Subscribe to Updates
Get the latest creative news from FooBar about art, design and business.
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
- ಬಡ ರೈತರಿಗೆ ಸರಕಾರ ಹಕ್ಕು ನೀಡಿ ಬದುಕಲು ಬಿಡಬೇಕು: ಬಸವರಾಜಪ್ಪ
- ಸರಗೂರು: SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ
- ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು: ಲಕ್ಷಾಂತರ ಬೆಲೆಬಾಳುವ ರಾಗಿ, ಜೋಳ ಆನೆಗೆ ಆಹಾರ: ರೈತರು ಕಂಗಾಲು
Author: admin
ಔರಾದ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ರಸ್ತೆ ಸಮಸ್ಯೆಯ ಬಗ್ಗೆ ನಿನ್ನೆ(ಭಾನುವಾರ) ನಮ್ಮತುಮಕೂರು ಸವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಸ್ತೆ ನಿರ್ಮಾಣದ ಭರವಸೆಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ. ಸ್ವಲ್ಪ ಮಳೆ ಬಂದರೂ ಸಹ ರಸ್ತೆ ಕೆಸರುಮಯವಾಗಿ ಅಕ್ಷರಶಃ ಗದ್ದೆಯಾಗಿ ಮಾರ್ಪಡುತ್ತಿದೆ. ಈ ವಿಚಾರದ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ಹಲವಾರು ಬಾರಿ ಸಾರ್ವಜನಿಕರು ತಂದರೂ ಅವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಅವ್ಯವಸ್ಥೆ: ಗಾಢ ನಿದ್ದೆಯಲ್ಲಿರುವ ಅಧಿಕಾರಿಗಳು ನಿನ್ನೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಔರಾದ್ ತಾಲ್ಲೂಕು ಪಂಚಾಯಿತಿ ಅಧಿಕಾರಿ ಇಓ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ…
ಹಾಸನ: ಹೃದಯಾಘಾತದಿಂದ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಸಿ. ಎನ್. ಮಂಜುನಾಥ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗಿರುವ ‘ಧರ್ಮಸ್ಥಳದಲ್ಲಿ ನಮ್ಮೂರ ಗಣಪ ಮಂಟಪ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೃದಯಾಘಾತ ಪ್ರಕರಣಗಳು ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗದೆ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದರು. ಮಾನಸಿಕ ಒತ್ತಡ ಅವರ ಜೀವನದ ಅಭ್ಯಾಸ ಕ್ರಮಗಳು ಮತ್ತು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಸ್ವಯಂ ಪ್ರೇರಿತವಾಗಿ ಅವರು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಇವತ್ತು ದೇಶದಲ್ಲಿ ಯಾರೂ ಮದ್ಯಪಾನ ಮಾಡದವರು ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧೂಮಪಾನ ಮತ್ತು ಮದ್ಯಪಾನ ಹೃದಯಾಘಾತಕ್ಕೆ ಕಾರಣವಾಗಿದೆ. ಹಾಗೆ ಒತ್ತಡಗಳ ನಡುವೆ ಐಷಾರಾಮಿ ಜೀವನ ನಡೆಸುತ್ತಿರುವುದು, ಮತ್ತು ಮಾನಸಿಕ ಖಿನ್ನತೆಯಿಂದ ಮಾನವನ ದೇಹ ಸಡಿಲಿಕೆಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು. ಭಾರತ ದೇಶದಲ್ಲಿ ಸುಮಾರು 60ರಷ್ಟು ಸಾವುಗಳು ಜೀವನ…
ಮಂಡ್ಯ: ಇಲ್ಲಿನ ಕೃಷ್ಣರಾಜ ಪೇಟೆ ಪಟ್ಟಣದ ಹಿಂದೂ ಮಹಿಳೆಯರು ಗರ್ಭಿಣಿಯಾಗಿದ್ದ ಮುಸ್ಲಿಂ ಮಹಿಳೆಗೆ ‘ಸೀಮಂತ’ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿರುವ ಘಟನೆ ನಡೆದಿದೆ. ಹೆರಿಗೆಗೆ ಕೆಲವು ದಿನಗಳು ಇರುವಾಗ ಗರ್ಭಿಣಿಯರಿಗೆ ಸಾಮಾನ್ಯವಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ‘ಗೋಧ್ ಭರೈ’ ಎಂದೂ ಕರೆಯುತ್ತಾರೆ. ಗರ್ಭಿಣಿ ಮತ್ತು ಹುಟ್ಟಲಿರುವ ಮಗುವನ್ನು ಆಶೀರ್ವದಿಸಲು ನಡೆಸಲಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಕೋಮು ಕಲಹದ ಮಧ್ಯೆ ಈ ಘಟನೆ ವರದಿಯಾಗಿದೆ. ಶನಿವಾರ ಪಟ್ಟಣದ ಪದವೀಧರರ ಸಾಲ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸೀಮಂತ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಂಘದ ಸಿಬ್ಬಂದಿ ನಗ್ಮಾ ಭಾನು ಅವರಿಗೆ ಹಿಂದೂ ಪದ್ಧತಿಗಳ ಪ್ರಕಾರ ಸೀಮಂತ ನೆರವೇರಿಸಿದ್ದು, ಇದು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಆಸ್ಪತ್ರೆಯಿಂದ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಮತ್ತು ಇತರ ಮೂವರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಶಮಿನ್ ಇಸ್ಮಾಯಿಲ್ (25), ಇಸ್ಮಾಯಿಲ್ ಯಾಕೋಬ್ ಸಬ್ (65), ಬಾಷಾ ಸಾಬ್ (55) ಮತ್ತು ಬಸವರಾಜ ಸಜ್ಜನ್ (43) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್ ದತ್ತು ಪಡೆಯಲು ಬಿಐಎಂಎಸ್ ಆಸ್ಪತ್ರೆಯ ಬಳಿ ವಾಸವಿದ್ದ ಇಸ್ಮಾಯಿಲ್ ಅವರನ್ನು ಸಂಪರ್ಕಿಸಿದ್ದು, ಆರೋಪಿಗಳು ದತ್ತು ಬದಲು ಮಗುವನ್ನು ಅಪಹರಣ ಮಾಡುವ ಸಲಹೆ ನೀಡಿದ್ದಾರೆ. ಇದರಂತೆ ಇಸ್ಮಾಯಿಲ್ ಮಗುವನ್ನು ಅಪಹರಿಸಿ ಸೆಪ್ಟೆಂಬರ್ 12 ರಂದು ಆರೋಗ್ಯ ತಪಾಸಣೆಗಾಗಿ ಬಿಐಎಂಎಸ್ ಗೆ ಬಂದಿದ್ದ ಸಜ್ಜನ್ ಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿದ್ದ. ಈ ನಡುವೆ ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್ ಪಿ ಶೋಭಾ ರಾಣಿ ವಿಜೆ ಅವರು…
ಸರಗೂರು: ಜಮೀನಿನಲ್ಲಿ ಜಾನುವಾರುಗಳನ್ನು ಹಾಗೂ ಮೇಕೆಗಳನ್ನು ಮೇಯಿಸಲು ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಜಯಲಕ್ಷೀಪುರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತ ಪ್ರಕಾಶ್ (35) ಕರಡಿ ದಾಳಿಗೆ ಒಳಗಾದವರು. ಜಾನುವಾರುಗಳನ್ನು ಜಮೀನಿನಲ್ಲಿ ಮೇಯಿಸಲು ಹೋಗಿದ್ದ ಪೊದೆಯಲ್ಲಿದ್ದ ಕರಡಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಅವರ ಚೀರಾಟದಿಂದ ಅಕ್ಕ ಪಕ್ಕದ ಜಮೀನಲ್ಲಿದ್ದ ರೈತರು ಬಂದು ಕರಡಿಯನ್ನು ಓಡಿಸಿದ್ದಾರೆ. ಗಾಯಾಳುಗೆ ಕೈ ಕಾಲು ಗಾಯಗೊಂಡಿದ್ದ ರೈತ ಪ್ರಕಾಶ್ ಅವರನ್ನು ಹೆಡಿಯಾಲ ವಲಯದ ಅರಣ್ಯ ಎಸಿಎಫ್ ಸತೀಶ್ ವರಿಗೆ ಗಮನಕ್ಕೆ ಬಂದ ಕೂಡಲೇ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸರಗೂರು ಪಟ್ಟಣದ ವಿವೇಕಾನಂದರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದ ಕೂಡಲೇ ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಜಮೀನಿಗೆ ರೈತರು ಮತ್ತು ಹೆಂಗಸರು ಜಮೀನಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.…
ಬೀದರ್: ಇದು ರಸ್ತೆಯೋ, ಗದ್ದೆಯೋ ಅಂತ ಕ್ಷಣ ಕಾಲ ನೋಡಿದರೆ ತಿಳಿಯದೇ ಜನ ದಂಗಾಗುತ್ತಾರೆ. ಈ ರಸ್ತೆಯ ದುರಸ್ತಿ ಮಾಡಿಕೊಡಿ ಎಂದು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ದಪ್ಪ ಚರ್ಮದ ಅಧಿಕಾರಿಗಳ ಕಿವಿಗಂತೂ ಸಾರ್ವಜನಿಕರ ಅಳಲು ಕೇಳಿಸಿಲ್ಲ… ಹೌದು..! ಇಂತಹದ್ದೊಂದು ದುಸ್ಥಿತಿ ಕಂಡು ಬಂದಿರೋದು ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ. ಇಲ್ಲಿ ಸ್ವಲ್ಪ ಮಳೆ ಬಂದ್ರೆ ರಸ್ತೆ ಕೆಸರುಮಯವಾಗಿ ಅಕ್ಷರಶಃ ಗದ್ದೆಯಾಗಿ ಮಾರ್ಪಡುತ್ತಿದೆ. ಈ ವಿಚಾರದ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ಸಾರ್ವಜನಿಕರು ತಂದರೂ ಅವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಕರು ಸತ್ಯನಾರಾಯಣ ರಾಜಪುತ, ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯಿತಿ ಅಧಿಕಾರಿ ಪಿಡಿಒ ಗಮನಕ್ಕೆ ತಂದರು ಕೂಡ ಏನು ಪ್ರಯೋಜನ ಆಗಿಲ್ಲ, ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ…
ತುಮಕೂರು: ಜೈನ್ ಪಿಯು ಕಾಲೇಜು, ತುಮಕೂರು ವತಿಯಿಂದ ಸತ್ಯಮಂಗಲದ ಜೆಜಿಐ ಹಾಲ್ ನಲ್ಲಿ ವಿಶೇಷ ಶಿಕ್ಷಣ ಮೇಳ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಶುಕ್ರವಾರ ಜರುಗಿತು. 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ತಮ್ಮ ಯೋಗ್ಯತೆ, ವ್ಯಕ್ತಿತ್ವ ಮತ್ತು ಆಸಕ್ತಿಗಳ ಆಧಾರದ ಮೇಲೆ ಮಾಹಿತಿಯುಕ್ತ ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮದಲ್ಲಿ 12ನೇ ತರಗತಿಯ ನಂತರ ಲಭ್ಯವಿರುವ ಸಮಕಾಲೀನ ಹಾಗೂ ಹೊಸ ಯುಗದ ವೃತ್ತಿ ಆಯ್ಕೆಗಳು, 21ನೇ ಶತಮಾನದ ಕೌಶಲ್ಯಗಳು, ಕೌಶಲ್ಯ ಆಧಾರಿತ ಉದ್ಯೋಗಗಳು, ವೃತ್ತಿ ಮ್ಯಾಪಿಂಗ್, ಸೈಕೋಮೆಟ್ರಿಕ್ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಜೊತೆಗೆ CUET, CLAT, SAT, NDA, UCEED, JEE ಮುಂತಾದ ಪ್ರವೇಶ ಪರೀಕ್ಷೆಗಳನ್ನು ಭೇದಿಸಲು ಅಗತ್ಯ ಸಲಹೆ ಮತ್ತು ತಂತ್ರಗಳನ್ನೂ ಹಂಚಿಕೊಳ್ಳಲಾಯಿತು. ಪ್ರಮುಖ ಭಾರತೀಯ ಹಾಗೂ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗೂ ಅನುಭವಿ ವೃತ್ತಿ ಸಲಹೆಗಾರರು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದ…
ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ಗ್ರಾಮಾಂತರ ತಾಲೂಕು ನೊಣವಿನಕೆರೆ ವಲಯದ ಪುಣ್ಯಕೋಟಿ ಜ್ಞಾನ ವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೊಣವಿನಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಸವಟಗಿ ದೀಪ ಬೆಳಗಿಸಿ ಮಾತನಾಡಿ, ಸರ್ಕಾರ ಮಾಡದಿರುವ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ, ಇದರಿಂದ ಎಲ್ಲರಿಗೂ ತುಂಬಾ ಸಹಾಯವಾಗುತ್ತಿದೆ. ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಎಲ್ಲರು ತಪಾಸಣೆ ಮಾಡಿಸಿ ಆರೋಗ್ಯ ಸಮಸ್ಯೆ ಇದ್ದಲ್ಲಿ ಸೂಕ್ತ ವೈದ್ಯರ ಸಲಹೆಯೊಂದಿಗೆ ಔಷಧಿ ತೆಗೆದುಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಸದಸ್ಯರಿಗೆ ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್ ಸಿಬ್ಬಂದಿಯವರ ಮೂಲಕ ರಕ್ತದ ಗುಂಪು, ಗರ್ಭಕೋಶ ತಪಾಸಣೆ ಮಹಾವೀರ ಜೈನ ಆಸ್ಪತ್ರೆ ವತಿಯಿಂದ ಬಿಪಿ, ಶುಗರ್ ಸ್ಪರ್ಶ, ಇಸಿಜಿ ಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರು ದಯಾನಂದ ಕಾಬೋರಪ್ಪ ಒಕ್ಕೂಟ ಪದಾಧಿಕಾರಿಗಳಾದ ರಂಗಣ್ಣ, ಸಮಾಜ…
ಸರಗೂರು: ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದ ಪ್ರಾಮುಖ್ಯತೆಯನ್ನು ಸಮುದಾಯಕ್ಕೆ ತಿಳಿಸುವ ಸಲುವಾಗಿ ಹಾಗೂ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯವಾದದ್ದು ಎಂಬುದನ್ನು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ತಿಳಿಸಿದರು. ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಶುಕ್ರವಾರದಂದು ಮಕ್ಕಳ ಜಾಗೃತಿ ಸಂಸ್ಥೆ, ಮುಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೆಚ್ ಸಿಎಲ್ ಪೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಮುಳ್ಳೂರು ವೃತದ ಅಂಗನವಾಡಿ ಹಬ್ಬ ಕಾರ್ಯಕ್ರಮವನ್ನು ಮುಳ್ಳೂರಿನ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದು ಗಣ್ಯರು ಕಾರ್ಯಕ್ರಮವನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಆರು ತಿಂಗಳಿಗೊಮ್ಮೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಡೆಯಬೇಕು. ಇದರಿಂದ ಮಕ್ಕಳಿಗೆ ಹಾಗೂ ಪೋಷಕರಿಗೆ ಒಂದು ಅರಿವು ಉಂಟಾಗುತ್ತದೆ. ಹಾಗೂ ಎಲ್ಲಾ ಕ್ಷೇತ್ರದ ಬೆಳವಣಿಗೆಗಳು ಸಾಧ್ಯವಾಗುತ್ತದೆ. ಮಕ್ಕಳ ಜಾಗೃತಿ ಸಂಸ್ಥೆಯು ಒಂದು ಉತ್ತಮ ಕಾರ್ಯಕ್ರಮವನ್ನು ಮಾಡುತ್ತ ಬಂದಿದ್ದು, ಇದು ತುಂಬಾ ಶ್ಲಾಘನೀಯವಾಗಿದೆ ಎಂದು…
ಸರಗೂರು: ಮೈಸೂರಿನ ಮಾಲ್ ಆಫ್ ಮೈಸೂರ್ ನ ನೆಲಮಹಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೈಸೂರು ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಶನಿವಾರದಂದು ಉದ್ಘಾಟಿಸಿ ಚಲನಚಿತ್ರೋತ್ಸವ ಉಪಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜುರವರನ್ನು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವ ಡಾ.ಎಸ್.ಸಿ.ಮಹದೇವಪ್ಪ ರವರು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಚಿವರು, ಜಿಲ್ಲೆಯ ಗಡಿಭಾಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಕಳೆದ ಬಾರಿ ಉಪಸಮಿತಿಯಲ್ಲಿ ಸದಸ್ಯರನ್ನ ಮಾಡಲಾಗಿತ್ತು.ಈ ಬಾರಿ ಎಲ್ಲಾ ತಾಲೂಕಿನ ಕಾರ್ಯಕರ್ತರನ್ನು ಅರ್ಜಿ ಆಹ್ವಾನ ನೀಡಲಾಗಿತ್ತು. ಜಿಲ್ಲೆಯ ಗಡಿಭಾಗದಲ್ಲಿ ಇರುವ ಕಾಡಂಚಿನ ಭಾಗದಲ್ಲಿರುವ ಗ್ರಾಮಗಳಿಗೆ ಅವರಿಗೆ ಒಂದು ಅವಕಾಶ ನೀಡುವ ನಿಟ್ಟಿನಲ್ಲಿ ಆಯ್ಕೆ ಮಾಡಲಾಯಿತು. ಅದರಂತೆ ಕೂಡ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ನಂತರ ಉಪಸಮಿತಿ ಅಧ್ಯಕ್ಷ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು ಮಾತನಾಡಿ, ದಸರಾ ಚಲನಚಿತ್ರೋತ್ಸವ ಉಪಸಮಿತಿ ರಚನೆಯಲ್ಲಿ ಎಚ್.ಡಿ.ಕೋಟೆ…