Author: admin

ಮಧ್ಯಪ್ರದೇಶದಲ್ಲಿ ಜನ ಕತ್ತೆಗಳಿಗೆ ರುಚಿರುಚಿಯಾದ ಜಾಮೂನು ಮಾಡಿ ಬಡಿಸಿದ್ದಾರೆ. ಕತ್ತೆಗಳು ಬಿಸಿಬಿಸಿ ಜಾಮೂನುಗಳನ್ನು ಚಪ್ಪರಿಸಿ ತಿಂದಿವೆ. ಹೌದು, ಮಧ್ಯಪ್ರದೇಶದ ಭೋಪಾಲಿನಲ್ಲಿ ಕತ್ತೆಗಳಿಗೆ ಜಾಮೂನು ಕೊಡಲಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣದೇವ ಕೃಪೆ ತೋರಿದ್ದು, ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೆಲವು ಕಡೆ ಇನ್ನೂ ಮಳೆಯಾಗದ ಕಾರಣ ಜನ ದೇವರ ಮೊರೆ ಹೋಗುತ್ತಿದ್ದು, ಅಂತಹ ಒಂದು ಆಚರಣೆಯ ಫಲವಾಗಿ ಕತ್ತೆಗಳಿಗೆ ಜಾಮೂನು ಭಾಗ್ಯ ದೊರಕಿದೆ. ಮಳೆ ಬರಿಸಲು ಜನರು ಕೈಗೊಳ್ಳುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಒಂದು. ಮಳೆಗಾಲ ಆರಂಭವಾದರೂ ಆಕಾಶದಿಂದ ಭೂಮಿಗೆ ಹನಿ ನೀರು ಕೂಡಾ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆ. ಆದರೆ, ಇಲ್ಲೊಂದು ಕಡೆ ಕತ್ತೆಗಳಿಗೆ ಮದುವೆ ಮಾಡಲಾಗಿದೆ. ಆಯಾ ಕತ್ತೆಗಳ ಮದುವೆಯಾದ ಖುಷಿಗೆ ಕತ್ತೆಗಳಿಗೆ ಗುಲಾಬ್ ಜಾಮೂನನ್ನು ತಿನ್ನಿಸಲಾಗುವ ವಿಚಿತ್ರ ಆಚರಣೆ ಜಾರಿಯಲ್ಲಿದೆ. ಮಧ್ಯಪ್ರದೇಶದ…

Read More

ತುಮಕೂರು: ನಗರದಲ್ಲಿ ಶನಿವಾರ ಲೋಕಾರ್ಪಣೆಗೊಂಡ ಡಿ.ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭಾನುವಾರ ಬೆಳಿಗ್ಗೆ 8:30 ಗಂಟೆಗೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಹಾಗೂ ನಿಲ್ದಾಣದ ಹೊರಭಾಗದಲ್ಲಿರುವ ಆಟೋ ಚಾಲಕರ ಪಾರ್ಕಿಂಗ್ ಸಮಸ್ಯೆಗಳನ್ನು ಆಲಿಸಿದರು. ಶೀಘ್ರವೇ ನಿಲ್ದಾಣದ ಮುಂಭಾಗ ಆಟೋ ನಿಲ್ಲಿಸಲು ವ್ಯವಸ್ಥೆ ಮಾಡಬೇಕೆಂದು ಕೆಎಸ್‌ ಆರ್‌ ಟಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿವೇಣಿಗೆ ನಿರ್ದೇಶನ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು . ತ್ರಿವೇಣಿ  ಅವರು ಬಾಕಿ ಇರುವ ಸಣ್ಣ ಪುಟ್ಟ ಕಾಮಗರಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಲಿಫ್ಟ್ ಕಾರ್ಯಾಚರಣೆ,  ಶೌಚಾಲಯ, ವಿದ್ಯುತ್ ಸಂಪರ್ಕ, ಸೈನ್ ಬೋರ್ಡ್, ಸಿಸಿಟಿವಿ ಕ್ಯಾಮೆರಾ, ಪ್ರಯಾಣಿಕರ ಮಾಹಿತಿಗಾಗಿ ಟಿವಿ ಅಳವಡಿಕೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಟಿ.ಸಿ.ಪಾಯಿಂಟ್  ಹಾಗೂ ಪೊಲೀಸ್ ಚೌಕಿಯಲ್ಲಿ ಮೂಲ ಸೌಕರ್ಯಗಳನ್ನು ಕೂಡಲೇ ಒದಗಿಸಲು  ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೆಎಸ್‌ ಆರ್‌ ಟಿಸಿ ಡಿಪೋ…

Read More

ತುಮಕೂರು:  ಏಕಕಾಲದಲ್ಲಿ 10,000 ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ವೀಕ್ಷಿಸಿದರು. ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಬೃಹತ್ ಪರದೆಯ ಮೂಲಕ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ  ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿ ಗಣೇಶ್ ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ತಿಹಾರ್ ಜೈಲ್ ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದ್ದು, ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳಲ್ಲಿ ಹೆಚ್ ಐವಿ ರೋಗ ಪತ್ತೆಯಾಗಿದೆ. ತಿಹಾರ ಜೈಲಿನಲ್ಲಿರುವ 125 ಕೈದಿಗಳಿಗೆ ಎಚ್‌ ಐವಿ ಪಾಸಿಟಿವ್‌  ಬಂದಿದೆ. ಅಷ್ಟೇ ಅಲ್ಲ, 200 ಕೈದಿಗಳು ಸೆಕ್ಸ್‌ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ. ಇತ್ತೀಚೆಗೆ ತಿಹಾರ ಜೈಲಿನ ಡಿಜಿ ಆಗಿ ಸತೀಶ್‌ ಗೋಲ್ಚಾ ಅವರು ಅಧಿಕಾರ ವಹಿಸಿಕೊಂಡಿದ್ದು, ಅವರು ಕೈದಿಗಳ ಆರೋಗ್ಯ ತಪಾಸಣೆಗೆ ಸೂಚಿಸಿದ್ದರು. ಅದರಂತೆ, ಕಳೆದ ಮೇ ಹಾಗೂ ಜೂನ್‌ ತಿಂಗಳಲ್ಲಿ 10,500 ಕೈದಿಗಳ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಇನ್ನೂ, 3,500 ಕೈದಿಗಳ ಆರೋಗ್ಯ ತಪಾಸಣೆ ಬಾಕಿ ಇದೆ ಎಂದು ತಿಳಿದುಬಂದಿದೆ. ಹಾಗಾಗಿ, ಇನ್ನೂ ಇಂತಹ ಕಾಯಿಲೆ ಪೀಡಿತರ ಸಂಖ್ಯೆ ಜಾಸ್ತಿ ಆಗುವ ಸಾಧ್ಯತೆ ಇದೆ…

Read More

ಬೆಂಗಳೂರು ನಗರದಲ್ಲಿ ನಾಯಿ ಮಾಂಸ ಮಾರಾಟದ ವದಂತಿ ಹಿನ್ನೆಲೆ ಹೊರಗಿನ ಮಾಂಸ ಎಂದರೆ ಜನ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆ ರೀತಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಈ ಸುದ್ದಿಗಳ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನ ಮಟನ್ ಶಾಪ್ ಗಳಲ್ಲಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ. ಬೆಂಗಳೂರಿನ ಮಟನ್ ಅಂಗಡಿಗಳ ಸ್ವಚ್ಚತೆ, ಅಂಗಡಿಗಳಲ್ಲಿ ಸ್ಟಾಕ್ ಇರುವ ಕೋಲ್ಡ್ ಸ್ಟೋರೇಜ್‌ನಲ್ಲಿರೋ ಮಾಂಸ ಹೇಗಿದೆ, ಅಲ್ಲಿ ಕಲಬೆರಕೆ ನಡೆದಿದೆಯೇ, ಅಲ್ಲಿನ ಆಹಾರ ಎಷ್ಟು ಸೇಫ್ ಎಂಬುದರ ಬಗ್ಗೆ ಪರಿಶೀಲನೆಗೆ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈಗಾಗಲೇ ಬೆಂಗಳೂರಿನ ಕೆಲವೆಡೆ ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಲಾಗಿದೆ. ನಾಯಿಮಾಂಸ ಸುದ್ದಿ ಬೆನ್ನಲ್ಲೇ ಹೋಟೆಲ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದು, ತಾವೇ ಖುದ್ದಾಗಿ ಮಾಂಸ ಖರೀದಿಗೆ ಮುಂದಾಗಿದ್ದಾರೆ. ನಮ್ಮ ರಾಜಧಾನಿ ಬೆಂಗಳೂರಿಗೆ ರಾಜಸ್ಥಾನದ ಜೈಪುರದಿಂದ ಸರಬರಾಜಾಗಿದ್ದ ಮಾಂಸ ನಾಯಿಯದ್ದು ಎಂಬ ಆರೋಪವನ್ನು ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ  ಮಾಡಿದ್ದರು. ಇದೇ ವಿಚಾರವಾಗಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ…

Read More

ಸೆರೆಮನೆ ವಾಸ ಅನುಭವಿಸುತ್ತಿದ್ದ ಕುಖ್ಯಾತ ರೌಡಿಯೊಬ್ಬ ಬಿಡುಗಡೆಯಾದ ಖುಷಿಗೆ ಬೃಹತ್‌ ಮೆರವಣಿಗೆ ಆಯೋಜಿಸಿ ಸಾರ್ವಜನಿಕವಾಗಿ ತನ್ನ ಪೌರುಷ ತೋರಿ ಬಳಿಕ ಇದೀಗ ಮತ್ತೇ ಜೈಲು ಸೇರಿದ ಘಟನೆ ಮಹಾರಾಷ್ಟ್ರದ ಸರ್ಕಾರ್ವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಪಿಡಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3.30ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದ್ದಾನೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮತ್ತೆ ಜೈಲು ಸೇರಿದ್ದಾನೆ. ಘಟನೆ ಬಗ್ಗೆ ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ…

Read More

ಬೆಂಗಳೂರಿನ ಕೋರಮಂಗಲ ಪಿಜಿಯೊಂದರಲ್ಲಿ ನಡೆದ ಕೃತಿ ಕುಮಾರಿ ಎಂಬ ಯುವತಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯವೆಸಗಿದ ಆರೋಪಿ ಅಭಿಷೇಕ್‌ ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್‌ ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆ ತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ರಾಜಧಾನಿಯ ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ತನಿಖೆ ನಡೆಸುವ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವ ಇನ್ನಷ್ಟು ವಿವರಗಳು ಹೊರಬಿದ್ದಿವೆ. ಕೊಲೆಯಾಗಿ ಹೋದವಳು ಈತನ ಪ್ರೇಯಸಿಯ  ಗೆಳತಿಯಾಗಿದ್ದು, ಈ ದುಷ್ಟನ ಕೈಯಿಂದ ಗೆಳತಿಯನ್ನು ಬಿಡಿಸುವ ಯತ್ನದಲ್ಲಿ ತಾನೇ ಕೊಲೆಗಿದ್ದಾಳೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…

Read More

ತುಮಕೂರು: ಮೂಡಾಗೆ ಸಂಬಂದಿಸಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದನದ ಒಳಗೂ ಹಾಗೂ ಹೊರಗೂ ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು. ಅಂತಹ ನಿವೇಶನಗಳನ್ನು ಖರೀದಿ ಮಾಡಿಲ್ಲ ಕಾನೂನು ವ್ಯಾಪ್ತಿಯಲ್ಲಿಯೇ ನಿವೇಶಗಳನ್ನು ಖರೀದಿ ಮಾಡಲಾಗಿದೆ ಎಂದು  ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ದರ್ಶನ್ ಬಂಧನವಾದ ಆರಂಭದ ದಿನಗಳಲ್ಲಿ ಅಂತರ ಕಾಯ್ದುಕೊಂಡಿದ್ದ ಕನ್ನಡ ಚಿತ್ರರಂಗದವರು ಬಳಿಕ ಈ ಬಗ್ಗೆ ಮಾತನಾಡಲು ಆರಂಭಿಸಿದರು. ಒಬ್ಬೊಬ್ಬರಾಗಿ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್‌ರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇನ್ನೂ ಕೆಲವರು ದರ್ಶನ್ ಪ್ರಕರಣದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದು, ಕಾನೂನು ಪ್ರಕಾರ ತೀರ್ಮಾನವಾಗಲಿ ಎಂದು ಹೇಳಿದ್ದಾರೆ. ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಕೂಡ ದರ್ಶನ್ ಬಂಧನ ಪ್ರಕರಣದ ಬಗ್ಗೆ ಈ ಮೊದಲು ಮಾತನಾಡಿದ್ದರು. ದರ್ಶನ್‌ ಅವರಿಗೆ ಅಪಾರ ಅಭಿಮಾನಿ ಬಳಗವಿದೆ, ಅದನ್ನು ಎಲ್ಲರಿಗೂ ಸಂಪಾದಿಸಲು ಆಗದು, ದೇವರು ಕೊಟ್ಟ ವರ ಎಂದು ಹೇಳಿದ್ದರು. ದರ್ಶನ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಅವರು ಜೈಲಿನಿಂದ ಹೊರಬರುವಾಗ ಬದಲಾಗಿ ಬರಲಿ ಎಂದು ಹಾರೈಸಿದ್ದರು. ಮಾಧ್ಯಮವೊಂದರಲ್ಲಿ ಮಾತನಾಡುವಾಗ ವರದಿಗಾರ ದರ್ಶನ್‌ರನ್ನು ಭೇಟಿ ಮಾಡಲು ಜೈಲಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ, ದರ್ಶನ್‌ ಅವರ ಜೊತೆ ನನಗೆ ಹೆಚ್ಚು ಪರಿಚಯವಿಲ್ಲ. ಅವರನ್ನು ಒಂದು ಬಾರಿ ಮಾತ್ರ ಭೇಟಿಯಾಗಿದ್ದೇನೆ. ನಾನು ಜೈಲಿಗೆ…

Read More

ಒಲಿಂಪಿಕ್ಸ್ ನಲ್ಲಿ ಪೋಡಿಯಂನಲ್ಲಿ ಅಗ್ರಸ್ಥಾನದಲ್ಲಿ ನಿಂತು ಚಿನ್ನದ ಪದಕ ಗೆಲ್ಲಲು ಸಾಕಷ್ಟು ಸಮಯ ಬೇಕಾಗುತ್ತದೆ. ವಿಶ್ವದಾದ್ಯಂತದ ಅತ್ಯುತ್ತಮ ಕ್ರೀಡಾಪಟುಗಳು ತಮ್ಮ ರಾಷ್ಟ್ರಕ್ಕೆ ಕೀರ್ತಿ ತರುವ ಏಕೈಕ ಉದ್ದೇಶದಿಂದ ಕ್ರೀಡಾ ವೈಭವದಲ್ಲಿ ಸ್ಪರ್ಧಿಸುತ್ತಾರೆ. ಹಾಗಾದ್ರೆ ಒಲಿಂಪಿಕ್ ಚಿನ್ನದ ಪದಕವನ್ನು ತಯಾರಿಸಲು ಎಷ್ಟು ಚಿನ್ನವನ್ನು ಬಳಸುತ್ತಾರೆ? ಅದರ ಮೌಲ್ಯವೇನು ಅನ್ನುವ ಬಗ್ಗೆ ಮುಂದೆ ಓದಿ ಒಲಿಂಪಿಕ್ ಚಿನ್ನದ ಪದಕವನ್ನು ಸಂಪೂರ್ಣವಾಗಿ ಚಿನ್ನದಿಂದ ಮಾಡಲಾಗಿಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ ಪ್ರಕಾರ, ಒಲಿಂಪಿಕ್ ಚಿನ್ನದ ಪದಕವನ್ನು ಕನಿಷ್ಠ 92.5% ಬೆಳ್ಳಿಯಿಂದ ತಯಾರಿಸಲಾಗುತ್ತದೆ ಮತ್ತು ಸುಮಾರು 6 ಗ್ರಾಂ ಶುದ್ಧ ಚಿನ್ನದಿಂದ ಲೇಪಿಸಲಾಗುತ್ತದೆ. ಚಿನ್ನದ ಪದಕವು ಸರಿಸುಮಾರು 529 ಗ್ರಾಂ ತೂಕವಿದೆ ಮತ್ತು ಬೆಳ್ಳಿ ಮತ್ತು ಚಿನ್ನವಲ್ಲದೆ ಸುಮಾರು 18 ಗ್ರಾಂ ಕಬ್ಬಿಣವನ್ನು ಒಳಗೊಂಡಿದೆ. ಫೋರ್ಬ್ಸ್ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ವಿತರಿಸಲು ಸಜ್ಜಾಗಿರುವ ಚಿನ್ನದ ಪದಕಗಳ ಬೆಲೆ ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ ಸುಮಾರು 950 ಡಾಲರ್…

Read More