nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ

    September 19, 2026

    ಸೆ.30ರೊಳಗೆ ಔರಾದ್‌ ಬರಪೀಡಿತ ತಾಲೂಕು ಘೋಷಣೆ: ಡಾ.ಭೀಮಸೇನರಾವ ಶಿಂಧೆ ವಿಶ್ವಾಸ

    September 19, 2026

    ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

    September 19, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ
    • ಸೆ.30ರೊಳಗೆ ಔರಾದ್‌ ಬರಪೀಡಿತ ತಾಲೂಕು ಘೋಷಣೆ: ಡಾ.ಭೀಮಸೇನರಾವ ಶಿಂಧೆ ವಿಶ್ವಾಸ
    • ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    • ಔರಾದ್: ಹೂಳೆತ್ತುವ ಕಾಮಗಾರಿ: ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ವೀಕ್ಷಣೆ
    • ಔರಾದ್‌: ಶೆಂಬೆಳ್ಳಿ ಗ್ರಾಮದಲ್ಲಿ ಹಳ್ಳ ಹಿಡಿದ ‘ಜೆಜೆಎಂ’ ಕಾಮಗಾರಿ; ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
    • ದೀಕ್ಷಾಭೂಮಿ ಯಾತ್ರೆಗೆ ಆನ್ ಲೈನ್ ಅರ್ಜಿ ಆಹ್ವಾನ
    • ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ
    • ಬರಪೀಡಿತ ಕ್ಷೇತ್ರದಲ್ಲಿ ಹೇಮಾವತಿ ನೀರಿಗಾಗಿ ಪಟ್ಟು: ದಸರಾ ಉತ್ಸವ ಬಹಿಷ್ಕರಿಸಿದ ಶಾಸಕ ಸುರೇಶ್ ಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ
    ಕೊರಟಗೆರೆ September 19, 2026

    ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ

    By Ganesh TumkuruSeptember 19, 2026No Comments2 Mins Read
    praja seva koratagere

    ವರದಿ: ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ: 35ಕ್ಕೂ ಅಧಿಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನೇರವಾಗಿ ನಿಮ್ಮ ಗ್ರಾಮಕ್ಕೇ ಆಗಮಿಸಿ, ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಬಗೆಹರಿಸುವ ವಿನೂತನ ಕಾರ್ಯಕ್ರಮವೇ ‘ಪ್ರಜಾಸೇವಾ ಅಭಿಯಾನ’ ಎಂದು ಕೊರಟಗೆರೆ ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.

    ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆಯ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಪ್ರಜಾಸೇವಾ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಮಾತನಾಡಿ, “ಪ್ರಜಾಸೇವಾ ಅಭಿಯಾನವು ರಾಜ್ಯ ಸರ್ಕಾರದ ಉತ್ತಮ ಯೋಜನೆಯಾಗಿದೆ. ಸರ್ಕಾರದ ಸೌಲಭ್ಯಗಳು ಜನರ ಮನೆಬಾಗಿಲಿಗೆ ಬಂದು ತಲುಪಿದಾಗ, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಂಡರೆ ಮಾತ್ರ ಈ ಅಭಿಯಾನಕ್ಕೆ ನಿಜವಾದ ಯಶಸ್ಸು ಸಿಗುತ್ತದೆ” ಎಂದರು.

    ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, “ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಗ್ರಾಮೀಣ ಜನರಿಗೆ ವರದಾನವಾಗಿವೆ. ಆದರೆ ತೋವಿನಕೆರೆ ಭಾಗದ ರೈತರಿಗೆ ವಿದ್ಯುತ್ ಅಭಾವ ಹೆಚ್ಚಾಗಿದೆ. ಜೊತೆಗೆ ಸಾಗುವಳಿ ಚೀಟಿ ನೀಡುವಲ್ಲಿ ವಿಳಂಬವಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಯನ್ನು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಆದ್ಯತೆಯ ಮೇಲೆ ಮಾಡಬೇಕು” ಎಂದು ಸೂಚಿಸಿದರು.

    “ಪ್ರಜಾಸೇವಾ ಅಭಿಯಾನವು ಗ್ರಾಮೀಣ ಜನರಿಗೆ ವರದಾನ. ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವ ಬದಲು ಅಧಿಕಾರಿಗಳೇ ಜನರ ಬಳಿಗೆ ಬರುವುದು ವಿಶೇಷ. ತೋವಿನಕೆರೆಯಲ್ಲಿ ರೈತರ ಸಾಗುವಳಿ ಚೀಟಿ ಹಾಗೂ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕಿದೆ.”

    — ಪ್ರಸನ್ನಕುಮಾರ್, ಮಾಜಿ ಜಿ.ಪಂ. ಸದಸ್ಯ, ತೋವಿನಕೆರೆ

    203 ಅರ್ಜಿಗಳ ಸ್ವೀಕಾರ – ಅಧಿಕಾರಿಗಳಿಗೆ ಗಡುವು:

    ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 203 ಅರ್ಜಿಗಳು ಸ್ವೀಕಾರಗೊಂಡವು. ಇವುಗಳಲ್ಲಿ:

    • ತಾಲ್ಲೂಕು ಪಂಚಾಯಿತಿ: 87
    • ಕಂದಾಯ ಇಲಾಖೆ: 86
    • ಸರ್ವೆ ಇಲಾಖೆ: 8
    • ಸಣ್ಣ ನೀರಾವರಿ: 7
    • ಆಹಾರ ಇಲಾಖೆ: 6
    • ಅರಣ್ಯ ಇಲಾಖೆ: 3
    • ಕೃಷಿ ಇಲಾಖೆ: 3
    • ಬೆಸ್ಕಾಂ: 1
    • ಸಮಾಜ ಕಲ್ಯಾಣ: 1
    • ಎತ್ತಿನಹೊಳೆ ಯೋಜನೆ: 1
    • ಪ್ರವಾಸೋದ್ಯಮ ಇಲಾಖೆ: 1

    ಸ್ವೀಕೃತಗೊಂಡ ಅರ್ಜಿಗಳಲ್ಲಿ 10 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಉಳಿದ ಅರ್ಜಿಗಳನ್ನು ಮುಂದಿನ 4 ದಿನಗಳ ಒಳಗಾಗಿ ಪರಿಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಹಶೀಲ್ದಾರ್ ಅವರು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು.

    ಕಾರ್ಯಕ್ರಮದಲ್ಲಿ ತಾಪಂ ಇಓ ಅಪೂರ್ವ, ಸಿಪಿಐ ಪುರುಷೋತ್ತಮ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಗ್ರೇಡ್-2 ತಹಶೀಲ್ದಾರ್ ವೆಂಕಟರಂಗನ್, ಶಿರಸ್ತೇದಾರ್ ವೆಂಕಟೇಶ್, ಉಪ ತಹಶೀಲ್ದಾರ್ ಪ್ರತಾಪ್ ಕುಮಾರ್, ಪಿಡಿಓಗಳಾದ ಸುನೀಲ್, ರವಿಕುಮಾರ್, ರಘುನಂದನ್, ರಂಗನರಸಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಕೊರಟಗೆರೆಗೂ ಬಂತು ಕೆ.ಎಸ್‌.ಆರ್‌.ಟಿ.ಸಿ. ಉಪವಿಭಾಗ ಭಾಗ್ಯ: ಹುಲಿಕುಂಟೆ ಸ.ನಂ. 60 ರಲ್ಲಿ 6 ಎಕರೆ ಜಾಗ ಗುರುತು

    September 19, 2026

    ಕೊರಟಗೆರೆ: ಕೆರೆ ನೀರು ಅಕ್ರಮ ಬಳಕೆ ಆರೋಪ – ಗ್ರಾಮಸ್ಥರು ಹಾಗೂ ರೈತರ ತೀವ್ರ ಆಕ್ರೋಶ

    September 17, 2026

    ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಸಿದ್ಧರಬೆಟ್ಟದಲ್ಲಿ ಮಾದಕ ದ್ರವ್ಯ ನಿಗ್ರಹಕ್ಕೆ ಎದುರಾದ ಸವಾಲು

    September 17, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ

    September 19, 2026

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: 35ಕ್ಕೂ ಅಧಿಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನೇರವಾಗಿ ನಿಮ್ಮ ಗ್ರಾಮಕ್ಕೇ ಆಗಮಿಸಿ, ಸಾರ್ವಜನಿಕರ ಕುಂದುಕೊರತೆ…

    ಸೆ.30ರೊಳಗೆ ಔರಾದ್‌ ಬರಪೀಡಿತ ತಾಲೂಕು ಘೋಷಣೆ: ಡಾ.ಭೀಮಸೇನರಾವ ಶಿಂಧೆ ವಿಶ್ವಾಸ

    September 19, 2026

    ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

    September 19, 2026

    ಔರಾದ್: ಹೂಳೆತ್ತುವ ಕಾಮಗಾರಿ: ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ವೀಕ್ಷಣೆ

    September 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.