Subscribe to Updates
Get the latest creative news from FooBar about art, design and business.
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
Author: admin
18ನೇ ಲೋಕಸಭೆಯ ಸ್ಪೀಕರ್ ಆಯ್ಕೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದರಿಂದಾಗಿ 1976ರ ಬಳಿಕ ಅಂದರೆ 48 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಲೋಕಸಭೆಯ ಮುಖ್ಯಸ್ಥ ಹುದ್ದೆಗೆ ಬುಧವಾರ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ. ಹೊಸ ಸಂಸತ್ತಿನಲ್ಲಿ ಆಸನಗಳ ಹಂಚಿಕೆ ಮುಗಿದಿಲ್ಲ ಹಾಗೂ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ಕೂಡ ಜಾರಿಗೆ ಬಂದಿಲ್ಲ. ಬುಧವಾರ ಬೆಳಗ್ಗೆ 11ಕ್ಕೆ ಚೀಟಿ ಮೂಲಕ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 2 ಬಾರಿ ಮಾತ್ರ ಚುನಾವಣೆ ನಡೆದಿವೆ.ಇದೀಗ ಮೂರನೇ ಬಾರಿಗೆ ಚುನಾವಣೆ ನಡೆಯುತ್ತಿದೆ. ಮಿತ್ರಪಕ್ಷಗಳಾದ ತೆಲುಗುದೇಶಂ ಹಾಗೂ ಜೆಡಿಯು ಕಣ್ಣಿಟ್ಟಿದ್ದವು ಎಂದು ಹೇಳಲಾಗಿದ್ದ ಸ್ಪೀಕರ್ ಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, 17ನೇ ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ಸ್ಪೀಕರ್ ಆಗಿದ್ದ ತನ್ನ ಸಂಸದ ಓಂ ಬಿರ್ಲಾ ಅವರನ್ನು…
‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾಗೆ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ವಿಶ್ವಾದ್ಯಂತ ಸಿನಿಮಾ ಜೂನ್ 27ರಂದು ರಿಲೀಸ್ ಆಗಲಿದೆ. ಈ ಮಧ್ಯೆ ಪ್ರಭಾಸ್ ಅಭಿಮಾನಿಗಳು ಸಖತ್ ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ 2019ರಲ್ಲಿ ರಿಲೀಸ್ ಆದ ‘ಕಲ್ಕಿ’ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ. ಈ ಸಿನಿಮಾ ರೀ–ರಿಲೀಸ್ ಆಗಿದ್ದು ಆರು ಶೋಗಳು ಹೌಸ್ ಫುಲ್ ಆಗಿವೆ. ತೆಲುಗು ನಟ ರಾಜಶೇಖರ್ ನಟನೆಯ ‘ಕಲ್ಕಿ’ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಟಿಕೆಟ್ ನ ಫ್ಯಾನ್ಸ್ ಬುಕ್ ಮಾಡಿದ್ದಾರೆ. ಆ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗುತ್ತಿದ್ದು, ಇದರಿಂದ ಲಾಭ ಮಾಡಿಕೊಳ್ಳಲು ರಾಜಶೇಖರ್ ಸಿನಿಮಾ ತಂಡದವರು ಮುಂದಾದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಪ್ರಭಾಸ್ ಫ್ಯಾನ್ಸ್ ಚಿತ್ರತಂಡವನ್ನು ಶಪಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದೇ ಹೆಸರಿನ ಸಿನಿಮಾಗಳು ರಿಲೀಸ್ ಆದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಇದಕ್ಕಾಗಿಯೇ ‘ಕಲ್ಕಿ’ ತಂಡದವರು ಈ…
ಬೆಂಗಳೂರು : ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರಗಳನ್ನು ಆಯ್ಕೆ ಮಾಡಲು ಮುಖ್ಯಮಂತ್ರಿಯವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟುವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಅನುಭವವಿದೆ. ಆದ್ದರಿಂದ ಯಾವ ತೊಂದರೆಯಾಗುವುದಿಲ್ಲ. ಒಂದು ತಿಂಗಳೊಳಗಾಗಿ ಆಯ್ಕೆ ಮಾಡಿ, ಪಟ್ಟಿ ನೀಡುತ್ತೇನೆ ಎಂದು ಹೇಳಿದರು. ತುರ್ತುಪರಿಸ್ಥಿತಿ 49 ವರ್ಷ ಆದ ಹಿನ್ನೆಲೆಯಲ್ಲಿ ಬಿಜೆಪಿಯವರ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ದೇಶದಲ್ಲಿ ಬಡತನ ಇನ್ನೂ ಇದೆ. ಮತ್ತಷ್ಟು ಅಭಿವೃದ್ಧಿಯಾಗಬೇಕು, ಉದ್ಯೋಗ ಸಿಗಬೇಕಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನೆಲ್ಲ ಬಿಟ್ಟು 49 ವರ್ಷದ…
ತುಮಕೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾರ್ವಜನಿಕರ ಕುಂದು ಕೊರತೆ ಬಗೆಹರಿಸಲು ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಇವರ ಸಹಯೋಗದೊಂದಿಗೆ ಮಧುಗಿರಿ ಪುರಸಭೆ ಮಾಲಿಮರಿಯಪ್ಪ ರಂಗಮAದಿರ ಆವರಣದಲ್ಲಿಂದು ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು. ಅವರ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು. ನಕಾಶೆ ರಸ್ತೆ, ವಾಡಿಕೆ ರಸ್ತೆ, ಜಮೀನು ಒತ್ತುವರಿಯಂತಹ ಪ್ರಕರಣಗಳು ಪ್ರಸ್ತುತ ಹೆಚ್ಚಾಗುತ್ತಿವೆ. ರೈತರು ತಮ್ಮ ಜಮೀನಿಗೆ ತೆರಳಲು ಸುಗಮವಾದ ರಸ್ತೆ ಅವಶ್ಯಕ. ಈ ನಿಟ್ಟಿನಲ್ಲಿ ಇರುವಂತಹ ಅಡೆ-ತಡೆಗಳನ್ನು ನಿವಾರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ತಾಲ್ಲೂಕಿನ ೨೫ಸಾವಿರ ಪಹಣಿ ಖಾತೆಗಳ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರ ಕುಂದು ಕೊರತೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಜನಸ್ಪಂದನ ಕಾರ್ಯಕ್ರಮ-ಜಿಲ್ಲಾಧಿಕಾರಿ ಕಾರ್ಯಕ್ರಮ…
ದೇಶದ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಹಾಸನದ ಶ್ರೀ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಇದೀಗ ಮತ್ತೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು ಎನ್ನಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದು ಸ್ಪಷ್ಟಪಡಿಸಿದರು. ಇನ್ನು ಇದೇ ವೇಳೆ ರಾಜಕೀಯ ಬಗ್ಗೆ ಮಾತನಾಡಿರುವ ಕೋಡಿಶ್ರೀ, ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ…
ತುರುವೇಕೆರೆ: ಜೂನ್ 27 ರಂದು ತುರುವೇಕೆರೆ ತಾಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಜಯಂತಿಯನ್ನು ತಾಲೂಕು ಮಟ್ಟದ ನಾಡಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಸಜ್ಜಾಗಿದ್ದು, ಇದರ ಸಂಪೂರ್ಣ ನೇತೃತ್ವವನ್ನು ತಾಲೂಕಿನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ವಹಿಸಲಿದ್ದಾರೆ ಎಂದು ಒಕ್ಕಲಿಗ ಸಂಘದ ಅಧ್ಯಕ್ಷರಾದ ವಕೀಲರಾದ ಪಿ.ಹೆಚ್.ಧನಪಾಲ್ ತಿಳಿಸಿದರು. ತುರುವೇಕೆರೆ ಪಟ್ಟಣದ ದಬ್ಬೆಘಟ್ಟ ರಸ್ತೆಯಲ್ಲಿರುವ ಬಿ ಜಿ ಎಸ್ ಸಮುದಾಯ ಭವನದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘವು ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು ಈ ಬಾರಿಯ ಜಯಂತಿಯನ್ನು ಜಾತ್ಯಾತೀತವಾಗಿ ಆಚರಿಸಬೇಕು ಎಂಬ ಪರಿಕಲ್ಪನೆಯನ್ನು ಮಾನ್ಯ ಶಾಸಕರು ಸೂಚನೆ ನೀಡಿದ್ದಾರೆ ಅದರಂತೆಯೇ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿಯೂ ತೀರ್ಮಾನವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ನಶಿಸಿ ಹೋಗುತ್ತಿರುವ ಸ್ಥಳೀಯ ಜಾನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರುಗಳನ್ನು ಮುನ್ನಡೆಗೆ ತರಬೇಕು ಕಲೆಗಳನ್ನು ಉಳಿಸಬೇಕು ಎಂಬ ಯೋಜನೆಯನ್ನು ಹೊಂದಿದ್ದು ಕೋಲಾಟ, ಕಹಳೆ, ಸೋಮನ ಕುಣಿತ, ನಂದಿ ಧ್ವಜದಂತಹ ಕಲಾಪ್ರಕಾರಗಳು ಮೆರವಣಿಗೆ ಹೆಜ್ಜೆ ಹಾಕಲಿದ್ದು, ಮೆರವಣಿಗೆ ರಂಗನ್ನು ಹೆಚ್ಚಿಸಲಿದೆ ಎಂದರು.…
ಬೆಂಗಳೂರು: ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯ ಪಾರ್ಕ್‌ನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪನ್ನಿರ್ ಸೆಲ್ವಂ(37) ಹತ್ಯೆಗೀಡಾದ ಯುವಕನಾಗಿದ್ದಾನೆ. ನಿನ್ನೆ ಸಂಜೆ ಆರೋಪಿಗಳು ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಲ್ಲೇಶ್ವರಂನ ಎಂಡಿ ಬ್ಲಾಕ್ ನಿವಾಸಿಯಾಗಿದ್ದ ಪನ್ನೀರ್ ಸೆಲ್ವಂ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪನ್ನೀರ್ ಸೆಲ್ವಂಗೆ ನಾಲ್ವರು ಚಿಕ್ಕಮಕ್ಕಳಿದ್ದು, ಪತ್ನಿ ಜೊತೆ ವಾಸವಿದ್ದರು. ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಪನ್ನೀರ್ ಸೆಲ್ವಂ ಹಾಗೂ ಇತರ ಇಬ್ಬರು ವ್ಯಕ್ತಿಗಳು ಪಾರ್ಕ್‌ನಲ್ಲಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ:…
ಹಣಕಾಸಿನ ವಿಚಾರದಲ್ಲಿ ಗೆಳೆಯನೇ ತನ್ನ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆ ಯಾಕತ್ ಪುರ್ ಗ್ರಾಮದಲ್ಲಿ ನಡೆದಿದೆ. ಶಹಾಗಂಜ್ ನಿವಾಸಿ ಮೊಹಮ್ಮದ್ ಸಿರಾಜ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಈತ ತನ್ನ ಬಾಲ್ಯ ಸ್ನೇಹಿತ ಯಾಸಿನ್ ಎಂಬಾತನಿಗೆ 12 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ. ಯಾಸಿನ್ 11 ಲಕ್ಷ ರೂಪಾಯಿ ತೀರಿಸಿದ್ದ. ಇನ್ನು 1 ಲಕ್ಷ ರೂಪಾಯಿ ಕೊಡೋದು ಬಾಕಿ ಇತ್ತು. ಇದಕ್ಕಾಗಿ ಸಿರಾಜ್ ದಿನವೂ ಪೀಡಿಸುತ್ತಿದ್ದನಂತೆ. ಬೇಗ ಹಣ ಕೊಡುವಂತೆ ದಿನವೂ ಒತ್ತಡ ಹೇರುತ್ತಿದ್ದನಂತೆ. ಇದರಿಂದ ಆಕ್ರೋಶಗೊಂಡಿದ್ದ ಯಾಸಿನ್, ಹಣ ನೀಡುತ್ತೇನೆ ಬಾ ಎಂದು ಮೊಹಮ್ಮದ್ ಸಿರಾಜ್ ನನ್ನು ಕರೆಸಿಕೊಂಡಿದ್ದಾನೆ. ಹಣ ಕೊಡುತ್ತಾನೆ ಎಂದು ನಂಬಿಕೊಂಡು ಬಂದ ಸಿರಾಜ್ ಗೆ ಮೊದಲು ಯಾಸಿನ್ ಸುತ್ತಿಗೆಯಿಂದ ತಲೆಗೆ ಬಲವಾದ ಪೆಟ್ಟು ನೀಡಿದ್ದಾನೆ. ನಂತರ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಉತ್ತರ ಕನ್ನಡ: ಯುವತಿಯೊಬ್ಬಳ ಜೊತೆ ಪ್ರೀತಿಸುವ ನಾಟಕವಾಡಿ, ಮದುವೆಯಾಗುತ್ತೇನೆಂದು ನಂಬಿಸಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ಆಕೆಯಿಂದ ಸುಮಾರು 18 ಲಕ್ಷ ರೂಪಾಯಿ ಪೀಕಿ ವಂಚನೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸುಚಿತ್ರ ಎಂಬ ಯುವತಿ ದೂರು ನೀಡಿದವರಾಗಿದ್ದಾರೆ. ಮುಂಡಗೋಡು ಪೊಲೀಸ್ ಠಾಣೆಯ ಕಾನ್ಸ್’ಟೇಬಲ್ ಗಿರೀಶ್ ಲವ್ ಮಾಡುತ್ತೇನೆ. ಮದುವೆಯಾಗುತ್ತೇನೆ ಎಂದು ನಂಬಿಸಿದ್ದು, ನಂತರ ತನಗೆ ಕಷ್ಟ ಇದೆ ಎಂದು ಹೇಳಿಕೊಂಡು ಯುವತಿಯಿಂದ 18 ಲಕ್ಷ ರೂಪಾಯಿ ಪಡೆದಿದ್ದ. ಆ ಬಳಿಕ ಮದುವೆಯೂ ಆಗದೆ, ಹಣವೂ ವಾಪಸ್ ಕೊಡದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸುಚಿತ್ರ ಮೊದಲಿಗೆ ಎಸ್ ಪಿ ವಿಷ್ಣವರ್ದನ್ ಅವರಿಗೆ ದೂರು ಕೊಟ್ಟಿದ್ದರು. ಈ ವೇಳೆ ಆರೋಪಿಯನ್ನು ಕರೆಸಿ ಮಾತನಾಡಿದ್ದಾರೆ. ಹಣ ತೆಗೆದುಕೊಂಡಿರುವ ನಿಜ. ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಳಂತೆ. ನಂತರ ಮದುವೆಯಾಗದೇ ವಂಚಿಸಿದ್ದಾನೆಂದು ಸುಚಿತ್ರ ಕಳೆದ ರಾತ್ರಿ ಮುಂಡಗೋಡು…
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆದ್ರೆ ಅದಾಗಲೇ ದೇವಸ್ಥಾನ ಮೇಲ್ಛಾವಣಿ ಸೋರುತ್ತಿದೆಯಂತೆ. ಹೀಗಂತ ದೇಗುಲದ ಅರ್ಚಕ ಸತ್ಯೇಂದ್ರ ದಾಸ್ ಅವರೇ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಸದ್ಯ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ರಾಮಮಂದಿರದ ಛಾವಣಿ ಸೋರುತ್ತಿದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿಕೆ ನೀಡಿದ್ದಾರೆ. ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ಸುಸಜ್ಜಿತವಾಗಿಯೇ ದೇಗುಲ ಕಟ್ಟಿದ್ದರೂ ನೀರು ಸೋರುತ್ತಿದೆ ಎಂದು ಅರ್ಚಕರು ಹೇಳಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ, ಇನ್ನೂ ಮಂದಿರದ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ನಡೆಯುತ್ತಿರುವಾಗ ಸೋರುವುದು ಸಹಜ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ರಾಮಲಲ್ಲಾ ವಿಗ್ರಹದ ಮುಂಭಾಗದಲ್ಲಿ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮಳೆ ನೀರು ಸೋರುತ್ತಿದೆ ಎಂದು ತಿಳಿದುಬಂದಿದೆ.. ಎಂಜಿನಿಯರ್‌ಗಳು ಇದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…