗೆ ವ್ರತಗಳು, ಶ್ರಾವಣ ಸೋಮವಾರ, ರಕ್ಷಾ ಬಂಧನ, ಸ್ನೇಹಿತರ ದಿನ ಹೀಗೆ ಹಲವು ಆಚರಣೆಗಳಿಂದಾಗಿ ಈ ಮಾಸ ತುಂಬಾನೇ ವಿಶೇಷವಾಗಿದೆ. ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ: ನಾಗ ಪಂಚಮಿ : ಆಗಸ್ಟ್ 9ಕ್ಕೆ ಆಚರಿಸಲಾಗುವುದು ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 15 ವರಲಕ್ಷ್ಮಿ ವ್ರತ ಅರಂಭ: ಆಗಸ್ಟ್‌ 16 ರಕ್ಷಾ ಬಂಧನ: ಆಗಸ್ಟ್ 19 ಕೃಷ್ಣ ಜನ್ಮಾಷ್ಟಮಿ: ಆಗಸ್ಟ್ 26 ಆಗಸ್ಟ್‌ನಲ್ಲಿ ಈ ಪ್ರಮುಖ ಹಬ್ಬಗಳ ಜೊತೆಗೆ ಈ ವ್ರತಗಳಿವೆ, ಈ ದಿನಗಳು ತುಂಬಾನೇ ವಿಶೇಷವಾಗಿದೆ: ಆಗಸ್ಟ್‌ 1: ಪ್ರದೋಷ ವ್ರತ ಆಗಸ್ಟ್‌ 4: ಭೀಮನ ಅಮವಾಸ್ಯೆ ಆಗಸ್ಟ್‌ 4: ಫ್ರೆಂಡ್‌ಶಿಪ್ ಡೇ (ಸ್ನೇಹಿತರ ದಿನ) ಆಗಸ್ಟ್‌ 5: ಶ್ರಾವಣ ಸೋಮವಾರ ಆಗಸ್ಟ್‌ 8:…

Read More

ತಮಿಳಿನ ಖ್ಯಾತ ನ್ಯೂಸ್ ಆ್ಯಂಕರ್ ಬ್ಲಡ್ ಕ್ಯಾನ್ಸರ್ ನಿಂದಾಗಿ ಸಾವನಪ್ಪಿದ್ದಾರೆ. ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾರೆ. ತಮಿಳಿನ ಖಾಸಗಿ ದೂರದರ್ಶನದಲ್ಲಿ ವಾರ್ತಾ ವಾಚಕಿಯಾಗಿ ಕೆಲಸ ಮಾಡುತ್ತಿದ್ದ ಸೌಂದರ್ಯ ಅಮುದಮೊಳಿ ಅವರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಜನಪ್ರಿಯ ಟಿವಿ ಚಾನೆಲ್‌ ಗಳಾದ ಸತ್ಯಂ, ಪಾಲಿಮರ್ ಮತ್ತು ನ್ಯೂಸ್ ತಮಿಳಿನಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಸೌಂದರ್ಯ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಯಾವುದೇ ಪ್ರಗತಿ ಕಂಡಿಲ್ಲ. ವೈದ್ಯರ ಸಲಹೆಯಂತೆ ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅವರಿಗೆ ರಕ್ತ ಕ್ಯಾನ್ಸರ್ ನಾಲ್ಕನೆ ಹಂತದಲ್ಲಿರುವ ಬಗ್ಗೆ ತಿಳಿದು ಬಂದಿತ್ತು, ಬಳಿಕ ಚಿಕಿತ್ಸೆಗೆ ಒಳಗಾಗಿದ್ದರು. ಈ ನಡುವೆ ಚಿಕಿತ್ಸೆ ಗೆ ಆರ್ಥಿಕ ಸಮಸ್ಯೆಯಾದಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರ್ಥಿಕ ನೆರವಿಗೆ ಮನವಿ ಮಾಡಿದ್ದರು. ಈ…

Read More

ದೇಶದ ರಾಷ್ಟ್ರಪತಿಗಳ ನಿವಾಸವಾದ ರಾಷ್ಟ್ರಪತಿ ಭವನದ ಕೆಲ ಸಭಾಂಗಣಗಳ ಹೆಸರನ್ನು ಬದಲಿಸಲಾಗಿದೆ. ವಿದ್ಯುಕ್ತ ಕಾರ್ಯಕ್ರಮಗಳು ನಡೆಯುವ ದರ್ಬಾರ್‌ ಹಾಲ್‌ ಹಾಗೂ ಅಶೋಕ ಹಾಲ್‌ ಗಳಿಗೆ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಗುರುವಾರ ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರತದ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವಂತೆ ಮಾಡುವ ಉದ್ದೇಶವಿದೆ ಎಂದು ರಾಷ್ಟ್ರಪತಿಗಳ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ರಾಷ್ಟ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವ ದರ್ಬಾರ್ ಹಾಲ್, ಬ್ರಿಟಿಷರ ದರ್ಬಾರಿಗೆ ಹೆಸರು ಪಡೆದಿತ್ತು. ಆದರೆ ಭಾರತ ಗಣತಂತ್ರ ದೇಶವಾದ ಬಳಿಕ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತ್ತು. ಈಗ ಅದಕ್ಕೆ ಹೊಂದಿಕೆಯಾಗುವಂತೆ ಗಣತಂತ್ರ ಮಂಟಪ ಎಂದು ಹೆಸರಿಸಲಾಗಿದೆ. ಅಂತೆಯೇ ಅಶೋಕ ಹಾಲ್ ಎಂಬ ಆಂಗ್ಲ ಪದವನ್ನು ಅಶೋಕ ಮಂಟಪ ಎಂದು ಬದಲಿಸಲಾಗಿದೆ. ಇದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಸಂತಸ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More