Subscribe to Updates
Get the latest creative news from FooBar about art, design and business.
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
Author: admin
ತುಮಕೂರು: ಕಳವು ಮಾಲು ಸ್ವೀಕರಿಸಿದ ಆರೋಪದ ಮೇರೆಗೆ ಅಟ್ಟಿಕಾ ಗೋಲ್ಡ್ ಕಂಪನಿಯ ಬಾಬು @ಪಿ.ಎಸ್.ಅಯ್ಯೂಬ್ ಬಿನ್ ಸೈಯದ್ ಬಾಷಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಅಟ್ಟಿಕ ಬಾಬು ಮನೆಯ ಬಳಿ ವಶಕ್ಕೆ ಪಡೆದಿರುವ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುರುವೇಕೆರೆ ಪೊಲೀಸ್ ವೃತ್ತ ನಿರೀಕ್ಷಕ ಲೋಹಿತ್ ಬಿ.ಎನ್ ಮತ್ತು ಸಿಬ್ಬಂದಿಯವರು ಕುಣಿಗಲ್ ಡಿ.ಎಸ್.ಪಿ ರವರ ಮತ್ತು ತುಮಕೂರಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹಾಗೂ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತುರುವೇಕೆರೆ ಪೊಲೀಸ್ ಠಾಣಾ ಮೊ.ನಂ-185/2023 ಕಲಂ–454, 380, 411, 413 ಐಪಿಸಿ ಪ್ರಕರಣದಲ್ಲಿ ಕಳುವು ಮಾಲು ಸ್ವೀಕರಿಸಿರುವ ಆರೋಪಿಯನ್ನಾಗಿ ಪರಿಗಣಿಸಲಾಗಿತ್ತು. ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕರು, ನಂ–ಟಿ–3, ಮರಿಯಮ್ಮ ಅಪಾರ್ಟ್ಮೆಂಟ್ಸ್, ಪ್ರೆಜರ್ ಟೌನ್ ಬೆಂಗಳೂರು ಇವರನ್ನು ಜೂನ್ 26ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಇವರ ಮನೆಯ ಬಳಿ ಬಂಧಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಚುನಾವಣೆ ರ‍್ಯಾಲಿ ಇರಲಿ, ರಕ್ಷಾಬಂಧನವೇ ಇರಲಿ, ಎಲ್ಲಿಯೇ ಮಕ್ಕಳನ್ನು ಕಂಡರೂ ಅವರೊಂದಿಗೆ ಮೋದಿ ಬೆರೆಯುತ್ತಾರೆ. ಅವರ ಜತೆ ಒಂದಷ್ಟು ಕಾಲ ಕಳೆಯುತ್ತಾರೆ. ನರೇಂದ್ರ ಮೋದಿ ಅವರು ಬುಧವಾರ (ಜೂನ್ 26) ಸಂಸತ್ ಅಧಿವೇಶನ, ಪ್ರತಿಪಕ್ಷಗಳ ಗಲಾಟೆ, ನೂತನ ಸ್ಪೀಕರ್ ಆಯ್ಕೆಯ ಭರಾಟೆಯ ಮಧ್ಯೆಯೂ ಮೋದಿ ಅವರು ಇಬ್ಬರು ಪುಟಾಣಿಗಳೊಂದಿಗೆ ಕಾಲ ಕಳೆದಿದ್ದಾರೆ. ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದ ವಿಡಿಯೊ ಈಗ ಭಾರಿ ವೈರಲ್ ಆಗಿದೆ.ಆ ಇಬ್ಬರು ಪುಟಾಣಿಗಳು ಯಾರು ಎಂದು ಎಲ್ಲರಿಗೂ ಪ್ರಶ್ನೆಯಾಗಿದ್ದು ಇಲ್ಲಿದೆ ಉತ್ತರ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್ ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ಪುಟಾಣಿಗಳೂ ಅಷ್ಟೇ, ಮೋದಿ ಅವರ ಎದುರು ದೇಶಭಕ್ತಿ ಗೀತೆಯನ್ನು ಒಟ್ಟಿಗೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ನಮ್ಮತುಮಕೂರಿನ ಕ್ಷಣ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಕಾರಣವೇನು ಗೊತ್ತೆ ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 27-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೆ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಭಾರೀ ಮಳೆಯಾಗುತ್ತಿದೆ. ನಾಳೆ ಭಾರೀ ಮಳೆ ಸುರಿಯಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ಕರಿಯಮ್ಮದೇವಿ ಹಾಗೂ ಕೊಲ್ಲಾಪುರದಮ್ಮದೇವಿಯರ ಜಾತ್ರಾ ಮಹೋತ್ಸವವು ವೈಭವದಿಂದ ನೆರವೇರಿತು. ಜಾತ್ರೆಯ ಅಂಗವಾಗಿ ಮೊದಲ ಸೋಮವಾರ ಗಂಗಾಪೂಜೆ, ಗಣಪತಿ ಪೂಜೆ, ನವಗ್ರಹ ಹೋಮ ದುರ್ಗಾ ಹೋಮ ಪೂರ್ಣಾಹುತಿ ಇತ್ಯಾದಿಗಳು ನೆರವೇರಿದವು. ಅನ್ನಲಪುರಿ ಆಂಜನೇಯಸ್ವಾಮಿಗೆ ಗ್ರಾಮಸ್ಥರು ಜ್ಯೋತಿ ಬೆಳಗಿದರು. ಮಂಗಳವಾರ ಗ್ರಾಮದೇವತೆಗಳಿಗೆ ಗ್ರಾಮದ ಮಹಿಳೆಯರು ಜ್ಯೋತಿ ಬೆಳಗಿ ಸಂಭ್ರಮಿಸಿದರು. ಬುಧವಾರದಂದು ಶ್ರೀ ಪಾತಲಿಂಗೇಶ್ವರ ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು. ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಮೂರು ದಿನಗಳ ಕಾಲ ಸಂಭ್ರಮ ಮನೆ ಮಾಡಿತ್ತು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಪಂಜುರ್ಲಿ ಮತ್ತು ಗುಳಿಗ ದೈವಗಳಿವೆ. ಅದ್ರಲ್ಲೂ ಗುಳಿಗ ದೈವದ ಶಕ್ತಿ ಅಪಾರವಾದ್ದು ಅಂತ ಹೇಳಲಾಗುತ್ತೆ. ತನ್ನನ್ನ ನಿರ್ಲಕ್ಷ್ಯ ಮಾಡಿ ನಿರ್ಮಾಣಕ್ಕೆ ಮುಂದಾದ ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ದೈವ ಮುನಿಸಿಕೊಂಡಿದೆ. ದೈವ ಮುನಿಸಿಕೊಂಡ ಪರಿಣಾಮ ಅಲ್ಲಿ ಒಂದಲ್ಲ ಒಂದು ಅವಾಂತರಗಳು ಸಂಭವಿಸುತ್ತಿದೆ. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡಿಯುತ್ತಿವೆ. ಆದ್ರೆ, ಮಂಗಳೂರಿನ ಹಂಪನಕಟ್ಟೆಯಹಳೆ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ. ಮಂಗಳೂರಿನ ಈ ಸ್ಥಳದಲ್ಲಿ ಕಾಮಗಾರಿ ನಿಲ್ಲೋದಿರಲಿ, ಆ ಕಾಂಟ್ರ್ಯಾಕ್ಟರ್ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ದೈವಗಳ ನೆಲೆಬೀಡು ಕರಾವಳಿ ಒಂದಲ್ಲ ಒಂದು ದೈವ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಾ ಇರುತ್ತದೆ. ಇದೀಗ ದೈವ ಮುನಿಸಿಕೊಂಡ ಪರಿಣಾಮ ದೊಡ್ಡ ಅವಘಡದ ಮುನ್ಸೂಚನೆ ನೀಡಿದೆ. ಈ ಗುಳಿಗನ ಕೋಪದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಎದ್ದಿರೋದು ಬಿಟ್ರೆ ಬಹುಅಂತಸ್ತಿನ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ಕೊರಟಗೆರೆ : ನೀನೇನು ಎಸಿನಾ ಅಥವಾ ಡಿಸಿನಾ ನಿನ್ನಿಂದ ನಾನು ಹೆದರೋಕೆ.. ನಿನ್ನ ಹೆಸರೇನು ಹೇಳಿ ನೋಡು ನಾನೇನು ಮಾಡ್ತೀನಿ ಅಂತಾ ಗೊತ್ತಾಗುತ್ತೆ.. ನಾನು ಯಾರಿಗೂ ಹೆದರೋದಿಲ್ಲ ಹೆದರಿಸೋಕೆ ಬರಬೇಡಿ ನೀವು. ನಾನು ಪ್ರಕರಣ ದಾಖಲು ಮಾಡ್ತಿದ್ರೇ ನೀವು ಜೈಲಿಗೆ ಹೋಗ್ತಿರಾ ಹುಷಾರ್ ಎಂದು ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ.ನವೀನ್ ಚಿಕಿತ್ಸೆಗೆಂದು ನಾನು ಹೋದ ಸಂದರ್ಭದಲ್ಲಿ ನನಗೆ ಬೆದರಿಕೆ ಹಾಕಿದ್ದಾನೆ ಎಂದು ದಲಿತ ಹೋರಾಟಗಾರ ಚಿಕ್ಕರಂಗಯ್ಯ ಆರೋಪಿಸಿದ್ದಾರೆ. ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂನ್ 25ರ ಮಂಗಳವಾರ ಬೆಳಿಗ್ಗೆ 11ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಡಾ.ನವೀನ್ ಜೂನ್ 24ರ ಸೋಮವಾರ ಬೆಳಿಗ್ಗೆ 9ರಿಂದ ಜೂನ್ 25ರ ಮಂಗಳವಾರ ಬೆಳಿಗ್ಗೆ 9ರವರೆಗೆ ಕರ್ತವ್ಯನಿರತ ವೈದ್ಯರು. ಆದರೆ ಅವರು ಕರ್ತವ್ಯದಲ್ಲಿರಲಿಲ್ಲ. ಅವರನ್ನು ಪ್ರಶ್ನೆ ಮಾಡಿದರೆ ಸಮವಸ್ತ್ರವೂ ಧರಿಸದೇ ರೋಗಿಗಳ ಜೊತೆಗೆ ಉದ್ಧಟತನದಿಂದ ವರ್ತಿಸಿದ್ದಾರೆ. ಘಟನೆಗೂ ನವೀನ್ ಗೂ ಸಂಬಂಧ ಏನು.? ಕೊರಟಗೆರೆ…
ತಿಪಟೂರು: ಅರವಿಂದ ಆಯುರ್ವೇದ ಚಿಕಿತ್ಸಾಲಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಪರವಗೊಂಡನಹಳ್ಳಿ ಜಾನಕಿ ರಾಮ ಮಹಿಳಾ ಜ್ಞಾನ ವಿಕಾಸ ಕೇಂದ್ರದ 40 ಮಂದಿ ಮಹಿಳಾ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಬಿ.ಪಿ, ಶುಗರ್, ಹಾಗೂ ಆರೋಗ್ಯ ತಪಾಸಣೆ ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅರವಿಂದ ಆಯುರ್ವೇದದ ಅನುಭವಿ ವೈದ್ಯರ ತಂಡ ಭಾಗಿಯಾಗಿದ್ದರು. ಮಹಿಳೆಯರ ಆರೋಗ್ಯ ಸಂಬಂಧಿ ಕಾಯಿಲೆಗಳು ಹಾಗೂ ವೈದ್ಯಕೀಯ ಸಲಹೆ ಸೂಚನೆಗಳನ್ನು ಸಹ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖ್ಯಾತ ಆಯುರ್ವೇದ ತಜ್ಞರಾದ ಡಾ.ಪ್ರಶಾಂತ್ ನೈಸರ್ಗಿಕ ಆಯುರ್ವೇದ ಚಿಕಿತ್ಸೆ ಮೂಲಕ ಸಂಪೂರ್ಣ ಸ್ವಾಸ್ಥ್ಯವನ್ನು ಪಡೆದುಕೊಳ್ಳಬಹುದು, ಮಹಿಳೆಯರಿಗೆ ದೀರ್ಘ ಕಾಲದಿಂದಲೂ ಕಾಡುವ ಸಮಸ್ಯೆಗಳನ್ನು ಸಹ ಪರಿಣಾಮಕಾರಿಯಾಗಿ ಆಪ್ತ ಸಮಾಲೋಚನೆಗಳು, ವೈಯಕ್ತಿಕ ಚಿಕಿತ್ಸಾ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನುಡಿದರು. ಅರವಿಂದ ಆಯುರ್ವೇದದಲ್ಲಿ ಇರುವಂತಹ ಶಾಸ್ತ್ರೀಯ ಆಯುರ್ವೇದ ಮಾದರಿಯ ಚಿಕಿತ್ಸಾ ವಿಧಾನಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.…
ತುಮಕೂರು: ಮಕ್ಕಳ ಮಾರಾಟ ಜಾಲವನ್ನು ಪತ್ತೆಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮಾರಾಟ ಮಾಡಲಾಗಿದ್ದ 5 ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಹೇಶ ಯು.ಡಿ., ಮಹಬೂಬ್, ಕೆ.ಎನ್. ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷ, ಪೂರ್ಣಿಮಾ ಹಾಗೂ ಸೌಜನ್ಯ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಜೂನ್ 9ರಂದು ರಾತ್ರಿ ಗುಬ್ಬಿ ತಾಲೂಕಿನ ಅಂತಾಪುರ ಬಳಿ ಮಹಾದೇವಿ ರವರ 11 ತಿಂಗಳ ಮಗುವನ್ನು ದುಷ್ಕರ್ಮಿಗಳು ಅಪಹರಿಸಿರುವ ಬಗ್ಗೆ ಗೋಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೇವಸ್ಥಾನದ ಬಳಿ ಸಂತ್ರಸ್ತ ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ರಾತ್ರಿ ವೇಳೆಯಲ್ಲಿ 11 ತಿಂಗಳ ಮಗುವನ್ನು ವ್ಯವಸ್ಥಿತ ರೀತಿಯಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು. ತನಿಖಾ ತಂಡವು ಮಗುವನ್ನು ಕಳ್ಳತನ ಮಾಡಿದ ಆರೋಪದ ಮೇರೆಗೆ ಗುಬ್ಬಿ ತಾಲ್ಲೂಕು ಬಿಕ್ಕೇಗುಡ್ಡವಾಸಿ ರಾಮಕೃಷ್ಣ ಹಾಗೂ ತುಮಕೂರು ನಗರ ಭಾರತೀ ನಗರದ ವಾಸಿ ಹನುಮಂತರಾಜು ಬಿನ್ ಲೇಟ್ ಕರಿಯಪ್ಪ ಎಂಬುವರನ್ನು ಬಂಧಿಸಿದ್ದರು. ಅವರು…
ಬೆಂಗಳೂರು: ವಿಶ್ವದೆಲ್ಲೆಡೆ ಮಾದಕ ದ್ರವ್ಯ ಆಧುನಿಕ ಪಿಡುಗು ಆಗಿದ್ದು, ಯುವ ಸಮುದಾಯವನ್ನೇ ಹಾಳು ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆಯು 1987ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂನ್ 26ರಂದು ಆಚರಿಸಲು ನಿರ್ಣಯಿಸಿತು. ಸಮಾಜಕ್ಕೆ ದೊಡ್ಡ ರೋಗವಾಗಿ ಅಂಟಿಕೊಳ್ಳುತ್ತಿದ್ದು, ಯುವ ಪೀಳಿಗೆ ಸಂಕಷ್ಟಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಬೇಕಿದೆ ಎಂದರು. ಭಾರತವು ಮಾದಕ ವಸ್ತುಗಳ ಸಮಸ್ಯೆಯಲ್ಲಿ ಸಿಲುಕುತ್ತಿದೆ. 5 ಕೋಟಿ ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಿದರು. ಕೊಲೆ ಪ್ರಕರಣಗಳನ್ನು…
ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಿಐಡಿ ವಶದಲ್ಲಿರುವ ವಿಧಾನಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಸೂರಜ್ ರೇವಣ್ಣ ವಿರುದ್ಧ ಇದೀಗ ಮತ್ತೊಂದು ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ. ಕೊರೋನ ಸಂದರ್ಭದಲ್ಲಿ ಸೂರಜ್ ರೇವಣ್ಣ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಅವರ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಶಿವಕುಮಾರ್ ಈ ಹಿಂದೆ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತನ ವಿರುದ್ಧವೇ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದು, ಬಳಿಕ ನಾಪತ್ತೆಯಾಗಿದ್ದರು. ಮಂಗಳವಾರ ಶಿವಕುಮಾರ್ ಹೊಳೆನರಸೀಪುರ ಠಾಣೆಗೆ ಹಾಜರಾಗಿ ಸೂರಜ್ ರೇವಣ್ಣ ವಿರುದ್ಧವೇ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಸಂತ್ರಸ್ತ ಸೂರಜ್ ರೇವಣ್ಣ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸೂರಜ್ ರೇವಣ್ಣರ ಒತ್ತಡದ ಹಿನ್ನೆಲೆಯಲ್ಲಿ ಮೊದಲ ಸಂತ್ರಸ್ತನ ವಿರುದ್ಧ ಬ್ಲ್ಯಾಕ್ ಮೇಲ್ ದೂರು ದಾಖಲಿಸಿದ್ದೆ. ಸೂರಜ್ ನನಗೆ…