Subscribe to Updates
Get the latest creative news from FooBar about art, design and business.
- ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
- ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
- ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
- ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ: ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
- ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ: ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
- ತುಮಕೂರು: ಆ. 2ರಂದು ಪೊಲೀಸ್ ಕಾನ್ಸ್’ಟೇಬಲ್ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆ: ನಿಷೇಧಾಜ್ಞೆ ಜಾರಿ
- ಪತ್ರಕರ್ತರು ಸಮಾಜದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಲಿ: ಶಾಸಕ ಪ್ರಭು ಚವ್ಹಾಣ
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
Author: admin
ಪ್ರಧಾನಿ ಮೋದಿ 3 ನೇ ಅವಧಿಗೆ ಪ್ರಧಾನಿ ಆಗುವ ಮೂಲಕ NDA ಸರ್ಕಾರದ ರಚನೆಗೆ ಪ್ರಮುಖ ಕಾರಣ ಆಗಿರೋ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ತಮ್ಮ ರಾಜ್ಯಕ್ಕೆ ಹಲವು ಬೇಡಿಕೆಗಳನ್ನಟ್ಟಿದ್ದಾರೆ. ಇಂದು NDA ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಮೋದಿ ಎದುರು ಈ ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇವುಗಳಿಗೆ ನಿರ್ಮಲಾ ಸೀತಾರಾಮನ್ ಅವರು ಹೇಗೆ ಸ್ಪಂದಿಸಿದ್ದಾರೆ ಎಂದು ನೋಡಬೇಕಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವ್ಯಾಪಿಸಿರುವ ಬುಂಧೇಲ್ ಖಂಡ್ ರೀತಿಯಲ್ಲಿ ವಿಶೇಷ ಪ್ಯಾಕೇಜ್ * ಕೈಗಾರಿಕಾ ಪ್ರೋತ್ಸಾಹಧನ, ರಾಜಧಾನಿಯಾಗಿ ಅಮರಾವತಿ ನಗರವನ್ನು ನಿರ್ಮಿಸಲು ಪ್ಯಾಕೇಜ್. * ಪೋಲಾವರಂ ವಿವಿಧೋದ್ದೇಶ ಯೋಜನೆಗೆ ಹಣ ಬಿಡುಗಡೆ. * ರಾಜ್ಯ ಆರ್ಥಿಕ ವ್ಯವಹಾರಗಳ ಮೇಲೆ ತಾತ್ಕಾಲಿಕ ಹಿಡಿತ ಸಾಧಿಸಲು ಅಲ್ಪಾವಧಿಯ ಸಹಾಯ. * ವಿಶೇಷ ನೆರವಿನ ಯೋಜನೆಯಡಿಯಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚುವರಿ ಆರ್ಥಿಕ ಸಹಾಯ. *…
ತುಮಕೂರು: ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಂದು ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದೆ ಇರೋದನ್ನು ಕಂಡು ಅಧಿಕಾರಿಗಳು ಹಾಗೂ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ರೋಗಿಗಳ ಪರಿಸ್ಥಿತಿಯನ್ನು ಅವಲೋಕಿಸಿದವರು ಸೂಕ್ತ ಚಿಕಿತ್ಸೆ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇನ್ನೊಂದೆಡೆ ತುಮಕೂರು ನಗರದ ಆದ್ಯಂತ ಡೆಂಗ್ಯೂ ಉಲ್ಬಣಗೊಳ್ಳುತ್ತಿದ್ದು ಆಸ್ಪತ್ರೆಯಲ್ಲಿಯೇ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ವಿಶೇಷ ಗಮನಹರಿಸಬೇಕೆಂದು ಆದೇಶ ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಯುದ್ಧಪೀಡಿತ ಸೂಡಾನ್ ದೇಶದಲ್ಲಿ ಕುಟುಂಬದ ನಿರ್ವಹಣೆಗಾಗಿ ಆಹಾರ ಬೇಕಾದರೆ ಮಹಿಳೆಯರು ಯೋಧರ ಜೊತೆ ಮಲಗುವಂತೆ ಒತ್ತಡ ಹೇರಲಾಗುತ್ತಿದೆ.ಸುಡಾನ್ ನ ಒಮ್ರುಮನ್ ನಗರದ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ತಾವು ಕೇವಲ ಕುಟುಂಬ ಹೊಟ್ಟೆ ತುಂಬಿಸಲು ಆಹಾರ ಮುಂತಾದ ಅಗತ್ಯ ವಸ್ತುಗಳನ್ನು ಪಡೆಯಲು ಸೈನಿಕರ ಜೊತೆ ದೇಹ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಸೂಡಾನ್ ನಲ್ಲಿ ನಾಗರಿಕ ಧಂಗೆ ಶುರುವಾದ ಹಿನ್ನೆಲೆಯಲ್ಲಿ ಪ್ಯಾರಾ ಮಿಲಿಟರಿ ಹೇರಲಾಗಿದ್ದು, ದೇಶದ ಪ್ರಮುಖ ಫ್ಯಾಕ್ಟರಿ ಆವರಿಸಿಕೊಂಡಿರುವ ಸೈನಿಕರು ಊಟ ಬೇಕಾದರೆ ಸೆಕ್ಸ್ ಮಾಡಿ ಎಂದು ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆಹಾರ ಸಂಗ್ರಹಿಸುವ ಉಗ್ರಾಣ ಸೇರಿದಂತೆ ಕಾರ್ಖಾನೆಗಳು ಸೈನಿಕರ ವಶದಲ್ಲಿದೆ. ಇದರಿಂದ ದೇಶದ ಜನರು ಆಹಾರಕ್ಕಾಗಿ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈನಿಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಊಟ, ನೀರು ಬಯಸುವ ಮಹಿಳೆಯರು ಮೊದಲು ಸರತಿ ಸಾಲಿನಲ್ಲಿ ನಿಲ್ಲಬೇಕು. ನಂತ್ರ ಸೈನಿಕರ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಸೂಡಾನ್ ಅಂತರ್ಯುದ್ಧ ಮಹಿಳೆಯರನ್ನು ಈ ದುಸ್ಥಿತಿಗೆ ತಳ್ಳಿದೆ. ಅಲ್ಲಿನ…
ಹಾವೇರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಲೈಬ್ರರಿ ಸೂಪರ್ ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 31, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಾವೇರಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆ: ಹಾವೇರಿ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಲೈಬ್ರರಿ ಸೈನ್ಸ್ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಪೂರ್ಣಗೊಳಿಸಿರಬೇಕು. ವಯೋಮಿತಿ: ಹಾವೇರಿ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 31, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು SC/ST/ಪ್ರವರ್ಗ-I ಅಭ್ಯರ್ಥಿಗಳು: 05 ವರ್ಷಗಳು PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು ಅರ್ಜಿ ಶುಲ್ಕ: PWD ಅಭ್ಯರ್ಥಿಗಳು:…
ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿಯ ಥರಟಿ ಗ್ರಾಮದಲ್ಲಿ ಒಂದು ಕುಟುಂಬವೊಂದು ವಾಸಿಸಲು ಸೂಕ್ತ ಮನೆಯಿಲ್ಲದೇ ಸಂಕಷ್ಟದಲ್ಲಿ ಜೀವಿಸುತ್ತಿರುವ ಘಟನೆ ಗೃಹ ಸಚಿವರ ಕ್ಷೇತ್ರದಲ್ಲೇ ನಡೆದಿದೆ. 8 ಜನರಿರುವ ಕುಟುಂಬ ಈ ಬಡ ಕುಟುಂಬದಲ್ಲಿ ಮಂಜಮ್ಮ ತಿಮ್ಮಣ್ಣ ದಂಪತಿಯ ಮನೆಯಲ್ಲಿ ಹಿರಿಯ ಜೀವಗಳು ಮೂರು ಜನ ಇದ್ದಾರೆ. ಯಾರಿಗೂ ಪೆನ್ಷನ್ ಬರುತ್ತಿಲ್ಲ. ನಾಲ್ಕು ವರ್ಷದಿಂದ ಒಂದು ಟಾರ್ಪಲ್ ಅಡಿಯಲ್ಲಿ ವಾಸ ಮಾಡುತ್ತಿದ್ದಾರೆ. ನಮ್ಮ ಮನೆ ಬಿದ್ದುಹೋಗಿದೆ ಎಂದು ಅಧಿಕಾರಿಗಳಿಗೆ ಅಂಗಲಾಚಿದರು ಯಾರು ಬಂದಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಇವರಿಗೆ ಮನೆ ಮಂಜೂರು ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ದ್ರಾಕ್ಷಯಿಣಿ ತಿಳಿಸಿದರು. ಆದರೆ ಮನೆ ಕಂದಾಯ ಕಟ್ಟಲು ಸಹ ಹಣವಿಲ್ಲ. ಹೀಗಿರುವಾಗ ಮನೆ ಕಟ್ಟಲು ಚೈತನ್ಯವಿಲ್ಲದ ನಮ್ಮ ಬಳಿ ಹಣ ಎಲ್ಲಿದೆ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಅನಾರೋಗ್ಯ ಪೀಡಿತ ತಾಯಿ ವಯಸ್ಸಾದ ತಂದೆ ಇವರ ಆಸ್ಪತ್ರೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಬಳಿ…
ಔರಾದ್: ಪತ್ರಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಜನರ ಧ್ವನಿಯಾಗಬೇಕು ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರಭು ಚವ್ಹಾಣ ಕರೆ ನೀಡಿದರು. ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯುನಿಯನ್ ಸಂಘದಿಂದ ಆಯೋಜಿಸಿದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲೆಡೆ ನಿರೀಕ್ಷೆಗಳು ಹುಸಿಯಾದಾಗ ಜನಸಾಮಾನ್ಯರು ನ್ಯಾಯದ ಭರವಸೆ ಮಾಡುವುದು ಕೇವಲ ಪತ್ರಿಕಾ ಮಾಧ್ಯಮದ ಮೇಲೆ ಎಂಬುದನ್ನು ಅರಿಯಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಈ ಹಿಂದಿನಿಂದಲೂ ಮಾಡಿದ್ದು, ಮುಂದೆಯು ಸಹ ಮಾಡುತ್ತೇನೆ. ಪತ್ರಕರ್ತರ ಅನುಕೂಲಕ್ಕೆ ಜೀವವಿಮೆಯಂತಹ ಸೌಲಭ್ಯಗಳು ನೀಡುವ ಕುರಿತು ಯೋಚಿಸುತ್ತೇನೆ ಎಂದರು. ತಾಲೂಕಿನಲ್ಲಿ ಪತ್ರಿಕಾ ಭವನ ಇಲ್ಲದಿರುವುದು ನನ್ನ ಗಮನಕ್ಕೂ ಇದೆ. ಹಿಂದಿನಿಂದಲೂ ಭವನ ನಿರ್ಮಾಣದ ಕುರಿತು ಪತ್ರಕರ್ತರ ಜೊತೆ ಚರ್ಚಿಸಿದ್ದೇನೆ. ಪಟ್ಟಣ ಪ್ರದೇಶದಲ್ಲಿ ನಿವೇಶನ ದೊರೆತಲ್ಲಿ ಶೀಘ್ರ ಪತ್ರಿಕಾ ಭವನ ನಿರ್ಮಿಸಲು ಸಿದ್ದನಿರುವುದಾಗಿ ಭರವಸೆ ನೀಡಿದರಲ್ಲದೇ. ಎಲ್ಲ ಪತ್ರಕರ್ತರು ಒಂದಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದರೆ…
ಕೋರ್ಟ್ ಆವರಣದಲ್ಲೇ ನಿಲ್ಲಿಸಿದ್ದ ಹಿಟಾಚಿ ಕದ್ದಿದ್ದ ಖದೀಮರು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಜಿಗಣಿಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕಾಮಗಾರಿಗೆಂದು ಹಿಟಾಚಿ ತರಿಸಲಾಗಿತ್ತು. ಕಾಮಗಾರಿ ಬಳಿಕ ಕೋರ್ಟ್ ಆವರಣದಲ್ಲೇ ಹಿಟಾಚಿ ನಿಲ್ಲಿಸಲಾಗಿತ್ತು. ಜು.17ರ ರಾತ್ರಿ 1 ಗಂಟೆ ಸುಮಾರಿಗೆ ನಾಲ್ವರು ಕಳ್ಳರು ಲಾರಿ ಸಮೇತ ಕೋರ್ಟ್ ಬಳಿ ಬಂದಿದ್ದರು. ಸೆಕ್ಯೂರಿಟಿ ಬಳಿ ಆವರಣದಲ್ಲಿರುವ ಹಿಟಾಚಿ ನಮ್ಮದೆ, ಕೆಲಸ ಮುಗಿದಿದೆ ತೆಗೆದುಕೊಂಡು ಹೋಗ್ತೀವಿ ಅಂತ ಕಥೆ ಕಟ್ಟಿದ್ದರು. ಇದನ್ನು ನಂಬಿದ ಸೆಕ್ಯೂರಿಟಿ ಆರೋಪಿಗಳನ್ನು ಒಳಗೆ ಬಿಟ್ಟಿದ್ದಾರೆ. ಬಳಿಕ ಕಳ್ಳರು ಲಾರಿಯಲ್ಲಿ ಹಿಟಾಚಿ ಹೇರಿಕೊಂಡು ಪರಾರಿಯಾಗಿದ್ದಾರೆ. ಹಿಟಾಚಿ ಕದಿಯುವ ಖತರ್ನಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಜಿಗಣಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗೆ ಹುಡುಕಾಟ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಬೆರಳಿನ ಫಂಗಸ್ ಇನ್ಫೆಕ್ಷನ್ ನಿವಾರಣೆ ಹಲವರ ಸಮಸ್ಯೆ ಆಗಿದೆ. ಮುಖ್ಯವಾಗಿ ಪಾದಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆರಳು ಸಂಧಿಗಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಾಲಿನ ಬೆರಳಲ್ಲಿ ಕಾಣಿಸಿಕೊಳ್ಳುವ ಟೋನಲ್ ಫಂಗಲ್ ಇನ್ಫೆಕ್ಷನ್ ಬೆರಳೇ ಎದ್ದು ಬಂದ ಹಾಗೆ, ಕೀವು ತುಂಬಿಕೊಂಡು ಹಳದಿ ಬೆರಳಾಗಿ ಕಾಣಿಸಿಕೊಳ್ಳುತ್ತವೆ. ಕಾಲು ತುರಿಕೆ ವಿಪರೀತ ಆಗಿರುತ್ತದೆ, ಅದಲ್ಲದೆ ಮಳೆಗಾಲದಲ್ಲಿ ಹೆಚ್ಚಾಗಿ ಸೋಂಕುಗಳು ಹರಡುವುದರಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ಶೀತ, ಜ್ವರ, ಕೆಮ್ಮು ಇವುಗಳ ಜತೆಗೆ ಇನ್ನೆಕ್ಷನ್‌ಗಳು ಉಂಟಾಗುತ್ತವೆ. ಇದೀಗ ಕಾಲು ಬೆರಳಿನ ಫಂಗಲ್ ಇನ್ನೆಕ್ಷನ್ ತಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ. ಕಾಲು ಬೆರಳಿನಲ್ಲಿ ಕಾಣಿಸಿಕೊಳ್ಳುವ ಈ ಟೋನಲ್ ಫಂಗಲ್ ಇನ್ಸೆಕ್ಷನ್ ಅನ್ನು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಗುಣಪಡಿಸುವ ಸರಳ ವಿಧಾನ ಇಲ್ಲಿದೆ. ಕೊಬ್ಬರಿ ಎಣ್ಣೆ: ತೆಂಗಿನಕಾಯಿ ಎಣ್ಣೆ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಇದನ್ನು ಬಳಸುವುದರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಇದರಲ್ಲಿನ ಔಷಧೀಯ ಗುಣಗಳು…
ನರವೈಜ್ಞಾನಿಕ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿಶ್ವಾದ್ಯಂತ ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ವಿಶ್ವ ನರವಿಜ್ಞಾನ ಒಕ್ಕೂಟವು ಪ್ರತಿವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಆಚರಿಸುತ್ತದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2021 ರ ದತ್ತಾಂಶವು ಹಿಂದಿನ ಅಂದಾಜುಗಳನ್ನು ಮೀರಿ ವಿಶ್ವಾದ್ಯಂತ ಅಂಗವೈಕಲ್ಯಕ್ಕೆ ನರವೈಜ್ಞಾನಿಕ ಪರಿಸ್ಥಿತಿಗಳು ಮುಖ್ಯ ಕಾರಣವಾಗುವುದಲ್ಲದೆ, ನರವೈಜ್ಞಾನಿಕ ಪರಿಸ್ಥಿತಿಗಳ ಹೊಸ ಮತ್ತು ವಿಸ್ತೃತ ವರ್ಣಪಟಲವನ್ನು ಒಳಗೊಂಡಿದೆ ಎಂದು ತೋರಿಸುತ್ತದೆ.1 ಈ ಹೊಸ ಆವಿಷ್ಕಾರವು ಮೆದುಳಿನ ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಅಗತ್ಯಗೊಳಿಸುತ್ತದೆ, ಈ ನರವೈಜ್ಞಾನಿಕ ಪರಿಸ್ಥಿತಿಗಳ ಪರಿಣಾಮವನ್ನು ತಗ್ಗಿಸಲು ತಡೆಗಟ್ಟುವಿಕೆಯು ಪ್ರಮುಖ ತಂತ್ರವಾಗಿದೆ. ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆಯ ಕುರಿತು ನೀವು ತಿಳಿಯಬೇಕಾದ 5 ಪ್ರಮುಖ ಕಾರ್ಯಸೂಚಿಗಳು: * ಬಹುತೇಕ ನರರೋಗಗಳನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ, ಪರಿಣಾಮಕಾರಿ ಚಿಕಿತ್ಸೆ ಮತ್ತು ನಿರ್ವಹಣೆಯಿಂದ ರೋಗ ಉಲ್ಬಣ ತಡೆಗಟ್ಟಬಹುದು. * ಮೆದುಳು ಆರೋಗ್ಯ ಮತ್ತು ಆರೈಕೆಯನ್ನು ಜಾಗತಿಕ ಅಭಿಯಾನವಾಗಿ ನಡೆಸಲು ಆರೋಗ್ಯಸೇವೆ ವೃತ್ತಿಪರರು, ಸಂಶೋಧಕರು ಮತ್ತು ನೀತಿ…
ಶುಂಠಿಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಆಯುರ್ವೇದಿಕ್ ಗಿಡಮೂಲಿಕೆಯಾಗಿದೆ. ಆದರೆ ಅತಿಯಾದ ಶುಂಠಿಯ ಬಳಕೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಅದು ಹೇಗೆಂದು ನಿಮಗೆ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಸಾಕಷ್ಟು ಜನ ಚಳಿಗಾಲ ಹಾಗು ಮಳೆಗಾಲದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಯಾವುದೇ ಸಮಯದಲ್ಲಿ ಬೇಕಾದರೂ ಶುಂಠಿ ಚಹಾ ಇಷ್ಟ ಪಟ್ಟು ಕುಡಿಯುತ್ತಾರೆ. ಶುಂಠಿ ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ ಕೆಲವರು ಶುಂಠಿ ಚಹಾವನ್ನು ಕುಡಿಯಲೇಬಾರದು ಒಂದು ವೇಳೆ ನೀವು ಅದನ್ನು ಕುಡಿದರೂ ಕಡಿಮೆ ಪ್ರಮಾಣದಲ್ಲಿ ಕುಡಿಯಿರಿ. ಬೇಸಿಗೆಯಲ್ಲಿ ಶುಂಠಿಯನ್ನು ತಿನ್ನುವುದನ್ನು ತಪ್ಪಿಸಬೇಕು. ಯಾಕೆಂದರೆ ಬೇಸಿಗೆ ವಾತಾವರಣದಲ್ಲಿ ಬಿಸಿ ಪದಾರ್ಥಗಳನ್ನು ಕುಡಿಯುವುದರಿಂದ ದೇಹಕ್ಕೆ ಶಾಖ ಹೆಚ್ಚುತ್ತದೆ. ಶುಂಠಿಯು ಸ್ವಭಾವತಃ ಬಿಸಿಯಾಗಿರುತ್ತದೆ, ಆದರೆ ಬೇಸಿಗೆಯಲ್ಲಿ ಇದನ್ನು ತಿನ್ನುವುದರಿಂದ ಅನೇಕ ದೈಹಿಕ ಸಮಸ್ಯೆಗಳು ಉಂಟಾಗುತ್ತವೆಯೇ? ಶುಂಠಿಯ ಅತಿಯಾದ ಸೇವನೆಯಿಂದ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳ ಬಗ್ಗೆ ಇಲ್ಲಿದೆ. ಶುಂಠಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯ ಕಿರಿಕಿರಿ, ಆಮ್ಲ…