Author: admin

ಬೀದರ್: ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಂಪೌಂಡ್‌ ಗೆ ಕೆಕೆಆರ್‌ ಟಿಸಿ ಬಸ್‌ ವೊಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಇಂದು (ರವಿವಾರ) ಬೆಳಿಗ್ಗೆ ಬೀದರ್‌ ನಿಂದ ಮಹಾರಾಷ್ಟ್ರದ ಉದಗೀರ್‌ ಗೆ ಹೋಗುವ ಕೆಕೆಆರ್‌ ಟಿಸಿ ಬಸ್‌, ಬೀದರ್‌ ನಿಂದ ಪ್ರಯಾಣಿಕರನ್ನು ತುಂಬಿಕೊಂಡು ಉದಗೀರ್ ಕಡೆಗೆ ಹೊರಟಿತ್ತು. ಬಸ್ ನಿಲ್ದಾಣದ 6 ರಿಂದ 7 ಕಿ. ಮೀ. ದೂರದವರೆಗೆ ಬಂದ ಬಸ್‌ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕಂಪೌಂಡ್ ಗೆ ಢಿಕ್ಕಿ ಹೊಡೆದಿದೆ.  ಬಸ್‌ ನಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ: ತಾಲೂಕು ಬಂಜಾರ ಸಂಘದ ವತಿಯಿಂದ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಬಂಜಾರ ಜಾಗೃತಿ ದಳ ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಪ್ಪಸರ್ ನಾಯ್ಕ್ ಮಾತನಾಡಿ, ಬಂಜಾರ ಸಮುದಾಯವು ಬುಡಕಟ್ಟು ಜನಾಂಗವಾಗಿದ್ದು, ಬೆಟ್ಟ ಗುಡ್ಡಗಳ ಅಕ್ಕ ಪಕ್ಕ ತಾಂಡಗಳನ್ನು ನಾವು ಕಾಣಬಹುದು ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ವಿಚಾರಗಳನ್ನು ತಿಳಿದು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿಯಾಗಬೇಕಿದೆ. ತಾಲೂಕು ಮಟ್ಟದಲ್ಲಿ ಒಂದು ಸಮುದಾಯ ಭವನ ಇಲ್ಲದೆ ಇರುವುದು ನಮಗೆ ಬೇಸರದ ಸಂಗತಿ, ಶಾಸಕರು ಹಾಗೂ ಸಚಿವರು ಆದಂತಹ ಡಾಕ್ಟರ್ ಜಿ.ಪರಮೇಶ್ವರ್ ರವರು ನಮ್ಮ ಸಮುದಾಯವನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ಒಂದು ಸಮುದಾಯ ಭವನವನ್ನು ಮಂಜೂರು ಮಾಡಿಸಿಕೊಡಬೇಕು, ಹಳ್ಳಿ ಹಳ್ಳಿಗಳಲ್ಲಿ ಇದೇ ರೀತಿ ಸಂಘಟನೆ ಮಾಡಿದರೆ ಸರ್ಕಾರಕ್ಕೆ ನಮ್ಮ ಬಲಪ್ರದರ್ಶನ ಮಾಡಬಹುದು ಎಂದರು. ನಂತರ ತಾಲೂಕು ಅಧ್ಯಕ್ಷ ಲಕ್ಷ್ಮಣ್ ನಾಯಕ್ ಮಾತನಾಡಿ, ತಾಲೂಕಿನಲ್ಲಿ…

Read More

ಕೊರಟಗೆರೆ : ನಾಗರಿಕತೆಗಳ ಕಾಲದಿಂದಲೂ ನಮ್ಮ ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ಸ್ವಚ್ಛತಾ ವಾಹನಿಗೆ ನೀಡುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹಂಚಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಭೀಮರಾಜು ತಿಳಿಸಿದರು. ತಾಲ್ಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾ.ಪಂ ವತಿಯಿಂದ ಹಂಚಿಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಸ್ವಚ್ಛತಾ ಹಿ ಸೇವಾ–೨೦೨೫ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅನೈರ್ಮಲ್ಯ ನಿವಾರಣೆಗಾಗಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಪೌರ ಕಾರ್ಮಿಕರ ಸೇವೆ ನಿಜವಾದ ದೇಶ ಸೇವೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುಂದರವಾಗಿ ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ದೇಶವೂ ಸುಂದರವಾಗಿರುತ್ತದೆ ಎಂದು ಹೇಳಿದರು. ಗ್ರಾ.ಪಂ ಪಿಡಿಓ ರಾಘವೇಂದ್ರ ಮಾತನಾಡಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಭಾರತ ಸರ್ಕಾರದ ‘‘ಸ್ವಚ್ಛತಾ ಹಿ ಸೇವಾ’’ (ಸ್ವಚ್ಛತೆಯೇ…

Read More

ಕೊರಟಗೆರೆ: ಕರ್ನಾಟಕ ರಾಜ್ಯ ಸರಕಾರದಿಂದ ಸೆ.22ರಿಂದ 15 ದಿನಗಳ ಕಾಲ ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಕಾಡುಗೊಲ್ಲ ಜನಾಂಗ ಎಂದೇ ನಮೂದಿಸುವಂತೆ ಕಾಡುಗೊಲ್ಲ ಯುವ ಸೈನ್ಯ ತಾಲೂಕು ಅಧ್ಯಕ್ಷರು ಮುತ್ತುರಾಜ್ ಹೊಸಕೋಟೆ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ಸಂಬಂಧ ಮುಂಬರುವ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದೇ ನಮೂದಿಸಬೇಕು. ಉಪ ಜಾತಿ ಕಾಲಂನಲ್ಲಿ ಉಪ ಪಂಗಡ ಬಗ್ಗೆ ಮಾಹಿತಿ ಇದೇ ನಮೂದಿಸಬೇಕು, ಇಲ್ಲದಿದ್ದರೆ ಕಾಡುಗೊಲ್ಲ ಎಂದು ನಮೂದಿಸಬೇಕು, ಯಾದವ ಎಂಬುದು ಇತ್ತೀಚಿಗೆ ಬಳಕೆಯಾಗುತ್ತಿದೆ ಅದು ನಮೂದಿಸುವುದು ಬೇಡ, ಕಾಡುಗೊಲ್ಲರಲ್ಲಿ ನಾನಾ ಪಂಗಡಗಳು ಬರುತ್ತದೆ ಎಲ್ಲರೂ ಕಾಡುಗೊಲ್ಲ ಎಂದು ನಮೂದಿಸಬೇಕು,ಜಾತಿ ಸಮೀಕ್ಷೆ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ರಾಮಕ್ಕೂ ಈ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ನಮ್ಮ ಸಮುದಾಯದ ಮುಖಂಡರುಗಳು…

Read More

ಮೈಸೂರು: ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ, ಟೈಗರ್ ನಾಗ್ ನಿರ್ದೇಶನದ “ಅಡವಿ” ಚಲನಚಿತ್ರವು ಮೈಸೂರು ದಸರಾ ಫಿಲಂ ಫೆಸ್ಟಿವಲ್‌ನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಹೌಸ್‌ಫುಲ್ ಪ್ರದರ್ಶನ ಕಂಡ ಈ ಚಿತ್ರಕ್ಕೆ ಸರ್ಕಾರದಿಂದ ಪ್ರಮಾಣ ಪತ್ರ ಪ್ರಶಸ್ತಿ ಲಭಿಸಿದೆ. ಈಗಾಗಲೇ ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ “ಅಡವಿ”, ಕರ್ನಾಟಕದ ಸಾಂಸ್ಕೃತಿಕ ನಾಡಹಬ್ಬ ದಸರಾ ಉತ್ಸವದಲ್ಲಿ ದೊರೆತ ಈ ಗೌರವದಿಂದ ಮತ್ತಷ್ಟು ಕೀರ್ತಿಗೆ ಪಾತ್ರವಾಗಿದೆ. ಪ್ರಶಸ್ತಿ ಸ್ವೀಕರಿಸಿದ ನಂತರ ಸಂತಸ ಹಂಚಿಕೊಂಡ ನಿರ್ದೇಶಕ–ನಿರ್ಮಾಪಕ ಟೈಗರ್ ನಾಗ್ ಅವರು,“ಈ ಯಶಸ್ಸಿಗೆ ಶ್ರಮಿಸಿದ ಕಲಾವಿದರು ಮತ್ತು ತಂತ್ರಜ್ಞರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಶಸ್ತಿಯನ್ನು ನಾನು ನಮ್ಮ ಪೂರ್ವಿಕರಾದ ನಾಡದೊರೆ ಮಹಿಷಾಸುರ ಹಾಗೂ ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅರ್ಪಿಸುತ್ತಿದ್ದೇನೆ” ಎಂದು ಹೇಳಿದರು. ಚಿತ್ರರಂಗದೊಂದಿಗೆ ಸಾಮಾಜಿಕ ಹೋರಾಟಗಾರರೂ ಆಗಿರುವ ಟೈಗರ್ ನಾಗ್ ಅವರು ಸುವರ್ಣ ಯುಗ ಕನ್ನಡ ದಿನಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಕೊರಟಗೆರೆ : ವ್ಯವಸಾಯೋತ್ಪನ ಸಹಕಾರ ಸಂಘವು 1960ನೇ ಇಸವಿಯಲ್ಲಿ ಸ್ಥಾಪನೆಗೊಂಡಿದೆ. ತುಮಕೂರು ಜಿಲ್ಲೆಯ ಇತರೆ ತಾಲ್ಲೂಕಿನ ಸಹಕಾರ ಸಂಘಕ್ಕೆ ಹೋಲಿಕೆ ಮಾಡಿದ್ದಲ್ಲಿ ಇಲ್ಲಿನ ವ್ಯವಸಾಯೋತ್ಪನ ಸಂಘ ಲಾಭದಾಯಕವಾಗಿದೆ ಎಂದು ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಜಿ.ಎಂ ತಿಳಿಸಿದರು. ಕೊರಟಗೆರೆ ತಾಲ್ಲೂಕು ವ್ಯವಯೋತ್ಪನ ಮಾರಾಟ ಸಹಕಾರ ಸಂಘದ ಪ್ರಧಾನ ಕಟ್ಟಡದ ಮೇಲ್ಭಾಗದ ಆವರಣದಲ್ಲಿ ಆಯೋಜಿಸಲಾದ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇರೆ ತಾಲ್ಲೂಕಿನಲ್ಲಿ ಕೆಲವು ಸಂಘಗಳು ಆದಾಯದ ಮೂಲ ಇಲ್ಲದೇ ನಷ್ಠದ ಪರಿಸ್ಥಿತಿಗೆ ಸಿಲುಕಿದೆ. ನಮ್ಮ ತಾಲ್ಲೂಕಿನಲ್ಲಿ ಆದಾಯದ ಮೂಲಗಳನ್ನು ಸೃಷ್ಠಿಸಿ ಸಂಘ ಅಭಿವೃದ್ಧಿ ಹೊಂದಿದೆ.ಈ ನಿರ್ದೇಶಕರು,ಸದಸ್ಯರ ಸಹಕಾರ, ಅತ್ಯಮೂಲ್ಯ ಸಲಹೆಯಿಂದ ಆರ್ಥಿಕವಾಗಿ ಸದೃಢವಾಗಿದೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಾದ ರೇಣುಕಾ ಮತ್ತು ಕೀರ್ತನಾರಾದ್ಯಗೆ ಪ್ರತಿಭಾ ಪುರಸ್ಕಾರದಲ್ಲಿ ಗೌರವಿಸಲಾಗಿದೆ ಎಂದರು.  2024–25ನೇ ಸಾಲಿನ ವಾರ್ಷಿಕ ವರದಿ: ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ…

Read More

ತುಮಕೂರು: ವಂಚಿತ ಸಮುದಾಯ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು. ವಿಕಸಿತ ಭಾರತದ ಗುರಿ ಮುಟ್ಟಲು ಶಿಕ್ಷಣ ಮಹತ್ವದ ಪಾತ್ರ ವಹಿಸಲಿದೆ ಎಂದು ಹಂಪಿ ವಿ.ವಿ.ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತುಮಕೂರು ವಿ.ವಿ ಅಧ್ಯಾಪಕರ ಸಂಘದಿಂದ ಆಯೋಜಿಸಿದ್ದ ‘ವಿಕಸಿತ ಭಾರತಕ್ಕಾಗಿ ಶಿಕ್ಷಣ’ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. 2047ರ ವಿಕಸಿತ ಭಾರತಕ್ಕೆ ಎಂತಹ ಶಿಕ್ಷಣ ಬೇಕು ಎಂಬ ನೀಲನಕ್ಷೆ ಅಗತ್ಯ. ಇದು ಬಹುತ್ವ ಭಾರತ. ಆಶ್ರಮದಿಂದ, ಗುರುಕುಲ ಈಗ ಸ್ವತಂತ್ರ ಸಂಸ್ಥೆ, ಶಿಕ್ಷಣ ವ್ಯವಸ್ಥೆ ಬದಲಾಗಿ, ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದರು. ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ‘ವಿಚಾರ ಸಂಕಿರಣದ ಚರ್ಚಿತ ವಿಷಯ ಅಚರಣೆಗೆ ಬರಬೇಕು. ಅನೇಕ ಸವಾಲು ಮಧ್ಯೆ ಕೃಷಿ, ವಿಜ್ಞಾನ–ತಂತ್ರಜ್ಞಾನ, ವಾಣಿಜ್ಯ, ಕೈಗಾರಿಕೆ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಿದೆ. ವಿಕಸಿತ ಭಾರತ ಬದಲಾಗುತ್ತಿದೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಉನ್ನತ ಶಿಕ್ಷಣ ಪೂರಕವಾಗಲಿ’ ಎಂದು ಆಶಿಸಿದರು. ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು…

Read More

ತುಮಕೂರು: ಜಿಲ್ಲೆಯಿಂದ ಸುಮಾರು 136 ದೇಶಗಳಿಗೆ 9 ಸಾವಿರ ಕೋಟಿ ಮೌಲ್ಯದ ತೋಟಗಾರಿಕೆ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು. ನಗರದಲ್ಲಿ ಶುಕ್ರವಾರ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್), ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಕುರಿತು ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ರಪ್ತಿಗೆ ಯೋಗ್ಯವಾದ ಹಲವು ಬೆಳೆ ಬೆಳೆಯಲಾಗುತ್ತಿದೆ. ಯುವ ರೈತರು ಇದರ ಪ್ರಯೋಜನ ಪಡೆದು ತೆಂಗು, ದಾಳಿಂಬೆ, ಮಾವು, ಹುಣಸೆ ಮುಂತಾದ ಬೆಳೆಗಳ ಉತ್ಪನ್ನ ರಫ್ತು ಮಾಡಬಹುದು. ರೈತರು ಉತ್ಪನ್ನದಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಸ್ಥಿರ ಆದಾಯ ಗಳಿಸಬಹುದು ಎಂದು ಸಲಹೆ ಮಾಡಿದರು. ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ‘ಬೆಳೆಗಳ ಮೌಲ್ಯವರ್ಧನೆ, ಸಂಸ್ಕರಣೆಗೆ ಪಿಎಂಎಫ್‌ಎಂಇ ಯೋಜನೆಯಡಿ 15 ಲಕ್ಷ ಸಹಾಯಧನ ನೀಡಲಾಗುತ್ತದೆ. ಬ್ಯಾಂಕ್ ಮುಖಾಂತರ ನೆರವು ಪಡೆಯಬಹುದು’ ಎಂದರು.…

Read More

ತಿಪಟೂರು: ತುಮಕೂರು ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 10 ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು. ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ದಸರಾ ಆಚರಣೆ ವಿಷಯವಾಗಿ ಏರ್ಪಡಿಸಿದ್ದ ಪ್ರಬಂಧ ಹಾಗೂ ಆಶುಭಾಶಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಈ ಬಾರಿಯ ದಸರಾದಲ್ಲಿ ವಿಶೇಷವಾಗಿ ಪ್ಯಾರಾ ಗ್ರೇಡಿಂಗ್ ಮತ್ತು ಹೆಲಿಕಾಪ್ಟರಿಂಗ್ ಆಯೋಜಿಸಲಾಗಿದೆ. ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್ ಇರಲಿದೆ. ನಟಿ ರಮ್ಯಾ ಹಾಗೂ ನಟ ವಿನಯ್ ರಾಜಕುಮಾರ್ ಭಾಗವಹಿಸಲಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಸ್ವತಃ ಮುತುವರ್ಜಿವಹಿಸಿ ಈ ಬಾರಿಯ ತುಮಕೂರು ದಸರಾವನ್ನು ಅದ್ದೂರಿಯಾಗಿಸಲು ಪ್ರಯತ್ನಿಸುತ್ತಿದ್ದು ಮೂರು ಆನೆಗಳು ಉತ್ಸವದಲ್ಲಿ ಭಾಗವಹಿಸಲಿವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ತುಮಕೂರಿಗೆ ಹೋಗಿ ಬರಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್.ಕಾಂತರಾಜು, ಪ್ರಾಂಶುಪಾಲ ಶಶಿಕುಮಾರ್,…

Read More

ತುಮಕೂರು: ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದ ವಿವಿಧೆಡೆ ಅಳವಡಿಸಿರುವ ಪ್ಲೆಕ್ಸ್‌ಗಳಲ್ಲಿ ಶಾಸಕ ಕೆ.ಎನ್‌.ರಾಜಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಭಾವಚಿತ್ರ ಹಾಕದಿರುವುದಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಮುಖಂಡ ಕುಳ್ಳೂರು ಶ್ರೀಧರ್ ಮಾತನಾಡಿ, ಶಾಸಕರ ಭಾವಚಿತ್ರ ಕೈಬಿಟ್ಟಿರುವುದನ್ನು ಖಂಡಿಸಿದರು. ವಾಲ್ಮೀಕಿ ಅಧ್ಯಯನ ಪೀಠಕ್ಕೆ 10 ಎಕರೆ ಜಾಗ ಗುರುತಿಸಿ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ತೆರೆಯುವಂತೆ 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಈ ನಿಟ್ಟಿನಲ್ಲಿ ಏನು ಬೆಳವಣಿಗೆಯಾಗಿದೆ ಎಂಬ ಮಾಹಿತಿಯೇ ಇಲ್ಲ. ಜಯಂತಿಯ ಒಳಗೆ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ‘ಪ್ರಸ್ತುತ ಜಯಂತಿ ಪ್ರಯುಕ್ತ ಕೇವಲ ಇಬ್ಬರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 10ಕ್ಕೆ ಹೆಚ್ಚಿಸಬೇಕು. ಕನಿಷ್ಠ ತಾಲ್ಲೂಕಿಗೆ ಒಬ್ಬರಂತೆ 10 ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಜಯಂತಿ ದಿನ ಟೌನ್‌ಹಾಲ್ ವೃತ್ತದ ಅಂಬೇಡ್ಕರ್‌ ಪ್ರತಿಮೆಯಿಂದ ಬಾಲ ಭವನದವರೆಗೆ ಮೆರವಣಿಗೆ ನಡೆಸಬೇಕು’ ಎಂದು ಮುಖಂಡರು…

Read More