Subscribe to Updates
Get the latest creative news from FooBar about art, design and business.
- ಪತ್ರಕರ್ತರು ಸಮಾಜದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಲಿ: ಶಾಸಕ ಪ್ರಭು ಚವ್ಹಾಣ
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
Author: admin
ತುಮಕೂರು: ಹಾಸನದ ಗೊರೂರು ಹೇಮಾವತಿ ಜಲಾಶಯದಿಂದ ನಾಗಮಂಗಲ ಶಾಖಾ ವ್ಯಾಪ್ತಿಯ ಬಾಗೂರು ನವಿಲೆ ಮೂಲಕ ಹರಿದು ಬರುವ ಕಾಲುವೆಯ ವಿವಿಧ ಹಂತದ ಕಾಮಗಾರಿಯನ್ನು ಮಾಜಿ ಸೊಗಡು ಶಿವಣ್ಣ ಪರಿಶೀಲನೆ ನಡೆಸಿದರು. ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಡ್ಯಾಂನಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ ನಾಲಾ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೆ, ಇರುವುದರಿಂದ ಹೇಮಾವತಿ ನದಿ ನೀರನ್ನು ನಿರೀಕ್ಷಿತ ಪ್ರಮಾಣದಲ್ಲಿ ತುಮಕೂರು ಜಿಲ್ಲೆಗೆ ಹರಿಸುವುದು ವಿಳಂಬವಾಗಲಿದೆ ಎಂದು ಸೊಗಡು ಶಿವಣ್ಣ ಇದೆ ವೇಳೆ ತಿಳಿಸಿದರು. ಕಾಮಗಾರಿಯು ಪೂರ್ಣಗೊಳ್ಳದೆ ಇರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿಯ ಪಂಚಾಕ್ಷರಯ್ಯ, ಗೋವಿಂದರಾಜು, ತಿಪಟೂರು ನಗರಸಭಾ ಮಾಜಿ ಸದಸ್ಯ ಎಂ.ಪಿ.ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ತುಮಕೂರು: ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಹೆಚ್ಚುವರಿ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರ ತುಮಕೂರು ಮನೆ ಹಾಗೂ ಅವರಿಗೆ ಸೇರಿದ ಕಾರ್ಖಾನೆ ಮೇಲೆ ಲೋಕಾಯುಕ್ತರು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟ ಏಕಕಾಲದಲ್ಲಿ ಒಟ್ಟು 7 ಕಡೆಗಳಲ್ಲಿ ದಾಳಿ ಮಾಡಿದ ಲೋಕಾಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಂಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಬೆಂಗಳೂರಿನ ನಾಗರಭಾವಿಯ 2 ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರಂಹೌಸ್ ಹಾಗೂ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ, (ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕ) ಸೇರಿದಂತೆ ಒಟ್ಟು 7 ಕಡೆಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಲೋಕಾಯುಕ್ತ ಎಸ್.ಪಿ.ಲಕ್ಷ್ಮೀ ಗಣೇಶ್…
ತಿರುಚ್ಚಿ ಸಮೀಪದ ಸಾತನೂರಿನ ರೈತರೊಬ್ಬರು ತಮ್ಮ ಸ್ವಂತ ಹಣದಿಂದ 1.25 ಲಕ್ಷ ರೂಪಾಯಿ ಖರ್ಚು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿತವಾದ ದೇವಾಲಯವನ್ನು ನಿರ್ಮಿಸಿದ್ದಾರೆ. ತಿರುಚ್ಚಿ ಜಿಲ್ಲೆಯ ಥರಿಯೌರ್ ಪ್ರದೇಶದ ಎರಕುಡಿ ಗ್ರಾಮದವರಾದ ಶಂಕರ್, ಕೃಷಿಯನ್ನು ಮುಂದುವರಿಸಲು ತಮ್ಮ ಊರಿಗೆ ಮರಳುವ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದರು.ಪ್ರಧಾನಿ ಮೋದಿಯವರ ಯೋಜನೆಗಳಿಂದ ಪ್ರೇರಿತರಾದ ಶಂಕರ್ ಅವರನ್ನು ಅಸಾಧಾರಣ ರೀತಿಯಲ್ಲಿ ಗೌರವಿಸಲು ನಿರ್ಧರಿಸಿದರು. 2019 ರಲ್ಲಿ ಶಂಕರ್ ದೇವಾಲಯವನ್ನು ನಿರ್ಮಿಸಿದರು ಮತ್ತು ಮೋದಿಯವರ ವಿಗ್ರಹವನ್ನು ಸ್ಥಾಪಿಸಿದರು. ಈ ದೇವಾಲಯವು ಪ್ರಧಾನಿ ಮೋದಿಯವರ ಸುಂದರವಾದ ಪ್ರತಿಮೆಯನ್ನು ಹೊಂದಿದೆ ಮತ್ತು ಕಾಮರಾಜ್, ಎಂಜಿಆರ್, ಜಯಲಲಿತಾ, ಅಮಿತ್ ಶಾ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಅವರಂತಹ ಇತರ ಗಮನಾರ್ಹ ವ್ಯಕ್ತಿಗಳ ಚಿತ್ರಗಳನ್ನು ಹೊಂದಿದೆ. ಮೋದಿ ಬಗ್ಗೆ ಶಂಕರ್ ಅವರ ಮೆಚ್ಚುಗೆ ಅಪಾರವಾಗಿದೆ. ತಮ್ಮ ಕೃಷಿ ಇಳುವರಿ ಸುಧಾರಿಸಿದರೆ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವುದಾಗಿ ಮತ್ತು ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು. ತೆಂಗಿನಕಾಯಿ,…
ತುಮಕೂರು: ಪತ್ನಿಯು ಪರ ಪುರುಷನೊಂದಿಗೆ ಓಡಿ ಹೋದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ದೇವರಾಜ್, ಹೆಂಡತಿಯನ್ನ ಓಡಿಸಿಕೊಂಡು ಹೋದ ಪುರುಷನಿಂದ ಗಂಡನಿಗೆ ಧಮ್ಕಿ ಹಾಕಿದ್ದನು. ತನಗೆ ಆನಂದ್ ಜೀವ ಬೆದರಿಕೆ ಹಾಕಿದ್ದ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಹೆಂಡತಿಯನ್ನ ಓಡಿಸಿಕೊಂಡು ಹೋದ ಆನಂದ್ ಮತ್ತು ಹೆಂಡತಿಯ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಕುಮಾರಸ್ವಾಮಿ, ಮೋದಿ ಸೇರಿದಂತೆ ಹಲವರಿಗೆ ಡೆತ್ ನೋಟ್ ಬರೆದು, ಆನಂದ್ ಮತ್ತು ಪತ್ನಿ ಮಾದವಿ ಇಬ್ಬರಿಗೂ ಶಿಕ್ಷೆ ಕೊಡಿಸುವಂತೆ ಡೆತ್ ನೋಟ್ ಬರೆದಿದ್ದಾನೆ. ಹೀಗಾಗಿ ದೇವರಾಜ್ ಮನನೊಂದು ನ್ಯಾಯಕ್ಕಾಗಿ ಡೆತ್ ನೋಟ್ ಬರೆದಿದ್ದು ಅದ್ರಲ್ಲಿ ನನಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ–ಎಸ್ಪಿಗೆ ಮನವಿ ಮಾಡಿದ್ದಾನೆ. ದೇವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಪ್ರೀತಿಸಿ ಮದುವೆಯಾಗಿ 18 ವರ್ಷದ…
ಕೆಲವೊಂದು ನಮಗೆ ಮೂಢನಂಬಿಕೆ ಎನಿಸಿದರೂ ಅದಕ್ಕೆ ಒಂದು ವೈಜ್ಞಾನಿಕ ಕಾರಣವಿರುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಗರ್ಭ ಧರಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಹೊಸದಾಗಿ ಮದುವೆಯಾದ ಜೋಡಿ ಮನೆಯಲ್ಲಿ ಇದ್ದರೆ ಹೆಣ್ಣನ್ನು ತವರು ಮನೆಗೆ ಕಳುಹಿಸುವ ಪದ್ದತಿಯಿದೆ. ಆಷಾಢ ಮಾಸದಲ್ಲಿ ನವವಿವಾಹಿತರು ದೂರವಿರಬೇಕು, ಅಥವಾ ಈ ಮಾಸದಲ್ಲಿ ಗರ್ಭ ಧರಿಸುವುದು ಒಳ್ಳೆಯದಲ್ಲ ಎನ್ನುವ ಕಾರಣ ಹೆಣ್ಣು ಮಕ್ಕಳು ತವರಿಗೆ ಬರುವ ಸಂಪ್ರದಾಯವಿದೆ. “ಈ ಸಮಯದಲ್ಲಿ ಗಂಡ ಹೆಂಡತಿ ಸೇರಿ ಹೆಣ್ಣು ಗರ್ಭವತಿಯಾದರೆ, ಚೈತ್ರ ಮಾಸದಲ್ಲಿ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಬಹುದು. ಈ ಸಮಯದಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಇದರಿಂದ ತಾಯಿ ಹಾಗೂ ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡಬಹುದು” ಎಂದಿದ್ದಾರೆ. “ಈ ಆಚರಣೆ ನಮ್ಮಲ್ಲಿ ಅಷ್ಟಾಗಿ ರೂಢಿಯಲ್ಲಿ ಇಲ್ಲ. ಆದರೆ ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಆದರೆ ಇದು ಕಡ್ಡಾಯವಲ್ಲ. ಏಪ್ರಿಲ್ ತಿಂಗಳಿನಲ್ಲಿ ಹೆರಿಗೆ ಆದಲ್ಲಿ ಮಗು ಮತ್ತು ತಾಯಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಚಿಕನ್ ಪಾಕ್ಸ್,…
ಯಾವುದೇ ನೋವಿಲ್ಲದೆ ಕ್ಷಣಮಾತ್ರದಲ್ಲಿ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡುವ.., ಒಂದೇ ನಿಮಿಷದೊಳಗೆ ಮನುಷ್ಯನಿಗೆ ಮುಕ್ತಿ ನೀಡುವ ಯಂತ್ರ ಬಳಸಲು ಸ್ವಿಟ್ಜರ್ಲೆಂಡ್ ಸರ್ಕಾರ ಮುಂದಾಗಿದೆ. ವೃದ್ಧಾಪ್ಯ, ಅನಾರೋಗ್ಯ ಅಥವಾ ಇನ್ನಿತರೆ ಕಾರಣಗಳಿಂದಾಗಿ ಇಹಲೋಕ ತ್ಯಜಿಸಬೇಕು ಎಂದು ಇಚ್ಛಿಸಿದವರಿಗಾಗಿ ಈ ಸೂಸೈಡ್ ಪಾಡ್ ಬಳಕೆ ಮಾಡಲು ಸ್ವಿಟ್ಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಬಾರಿಗೆ ಹೊಸ ಪೋರ್ಟಬಲ್ ಸೂಸೈಡ್ ಪಾಡ್ (Portable Suicide Pod) ಅನ್ನು ಬಳಸಬಹುದಾದ ಸಾಧ್ಯತೆಗಳ ಬಗ್ಗೆ ಸ್ವಿಟ್ಜರ್ಲೆಂಡ್ ಸರ್ಕಾರ ಚಿಂತಿಸುತ್ತಿದ್ದು, ಕೆಲವೇ ತಿಂಗಳೊಳಗೆ ಇದು ಬಳಕೆಗೆ ಬರುವ ಸಾಧ್ಯತೆ ಇದೆ ಎಂದಿದೆ. ವೈದ್ಯಕೀಯ ನೆರವು ಇಲ್ಲದೆಯೇ, ಯಾವುದೇ ಮೇಲ್ವಿಚಾರಣೆಯಿಲ್ಲದೆ ವ್ಯಕ್ತಿಯು ನಿಷ್ಪ್ರಾ ಣನಾಗಲು ಈ ಪಾಡ್ ಸಹಕಾರಿಯಾಗಲಿದೆ. ಸಾಯಲು ಮುಂದಾದವರು 20 ಡಾಲರ್ ನೀಡಿ ಈ ಸಾರ್ಕೋ ಪಾಡ್ ಬುಕ್ ಮಾಡಿಕೊಳ್ಳಬಹುದು. ಅಂದಹಾಗೆ ಯಾರು ಬೇಕಾದರೂ ಈ ಸಾವಿನ ಪೆಟ್ಟಿಗೆ ಪ್ರವೇಶಿಸುವಂತಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಮಾನಸಿಕ ಸಂತುಲತೆ ಹೊಂದಿರಬೇಕು. ಓರ್ವ ವ್ಯಕ್ತಿ ಸೈಕಿಯಾಟ್ರಿಕ್ ಪರೀಕ್ಷೆಗಳನ್ನು ಎದುರಿಸಿದ ನಂತರ ಈ…
ಕೆಎಸ್ ಆರ್ ಬೆಂಗಳೂರು ಭಾಗದ ಮಧ್ಯದಲ್ಲಿರುವ ಸೇತುವೆಯ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಜುಲೈ 30, ಆಗಸ್ಟ್ 6 ಮತ್ತು 13ರಂದು ಕೆಎಸ್‌ಆರ್ ಬೆಂಗಳೂರು -ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಜುಲೈ 31, ಆಗಸ್ಟ್ 7 ಮತ್ತು 14 ರಂದು, ಡಾ., ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ -ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಮಾಡಲಾಗಿದೆ. ಜುಲೈ 30, ಆಗಸ್ಟ್ 6 ಮತ್ತು 13 ರಂದು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ -ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ವೈಟ್ಫೀಲ್ಡ್- ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ನಾಂದೇಡ್ ನಿಲ್ದಾಣದಿಂದ ಹೊರಡುವ ರೈಲು ನಾಂದೇಡ್ -ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲು ಯಲಹಂಕ ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ…
ಬೆಂಗಳೂರಿನ ಗಾಂಧಿನಗರದ ಹೋಟೆಲ್ ಕಾನಿಷ್ಕ ಸಭಾಂಗಣದಲ್ಲಿ ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷರು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರು ಆದ ಡಾ. ಎಂ. ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಸಭೆ ನಡೆಯಿತು. ಈ ಸಭೆಯು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಎಸ್.ಸಿ.ಪಿ./ಟಿ.ಎಸ್.ಪಿ. ಹಣದ ದುರುಪಯೋಗದ ವಿರುದ್ಧ ಹೋರಾಟದ ಕುರಿತು ನಡೆಯಿತು. ಈ ಮಹತ್ವದ ಚರ್ಚೆಯಲ್ಲಿ ಆರ್.ಪಿ.ಐ. ರಾಷ್ಟ್ರೀಯ ಸಮಿತಿ ಸದಸ್ಯರಾದ ಎ. ಬಿ. ಹೊಸಮನಿ, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ರಾಜ್ಯ ಕಾರ್ಯಾಧ್ಯಕ್ಷ ಡಾ. ಜಿ. ಗೋವಿಂದಯ್ಯ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಿ. ಸಿ. ವೆಂಕಟರಮಣಪ್ಪ, ರಾಜ್ಯ ಖಜಾಂಚಿ ಡಾ. ಆರ್. ಚಂದ್ರಶೇಖರ್, ಯುವ ಘಟಕ ರಾಜ್ಯಾಧ್ಯಕ್ಷ ಜಿ. ಪಿ. ಪ್ರಶಾಂತ್, ಯುವ ಘಟಕ ಪ್ರಧಾನ ಕಾರ್ಯದರ್ಶಿ ದಲಿತ ಚಳುವಳಿ ನಾಗೇಶ್, ಮಹಿಳಾ ರಾಜ್ಯಾಧ್ಯಕ್ಷೆ ರೂಪಕಲಾ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗರತ್ನ, ವಾಲ್ಮೀಕಿ ರಾಜ್ಯ ಮುಖಂಡರು ಅರವಿಂದ, ಪ್ರತಾಪ್ ಮದಕರಿ, ನಾಗೇಶ್, ಅಹಿಂದ ವೇದಿಕೆ ರಾಜ್ಯಾಧ್ಯಕ್ಷ ಮುತ್ತುರಾಜ್, ಸ್ವಾಭಿಮಾನಿ…
ನಿಮ್ಮ ವಾಹನದ ವಿಂಡ್ಸ್ಕ್ರೀನ್ ಮೇಲೆ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ಅನ್ನು ನೀವು ಸರಿಪಡಿಸದಿದ್ದರೆ, ನೀವು ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಮಾರ್ಗಸೂಚಿಗಳ ಪ್ರಕಾರ ಸುಸ್ತಿದಾರರನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಮುಂಭಾಗದ ವಿಂಡ್ಶೀಲ್ಡ್ನಲ್ಲಿ ಫಾಸ್ಟ್ಟ್ಯಾಗ್ ಅಂಟಿಸದಿದ್ದರೆ ದುಪ್ಪಟ್ಟು ಬಳಕೆದಾರ ಶುಲ್ಕವನ್ನು ವಿಧಿಸಲು ಎಲ್ಲಾ ಬಳಕೆದಾರರ ಶುಲ್ಕ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿದಾರರಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (ಎಸ್ಒಪಿ) ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ಟಿಎಚ್) ಗುರುವಾರ ತಿಳಿಸಿದೆ. ಈ ಮಾಹಿತಿಯನ್ನು ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುವುದು, ಮುಂಭಾಗದ ವಿಂಡ್ಶೀಲ್ಡ್ನಲ್ಲಿ ಸ್ಥಿರ ಫಾಸ್ಟ್ಟ್ಯಾಗ್ ಇಲ್ಲದೆ ಟೋಲ್ ಲೇನ್ಗೆ ಪ್ರವೇಶಿಸದಿದ್ದರೆ ದಂಡದ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. “ಶುಲ್ಕ ಪ್ಲಾಜಾದಲ್ಲಿ ವಾಹನ ನೋಂದಣಿ ಸಂಖ್ಯೆಯೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಫಾಸ್ಟ್ಟ್ಯಾಗ್ ಮಾಡದ ಪ್ರಕರಣಗಳಲ್ಲಿ ದಾಖಲಿಸಲಾಗುವುದು. ಇದು ವಿಧಿಸಿದ ಶುಲ್ಕ ಮತ್ತು ಟೋಲ್ ಲೇನ್ನಲ್ಲಿ ವಾಹನದ ಉಪಸ್ಥಿತಿಯ ಸರಿಯಾದ…
ಔರಾದ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ಔರಾದ ತಾಲೂಕು ವತಿಯಿಂದ ಜುಲೈ 20ರ ಶನಿವಾರ ಪಟ್ಟಣದ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್ ತಾಲೂಕು ಅಧ್ಯಕ್ಷ ಸಂತೋಷ ಚಾಂಡೇಶ್ವರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಹಾಗೂ ಹಣೇಗಾಂವ ಶಂಕರಲಿಂಗ ಶಿವಾಚಾರ್ಯ ಸ್ವಾಮಿಜಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಶಾಸಕ ಪ್ರಭು ಚವ್ಹಾಣ,ಅಧ್ಯಕ್ಷ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ಚಂದ್ರಶೇಖರ ಜಿ., ಮುಖ್ಯ ಅತಿಥಿಗಳಾಗಿ ಭಾಲ್ಕಿ ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಸ್ವಾಮಿ ನಕಿರೆಕಂಟಿ, ತಹಶೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಇಒ ಬಿರೇಂದ್ರಸಿಂಗ್ ಠಾಕೂರ್, ತಾಪಂ ಎಡಿ ಶಿವಕುಮಾರ ಘಾಟೆ, ಅನೀಲಕುಮಾರ ದೇಶಮುಖ ಹಿರಿಯ ಪತ್ರಕರ್ತರು, ವಿಶೇಷ ಉಪನ್ಯಾಸ ಸದಾನಂದ ಜೋಶಿ ಹಿರಿಯ ಸಂಪಾದಕರು, ಪ್ರಾಸ್ತಾವಿಕ ನುಡಿ ಸಂತೋಷ ಚಾಂಡೇಶ್ವರೆ ಮಾಡಲಿದ್ದಾರೆ. ವಿವಿಧ ಸಂಸಘ ಸಂಸ್ಥೆಯ ಮುಖಂಡರು ಸಾರ್ವಜನಿಕರು ಮತ್ತು ವಿವಿಧ…