Author: admin

ಪಾಕಿಸ್ತಾನದ ಗಡಿಭಾಗದ ಸಾಂಚೋರ್ ಮತ್ತು ಇತರ ಜಿಲ್ಲೆಗಳಲ್ಲಿ ನಕಲಿ ಆಧಾರ್ ಕಾರ್ಡ್ ಗಳನ್ನು ಪಡೆಯುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲ ಮತ್ತು ಬಯೋಮೆಟ್ರಿಕ್ಸ್ ಗಾಗಿ ಕಾಲು ಬೆರಳಿನ ಗುರುತು ಮತ್ತು ಪುಟ್ಟ ಮಕ್ಕಳ ಬೆರಳಚ್ಚು ಬಳಸಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜಸ್ಥಾನ ಸರ್ಕಾರ ಆಗ್ರಹಿಸಿದೆ. ರಾಜ್ಯ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೋಗರಾಂ ಪಟೇಲ್ ಈ ಬಗ್ಗೆ ಹೇಳಿಕೆ ನೀಡಿ, ನಕಲಿ ಆಧಾರ್ ಕಾರ್ಡ್ ಗಳನ್ನು ಪತ್ತೆ ಮಾಡುವ ಸಲುವಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ರಾಣಿವಾಡ ಕಾಂಗ್ರೆಸ್ ಶಾಸಕ ರತನ್ ದೇವಸಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ನಿಲುವಳಿ ಸೂಚನೆಯ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. ನಕಲಿ ಆಧಾರ್ಕಾರ್ಡ್ ಗಳನ್ನು ಸೃಷ್ಟಿಸುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ 200 ರೂಪಾಯಿಗೆ ಶಾಲಾಮಕ್ಕಳ ಬೆರಳಚ್ಚುಗಳನ್ನು ಕೂಡಾ ಸಂಗ್ರಹಿಸಲಾಗಿದೆ. ಅಕ್ಷಿಪಟಲ ಸ್ಕ್ಯಾನರ್ ಗಳನ್ನು ಬುಡಮೇಲು ಮಾಡಿ ಬಳಕೆ ಮಾಡಲಾಗಿದೆ…

Read More

ಕನ್ನಡಿಗರಿಗೆ ಖಾಸಗಿ ವಲಯದಲ್ಲಿಯೂ ಉದ್ಯೋಗ ಮೀಸಲಾತಿ ಸಂಬಂಧ ಪೋನ್ ಪೇ ಸಿಇಓ ಸಮೀರ್ ನಿಗಮ್ ನೀಡಿದ್ದಂತ ಹೇಳಿಕೆಗೆ ವ್ಯಾಪಕ ಆಕ್ರೋಶವನ್ನು ಕನ್ನಡಿಗರು ಹೊರ ಹಾಕಿದ್ದರು. ಅಲ್ಲದೇ ಪೋನ್ ಪೇ ಅನ್ ಇನ್ ಸ್ಟಾಲ್ ಮಾಡುವ ನಿರ್ಧಾರವನ್ನು ಕೈಗೊಂಡು, ಅಭಿಯಾನವನ್ನೇ ಆರಂಭಿಸಿದ್ದರು. ಈ ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವಂತ ಫೋನ್ ಪೇ ಸಿಇಒ ಮತ್ತು ಸಂಸ್ಥಾಪಕ ಸಮೀರ್ ನಿಗಮ್ ಅವರು ಕನ್ನಡಿಗರಿಗೆ ಕ್ಷಮೆಯಾಚಿಸಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವಂತ ಪೋನ್ ಪೇ ಸಿಇಒ ಮತ್ತು ಸ್ಥಾಪಕ ಸಮೀರ್ ನಿಗಮ್ ಅವರು, ಫೋನ್ ಪೇ ಬೆಂಗಳೂರಿನಲ್ಲಿ ಜನಿಸಿತು ಮತ್ತು ವಿಶ್ವದರ್ಜೆಯ ತಂತ್ರಜ್ಞಾನ ಪ್ರತಿಭೆ ಮತ್ತು ರೋಮಾಂಚಕ ವೈವಿಧ್ಯತೆಗೆ ಹೆಸರುವಾಸಿಯಾದ ಈ ನಗರದಲ್ಲಿ ನಮ್ಮ ಬೇರುಗಳ ಬಗ್ಗೆ ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ. ಬೆಂಗಳೂರಿನಿಂದ, ಕಳೆದ ದಶಕದಲ್ಲಿ ನಾವು ಭಾರತದ ಉದ್ದಗಲಕ್ಕೂ ವಿಸ್ತರಿಸಿದ್ದೇವೆ. 55 ಕೋಟಿಗೂ ಹೆಚ್ಚು ಭಾರತೀಯರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಪಾವತಿಗಳನ್ನು ತಲುಪಿಸಲು ಸಾಧ್ಯವಾಗಿದೆ ಎಂದಿದ್ದಾರೆ. “ಭಾರತದ ಸಿಲಿಕಾನ್ ವ್ಯಾಲಿ”…

Read More

ಚಿನ್ನಾಭರಣಗಳನ್ನು ಖರೀದಿಸುವ ಮೊದಲು ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಮೋಸ ಹೋಗುವ ಅಪಾಯವಿದೆ. ಅನೇಕ ಜನರಿಗೆ ನಕಲಿ ಚಿನ್ನಾಭರಣಗಳನ್ನು ಹೇಗೆ ಗುರುತಿಸುವುದು ಎಂದು ತಿಳಿದಿಲ್ಲ. ಆದ್ದರಿಂದ ಮನೆಯಲ್ಲಿದ್ದುಕೊಂಡೇ ನಿಮ್ಮ ಆಭರಣ ಅಸಲಿಯೇ ಅಥವಾ ನಕಲಿಯೇ ಎಂದು ತಿಳಿದುಕೊಳ್ಳಲು ಈ ಸಿಂಪಲ್​ ಟಿಪ್ಸ್​​ ಅನುಸರಿಸಿ. ಯಾವುದೇ ಅನುಮಾನ ಬಾರದಂತೆ ಅಸಲಿ ಉತ್ಪನ್ನಗಳನ್ನೇ ನಕಲಿ ಮಾಡಿ ಅಮಾಯಕರನ್ನು ವಂಚಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ವಿಶೇಷವಾಗಿ ಚಿನ್ನ ಖರೀದಿಸುವಾಗ ಜಾಗರೂಕರಾಗಿರುವುದು ತುಂಬಾ ಮುಖ್ಯ. ರೋಲ್ಡ್ ಗೋಲ್ಡ್ ಕೂಡ ನಿಜವಾದ ಚಿನ್ನದಂತೆ ಕಾಣುತ್ತದೆ. ಒರಿಜಿನಲ್ ಬಂಗಾರದ ಹೆಸರಲ್ಲಿ ನಕಲಿ ಚಿನ್ನ ನೀಡಿ ಅಮಾಯಕರನ್ನು ವಂಚಿಸುತ್ತಿರುವ ಹಲವು ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿ ಜನರು ಸದಾ ಜಾಗೃತರಾಗಿರಬೇಕು. ನಕಲಿ ಆಭರಣಗಳನ್ನು ಗುರುತಿಸುವುದು ಹೇಗೆ?: ಚಿನ್ನದ ಮೇಲೆ ವಿನೆಗರ್ ನ ಕೆಲವು ಹನಿಗಳನ್ನು ಹಾಕಿ ಮತ್ತು ಕೆಲವು ನಿಮಿಷಗಳ ನಂತರ ಎಚ್ಚರಿಕೆಯಿಂದ ನೋಡಿ. ಚಿನ್ನದ ಬಣ್ಣ ಬದಲಾಗದಿದ್ದರೆ ಅದು ಶುದ್ಧ ಚಿನ್ನ ಎಂದು ಅರ್ಥ. ವಿನೆಗರ್ ಜೊತೆ ಬೆರೆತ ತಕ್ಷಣ ನಕಲಿ ಚಿನ್ನ ಕಪ್ಪು…

Read More

ಕೆಲವೊಮ್ಮೆ ನಮ್ಮ ಗುಪ್ತ ಆರೋಗ್ಯ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಇರಿಸು ಮುರಿಸು ಉಂಟಾಗುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿಯೇ ರೋಗಿಯ ಚಿಕಿತ್ಸಾ ಕ್ರಮದ ಬಗ್ಗೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದರೆ ರೋಗಿಯ ಪರಿಸ್ಥಿತಿ ಹೇಗಾಗಿರಬಹುದು..? ಇಂಥದೊಂದು ಘಟನೆಗೊಂದು ಸಾಕ್ಷಿಯಾಗಿದೆ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆ. ಚೀನಾದಲ್ಲಿ ಮಹಿಳೆಯೊಬ್ಬಳು ಸ್ತನ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಗಾಗಿ ಮಧ್ಯ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಗೆ ಜನವರಿಯಲ್ಲಿ ದಾಖಲಾಗಿದ್ದಳು. ತಿಂಗಳುಗಳ ನಂತರ, ಇತರ ಹಲವಾರು ಮಹಿಳೆಯರೊಂದಿಗೆ ತನ್ನ ವಿಡಿಯೊ ಚೀನಾದ ಸೋಶಿಯಲ್ ಮೀಡಿಯಾದ ಪ್ಲಾಟ್‍ ಫಾರ್ಮ್‍ನಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಅವಳು ಶಾಕ್‌ ಆಗಿದ್ದಾಳೆ. ವಿಡಿಯೋದಲ್ಲಿ ಆಕೆಗೆ ಶಸ್ತ್ರಚಿಕಿತ್ಸೆಯ ನಂತರ, ಬ್ಯಾಂಡೇಜ್ ಮತ್ತು ಅರಿವಳಿಕೆಗೆ ನೀಡುವ ವಿಡಿಯೋ ವೈರಲ್‌ ಆಗಿತ್ತು. ಈ ಘಟನೆಯ ಬಗ್ಗೆ ಬೇಸರಗೊಂಡ ಮಹಿಳೆ ತನ್ನ ಜೀವನದಲ್ಲಿ ರಹಸ್ಯವಾಗಿಡಬೇಕಾಗಿದ್ದ ಈ ವಿಚಾರವನ್ನು ಬಹಿರಂಗಪಡಿಸಿದ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ಅಲ್ಲದೇ ವಿಡಿಯೊ ಶೂಟ್ ಮಾಡಿದ ವ್ಯಕ್ತಿಯನ್ನು ಗುರುತಿಸಿ ಮತ್ತು ವಿಡಿಯೊವನ್ನು ಡಿಲೀಟ್ ಮಾಡುವಂತೆ ಆಕೆ…

Read More

ಶಾಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಖಾಸಗಿ ಹೊಟೇಲ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅಜೀಂ ಪ್ರೇಮ್‌ ಜೀ ಪ್ರತಿಷ್ಠಾನ -ರಾಜ್ಯ ಸರ್ಕಾರದ ನಡುವೆ 3 ವರ್ಷಗಳ ಅವಧಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಒಪ್ಪಂದ ದಾಖಲೆಗಳ ವಿನಿಮಯದ ಬಳಿಕ ಮುಖ್ಯಮಂತ್ರಿಯವರು ಮಾತನಾಡಿದರು. ರಾಜ್ಯದ 53,080 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 55 ಲಕ್ಷ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಪೂರಕ ಪೌಷ್ಠಿಕ ಆಹಾರ ನೀಡಲು ಮುಂದೆ ಬಂದಿರುವ ಅಜೀಂ ಪ್ರೇಮ್‌ ಜೀ ಪ್ರತಿಷ್ಠಾನದ ಅಧ್ಯಕ್ಷ ಅಜೀಂ ಪ್ರೇಮ್‌ ಜೀ ಅವರದ್ದು ದೊಡ್ಡ ಮನಸ್ಸು. ಪ್ರೇಮ್‌ ಜೀ ಮತ್ತು ಕುಟುಂಬಕ್ಕೆ ಸರ್ಕಾರದ ಪರವಾಗಿ ಧನ್ಯವಾದ. ಇಂತಹ ಅನೇಕ ಜನಪರ ಕೆಲಸಗಳು, ದಾನ ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪೂರಕ ಪೌಷ್ಠಿಕ ಆಹಾರ ನೀಡಲು 3 ವರ್ಷಗಳಿಗೆ ಅಜೀಂ…

Read More

ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ರನ್ನು ಆಯ್ಕೆ ಮಾಡುವ ಮೂಲಕ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಆಘಾತದ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಲು ಭಾರತ ತಂಡದ ಮುಖ್ಯ ಕೋಚ್ ನಿರ್ಧರಿಸಿದ್ದಾರೆ. ಅದೇನೆಂದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಬೇಕಿದ್ದರೆ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೆರೆದಿಡಬೇಕು. ಆದರೆ ಅದು ಟೀಮ್ ಇಂಡಿಯಾ ಪರ ಕಣಕ್ಕಿಳಿದಲ್ಲ. ಬದಲಾಗಿ ಡಿಸೆಂಬರ್ನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯ ಮೂಲಕ ಎಂದು ತಿಳಿಸಲಾಗಿದೆ. ಇತ್ತೀಚೆಗೆ ಅಧಿಕೃತವಾಗಿ ವಿಚ್ಛೇದನ ಘೋಷಿಸಿದ್ದ ಹಾರ್ದಿಕ್ ಗೆ ಮತ್ತೆ ಮತ್ತೆ ಶಾಕ್ ಗಳು ಎದುರಾಗುತ್ತಿದೆ. ಇಲ್ಲಿ ಹಾರ್ದಿಕ್ ಪಾಂಡ್ಯ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ವಿಜಯ ಹಝಾರೆ ಟೂರ್ನಿಯ ಪಂದ್ಯಗಳಲ್ಲಿ ಸಂಪೂರ್ಣ 10 ಓವರ್ಗಳನ್ನು ಬೌಲಿಂಗ್ ಮಾಡಬೇಕು. ಅಂದರೆ ಮಾತ್ರ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಕಳೆದ ಏಕದಿನ ವಿಶ್ವಕಪ್ನಲ್ಲಿ…

Read More

ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇದಾರನಾಥ ಸಮೀಪ ಭೂಕುಸಿತದಿಂದಾಗಿ ಮೂವರು ಯಾತ್ರಿಕರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಮೃತಪಟ್ಟವರಲ್ಲಿ ಇಬ್ಬರು ಮಹಾರಾಷ್ಟ್ರ ಮೂಲದ ಅರುಣ್‌ ಪರಾಠೆ ಮತ್ತು ಸುನಿಲ್‌ ಮಹಾದೇವ್‌ ಕಾಲೆ ಎಂದು ಗುರುತಿಸಲಾಗಿದೆ. ಮತ್ತೋರ್ವನನ್ನು ರುದ್ರಪ್ರಯಾಗ್‌ ಮೂಲದ ಅನುರಾಗ್‌ ಬಿಶ್ತ್‌ ಎಂದು ಗುರುತಿಸಲಾಗಿದೆ. ಯಾತ್ರಿಕರು ಭಾನುವಾರ ಬೆಳಗ್ಗೆ ಗೌರಿಕುಂಡಾದಿಂದ ಪ್ರಯಾಣ ಆರಂಭಿಸಿದ್ದರು. ಚಿರ್‌ಬಾಸಾ ಪ್ರದೇಶದ ಸಮೀಪ ಭಾರೀ ಭೂ ಕುಸಿತ ಸಂಭವಿಸಿದ್ದು, ಮೂವರು ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಗ ಮಧ್ಯೆ ಸಿಲುಕಿದ ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ತುಮಕೂರು: ಸಂಭ್ರಮ 2024 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಹಬ್ಬ  ಎರಡನೆಯ ದಿನವಾದ ಇಂದು ಸಮಾರೋಪ ಸಮಾರಂಭ  ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಸಾಂಸ್ಕೃತಿಕ ಸಂಚಾಲಕರಾದ ಮನೋಜ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ  ಚಟುವಟಿಕೆಗಳಲ್ಲದೆ ಮನುಷ್ಯನ ಸಂಪೂರ್ಣ  ವ್ಯಕ್ತಿತ್ವ  ವಿಕಸನಕ್ಕಾಗಿ ಕಲೆ ಸಾಹಿತ್ಯ ಸಂಗೀತ ಇವೆಲ್ಲವೂ ಅತ್ಯವಶ್ಯಕ. ಇವೆಲ್ಲದರಲ್ಲಿ ಮನುಷ್ಯನ ನೋವನ್ನು ಅಡಗಿಸುವ ಮಾಯಾಶಕ್ತಿ ಇದೆ. ಅದನ್ನೆಲ್ಲರೂ ಸಮತ್ವವಾಗಿ ಮೈಗೂಡಿಸಿಕೊಳ್ಳಬೇಕು. ಅದಕ್ಕಾಗಿಯೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಒಂದು ದಿನದ ಕಾರ್ಯಕ್ರಮವನ್ನು ಎರಡು ದಿನಗಳಿಗೆ ವಿಸ್ತರಿಸಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಾ ಕೇಸರಿ, ಕಲಾಶ್ರೀ ಡಾಕ್ಟರ್ ಲಕ್ಷ್ಮಣ್ ದಾಸ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು  ಓದುವುದರ ಜೊತೆಗೆ ತಂದೆ ತಾಯಿಯರಲ್ಲಿ ಗುರು ಹಿರಿಯರಲ್ಲಿ ಭಕ್ತಿ ಇರಿಸಿಕೊಳ್ಳಬೇಕು. ಆಗಲೇ ಕಲಿತೆ ವಿದ್ಯೆಗೂ ಒಂದು ಭೂಷಣ. ಯಾವ ಮನುಷ್ಯನಿಗೆ ಕಲೆ ಅಭಿರುಚಿ ಇರುತ್ತದೆಯೋ ಆ ಮನುಷ್ಯನು ಎಂದಿಗೂ ದುಃಖಿಯಾಗಿರಲಾರ ಎಂದು ಅಭಿಪ್ರಾಯಪಟ್ಟರು. ಪ್ರೊಫೆಸರ್ ಕೆ.ಎಸ್.ಜಗದೀಶ್…

Read More

ಸಾಮಾನ್ಯವಾಗಿ ಮಗುವಿಗೆ ಹಲ್ಲು ಹುಟ್ಟಲು ಪ್ರಾರಂಭವಾಗುವುದು ಆರು ತಿಂಗಳಿಂದ 12 ತಿಂಗಳ ನಡುವೆ . ಆದಾಗ್ಯೂ, ಹಲ್ಲುಗಳು ಸಂಪೂರ್ಣವಾಗಿ ಬರಲು ಹಲವು ವರ್ಷಗಳು ಬೇಕಾಗುತ್ತದೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದೆ. ಅಮೆರಿಕದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಈ ಮಗುವಿನ ವಿಶೇಷತೆ ಎಂದರೆ ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದೆ. ಸದ್ಯ ತನ್ನ ಮಗುವಿನ ಬಗ್ಗೆ ಸ್ವತಃ ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ಹೇಳುತ್ತಾರೆ. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಕುರಿತು ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ರೀತಿ ಹುಟ್ಟಲು ಹಲವು ಕಾರಣಗಳಿರಬಹುದು. ಆನುವಂಶಿಕ ಅಂಶಗಳು, ಕೆಲವು…

Read More

ತುಮಕೂರು: ತಾಲೂಕಿನ ಮುದ್ದೇನಹಳ್ಳಿಯಲ್ಲಿ ಅನೇಕ ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿರೋ  ಚಿರತೆಯಿಂದ ಜನರು ರಾತ್ರಿ ವೇಳೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಚಾರವಿದ್ರು ಹೆದರದ ಚಿರತೆ ರಾಜಾರೋಷವಾಗಿ ಓಡಾಡುತ್ತಿದೆ. ತುಮಕೂರು ಕೆಸ್ತೂರು ಸಂಪರ್ಕ ರಸ್ತೆಯಲ್ಲಿ  ಘಟನೆ ನಡೆದಿದ್ದು , ಚಿರತೆ‌ ಸೆರೆ ಇಡಿದು ಅರಣ್ಯಕ್ಕೆ ಬಿಡುವಂತೆ ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More