Subscribe to Updates
Get the latest creative news from FooBar about art, design and business.
- NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಜು. 29ರಂದು ಔರಾದ್ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
- ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
- ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
- ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
- ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
- ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
Author: admin
ಬೆಂಗಳೂರು: “ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರ ನಿವಾಸದ ಬಳಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ”ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ” ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಲೋಕಸಭೆಯ ಮೊದಲ ಹಂತದ ಚುನಾವಣೆ ಜತೆಗೆ ನಡೆದ ಸಿಕ್ಕಿಂ ಮತ್ತು ಅರುಣಾಚಲ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂಜಾನೆ 6 ಗಂಟೆಗೆ ಆರಂಭವಾಗಿದೆ. ಅರುಣಾಚಲ ಪ್ರದೇಶ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದಿದ್ದು, ಉಳಿದ 50 ಸ್ಥಾನಗಳಲ್ಲಿ ಮತ ಎಣಿಕೆ ಆರಂಭವಾಗಿದೆ. ಸಿಕ್ಕಿಂ ವಿಧಾನಸಭೆಯ 32 ಕ್ಷೇತ್ರಗಳಲ್ಲೂ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್ ಕೆಎಂ ಆರಂಭಿಕ ಮುನ್ನಡೆ ಸಾಧಿಸಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಇಪಿ) 4 ಕಡೆ ಹಾಗೂ ಇತರೆ ಅಭ್ಯರ್ಥಿಗಳು 6 ಕಡೆ ಮುನ್ನಡೆಯಲ್ಲಿದ್ದಾರೆ. ಸಾರ್ವತ್ರಿಕ ಚುನಾವಣೆ ಘೋಷಣೆಯ ಮರುದಿನವೇ ಚುನಾವಣಾ ಆಯೋಗ, ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಜೂನ್ 2ರಂದು ಹೊರಬೀಳಲಿದೆ ಎಂದು ಆಯೋಗ ಪ್ರಕಟಿಸಿತ್ತು. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಅರುಣಾಚಲ ವಿಧಾನಸಭೆಯಲ್ಲಿ ಬಿಜೆಪಿ…
ಪಕ್ಕದಲ್ಲಿ ಕುಳಿತ ಪುರುಷ ಪ್ರಯಾಣಿಕರಿಂದ ಅಥವಾ ಬೇರೆ ಯಾವುದೇ ಕಾರಣದಿಂದ ವಿಮಾನದಲ್ಲಿ ಪ್ರಯಾಣ ಮಾಡುವಾಗ ಮಹಿಳೆಯರು ಕೆಲವೊಮ್ಮೆ ಇರಿಸು ಮುರುಸು ಅನುಭವಿಸಬಹುದು. ಇಂಡಿಗೋದಲ್ಲಿನ ಮಹಿಳಾ ಪ್ರಯಾಣಿಕರು ವೆಬ್ ಚೆಕ್ ಇನ್ ಸಮಯದಲ್ಲಿ ಮಹಿಳೆಯರ ಪಕ್ಕದಲ್ಲಿಯೇ ಸೀಟುಗಳು ಬೇಕು ಎನ್ನುವುದಾದರೇ ಅವರ ಆಯ್ಕೆ ಪ್ರಕಾರವೇ ಸೀಟುಗಳನ್ನು ರಿಸರ್ವ್ ಮಾಡಬಹುದು. ಇಂಡಿಗೋ ಏರ್ ಲೈನ್ಸ್, ಮಹಿಳಾ ಪ್ರಯಾಣಿಕರಿಗೆ ಅಗತ್ಯವಿದ್ದಲ್ಲಿ ಇತರ ಮಹಿಳಾ ಪ್ರಯಾಣಿಕರಿಗೆ ಮುಂದಿನ ಸೀಟುಗಳನ್ನು ಆಯ್ಕೆ ಮಾಡುವ ಆಯ್ಕೆ ನೀಡಿದೆ. ನಮ್ಮ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಹೆಚ್ಚು ಆರಾಮದಾಯಕವಾಗಿಸಲು, ಮಹಿಳಾ ಪ್ರಯಾಣಿಕ ಅನುಕೂಲಕ್ಕಾಗಿ ಇದನ್ನು ಜಾರಿಗೆ ತರಲಿದೆ ಎಂದು ಇಂಡಿಗೋ ಹೇಳಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಫೈರ್ ಮ್ಯಾನ್ ಮತ್ತು ಅಗ್ನಿಶಾಮಕ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಒಟ್ಟು ಖಾಲಿ ಹುದ್ದೆಗಳು 975 ಖಾಲಿ ಇದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ವೇತನವು ರೂ 33,450 ರಿಂದ ರೂ 62,600 ರವರೆಗೆ ಇರುತ್ತದೆ. ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆಯ ವಿದ್ಯಾಸಂಸ್ಥೆಯಿಂದ SSLC ಮತ್ತು PUC ತರಗತಿಯಲ್ಲಿ ರಸಾಯನಶಾಸ್ತ್ರ ವಿಷಯದಿಂದ ಪದವಿಯನ್ನು ಪಡೆದಿರಬೇಕು. ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ಹಾಗೂ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಿಳಿಕೆಯನ್ನು ಮಾಡಲಾಗಿದೆ. ಆಯ್ಕೆಯ ಪ್ರಕ್ರಿಯೆ: ಮೊದಲು ದೈಹಿಕ ಸಾಮರ್ಥ್ಯದ ಪರೀಕ್ಷೆ. ನಂತರ ಲಿಖಿತ ಪರೀಕ್ಷೆ ನಡೆಯುತ್ತದೆ. ಕೊನೆಯದಾಗಿ ದಾಖಲಾತಿ ಪರಿಶೀಲನೆಯ ಮುಖಾಂತರ ಆಯ್ಕೆಯನ್ನು ಮಾಡಲಾಗುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಗೆ 350 ಸ್ಥಾನಗಳನ್ನು ನೀಡಿವೆ. ಆದರೆ ಆಮ್ ಆದ್ಮಿ ಪಕ್ಷದ ಮುಖಂಡ ಸೋಮನಾಥ್ ಭಾರ್ತಿ ಇದನ್ನು ಬಲವಾಗಿ ಅಲ್ಲಗಳೆದಿದ್ದು, ಚುನಾವಣಾ ಸಮೀಕ್ಷೆಗಳು ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ನವದೆಹಲಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಭಾರ್ತಿ, ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎನ್ನುವುದು ಮಂಗಳವಾರ ಮತ ಎಣಿಕೆ ಪೂರ್ಣಗೊಂಡಾಗ ದೃಢವಾಗಲಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ದೆಹಲಿಯ ಏಳು ಕ್ಷೇತ್ರಗಳ ಪೈಕಿ ಆರರಲ್ಲಿ ಜಯ ಸಾಧಿಸಲಿದೆ. 2019ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಇಂಡಿಯಾ ಮೈತ್ರಿಕೂಟ ಎಲ್ಲ ಏಳು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭಾರ್ತಿ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮೂರು ಹಾಗೂ ಆಮ್ ಆದ್ಮಿ ಪಾರ್ಟಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿವೆ. “ನನ್ನ ಹೇಳಿಕೆಯನ್ನು ಬರೆದಿಟ್ಟುಕೊಳ್ಳಿ; ಮೋದಿ ಮೂರನೇ…
ಈ ಸಲದ ಲೋಕಸಭಾ ಚುನಾವಣಾ ಸಮೀಕ್ಷೆಗಳ ಮಾದರಿಯಲ್ಲಿಯೇ ಕಳೆದೆರಡು ಲೋಕಸಭಾ ಚುನಾವಣೆಗಳ ಸಮೀಕ್ಷೆಗಳು ಜನರಲ್ಲಿ ಕುತೂಹಲವನ್ನು ಉಂಟು ಮಾಡಿದ್ದವು. ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯವಾಗುತ್ತವೆ ಮತ್ತು ಯಾರ ಸಮೀಕ್ಷೆ ಪ್ರಕಾರ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆ ಎನ್ನುವ ಆಸಕ್ತಿ ಜನರಲ್ಲಿ ಮೂಡಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎಗೆ ಸುಮಾರು 285 ಸ್ಥಾನಗಳು ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟವು 353 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಆಗ ಬಿಜೆಪಿ ಪಕ್ಷವು 303 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷವು 52 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಒಟ್ಟು ಯುಪಿಎ ಒಕ್ಕೂಟ 91 ಸ್ಥಾನಗಳನ್ನು ಗಳಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಸುಮಾರು 257-340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಎನ್‌ಡಿಎ 336 ಸ್ಥಾನಗಳನ್ನು ಭರ್ಜರಿ ಗೆಲುವು ಸಾಧಿಸಿತ್ತು. 2014ರಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 44 ಸೀಟುಗಳನ್ನು ಪಡೆದು…
2024-25ನೇ ಸಾಲಿನ ಶೈಕ್ಷಣಿಕ ವರ್ಷದ (Academic year) ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಖುಷಿಯಿಂದಲೇ ಶೈಕ್ಷಣಿಕ ಸಂಸ್ಥೆಗಳತ್ತ ಹೆಜ್ಜೆ ಇಡುತ್ತಿದ್ದಾರೆ. ಶಾಲಾ-ಕಾಲೇಜು ಆರಂಭದಲ್ಲಿ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಬಸ್ ಪಾಸ್ ನೀಡಲಾಗುತ್ತದೆ. ಈ ಪ್ರಕ್ರಿಯೆಗೆ ಇದೀಗ ಚಾಲನೆ ದೊರೆತಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಕಟಣೆ ಹೊರಡಿಸಿದೆ. ಮುಂದಿನ ಹತ್ತು ತಿಂಗಳ ತನಕ ನಿಗಮ ಬಸ್ ಪಾಸ್ ದರ ನಿಗದಿ ಪಡಿಸಿದೆ. ಹಾಗಾದರೆ ಆ ಪಾಸ್ ದರ ಎಷ್ಟು..? ಅರ್ಜಿ ಸಲ್ಲಿಸೋದು ಹೇಗೆ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಅರ್ಜಿ ಸಲ್ಲಿಸುವ ವಿಧಾನ: ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು https://sevasindhuservices.karnataka.gov.in/buspassservices ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ…
ಅಂಚೆ ಕಚೇರಿ ಹೂಡಿಕೆದಾರರಿಗೆ ಹೊಸ ಯೋಜನೆ ಪರಿಚಯಿಸಲಾಗಿದೆ. ಹಾಗಾದರೆ ಆ ಯೋಜನೆ ಏನು? ಏನು ಪ್ರಯೋಜನ? ಎಷ್ಟು ಹೂಡಿಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ಈ ಯೋಜನೆಯಡಿ ನೀವು ಮನೆಯಲ್ಲಿ ಕುಳಿತು 5,55,000 ರೂ.ಗಳನ್ನು ಉಳಿಸಬಹುದು. ಪಡೆಯಬಹುದು. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ಪೋಸ್ಟ್ ಆಫೀಸ್ ಪರಿಚಯಿಸಿದ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಪ್ರಸ್ತುತ ಮಾಸಿಕ ಆದಾಯ ಯೋಜನೆಯಡಿಯಲ್ಲಿ ತಿಂಗಳಿಗೆ ತಿಂಗಳಿಗೆ. 7.4ರಷ್ಟು ಬಡ್ಡಿ ನೀಡಲಾಗುತ್ತದೆ. ನೀವು ಜಂಟಿ ಖಾತೆ ತೆರೆದು 15 ಲಕ್ಷ ರೂ. ಠೇವಣಿ ಇಟ್ಟರೆ ಶೇ.7.4ರ ಬಡ್ಡಿ ದರದಲ್ಲಿ ಪ್ರತಿ ತಿಂಗಳು 9250 ರೂ. ಅದೇ ರೀತಿ ವರ್ಷಕ್ಕೆ 1,11,000 ರೂ. ಗಳಿಸಬಹುದು. ಐದು ವರ್ಷಕ್ಕೆ ಒಟ್ಟು 5,55,000 ರೂ. ಗಳಿಸಬಹುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…
ಎಲ್ಲರ ಕಣ್ಣು ರಾಫಾ ಮೇಲೆ… ಎಂಬ ಸಾಲುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.. ಏನಿದು ? ಪ್ಯಾಲೆಸ್ಟೀನಿಯನ್ನರ ಬೆಂಬಲಕ್ಕೆ ಪ್ರಪಂಚದಾದ್ಯಂತದ ಜನರು ನಿಂತಿದ್ದಾರೆ. ಇದೇ ಕಾರಣಕ್ಕೆ ಈ ವಿಚಾರ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್’ನಲ್ಲಿ ಭಾರೀ ಟ್ರೆಂಡಿಂಗ್ ಆಗಿತ್ತು. ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ, ‘All Eyes on Rafah’ ಎಂದು ಹೇಳಿತ್ತು. ಗಾಜಾ ಪಟ್ಟಿಯ ದಕ್ಷಿಣದ ರಫಾ ಎಂಬಲ್ಲಿನ ಕ್ಯಾಂಪ್’ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ಬಾಂಬ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಲ್ಲದೆ, ಕೆಲವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ 1.4 ಮಿಲಿಯನ್’ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಆಶ್ರಯ ಪಡೆಯುತ್ತಿದ್ದಾರೆ. ಗಾಜಾದ ರಾಫಾ ನಗರದ ಮೇಲೆ ಇಸ್ರೇಲ್ ನ ವಾಯುದಾಳಿಗೆ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಲ್ಲರ ಕಣ್ಣು ರಾಫಾ ಮೇಲೆ ಎಂಬ ಪೋಸ್ಟರ್ ಅನ್ನು ಸೆಲೆಬ್ರಿಟಿಗಳು, ಸಿನಿಮಾ ನಟರು, ಕ್ರೀಡಾಪಟುಗಳು ಹಾಕಿಕೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಎರಡು ದೇಶಗಳ ನಡುವೆ ಪೋಸ್ಟರ್ ವಾರ್ ನಡೆಯುತ್ತಿದ್ದು, “ಆಲ್ ಐಸ್ ಆನ್ ರಾಫಾ”…
ರಜನಿಕಾಂತ್ ಅನೇಕ ನಟಿಯರೊಂದಿಗೆ ನಟಿಸಿದ್ದಾರೆ. ಆದ್ರೆ ನಟಿ ಶ್ರೀದೇವಿಯನ್ನು ರಜಿನಿ ತುಂಬಾ ಪ್ರೀತಿ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ಒಂದೇ ಸಿನಿಮಾಗಳಲ್ಲಿ ಮಾಡುತ್ತಿರುವಾಗ ರಜಿನಿ ಹಲವು ಬಾರಿ ಅವರಲ್ಲಿ ಪ್ರೇಮ ನಿವೇದನೆ ಹಂಚಿಕೊಂಡಿದ್ದರು. ಆದರೆ ಶ್ರೀದೇವಿ ಅವರಿಗೆ ಸೂಪರ್ ಸ್ಟಾರ್ ಮೇಲೆ ಅಂತ ಭಾವನೆ ಇರಲಿಲ್ಲ ಎನ್ನಲಾಗಿದೆ ಆದರೆ ರಜನಿಕಾಂತ್ ಹಾಗೂ ಶ್ರೀದೇವಿ ಉತ್ತಮ ಸ್ನೇಹಿತರಾಗೆ ಮುಂದುವರೆದಿದ್ರು. ಒಂದು ದಿನ ರಜಿನಿಕಾಂತ್ ಸ್ವತಃ ನಟಿ ಶ್ರೀದೇವಿ ಅವರ ಮನೆಗೆ ಹೋಗಿ ಮದುವೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಹೇಳಬೇಕು ಎಂದುಕೊಂಡಿದ್ದರು. ರಜಿನಿಕಾಂತ್ ಹಾಗೂ ಬಾಲಚಂದರ್ ಅವರು ಶ್ರೀದೇವಿ ಮನೆಯ ಗೃಹಪ್ರವೇಶಕ್ಕೆ ಹೋದಾಗ, ಸಡನ್ ಆಗಿ ಮನೆಯಲ್ಲಿ ಕರೆಂಟ್ ಕಟ್ ಆಗಿತ್ತು. ವಿದ್ಯುತ್ ಇಲ್ಲದಕ್ಕೆ ಮನೆಯೆಲ್ಲಾ ಕತ್ತಲಾಗಿತ್ತು. ಈ ಶಕುನ ಸರಿಯಿಲ್ಲ ಎಂದು ಮದುವೆಯ ವಿಚಾರ ಹೇಳದೆಯೇ ಬೇಸರದಿಂದ ರಜಿನಿ ಹಿಂದಿರುಗಿದ್ದರು ಎಂದು ಹೇಳಲಾಗಿದೆ. ನಟ ರಜನಿಕಾಂತ್ ಅವರು ಹಲವಾರು ಚಿತ್ರಗಳಲ್ಲಿ ಸಹ-ನಟಿಸುವ ಮೊದಲು ಶ್ರೀದೇವಿಯವರ ಕುಟುಂಬದೊಂದಿಗೆ ವಿಶೇಷವಾಗಿ ಶ್ರೀದೇವಿಯವರ ತಾಯಿಯೊಂದಿಗೆ ನಿಕಟ ಸ್ನೇಹಿತರಾಗಿದ್ದರು. ಶ್ರೀದೇವಿ ರಜನಿಕಾಂತ್‌ಗಿಂತ…