Author: admin

ಉತ್ತರ ಪ್ರದೇಶದ ಗೊಂಡಾ ಬಳಿ ಚಂಡೀಗಢ– ದಿಬ್ರುಗಢಕ್ಕೆ ತೆರಳುತ್ತಿದ್ದ ಎಕ್ಸ್‌’ಪ್ರೆಸ್‌ ಪ್ರಯಾಣಿಕ ರೈಲಿನ ಹಲವು ಬೋಗಿಗಳು ಗುರುವಾರ ಹಳಿತಪ್ಪಿದ್ದು, ಪರಿಣಾಮವಾಗಿ 4 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ, ಮೋತಿಗಂಜ್‌–- ಜಿಲ್ಹಾಹಿ ರೈಲು ನಿಲ್ದಾಣಗಳ ನಡುವೆ 15904 ಸಂಖ್ಯೆಯ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ್ದು, ಈ ವೇಳೆ ರೈಲಿನ ಹಲವು ಬೋಗಿಗಗಳಿಗೆ ಹಾನಿಯಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಚರಣೆ ಮುಂದುವರಿದಿದೆ. ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು. ಈ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಿಎಂ ಯೋಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಶಾನ್ಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಕೊರಟಗೆರೆ: ಮುಖ್ಯಮಂತ್ರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿ ಎಲ್ಲಾ ಅಧಿಕಾರಿಗಳು ಕ್ಷೇತ್ರದಲ್ಲಿದ್ದು ಕೆಲಸ ಮಾಡಬೇಕು ಎಂಬ ನಿರ್ದೇಶನದ ಮೇಲೆಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಸಭೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಬೇಕೆಂಬ ಆದೇಶದ ಅನ್ವಯ ಕೊರಟಗೆರೆ ತಾಲೂಕಿನ ಗ್ರಾಮೀಣ ಭಾಗದ ಎಲ್ಲಾ ಕಾಮಗಾರಿಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಬಂದಿದ್ದೇನೆ, ತಾಲೂಕು ಮಟ್ಟದ ಅಧಿಕಾರಿಗಳು ಜನರ ಪರವಾಗಿ ನಿಂತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ನಿವೇಶನ ಹಂಚಿಕೆ ಪ್ರದೇಶ, ಬಿಸಿಎಂ ಹಾಸ್ಟೆಲ್ ಬಳಿ ಗಿಡ ನೆಟ್ಟು ಹಸಿರು ಗ್ರಾಮಕ್ಕೆ ಚಾಲನೆ, ಮಾವತ್ತೂರು ಗ್ರಾಮ ಪಂಚಾಯತಿ…

Read More

ಬೆಂಗಳೂರು–ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಈ ಮಾರ್ಗದ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲಿಗೆ ಮತ್ತೊಂದು ನಿಲುಗಡೆ ನೀಡಲು ಈಗ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ. ಬೆಂಗಳೂರು– ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಾದಗಿರಿಯಲ್ಲಿ ನಿಲ್ಲಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಈಗ ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಜುಲೈ 20 ರಿಂದ ಬೆಂಗಳೂರು ನಗರದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ರೈಲು ಯಾದಗಿರಿಯಲ್ಲಿ ನಿಲ್ಲಲಿದೆ. ವಂದೇ ಭಾರತ್ ರೈಲನ್ನು ಯಾದಗಿರಿಯಲ್ಲಿ ನಿಲ್ಲಿಸುವ ಕುರಿತು ರಾಯಚೂರು ಸಂಸದ ಜಿ. ಕುಮಾರ್ ನಾಯಕ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕಲಬುರಗಿ-ಎಸ್‌ಎಂವಿ ಬೆಂಗಳೂರು ನಡುವೆ ರೈಲು ಸಂಖ್ಯೆ 22231 ಮತ್ತು ಎಸ್‌ಎಂವಿ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಖ್ಯೆ 22232 ರೈಲು ಸಂಚಾರ ನಡೆಸುತ್ತಿದೆ. ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ವಂದೇ ಭಾರತ್ ರೈಲು ಸಂಚರಿಸುತ್ತದೆ. ಈಗ…

Read More

ಸಂಗೀತವು ಮನಸ್ಸಿಗೆ ಆನಂದ ನೀಡುವ ಮಾಧ್ಯಮವಾಗಿದ್ದು, ಪ್ರತಿ ಕಡೆಯಲ್ಲಿಯೂ ಜನರು ತಮ್ಮ ಇಷ್ಟದ ಹಾಡುಗಳನ್ನು ಆನಂದಿಸುತ್ತಾರೆ. ಇತ್ತೀಚೆಗೆ, ಮದ್ಯಪಾನ ಪ್ರಿಯರಿಗೆ ಸಮರ್ಪಿತವಾದ ಒಂದು ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಹಾಡು ಮಾತ್ರವೇ ಅಲ್ಲ, ಅದರ ವರ್ಣನೆ, ಪದಗಳ ಜೋಡಣೆ, ಹಾಗೂ ಸಂಗೀತದ ಕೌಶಲವನ್ನು ನೆಟ್ಟಿಗರು ಹೆಚ್ಚು ಮೆಚ್ಚಿದ್ದಾರೆ. ಈ ಹಾಡಿನ ವಿಶೇಷತೆ ಏನೆಂದರೆ, ಅದರ ಪದಗಳು ಮತ್ತು ಸಂಗೀತವು ಕೇವಲ ಮನಸ್ಸಿಗೆ ಮಾತ್ರವೇ ಅಲ್ಲ, ಹೃದಯಕ್ಕೂ ತಲುಪುತ್ತದೆ. ಹಾಡಿನಲ್ಲಿ ಮದ್ಯಪಾನದ ಅನುಭವವನ್ನು ವಿಭಿನ್ನ ರೀತಿಯಲ್ಲಿ ವಿವರಿಸಲಾಗಿದೆ. ಹಾಡಿನ ರಚನೆ, ಧ್ವನಿಮುದ್ರಣ ಹಾಗೂ ಕಲಾವಿದರ ಗಾಯನ ಶೈಲಿ ಎಲ್ಲವೂ ಸೇರಿ, ಇದನ್ನು ಒಂದು ಸೂಪರ್ ಹಿಟ್ ಹಾಡಾಗಿ ಮಾಡಿದೆ. ಹಾಡು ಬಿಡುಗಡೆಯಾದ ನಂತರ, ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸೆನ್ಸೇಷನ್ ಆಗಿ ಪರಿಣಮಿಸಿತು. ಜನರು ತಮ್ಮ ಪ್ರಿಯ ಸಂಗಾತಿಗಳ ಜೊತೆ, ಸ್ನೇಹಿತರು, ಮತ್ತು ಕುಟುಂಬದವರ ಜೊತೆ ಈ ಹಾಡನ್ನು ಆನಂದಿಸುತ್ತಿದ್ದಾರೆ. ಇಂತಹ ಒಂದು ಹಾಡು ಮದ್ಯಪಾನ ಪ್ರಿಯರಿಗೆ…

Read More

ತುಮಕೂರು: ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಹೋಬಳಿ ಜೋಡಿ ಗಟ್ಟೆ ಗ್ರಾಮದ ಬಳಿ ಸರ್ಕಾರಿ ಬಸ್ಸು ಮತ್ತು ಇನ್ನೋವಾ ಕಾರ್ ನಡುವೆ ನಡೆದ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನೋವಾ ಕಾರಿನ ಚಾಲಕನ ಆಚಾತುರ್ಯವೇ ಈ ಒಂದು ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಪರಿಶೀಲನೆ ನಡೆಸಿದರು. ಅಲ್ಲದೆ ಕೂಡಲೇ ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ತುಮಕೂರು ಜಿಲ್ಲೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಘಟನೆ ಸಂಬಂಧಿಸಿದಂತೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಪಾನೀಯ ಇದು.ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು. ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ. ತಜ್ಞರ ಪ್ರಕಾರ ಒಬ್ಬ ವ್ಯಕ್ತಿ 400 ಮಿಲಿ ಗ್ರಾಂಗಿಂತ ಹೆಚ್ಚು ಕೆಫೀನ್ ಅನ್ನು ಸೇವಿಸಬಾರದು. ಇದು ಸರಿಸುಮಾರು 4 ಕಪ್ ಕಾಫಿಗೆ ಸಮನಾಗಿರುತ್ತದೆ. ಗರ್ಭಿಣಿಯರು ಕಡಿಮೆ ಕಾಫಿ ಕುಡಿಯಬೇಕು, ಏಕೆಂದರೆ ಇದು ಗರ್ಭಪಾತ ಅಥವಾ ಕಡಿಮೆ ತೂಕದ ಮಗುವಿನ ಜನನಕ್ಕೆ ಕಾರಣವಾಗಬಹುದು. ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಮೂರು ಕಪ್ ಕಾಫಿ ಸೇವಿಸಬಹುದು. ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ 300 ಮಿಲಿಗ್ರಾಂಗಳಷ್ಟು (mg) ಕೆಫೀನ್ ಅನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಸರಿಸುಮಾರು, ಒಂದು ಕಪ್ ಕಾಫಿ 95-100 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಆದ್ದರಿಂದ,…

Read More

ಔರಾದ: ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜು.19ರಂದು ಬೆಳಗ್ಗೆ 10:30  ಗಂಟೆಗೆ ಕರ್ನಾಟಕ ಕಾಯ೯ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿ ದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತದಾರ್ ತಿಳಿಸಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು,  ಹಿರೇಮಠ ಸಂಸ್ಥಾನದ ಶ್ರೀಗಳಾದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸುವರು. ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಶಾಸಕ ಪ್ರಭು ಚವ್ಹಾಣ ಸಸಿ ನೆಡುವ ಮೂಲಕ ಚಾಲನೆ ನೀಡುವರು. ತಹಶೀಲ್ದಾರ್ ಮಲ್ಲಿಶೆಟ್ಟಿ ಚಿದ್ರೆ, ತಾ ಪಂ ಇಓ ಬಿರೇಂದ್ರಸಿಂಗ್ ಠಾಕೂರ್,  ಸಹಾಯಕ ನಿದೇ೯ಶಕ ಶಿವಕುಮಾರ ಘಾಟೆ, ಸಿಪಿಐ ರಘುವೀರಸಿಂಗ್ ಠಾಕೂರ್ ಮತ್ತಿತರ ಗಣ್ಯರು ಪಾಲ್ಗೊಳ್ಳುವರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಕೊರಟಗೆರೆ: ಇತಿಹಾಸ ಪ್ರಸಿದ್ಧವುಳ್ಳ ಬೆಟ್ಟದ ತಿಮ್ಮಪ್ಪ, ಆಂಜನೇಯನಿಗೆ ಏಕಾದಶಿಯ ವಿಶೇಷ ಪೂಜೆ ನಡೆಯಿತು. ಪ್ರತಿ ವರ್ಷ ಆಷಾಢ ಏಕಾದಶಿ ಯಂದು ಈ ಗ್ರಾಮದ ಹಿಂದೂ ಸಾದರ ಸಮುದಾಯದ ಜನಾಂಗವು ವಾಡಿಕೆಯಂತೆ ಪ್ರತಿ ಮನೆಯಿಂದ ಮಡಿಯಿಂದ ದೇವರ ನೈವೇದ್ಯದ ಬುತ್ತಿಯನ್ನು ಸಿದ್ಧಪಡಿಸಿ ಬುತ್ತಿಗೆ ಪೂಜೆ ಸಲ್ಲಿಸಿ ಬೆಟ್ಟಕ್ಕೆ ಹೊತ್ತುಕೊಂಡು ಹೋಗಿ ಬೆಟ್ಟದ ಮೇಲಿರುವ ಆಂಜನೇಯ ಹಾಗೂ ತಿಮ್ಮಪ್ಪ ದೇವರಿಗೆ ನೈವೇದ್ಯ ಅರ್ಪಿಸಿದರು. ಕೊರಟಗೆರೆ ತಾಲೂಕಿನ ಬೋಡಬಂಡೆನಹಳ್ಳಿ ಗ್ರಾಮದ ಬೆಟ್ಟದ ಮೇಲೆ ಗುಹೆಯಲ್ಲಿ ನೆಲೆಸಿರುವ ಆಂಜನೇಯ ಹಾಗೂ ತಿಮ್ಮಪ್ಪ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬರಿ ಬಂಡೆಯ ಮೇಲೆ ಪ್ರಸಾದ ಸೇವಿಸಿದರು. ಇತಿಹಾಸ ಉಳ್ಳ ಬೆಟ್ಟಕ್ಕೆ ಹೋಗಲು ರಸ್ತೆ ಸರಿ ಇಲ್ಲದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಹಾಗೂ ಗುಹೆಯಲ್ಲಿರುವ ದೇವರ ಸನ್ನಿಧಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವಂತೆ ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಭಕ್ತರು ಮನವಿ ಮಾಡಿದರು. ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಜಿಟಿ ಮಾಲ್ ನಲ್ಲಿ ಇತ್ತೀಚೆಗೆ ಪಂಚೆ ಉಟ್ಟುಕೊಂಡು ಬಂದ ಕಾರಣಕ್ಕೆ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಘಟನೆ ಈಗ ಸದನದಲ್ಲೂ ಪ್ರಸ್ತಾಪವಾಗಿದೆ. ಈ ಬಗ್ಗೆ ಎಲ್ಲಾ ಶಾಸಕರೂ ಪ್ರಸ್ತಾಪ ಮಾಡಿದ್ದು ಮಾಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದ್ದಾರೆ. ಮೊನ್ನೆಯಷ್ಟೇ ಹಾವೇರಿ ಜಿಲ್ಲೆಯ ರೈತರೊಬ್ಬರು ಪಂಚೆ ಉಟ್ಟುಕೊಂಡು ತಮ್ಮ ಮಗನ ಜೊತೆ ಸಿನಿಮಾ ನೋಡಲು ಜಿಟಿ ಮಾಲ್ ಗೆ ಬಂದಿದ್ದಾಗ ಅವರ ಡ್ರೆಸ್ ನೋಡಿ ಒಳಗೆ ಬಿಟ್ಟುಕೊಳ್ಳದೇ ಮಾಲ್ ಸಿಬ್ಬಂದಿ ಅವಮಾನಿಸಿದ್ದರು. ಈ ಬಗ್ಗೆ ಅವರ ಪುತ್ರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿದ್ದರು. ಇದು ಬೆಳಕಿಗೆ ಬರುತ್ತಿದ್ದಂತೇ ಕೆಲವು ಕನ್ನಡ ಸಂಘಟನೆಗಳು ಮಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲ, ರೈತನನ್ನು ಕರೆದುಕೊಂಡು ಮಾಲ್ ಸಿಬ್ಬಂದಿಯಿಂದ ಕ್ಷಮೆ ಕೇಳಿಸಿದ್ದರು. ಬಳಿಕ ಮಾಲ್ ಇನ್ ಚಾರ್ಜ್ ಕ್ಷಮೆ ಕೇಳಿ ಸನ್ಮಾನಿಸಿ ಕಳುಹಿಸಿದ್ದರು. ಈ ಘಟನೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಇಂದು ಸದನದಲ್ಲೂ ಈ ವಿಚಾರ ಚರ್ಚೆಯಾಗಿದೆ.…

Read More

ಕೊರಟಗೆರೆ ತಾಲೂಕಿನ ಪುಣ್ಯಕೋಟಿ ಫ್ಯಾಕ್ಟರಿಯಲ್ಲಿ ನಡೆದ ಬಾಯ್ಲರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮತುಮಕೂರು ವಾಹಿನಿಯ ವರದಿಯ ಬೆನ್ನಲ್ಲೇ ಅಧಿಕಾರಿ ವರ್ಗ ಎಚ್ಚೆತ್ತುಕೊಂಡಿದ್ದು,  ಯಾವ ಇಲಾಖೆಯಿಂದಲೂ ಅನುಮತಿ ಪಡೆಯದೆ ಅನಧಿಕೃತ ಪುಣ್ಯಕೋಟಿ ಫ್ಯಾಕ್ಟರಿ ಮಾಲೀಕನಿಗೆ  ಸಂಬಂಧಪಟ್ಟ ಇಲಾಖೆಗಳಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಫ್ಯಾಕ್ಟರಿಯಲ್ಲಿ  ಹಾಲು  ಮಾರಾಟಕ್ಕೆ ಮಾತ್ರವೇ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಇಲ್ಲಿ ಮಸಾಲೆ ಮಜ್ಜಿಗೆ ಹಾಗೂ ಪೇಡ, ಜಾಮೂನ್ ಫ್ಯಾಕ್ಟರಿ ನಡೆಸಲಾಗುತ್ತಿದೆ. ಅದೂ ಅಲ್ಲದೇ  ಯಾವುದೇ ಭದ್ರತೆ ಇಲ್ಲದೆ  ಮನೆಯೊಳಗೆ ದೊಡ್ಡ ದೊಡ್ಡ ಮಿಷನ್ ಗಳ ಅಳವಡಿಸಿ ಬಳಕೆ ಮಾಡಲಾಗುತ್ತಿದೆ. ಮನೆಯೊಳಗೆ ಫ್ಯಾಕ್ಟರಿ ತೆಗೆಯಲು ಅನುಮತಿ ಕೊಟ್ಟವರು ಯಾರು..???   ಹಣದ ಆಮಿಷಕ್ಕೆ ಅನುಮತಿ  ಕೊಟ್ಟರೆ ಸಂಬಂಧಪಟ್ಟ   ಅಧಿಕಾರಿಗಳು ?  ಅನಧಿಕೃತ ಫ್ಯಾಕ್ಟರಿ ಎಂದು ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಯಾಕೆ?  ಇಷ್ಟೆಲ್ಲ ಅನಾಹುತವಾದರು ಮಾಲೀಕನ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ..? ಎನ್ನುವ ಪ್ರಶ್ನೆಗಳು ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ. ಪಾಲಿಸಬೇಕಾದ ನಿಯಮಗಳು ಗಾಳಿಗೆ ತೂರಿ 15 ವರ್ಷದಿಂದ ಮಾಲಿಕ ಫ್ಯಾಕ್ಟರಿ…

Read More