Author: admin

ಚಾಮರಾಜನಗರ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಸೇರಿದಂತೆ ಮತ್ತೆ ಹೆಚ್ಚುವರಿಯಾಗಿ 18,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13,500 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 5,428 ಶಿಕ್ಷಕರನ್ನು ಮಾತ್ರ ನೇಮಕ ಮಾಡಿತ್ತು ಎಂದರು. ಶಾಲಾ ಕೊಠಡಿಗಳ ಶಿಥಿಲಾವಸ್ಥೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕೇವಲ ನಮ್ಮ ಸರಕಾರದ ಅವಧಿಯಲ್ಲಿ ಸೃಷ್ಟಿಯಾದ ಸಮಸ್ಯೆಯಲ್ಲ. ರಾಜ್ಯದಲ್ಲಿ 46 ಸಾವಿರ ಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲೂ ಸಮಸ್ಯೆಗಳಿಲ್ಲ ಎಂದು ಹೇಳುತ್ತಿಲ್ಲ. ಈ ಹಿಂದಿನ ಸರಕಾರ ಯಾವುದೇ ಕೊಠಡಿಯನ್ನು ಕಟ್ಟಿಲ್ಲ. ನೇಮಕ ಕೂಡ ಮಾಡಿಲ್ಲ. ನಾವೂ ಅಧಿಕಾರಕ್ಕೆ ಬಂದ ಮೇಲೆ ವಿವೇಕ ಯೋಜನೆಯಡಿ 8,200 ಕೊಠಡಿ ಪೂರ್ಣ ಮಾಡಿದ್ದೇವೆ. ಮತ್ತೆ 3000 ಸಾವಿರ ಕೊಠಡಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಅಲ್ಲದೇ ನೂತನವಾಗಿ 800 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು…

Read More

ಬೆಂಗಳೂರು: ಹೃದಯಾಘಾತವಾಗಿದ್ದರೂ, ತಾನು ಚಲಾಯಿಸುತ್ತಿದ್ದ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿ 45ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿ ಕೆಎಸ್ ಆರ್’ ಟಿಸಿ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ರಾಜೀವ್ ಬೀರಸಾಲ್ (56) ಹೃದಯಾಘಾತದಿಂದ ಮೃತರಾದ ಚಾಲಕರಾಗಿದ್ದಾರೆ. ಇವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನವರಾಗಿದ್ದು, ಸುಮಾರು 20 ವರ್ಷಗಳಿಂದ ಕೆಎಸ್‌ ಆರ್‌ ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್ಆರ್ ​​ಟಿಸಿ ರಾಜಹಂಸ ಬಸ್’ನ್ನು ರಾಜೀವ್ ಬೀರಸಾಲ್ ಅವರು ಚಲಾಯಿಸುತ್ತಿದ್ದರು.  ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ರಾಜೀವ್ ಬೀರಸಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಿಲ್ಲಿಸಿದ ಕೂಡಲೇ ರಾಜೀವ್ ಅವರು ಕೆಳಗೆ ಬಿದ್ದಿದ್ದು, ಇದನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಆ್ಯಂಬುಲೆನ್ಸ್ ​ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್…

Read More

ಬೀದರ್: ಮಲತಾಯಿಯೊಬ್ಬಳು ತನ್ನ ಮಗಳನ್ನು ಮನೆಯ ಮೇಲ್ಛಾವಣಿಯಿಂದ ತಳ್ಳಿ ಕೊಂದ ಘಟನೆ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಾನವಿ (7) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಶಾನವಿಯ ಅಜ್ಜಿ ವಿಜಯಶ್ರೀ ಅವರು ನೀಡಿದ ದೂರಿನಲ್ಲಿ, ಆ. 27 ರಂದು ಮನೆ ಮೇಲ್ಛಾವಣಿಯಿಂದ ಮೊಮ್ಮಗಳು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಳು. ಮೊದಲು ನಾವು ಕಾಲು ಜಾರಿ ಬಿದ್ದಿರಬಹುದು ಎಂದುಕೊಂಡಿದ್ದೆವು. ಆದರೆ ಪಕ್ಕದ ಮನೆಯ ಸಿಸಿಟಿವಿ ದೃಶ್ಯದಲ್ಲಿ ನನ್ನ ಸೊಸೆ ರಾಧಾ ಆಕೆಯನ್ನು ಮೇಲ್ಛಾವಣಿಯಿಂದ ತಳ್ಳಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ ಶಾನವಿ, ನನ್ನ ಮಗನ ಮೊದಲ ಹೆಂಡತಿ ಗಾಯತ್ರಿಯ ಮಗಳು. ನನ್ನ ಮಗ ಮತ್ತು ರಾಧಾಳದ್ದು ಎರಡನೇ ಮದುವೆ. ಇವರಿಬ್ಬರಿಗೆ ಜವಳಿ ಮಕ್ಕಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಇಬ್ಬರು ಮಕ್ಕಳಿಗೆ ತೊಂದರೆ ಆಗಬಹುದು ಎಂದುಕೊಂಡು ರಾಧಾಳು ಶಾನವಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಆ ದ್ವೇಷದಿಂದಲೇ ಆಕೆಯನ್ನು ಮೇಲ್ಛಾವಣಿಯಿಂದ ತಳ್ಳಿದ್ದಾಳೆ ಎಂದು ಅಜ್ಜಿ ದೂರಿನಲ್ಲಿ ಆರೋಪಿಸಿದ್ದಾರೆ…

Read More

ಬೀದರ್: ಜಿಲ್ಲೆಯ ಚಿಂತಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕರಂಜಿ (ಬಿ) ಗ್ರಾಮದ ಹೊಲದಲ್ಲಿ ಗಾಂಜಾ ಬೆಳೆಯುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬೀದರ್ ಜಿಲ್ಲಾ ಪೊಲೀಸರು 8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಐಪಿಎಸ್ ಅವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು.  ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮರಾವನ್ನು ಬಳಸಿರುವುದು ವಿಶೇಷವಾಗಿತ್ತು. ಕಾರ್ಯಾಚರಣೆಯಲ್ಲಿ  ಅಂಬೀಶ ವಾಗಮೋರೆ, ಪಿಎಸ್‌ ಐ ಡಿಸಿಆ ರ್‌ಬಿ ಘಟಕ ಬೀದರ್, ಡಿ.ಎಸ್‌.ಬಿ ಘಟಕ ಗುಂಡಪ್ಪಾ ರೆಡ್ಡಿ, ಎ.ಎಸ್‌.ಐ, ಸಿ.ಹೆಚ್.ಸಿ ಸಂತೋಷ, ಸಿ.ಪಿ.ಸಿ ಸಂತೋಷ ಮತ್ತು ಡ್ರೋನ್ ಕ್ಯಾಮರಾ ಆಪರೇಟರ್ ಸಿ.ಹೆಚ್‌.ಸಿ ರಾಜಕುಮಾರ ಜೊತೆಗೆ ಚಿಂತಾಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಶೇಖರ ನಿರ್ಣೆ ಅವರ ಸಿಬ್ಬಂದಿಯಾದ ಸಿದ್ದೇಶ್ವರ, ಶ್ರೀಪತಿ, ಗೋರಖ, ಸದೋಜಾತ, ಸಂತೋಷ, ಮಾಣಿಕ  ಭಾಗಿಯಾಗಿದ್ದರು. ಹೊಲದಲ್ಲಿ ಪತ್ತೆಯಾದ ಗಾಂಜಾದ ತೂಕ 8 ಕೆ.ಜಿ 120 ಗ್ರಾಂ ನಷ್ಟಿದ್ದು 8,12,000 ರೂ.…

Read More

ಕೊರಟಗೆರೆ : ಜಾತಿ ಗಣತಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗದ ಬಂಧುಗಳು ನಂ.೯ ಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಹಾಗೂ ಕೋಡ್ ನಂಬರ್‌ನಲ್ಲಿ ಎ–0795 ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕುಂಚಿಟಗರ ಸಂಘ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೆಪ್ಟೆಂಬರ್ 22 ರಿಂದ ಹಮ್ಮಿಕೊಂಡಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗದವರು ಯಾವುದೇ ಕುಲ ಪಂಗಡಗಳನ್ನು ಹೇಳದೆ ಕಾಲಂ ನಂಬರ್ 9 ರಲ್ಲಿ ಕುಚಂಟಿಗ ಎಂದೇ ಬರೆಸಬೇಕು, ಕಾಲಂ ನಂಬರ್ 8 ರಲ್ಲಿ  ಧರ್ಮದಲ್ಲಿ ಹಿಂದೂ ಎಂದು ಹಾಗೂ ಕೋಡ್ ನಂಬರ್ ನಲ್ಲಿ ಎ–೦೭೯೫ ಎಂದು ನಮೂದಿಸುವುದು ಬಿಟ್ಟರೆ ಮತ್ತೇ ಯಾವುದೆ ಕುಲ ಮತ್ತು ಬೆಡಗುಗಳನ್ನ ಹೇಳಬೇಡಿ ಇದರಿಂದ ಕುಂಚಿಟಿಗರು ಕೇಂದ್ರದ ಹಿಂದುಳಿದ ಆಯೋಗದ ಪಟ್ಟಿಗೆ ಸೇರಲು ಅನುಕೂಲವಾಗುತ್ತದೆ, ಕುಂಚಿಟಿಗರು ರಾಜ್ಯದಲ್ಲಿ ಸುಮಾರು 35 ಲಕ್ಷ…

Read More

ತುಮಕೂರು: ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ FITWEL TOOLS AND FORGINGS PRIVATE LIMITED ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಮಧ್ಯಾಹ್ನ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿ ಗೋಪಾಲ್ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಸಂಚಾರ ನಿಯಮ ಪಾಲನೆಯ ಅವಶ್ಯಕತೆ, ರಸ್ತೆ ಸುರಕ್ಷತೆಯ ಜವಾಬ್ದಾರಿ ಹಾಗೂ ಅಪಘಾತ ತಡೆ ಕುರಿತ ಸಂದೇಶ ನೀಡಿದರು. ಕಂಪನಿಯ ಮ್ಯಾನೇಜರ್ ಧನಂಜಯ್ ಎಂ. ಅವರು ಸಂಸ್ಥೆ ಸದಾ ತನ್ನ ಕಾರ್ಮಿಕರ ಹಿತಾಸಕ್ತಿಗೆ ಬದ್ಧವಾಗಿದೆ ಎಂದು ತಿಳಿಸಿದರು. ಕಂಪನಿಯ ಮಾಲೀಕರಾದ ಅನಂತ್ ಡಿ.ಎಸ್. ಅವರು CSR ನಿಧಿಯಡಿ 10 ಬ್ಯಾರಿಕೇಡ್‌ ಗಳು ಹಾಗೂ ಸೋಲಾರ್ ಬ್ಲಿಂಕರ್ ಲೈಟ್‌ ಗಳನ್ನು ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಸಂಚಾರ ಅಪಘಾತಗಳನ್ನು ತಡೆಯಲು ಈ ನೆರವು ಮಹತ್ವದ್ದೆಂದು ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದರು. ಪ್ರತಿದಿನ ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸುವ ಕರ್ನಾಟಕ ಹ್ಯಾಂಡ್ ಟೂಲ್ಸ್ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಈ…

Read More

ಬೀದರ್ : 2025–26ನೇ ಶೈಕ್ಷಣಿಕ ವರ್ಷದ ಪ್ರೌಢ ಶಾಲಾ ವಿಭಾಗದಲ್ಲಿ ಔರಾದ್ ನ ನಾಲಂದಾ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಶೋಭಾ ತಂದೆ ಸಂತೋಷ್ ಎಂಬ ವಿದ್ಯಾರ್ಥಿನಿಯು ಬಾಲಕಿಯರ ಕುಸ್ತಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಅಪ್ರತಿಮ ಸಾಧನೆಗೈದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬೆಳಕುಣಿ (ಬಿಎಚ್) ಗ್ರಾಮದ ನಿವಾಸಿಯಾದ ಶೋಭಾ, ಜಿಲ್ಲಾ ಮಟ್ಟದ ಬಾಲಕಿಯರ ಕುಸ್ತಿ ಪಂದ್ಯದಲ್ಲಿ ತನ್ನ ಎದುರಾಳಿಯನ್ನು ಸೋಲಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಶಾಲೆಗೆ ಕೀರ್ತಿ ತಂದಿದ್ದಾಳೆಅವಳ ಈ ಸಾಧನೆಯನ್ನು ಶ್ಲಾಘಿಸಿ ಶಾಲೆಯ ಶಿಕ್ಷಕರು ಆಕೆಯನ್ನು ಸನ್ಮಾನ ಮಾಡಿದ್ದಾರೆ. ವಿದ್ಯಾರ್ಥಿನಿ ಶೋಭಾ  ಅವರನ್ನು ಎಸ್ ಪಿ ಕೆ ಸಂಸ್ಥೆಯ ಅಧ್ಯಕ್ಷ ಕೆ.ಪುಂಡಲೀಕ ರಾವ್, ಶಾಲೆಯ ಮುಖ್ಯಗುರು ಜಗನ್ನಾಥ್ ಬಿರಾದಾರ್, ದೈಹಿಕ ಶಿಕ್ಷಕ ಸುನೀಲಕುಮಾರ್ ವಾಗಮೋಡೆ, ಸಹ ಶಿಕ್ಷಕರಾದ ದಿಲೀಪಕುಮಾರ್ ಮೇತ್ರೆ, ಮಲ್ಲಿಕಾರ್ಜುನ್ ಕೋಟೆ, ಪರಮೇಶ್ವರ್ ಬಿರಾದಾರ್, ಸಿದ್ಧಾರ್ಥ ಕಾಂಬಳೆ, ಅಸ್ಪಾಕಮಿಯ್ಯಾ ಬೇಗ್ ಹಾಗೂ ಸಹ ಶಿಕ್ಷಕಿಯರಾದ ಪ್ರೀಯಾ ಬಿರಾದಾರ್, ಜ್ಯೋತಿ ಘೂಳೆ ಹಾಗೂ…

Read More

ಬೆಳಗಾವಿ: ದ್ವೇಷಭಾಷಣದ ಆರೋಪದ ಮೇಲೆ ತುಮಕೂರು ನಗರ ಠಾಣೆ ಪೊಲೀಸರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‌ ಭಾಗವಹಿಸಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಭಾನುವಾರ ರಾತ್ರಿ ಪೊಲೀಸರು ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ. ಅನ್ಯಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ರಘುನಾಥ್ ಕೊಟ್ಟ ದೂರಿನ ಮೇರೆಗೆ ಪೊಲೀಸರು ಎಫ್‌ ಐಆ‌ರ್ ದಾಖಲಿಸಿಕೊಂಡಿದ್ದಾರೆ. ಮದ್ದೂರಿನಲ್ಲಿ ನನ್ನ ವಿರುದ್ಧ 70ನೇ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ 71ನೇ ಪ್ರಕರಣ ದಾಖಲಾಗಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ 71ನೇ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಹೆಚ್ಚು ಹೊಗೆ ಹೊರಸೂಸುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್‌ ರೆಡಿಯಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ 15 ವರ್ಷಗಳು ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿದೆ. ದೇಶದಲ್ಲೇ ಅತಿ ಹೆಚ್ಚು ಪರಿಸರ ಮಾಲಿನ್ಯವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲ್ಲೂ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್‌ ಮಾಡುವ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಂತೆ ಈಗಾಗಲೇ ನೋಟೀಸ್‌‍ ನೀಡಲಾಗಿದೆ. ಟೂ ಸ್ಟ್ರೋಕ್‌ ಆಟೋಗಳ ಜತೆಗೆ 15 ವರ್ಷ ತುಂಬಿರೋ ಲಾರಿಗಳನ್ನೂ ಸ್ಕ್ರ್ಯಾಪ್‌ ಮಾಡುವಂತೆ ಸೂಚಿಸಲಾಗಿದೆ. ಸ್ಕ್ರ್ಯಾಪ್‌ ಪಾಲಿಸಿಗೆ ವಾಹನದ ಮಾದರಿ ಆಧರಿಸಿ ಸಾರಿಗೆ ಇಲಾಖೆ ಪರಿಹಾರ ನೀಡುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಿ ವಾಹನಗಳ ಸ್ಕ್ರ್ಯಾಪ್‌ ಮಾಡಲು ತೀರ್ಮಾನ ಮಾಡಿರುವ…

Read More

ಹಾದನೂರು ಚಂದ್ರ ಸರಗೂರು: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ನೆರವಾಗುವ ಸಲುವಾಗಿ ತಮ್ಮ ಸ್ವಂತ ಹಣ ಹಾಗೂ ಪ್ರದೇಶವನ್ನು ಬಡಗಿಯೊಬ್ಬರು ತಮ್ಮ ಸುತ್ತಲಿನ ಹತ್ತಾರು ಹಳ್ಳಿಗಳ ಶಾಲೆಗಳಿಗೆ ಮಂದ ಬೆಂಚು, ಕುರ್ಚಿ ಪೂರೈಸುವ ಮೂಲಕ ಮಾದರಿಯಾಗಿದ್ದಾರೆ. ನಂಜನಗೂಡಿನ ಹೆಡಿಯಾಲ ಗ್ರಾಪಂ ವ್ಯಾಪ್ತಿಯ ಮಡುವಿನಹಳ್ಳಿ ಗ್ರಾಮದ ಮಂಟೇಲಿಂಗಾಚಾರ್  ತಾವು ಕಲಿತಿರುವ ಮರಗೇಲಸದ ಕಸುಬಿನ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದು, ಇದರೊಂದಿಗೆ ಕಳೆದ 8 ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಅವಶ್ಯಕ ಪರಿಕರಗಳನ್ನು ಉಚಿತವಾಗಿ ನೀಡುವ ಮೂಲಕ 9 ನೇ ವರ್ಷಕ್ಕೆ ಕಾಲಿಟ್ಟಿದ್ದು, ಸಮಾಜದ ಗಮನ ಸೆಳೆದಿದ್ದಾರೆ. 8 ವರ್ಷಗಳ ಹಿಂದೆ ಕುಡಿತದ ಚಟ ಬಿಟ್ಟು, ಕುಡಿತದ ಹಣವನ್ನು ಸಂಗ್ರಹಣೆ ಮಾಡಿ ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಬರುವ ಕುಶಲಕಾರ್ಮಿ 8 ವರ್ಷಗಳಿಂದ ಕುಡಿತದ ಚಟ ಬಿಟ್ಟು ಕುಡಿತದ ಹಣವನ್ನು ಸಂಗ್ರಹಣೆ ಮಾಡಿಕೊಂಡು ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ  ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಡತನದಲ್ಲಿ ಇದ್ದರೂ,…

Read More