Author: admin

ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ‌ ನಿರ್ದೇಶಕನನ್ನ ಸಿಸಿಬಿ ಅರೆಸ್ಟ್ ಮಾಡಿದೆ. ಸ್ಯಾಂಡಲ್ ವುಡ್ ಸಿನಿ ನಿರ್ದೇಶಕ ಗಜೇಂದ್ರ @ ಗಜ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪೊಲೀಸರ ಕೈಗೆ ಸಿಗದೇ ಗಜೇಂದ್ರ ಒಡಾಡಿಕೊಂಡಿದ್ದ. 2004 ರಲ್ಲಿ ನಡೆದಿದ್ದ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಶೀಟರ್ ಕೊತ್ತರವಿ ಮರ್ಡರ್ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆಗಿದ್ದ. ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರ್ಲಿಲ್ಲ. ಅರಸಯ್ಯನ ಶಿಷ್ಯ ಗಜೇಂದ್ರ@ ಗಜ ಪುಟಣಿಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿದ್ದನಾಂತೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಗಜ ಹೇಳಿಕೊಂಡಿದ್ದ. ಸದ್ಯ ಸಿಸಿಬಿ ಪೊಲೀಸ್ರು ಗಜೇಂದ್ರನನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್…

Read More

ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ದೂರು ಕೊಟ್ಟಿದ್ದ ಬ್ಯಾಂಕ್ ಸಿಬ್ಬಂದಿ ಕಳ್ಳಾಟ ಬಯಲಾಗಿದೆ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ. ಹೌದು, ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು ಎಟಿಎಂ ಕಳ್ಳತನ ಮಾಡಿದ್ದ ಕೇಸ್​ ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಎಟಿಎಂಗೆ ಹಣ ಹಾಕದೇ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ  ಕಥೆ ಕಟ್ಟಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52), ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36), ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತರು ಎನ್ನಲಾಗಿದೆ. ಬೆಳ್ಳಂದೂರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ…

Read More

ಜಮ್ಮು ಕಾಶ್ಮೀರದಲ್ಲಿ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರಪಾತಕ್ಕೆ ಕಾರು ಬಿದ್ದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದು ಒಬ್ಬರಿಗೆ ಗಾಯಗಳಾಗಿದೆ. ಒಂದೇ ಕುಟುಂಬದ ತಂದ್ರ ದಾಸ್(67), ಮೊನಾಲಿಸಾ ದಾಸ್(41), ಮತ್ತೊಬ್ಬ ಪುರುಷ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9)ಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೃತರು ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದಾರೆ. ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ದುರ್ಘಟನೆ ಸಂಭವಿಸಿದೆ. ಮೃತರು ಜಮ್ಮು ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಎದುರಿಗಿದ್ದ ಕಾರೊಂದು ಕೆಟ್ಟು ನಿಂತಿತ್ತು, ಈ ವೇಳೆ ಅದನ್ನು ನೋಡಲು ಚಾಲಕ ಕಾರಿನಿಂದ ಇಳಿದಿದ್ದನು. ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ, ಹೀಗಾಗಿ ಕಾರು ಪ್ರಪಾತಕ್ಕೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ…

Read More

ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಯಮಿತ(ಡಿಡಿಯುಟಿಟಿಎಲ್)ದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಿಯಮಿತದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರನ್ನು ಜು.30ರವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಿ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಡಿ.ಎಸ್.ವೀರಯ್ಯ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಮಾಹಿತಿ ಪಡೆದ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಮತ್ತೊಂದೆಡೆ ಡಿ.ಎಸ್.ವೀರಯ್ಯ ಅವರ ಪರ ವಕೀಲ ಶ್ಯಾಮ್‍ ಸುಂದರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. 2021–23ರ ನಡುವಿನ ಅವಧಿಯಲ್ಲಿ ಡಿ.ಎಸ್.ವೀರಯ್ಯ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಯಮಿತ(ಡಿಡಿಯುಟಿಟಿಎಲ್)ದ ಅಧ್ಯಕ್ಷರಾಗಿದ್ದಾಗ 47.10 ಕೋಟಿ ರೂ. ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ನಿಯಮಿತದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಸಾದ್ ಅವರು ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುಮಾರು 2 ಕೋಟಿ ರೂ.…

Read More

ಆಹಾರವು ಆಕರ್ಷಕವಾಗಿ ಕಾಣುವುದರಿಂದ ಮತ್ತು ಕಣ್ಣಿಗೆ ಚೆಂದ ಎನ್ನಿಸುವುದ್ರಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಈ ಆಹಾರಗಳನ್ನ ತಿನ್ನಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ಹೆಚ್ಚು ಹೆಚ್ಚು ಜನರು ಅಂತಹ ಆಹಾರದ ಬಣ್ಣ ಮತ್ತು ರುಚಿಯನ್ನು ಇಷ್ಟಪಡುತ್ತಾರೆ. ಇದರಿಂದಾಗಿ ಬಹುತೇಕ ಹೊಟೇಲ್ ಗಳಲ್ಲಿ ಕೃತಕ ಆಹಾರದ ಬಣ್ಣಗಳನ್ನು ವ್ಯಾಪಕವಾಗಿ ಬಳಸಲಾರಂಭಿಸಿದೆ. ಈ ಆಹಾರ ಬಣ್ಣಗಳ ಸಹಾಯದಿಂದ ಮಾಡಿದ ಭಕ್ಷ್ಯವು ಖಂಡಿತವಾಗಿಯೂ ಸುಂದರವಾಗಿ ಕಾಣುತ್ತದೆ. ಅದೇ ಸಮಯದಲ್ಲಿ ಇದು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲಿ ಲಭ್ಯವಿರುವ ಹೆಚ್ಚಿನ ಆಹಾರಗಳನ್ನು ಆಕರ್ಷಕವಾಗಿಸಲು ಕೃತಕ ಆಹಾರ ಬಣ್ಣಗಳನ್ನು ಬಳಸಲಾಗುತ್ತದೆ. ಆದರೆ ಸುಂದರವಾಗಿ ಕಾಣುವ ಈ ಬಣ್ಣಗಳು ನಿಧಾನ ವಿಷವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಕೃತಕ ಆಹಾರ ಬಣ್ಣಗಳು ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿ ಮಾಡುತ್ತದೆ ಎಂಬುದನ್ನು ಇಂದು ಕಂಡುಹಿಡಿಯೋಣ. ಚರ್ಮ ಮತ್ತು ಕೂದಲಿಗೆ ಹಾನಿ : ಕೃತಕ ಆಹಾರ ಬಣ್ಣಗಳಿಂದ ತಯಾರಿಸಿದ ಆಹಾರವನ್ನ ಸೇವಿಸುವುದರಿಂದ ಕೂದಲು ಮತ್ತು ಚರ್ಮಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಹಲವಾರು…

Read More

ಮಾನ್ಸೂನ್ ಸಮಯದಲ್ಲಿ ಮೀನು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ ನೀವು ಇದನ್ನು ತಿನ್ನೋದಿಲ್ಲ. ಈಗ ಮಳೆಗಾಲದಲ್ಲಿ ಮೀನು ತಿನ್ನುವುದರಿಂದ ಆಗುವ ತೊಂದರೆಗಳ ಬಗ್ಗೆ ತಿಳಿಯೋಣ. ಮಳೆಗಾಲದಲ್ಲಿ ಮೀನುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಈ ಸಮಯದಲ್ಲಿ ಮೊಟ್ಟೆಯೊಂದಿಗೆ ಮೀನು ತಿನ್ನುವುದರಿಂದ ಹೊಟ್ಟೆಯ ಸೋಂಕು ಉಂಟಾಗುತ್ತದೆ. ಇದರಿಂದ ಆಹಾರ ವಿಷವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮಳೆಗಾಲದಲ್ಲಿ ಮೀನು ತಿಂದರೆ ವಾಸಿಯಾಗದ ಕಾಯಿಲೆಗಳು ಬರುತ್ತವೆ. ಏಕೆಂದರೆ ಮಳೆಗಾಲದಲ್ಲಿ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇವುಗಳಲ್ಲಿ ಬೆಳೆದ ಮೀನುಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮಳೆಗಾಲದಲ್ಲಿ ಜಲಮೂಲಗಳಲ್ಲಿ ಬದಲಾಗುವ ಹವಾಮಾನದಿಂದಾಗಿ, ನೀರಿನಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಪರಾವಲಂಬಿಗಳು ಹೆಚ್ಚಾಗುತ್ತವೆ. ಅಂತಹ ಮೀನುಗಳನ್ನು ತಿನ್ನುವುದರಿಂದ ಅತಿಸಾರ, ಹೊಟ್ಟೆ ನೋವು, ತೂಕ ನಷ್ಟ ಮತ್ತು ಆಯಾಸದಂತಹ ಸಮಸ್ಯೆಗಳು ಉಂಟಾಗಬಹುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…

Read More

ಔರಾದ: ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮಸ್ಥರು  ಹಾಗೂ ಮಾಹಾರಾಜವಾಡಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹಲವು ವರ್ಷಗಳಿಂದಲೂ‌ ನಡೆದುಕೊಂಡ ಬಂದ ಸಂಪ್ರದಾಯದಂತೆ ಅಲಾವಿ ಕುಣಿತ , ಮಜುನು ಕುಣಿತ , ಪೈತ್ರಿ ಪದ , ಹಾಡುತ ಕುಣಿಯುತ  ಗ್ರಾಮದ ಜನರು ಶ್ರದ್ಧಾ ಭಕ್ತಿಯಿಂದ ತಮ್ಮ ಇಷ್ಠಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿಕೊಂಡರು. ಹೂವಿನ ಹಾರ,  ತೆಂಗಿನ ಕಾಯಿ , ಊದುಬತ್ತಿ,  ಸಕ್ಕರೆ ಬೆಲ್, ಪಾನಕ ನೈವೇದ್ಯ ಪಿರ್ ದೇವರಿಗೆ  ಅರ್ಪಿಸಿದರು. ಈ ಮೋಹರಂ ಉತ್ಸವ ಹಿಂದು ಹಾಗೂ ಮುಸ್ಲಿಂ ಬಾಂಧವರಲ್ಲಿ ಸೌಹಾರ್ದತೆಗೆ ಸಾಕ್ಷಿಯಾಯಿತು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಸತ್ಯವತಿ ಪರಮೇಶ್ವರ ಮೆತ್ರೆ, ಗ್ರಾಮ ಪಂಚಾಯಿತಿ ಸದಸ್ಯರು ಕರಬಸಪ್ಪಾ ಸೊರಾಳೆ, ಮಾಜಿ  ಗ್ರಾಮಪಂಚಾಯತ್ ಸದಸ್ಯರು ಎಂ. ಡಿ. ನಯೂಮ್, ಬಾಬು ಮಿಯಾಕ್ ಉರೇಶಿ, ಎಂ.ಡಿ. ಆರೀಫ್, ವೈಜಿನಾಥ ವಲ್ಲಾಪುರೆ, ನಾಮದೇವ ಭಂಡಾರ, ಮಾಜಿ ಗ್ರಾಪಂ ಅಧ್ಯಕ್ಷರು ದೇವಿದಾಸ ಧೋಳ ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.…

Read More

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ. ಮೇಲ್ನೋಟಕ್ಕೆ ಭೈರವ, ಕಾಳಿ ಮತ್ತು ವೀರಭದ್ರ ಶಿಲ್ಪಗಳಿಗೆ ಹೊಂದಾಣಿಕೆಯಾಗುವ ಲಕ್ಷಣಗಳಿವೆ. ಚತುರ್ಭುಜಗಳಿದ್ದು, ಬಲ ಭಾಗದ ಮುಂಗೈನಲ್ಲಿ ಖಡ್ಗ ಮೇಲ್ಮುಖವಾಗಿ ಭುಜದ ಮೇಲಿದೆ.ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದ್ದು ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿರುವಂತ ಲಕ್ಷಣ ಶಿಲ್ಪದಲ್ಲಿ ಕಂಡುಬಂದಿದೆ. ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿಲ್ಪದಲ್ಲಿ ಯಾವುದೇ ಶಾಸನ ಕೆತ್ತನೆ ಇಲ್ಲ. ಇದು ಯಾವ ರಾಜರ ಕಾಲದ್ದು, ಮತ್ತು ಏಕೆ ಕೆತ್ತಿಸಲಾಗಿತ್ತು ಎಂಬುದರ ಕುರಿತು ಸಂಶೋಧನೆ ನಡೆಯಬೇಕಿದೆ. ಮತ್ತೊಂದೆಡೆ ಇತ್ತೀಚೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾಗಿತ್ತು. ಪ್ರೀಮಿಯರ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್​​ (CIIL) ನ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕರು ನಡೆಸಿದ ಕ್ಷೇತ್ರ…

Read More

ನಾಗಿಣಿ, ಬಿಗ್‌ ಬಾಸ್‌ ಖ್ಯಾತಿಯ ದೀಪಿಕಾ ದಾಸ್‌ ಅವರು ರೀಲ್ಸ್‌ ಮಾಡಲು ಹೋಗಿ ಕಾಲುಜಾರಿ ಬಿದ್ದು, ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌  ನಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾದ ಜಾಗದಲ್ಲಿ, ಫಾಲ್ಸ್‌ ನಲ್ಲಿ ನೀರು ಹಿಂದೆ ಝರಿಯಂತೆ ಬೀಳುತ್ತಿರುವುದು ಈ ವೀಡಿಯೋದಲ್ಲಿ ಕಾಣಬಹುದು, ಅದರ ಒಂದು ಕಡೆ ಬಂಡೆ, ಒಂದು ಕಡೆ ನೀರಿದ್ದು, ಸಣ್ಣ ಕಾಲು ದಾರಿಯಲ್ಲಿ ದೀಪಿಕಾ ದಾಸ್‌ ಅವರು ತಮ್ಮ ಕೈಯಲ್ಲಿ ಹೂವನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವಾಗಲೇ ದೀಪಿಕಾ ಕಾಲು ಸ್ಪಿಪ್‌ ಆಗಿ ಬಿದ್ದಿದ್ದು, ಕೂಡಲೇ ಅವರ ಮುಖ ಪಕ್ಕದಲ್ಲಿದ್ದ ಬಂಡೆಕಲ್ಲಿಗೆ ಹೊಡೆದಿದೆ. ರೀಲ್ಸ್‌ ಮಾಡಲು ಹೋಗಿ ದೀಪಿಕಾ ಬಿದ್ದಿದ್ದಾರೆ ಎನ್ನುವುದು ಅವರ ಟ್ಯಾಗ್ಸ್‌ನಿಂದ ಗೊತ್ತಾಗಿದೆ. ಮುಖಕ್ಕೆ ಗಾಯವಾಗಿದೆಯೇ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದೀಪಿಕಾ ದಾಸ್‌ ಹೌದು ಎಂದಿದ್ದಾರೆ. ಮುಖದ ಎಡಭಾಗಕ್ಕೆ ಗಾಯವಾಗಿದ್ದು, ಈಗ ಸುಧಾರಿಸಿಕೊಂಡಿದ್ದೀನಿ ಎಂದು ಬರೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ಸಿಲಿಕಾನ್ ಸಿಟಿಯ ಹೆಚ್ಚು ಟ್ರಾಫಿಕ್ ಜಾಮ್ ಪೀಡಿತ ರಸ್ತೆಗಳಲ್ಲಿ ಏರ್‌ ಪೋರ್ಟ್ ರೋಡ್ ಕೂಡ ಒಂದು. ಎಷ್ಟು ನಿಯಮಗಳನ್ನು ಹಾಕಿದರೂ ಕೂಡ ಅಪಘಾತ ಮತ್ತು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೇ ವೇಳೆ ಸಂಚಾರ ಪೊಲೀಸರು ಹೊಸ ರೂಲ್ಸ್ ಹಾಕಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಲೇನ್ ಅಶಿಸ್ತು ನಿವಾರಿಸಲು, ಲೇನ್ ನಿಯಮಗಳನ್ನು ಅನುಸರಿಸದವರಿಗೆ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಾಹನಗಳ ವೇಗದಿಂದಾಗಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅನೇಕ ಅಪಘಾತಗಳು ವರದಿಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆ (ಬಿಬಿ ರಸ್ತೆ — ಎನ್‌ ಎಚ್ -44) ನಲ್ಲಿರುವ ಎಲ್ಲಾ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿಗದಿತ ಲೇನ್‌ನಲ್ಲಿ ಚಲಾಯಿಸಬೇಕು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ತಪ್ಪದೆ ದಂಡ ವಿಧಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.…

Read More