Subscribe to Updates
Get the latest creative news from FooBar about art, design and business.
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
Author: admin
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ ಸಂಬಂಧ ಅಶ್ಲೀಲ ವಿಡಿಯೊ ಪೆನ್ ಡ್ರೈವ್ ಹಂಚಿಕೆ ಆರೋಪದಡಿ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖಾಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ)–ಲೈಂಗಿಕ ಕಿರುಕುಳ, 354 (ಡಿ) ಮಹಿಳೆಯ ನಿರಾಸಕ್ತಿಯ ಹೊರತಾಗಿಯೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವುದು, 354 ಬಿ-ಮಹಿಳೆ ಮೇಲೆ ಆಕ್ರಮಣ ಹಾಗೂ ಮಾಹಿತಿ, 506-ಜೀವ ಬೆದರಿಕೆ ಹಾಗೂ ಐಟಿ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಹೊಳೆನರಸೀಪುರ, ಕೆ.ಆರ್.ನಗರ, ಸಿಐಡಿ ಸೈಬರ್ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ. ನಾಲ್ಕನೇ ಪ್ರಕರಣದಲ್ಲಿ ಪ್ರಜ್ವಲ್ ಮೊದಲ ಆರೋಪಿಯಾದರೆ, ಪ್ರೀತಂ ಗೌಡ ನಾಲ್ಕನೇ ಆರೋಪಿಯಾಗಿದ್ದಾರೆ. ಹೀಗಾಗಿ,…
ರಸ್ತೆ ಅಪಘಾತವೊಂದರಲ್ಲಿ ನಟ ದರ್ಶನ್ ಅಭಿಮಾನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಬಳಿ ನಡೆದಿದೆ. ಟಿ.ನರಸೀಪುರ ಪಟ್ಟಣದ ವಿನಾಯಕ ಕಾಲೋನಿಯಲ್ಲಿ ವಾಸವಿದ್ದ ದರ್ಶನ್ ಅಭಿಮಾನಿ ರವಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ರವಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಮೃತ ಧರಿಸಿದ್ದ ಟಿ ಶರ್ಟ್ ಮೇಲೆ ದರ್ಶನ್ ಅವರ ಫೋಟೋ ಇರುವುದು ಕಂಡುಬಂದಿದೆ.. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಟಿ. ನರಸೀಪುರ ಸಾರ್ವಜನಿಕರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಷಯ ತಿಳಿದು ಮೃತ ಸಂಬಂಧಿಕರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಬೆಂಗಳೂರು: ನಂದಿನಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚು ಮಾಡಿ ಅದಕ್ಕೆ ತಗುಲುವ ವೆಚ್ಚ 2.00 ರೂ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದರು. ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರ ಜನರಿಗೆ ಕೊಟ್ಟಿರುವ ಗ್ಯಾರಂಟಿ ಭಾಗ್ಯ ಎಂದು ಹಾಲಿನ ದರ ಏರಿಕೆ ಬಗ್ಗೆ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾಸ್ವಾಮಿ ಅವರು ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿ ನಾಳೆ ಈ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ. ಬೆಲೆ ಏರಿಕೆ ಮಾಡಿಲ್ಲ. ಹಾಲಿನ ಪ್ರಮಾಣ ಹೆಚ್ಚು ಮಾಡಿ ಅದಕ್ಕೆ ತಗುಲುವ ವೆಚ್ಚದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದರು. ಹಾಲಿನ ಉತ್ಪಾದನೆ ಜಾಸ್ತಿಯಾಗಿದ್ದು ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ಹಾಲು ನೀಡಿ ದರ ಹೆಚ್ಚಿಸಲಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ:…
ಚಿಕನ್ ಪೀಸ್ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್ ನ ಶಾದ್ ನಗರದಲ್ಲಿ ನಡೆದಿದೆ. ಅಣ್ಣಾರಾಮ್ ಗ್ರಾಮದ ಶ್ರೀಕಾಂತ್(39 ವರ್ಷ) ಮೃತಪಟ್ಟ ಯುವಕನಾಗಿದ್ದು, ಚಿಕನ್ ಬಿರಿಯಾನಿ ತಿನ್ನುವಾಗ ಚಿಕನ್ ಪೀಸ್ ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಇದರಿಂದ ಉಸಿರುಗಟ್ಟಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಿರಿಯಾನಿ ತಿನ್ನುವಾಗ ಚಿಕನ್ ಪೀಸ್ ವೊಂದು ಗಂಟಲಲ್ಲಿ ಸಿಕ್ಕಿಕೊಂಡಿದೆ. ಇದರಿಂದಾಗಿ ಸಂಕಟ ತಡೆಯಲಾರದೇ ಆತ ಹೊರಗೆ ಎದ್ದು ಬಂದಿದ್ದಾನೆ.. ಅದನ್ನು ಉಗುಳಲು ಎಷ್ಟು ಪ್ರಯತ್ನಿಸಿದರೂ ಆಗಿಲ್ಲ. ಅಷ್ಟಲ್ಲಿ ಉಸಿರುಗಟ್ಟಿ ಬಾರ್ ಮುಂದೆಯೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿರಬಹುದೆಂದು ಮೊದಲು ಶಂಕಿಸಲಾಗಿತ್ತು.. ಆದ್ರೆ ಗಂಟಲಲ್ಲಿ ಚಿಕನ್ ಸಿಕ್ಕಿ ಹಾಕಿಕೊಂಡಿದ್ದರಿಂದಲೇ ಸಾವನ್ನಪ್ಪಿರೋದು ಅಂತ ವೈದ್ಯರು ಪರೀಕ್ಷೆ ಮಾಡಿದ ನಂತರ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಗಂಟಲಲ್ಲಿ ಚಿಕನ್ ಪೀಸ್ ಇರುವುದು ಗೊತ್ತಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್…
ಹಸಿ ಬೆಳ್ಳುಳ್ಳಿ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಸಾಧ್ಯವಿದೆಯಂತೆ. ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಹಸಿ ಬೆಳ್ಳುಳ್ಳಿಯನ್ನು ಜಗಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಹಲವಾರು ಆರೋಗ್ಯಕರ ಲಾಭಗಳಾಗಲಿವೆ. ಬೆಳ್ಳುಳ್ಳಿಯಲ್ಲಿರುವ ‘ಅಲಿಸಿನ್’ ಎಂಬ ಅಂಶ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಬೆಳ್ಳುಳ್ಳಿ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳನ್ನು ಹೊಂದಿದೆ. ಪ್ರತಿದಿನ ಬೆಳಗ್ಗೆ ಬೆಳ್ಳಳ್ಳಿಯ ಒಂದು ಎಸಳನ್ನು ಜಗಿಯುವ ಅಭ್ಯಾಸ ಮಾಡೊಕೊಳ್ಳಬೇಕು. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಹಸಿ ಬೆಳ್ಳುಳ್ಳಿ ಉತ್ತಮ ಜೀರ್ಣಕ್ರಿಯೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಗ್ಯಾಸ್, ಹೊಟ್ಟೆಯುಬ್ಬರ, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅವು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಚಿಕ್ಕಮಗಳೂರು: ಮದ್ಯದ ಅಂಗಡಿ ನುಗ್ಗಿ ಮದ್ಯ ಹಾಗೂ ಲಕ್ಷಾಂತರ ಹಣ ದೋಚಿದ್ದ ಮೂವರು ಅಂತರ್ ಜಿಲ್ಲಾ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಒಬ್ಬ ಕುರಿಕಳ್ಳ, ಮತ್ತೊಬ್ಬ ದೇವಸ್ಥಾನದ ಹುಂಡಿ ಕಳ್ಳ, ಇನ್ನೊಬ್ಬ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸದಸ್ಯನಾಗಿದ್ದಾನೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯ ಈ ಮೂವರು ಎಣ್ಣೆ ಕಳ್ಳರು, ವಿವಿಧ ಜಿಲ್ಲೆ ಸುತ್ತಿ ಎಣ್ಣೆ ಅಂಗಡಿಗಳನ್ನು ದೋಚುವುದೇ ಇವರ ಕೆಲಸ, ನಗರ ಪ್ರದೇಶಗಳಿಂದ ದೂರ ಇರುವ ಎಣ್ಣೆ ಅಂಗಡಿಗಳೇ ಇವರ ಟಾರ್ಗೆಟ್‌ಯಾಗಿತ್ತು ಎಂದು ಹೇಳಲಾಗಿದೆ. ದಾವಣಗೆರೆ ತುಮಕೂರು ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಡ್ರೈವರ್ ಗಳು ಮತ್ತೊಬ್ಬ ಮಾನವ ಹಕ್ಕುಗಳ ಆಯೋಗದ ಸದಸ್ಯ, ಕಳೆದ ಮೇ 5 ರಂದು ಮರ್ಲೆ ಗ್ರಾಮದ ಎಂಎಸ್ ಐಎಲ್ ಮದ್ಯದ ಅಂಗಡಿಗೆ ಕನ್ನ ಹಾಕಿದ್ದ ಇವರ ಬೆನ್ನಿಗೆ ಬಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ನೇತೃತ್ವದ ತಂಡ ಮೂವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸ್ಟ್ರಿಎಣ್ಣೆಗಳು ಬಿಯರ್…
ಸಕಲೇಶಪುರ: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿರುವ ಆರೋಪದ ಮೇಲೆ ಇದೀಗ ಆರೋಪಿಗಳಾದ ಜೀಪು ಚಾಲಕರ ಬಂಧನವಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣವಾದ ಪಟ್ಲಬೆಟ್ಟ ಬಳಿ ಜೀಪ್ ಹಾಗೂ ಪಿಕ್ ಅಪ್ ವಾಹನ ಚಾಲಕರು ಜೂ.23 ರಂದು ಬೈಕ್ ನಲ್ಲಿ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದು, ಈ ಕುರಿತು ದೂರನ್ನು ನೀಡಲಾಗಿತ್ತು. ಇದೀಗ ಜೀಪು ಚಾಲಕರ ಬಂಧನವಾಗಿದೆ. ಬೈಕ್ ನಲ್ಲಿ ಬಂದಿದ್ದ ಪ್ರವಾಸಿಗರು ಪಟ್ಲಬೆಟ್ಟಕ್ಕೆ ಭೇಟಿ ನೀಡಿ ವಾಪಸ್ ಬರುವಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿರುವ ವೀಡಿಯೋವೊಂದು ವೈರಲ್ ಆಗಿತ್ತು. ಜೀಪುಗಳನ್ನು ಬಾಡಿಗೆ ಪಡೆಯದೇ ತಮ್ಮ ಬೈಕ್ ನಲ್ಲಿ ಹೋಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ದಕ್ಷಿಣ ಕನ್ನಡ ಮೂಲದ ಪ್ರವಾಸಿಗರಾದ ಭುವಿತ್ ಪೂಜಾರಿ ದೂರನ್ನು ನೀಡಿದ್ದರು. ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧನ…
ಚಿತ್ರದುರ್ಗದ ರೇಣುಕಾಸ್ವಾಮಿಗೆ ಸಂಬಂಧಪಟ್ಟಂತೆ ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಎಸ್.ಐ. ನೇತ್ರಾವತಿ ಎಂಬುವವರಿಗೆ ಈಗ ನೋಟಿಸ್ ನೀಡಲಾಗಿರುವ ಕುರಿತು ವರದಿಯಾಗಿದೆ. ಆರೋಪಿಯಾಗಿರುವ ಪವಿತ್ರಾ ಗೌಡಗೆ ಮೇಕಪ್ ಕಿಟ್ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ಆರೋಪ ಪೊಲೀಸ್ ಅಧಿಕಾರಿ ನೇತ್ರಾವತಿ ಅವರ ಮೇಲೆ ಇದ್ದು, ಇದೀಗ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿರುವ ಕುರಿತು ವರದಿಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಸಮಯದಲ್ಲಿ ಪವಿತ್ರಾ ಗೌಡ ಮೇಕಪ್ ಮಾಡಿಕೊಂಡಿದ್ದು, ಜೂನ್ 15 ರಂದು ರಾಜರಾಜೇಶ್ವರಿ ಮನೆಗೆ ಸ್ಥಳ ಮಹಜರಿಗೆ ಹೋಗುವಾಗ ಹಿಂತಿರುಗಿ ಬರುವಾಗ ಮೇಕಪ್ ಮಾಡಿಕೊಂಡು ತುಟಿಗೆ ಲಿಪ್‌ಸ್ಟಿಕ್ ಹಾಕಿ ಹೊರ ಬಂದಿದ್ದರು ಎನ್ನಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹೋಗುವಾಗ ಮಾಮೂಲಿಯಾಗಿ ಹೋಗಿದ್ದು, ಮಹಜರು ಮುಗಿಸಿ ವಾಪಸ್ ಬರುವ ಸಮಯದಲ್ಲಿ ಮೇಕಪ್ ಮಾಡಿಕೊಂಡು ಮುಖ ತಿರುವಿಕೊಂಡು ಬಂದಿದ್ದ ವೀಡಿಯೋ ವೈರಲ್ ಆಗಿತ್ತು. ವಿಜಯನಗರ ಠಾಣೆ ಎಸ್ಐ ನೇತ್ರಾವತಿ ಅವರಿಗೆ ಕರ್ತವ್ಯಲೋಪದಡಿ ರೂಲ್ 7 ರ…
ಹಾಸನ: ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೆಡಿಕಲ್ ಗೆ ಹೋಗಿ ಔಷಧಿ ತಗೊಂಡು ಬನ್ನಿ ಎಂದು ಚೀಟಿ ಬರೆದುಕೊಡುವುದು ಸಾಮಾನ್ಯ. ಆದರೀಗ ಹಾಸನದ ವೈದ್ಯರೊಬ್ಬರು ಈ ರೀತಿ ಔಷಧಿಗಾಗಿ ಬರೆದುಕೊಟ್ಟ ಚೀಟಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಏನೆಲ್ಲಾ ಔಷಧಿ ತರಬೇಕೆಂದು ವೈದ್ಯರು ಬರೆದ ಚೀಟಿ ಎಲ್ಲೆಡೆ ಸುದ್ದಿಯಾಗುತ್ತಿದೆ. ಯಾಕೆಂದರೆ ಅದರಲ್ಲಿ ಚಿಕಿತ್ಸೆಗೆ ಮೆಹಂದಿ ಕೋನ್ ತರುವಂತೆ ಬರೆದುಕೊಟ್ಟಿದ್ದಾರೆ. ಆರಂಭದಲ್ಲಿ ಮೆಹೆಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಹಾಸನದ ವೈದ್ಯರು ಮೆಹಂದಿ ಕೋನ್ ಅನ್ನು ಔಷಧಿಯಾಗಿ ಬಳಕೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಡಾಕ್ಟರ್ ಔಷಧಿ ಚೀಟಿಯಲ್ಲಿ ಒಂದು ಮೆಹೆಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಟ್ಟಿದ್ದರು. ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ರೋಗಿ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ…
ಡೆಂಘಿ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಿ.ಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ಚರ್ಚಿಸಿದರು. ಈ ವೇಳೆ ಅಗತ್ಯ ಚಿಕಿತ್ಸೆ, ಚುಚ್ವುಮದ್ದು, ಪ್ಲೇಟ್ ಲೆಟ್ಸ್ ಗಳ ಸಂಗ್ರಹಕ್ಕೆ ಸೂಚಿಸಿದರು. ಸಭೆಯ ಮುಖ್ಯಾಂಶಗಳು ಹೀಗಿದೆ: ರಾಜ್ಯದಲ್ಲಿ ನಿನ್ನೆಯ ವರೆಗೆ ಒಟ್ಟು 5374 ಪ್ರಕರಣ ವರದಿಯಾಗಿದ್ದು, 5 ಮರಣಗಳು ಸಂಭವಿಸಿವೆ. ಭಾರತ ಸರ್ಕಾರವು ಡೆಂಘಿ ಪ್ರಕರಣಗಳಲ್ಲಿ Case fatality rate ಅಂದರೆ ಮರಣ ಪ್ರಮಾಣ ಶೇ. 0.5 ನ್ನು ಮೀರುವಂತಿಲ್ಲ ಎಂದು ನಿಗದಿ ಪಡಿಸಿದೆ. ರಾಜ್ಯದಲ್ಲಿ ಮರಣ ಪ್ರಮಾಣ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಅಂದರೆ, Case fatality rate 0.09% ಇದೆ.ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1230 ಪ್ರಕರಣಗಳು ವರದಿಯಾಗಿವೆ.ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ…