nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ

    July 28, 2026

    ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ

    July 28, 2026

    ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ

    July 28, 2026
    Facebook Twitter Instagram
    ಟ್ರೆಂಡಿಂಗ್
    • ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
    • ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
    • ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
    • ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
    • ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
    • KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್‌: ವಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ
    • ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
    • ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಮವಸ್ತ್ರವೂ ಧರಿಸದೇ ರೋಗಿಗಳೊಂದಿಗೆ ವೈದ್ಯನ ರೌಡಿಸಂ:  ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ
    ಕೊರಟಗೆರೆ June 26, 2024

    ಸಮವಸ್ತ್ರವೂ ಧರಿಸದೇ ರೋಗಿಗಳೊಂದಿಗೆ ವೈದ್ಯನ ರೌಡಿಸಂ:  ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ

    By adminJune 26, 2024No Comments2 Mins Read
    dr naveen

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ಕೊರಟಗೆರೆ : ನೀನೇನು ಎಸಿನಾ ಅಥವಾ ಡಿಸಿನಾ ನಿನ್ನಿಂದ ನಾನು ಹೆದರೋಕೆ.. ನಿನ್ನ ಹೆಸರೇನು ಹೇಳಿ ನೋಡು ನಾನೇನು ಮಾಡ್ತೀನಿ ಅಂತಾ ಗೊತ್ತಾಗುತ್ತೆ.. ನಾನು ಯಾರಿಗೂ ಹೆದರೋದಿಲ್ಲ ಹೆದರಿಸೋಕೆ ಬರಬೇಡಿ ನೀವು. ನಾನು ಪ್ರಕರಣ ದಾಖಲು ಮಾಡ್ತಿದ್ರೇ ನೀವು ಜೈಲಿಗೆ ಹೋಗ್ತಿರಾ ಹುಷಾರ್ ಎಂದು ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ.ನವೀನ್ ಚಿಕಿತ್ಸೆಗೆಂದು ನಾನು ಹೋದ ಸಂದರ್ಭದಲ್ಲಿ ನನಗೆ ಬೆದರಿಕೆ ಹಾಕಿದ್ದಾನೆ ಎಂದು ದಲಿತ ಹೋರಾಟಗಾರ ಚಿಕ್ಕರಂಗಯ್ಯ ಆರೋಪಿಸಿದ್ದಾರೆ.

    ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂನ್ 25ರ ಮಂಗಳವಾರ ಬೆಳಿಗ್ಗೆ 11ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಡಾ.ನವೀನ್ ಜೂನ್ 24ರ ಸೋಮವಾರ ಬೆಳಿಗ್ಗೆ 9ರಿಂದ ಜೂನ್ 25ರ ಮಂಗಳವಾರ ಬೆಳಿಗ್ಗೆ 9ರವರೆಗೆ ಕರ್ತವ್ಯನಿರತ ವೈದ್ಯರು.  ಆದರೆ ಅವರು ಕರ್ತವ್ಯದಲ್ಲಿರಲಿಲ್ಲ. ಅವರನ್ನು ಪ್ರಶ್ನೆ ಮಾಡಿದರೆ ಸಮವಸ್ತ್ರವೂ ಧರಿಸದೇ ರೋಗಿಗಳ ಜೊತೆಗೆ ಉದ್ಧಟತನದಿಂದ ವರ್ತಿಸಿದ್ದಾರೆ.

     ಘಟನೆಗೂ ನವೀನ್ ಗೂ  ಸಂಬಂಧ ಏನು.?

    ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯ ಬಗ್ಗೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ದಲಿತ ಹೋರಾಟಗಾರ ಚಿಕ್ಕರಂಗಯ್ಯ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ್‍ ಗೆ  ಪ್ರಶ್ನೆ ಮಾಡ್ತಾರೇ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯ ಡಾ.ನವೀನ್ ಏಕಾಏಕಿ ಕಿರುಚಬೇಡಿ ಇಲ್ಲಿ ಯಾರು ಹೆದರೋರು ಯಾರು ಇಲ್ಲ. ನನಗೆ ಲೌಡಕ್ಕೆಬಾಲ್ ಅಂತಿಯಾ ನೀನು? ನಿನ್ನ ಹೆಸರೇನು ನಿನಗೇ ಏನ್ ಮಾಡ್ತೀನಿ ನೋಡ್ತಾ ಇರು ಅಂತಾರೇ. ವೈದ್ಯ ಡಾ.ಪುರುಷೋತ್ತಮ ಅವರು ಡಾ.ನವೀನ್‍ ಗೆ ಸುಮ್ಮನಿರಲು ಸೂಚಿಸಿದ್ರು  ಆದರೆ ಸುಮ್ಮನಾಗದೇ ಜಗಳಕ್ಕೆ ಇಳಿದಿದ್ದಾರೆ  ಎಂದು ಆರೋಪಿಸಲಾಗಿದೆ.

     ಪೊಲೀಸ್ ಠಾಣೆಗೆ ದೂರು:

    ಸಾರ್ವಜನಿಕ ಆಸ್ಪತ್ರೆಯ ಡಾ.ನವೀನ್ ಸಮವಸ್ತ್ರವೂ ಧರಿಸದೇ ನಿರ್ಲಕ್ಷ್ಯ ವಹಿಸಿದ್ದು, ಚಿಕಿತ್ಸೆಗೆ ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಎತ್ತಿ ಹೊಡೆಯಲು ಬಂದು ಜಾತಿಯ ಹೆಸರೇಳಿ ನಿಂದನೆ ಮಾಡಿದ್ದಾನೆ ಎಂದು ಕೊರಟಗೆರೆ ಪೊಲೀಸ್ ಠಾಣೆಗೆ ದಲಿತ ಮುಖಂಡ ಚಿಕ್ಕರಂಗಯ್ಯ ದೂರು ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪದೇ ಪದೇ ಕರ್ತವ್ಯಲೋಪ ಮಾಡುವ ಡಾ.ನವೀನ್‍ರನ್ನು ತಕ್ಷಣ ಅಮಾನತು ಮಾಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಗೆ ಮನವಿ ಮಾಡಿದ್ದಾರೆ.

    ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ಜಾರಿ:

    ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ರೋಗಿಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರು ಬಂದಿವೆ. ವೈದ್ಯರಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದ್ರು ಸಮಸ್ಯೆ ಸರಿಹೋಗಿಲ್ಲ. ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಆಗಮಿಸದೇ ಇದ್ದರೇ ವೈದ್ಯರೇ ನೇರಹೊಣೆ ಆಗಬೇಕಾಗುತ್ತದೆ.  ಚಿಕ್ಕರಂಗಯ್ಯ ಮೇಲೆ ಡಾ.ನವೀನ್ ನೀಡಿರುವ ದೂರುಪತ್ರ ಕುರಿತು ವಿಚಾರಣೆ ಪ್ರಯುಕ್ತ ಜೂ.25ರ ಮ.3:30ಕ್ಕೆ ಹಾಜರಾಗುವಂತೆ ಮುಖ್ಯ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.

    ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರೌಡಿಗಳ ರೀತಿಯಲ್ಲಿ ಡಾ.ನವೀನ್ ಬೆದರಿಕೆ ಹಾಕ್ತಾರೇ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತು. ಸಮವಸ್ತ್ರವೇ ಇಲ್ಲದ ಕೊರಟಗೆರೆ ಆಸ್ಪತ್ರೆಯ ವೈದ್ಯ ಡಾ.ನವೀನ್ ನನ್ನ ಮೈಮೇಲಿನ ಬಟ್ಟೆ ಎಳೆದು ಜಾತಿನಿಂದನೆ ಮಾಡಿದ್ದಾರೆ. ಡಾ.ನವೀನ್ ಮೇಲೆ ಪ್ರಕರಣ ದಾಖಲಿಸಲು ಠಾಣೆಗೆ ದೂರು ನೀಡಿದ್ದೇನೆ.

    ಚಿಕ್ಕರಂಗಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ದಲಿತ ಹೋರಾಟಗಾರ


    ಸರಕಾರಿ ಆಸ್ಪತ್ರೆಗೆ ಚಿಕ್ಕರಂಗಯ್ಯ ಚಿಕಿತ್ಸೆಗೆ ಬಂದಾಗ ಡಾ.ನವೀನ್ ನಡುವೆ ವಾಗ್ವಾದ ನಡೆದಿದೆ. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸೌಮ್ಯತೆಯಿಂದ ವರ್ತಿಸಲು ಈಗಾಗಲೇ ನವೀನ್‍ ಗೆ ಸೂಚಿಸಲಾಗಿದೆ. ದೂರಿನ ಬಗ್ಗೆ ನನಗೇನು ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಆಗದಂತೆ ಕರೆದು ಮಾತನಾಡ್ತೇನೆ. ಆರೋಗ್ಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದೆ.

    -ಡಾ.ಲಕ್ಷ್ಮೀಕಾಂತ ಟಿ.ಎಸ್, ಮುಖ್ಯ ಆಡಳಿತ ವೈದ್ಯಾಧಿಕಾರಿ. ಕೊರಟಗೆರೆ.


     

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ

    July 25, 2026

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026

    ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ

    July 25, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ

    July 28, 2026

    ಔರಾದ್ (ಬೀದರ್): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಔರಾದ್ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ…

    ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ

    July 28, 2026

    ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ

    July 28, 2026

    ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ

    July 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.