Subscribe to Updates
Get the latest creative news from FooBar about art, design and business.
- ತುಮಕೂರು: ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್ ಸೆಟ್ ನಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ; ಅರ್ಜಿ ಆಹ್ವಾನ
- ಕಾರ್ಮಿಕರು ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು: ಶ್ಯಾಮಣ್ಣರೆಡ್ಡಿ
- ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳಿಗೆ ತಹಶೀಲ್ದಾರ್ ಅನಿರೀಕ್ಷಿತ ಭೇಟಿ: ರೈತರಿಗೆ ಕೊರತೆಯಾಗದಂತೆ ಸ್ಟಾಕ್ ಪರಿಶೀಲನೆ
- ಕೊರಟಗೆರೆಯಲ್ಲಿ ಮಯೂರ ಬೇಕರಿಗೆ ಅಧಿಕಾರಿಗಳ ದಿಢೀರ್ ದಾಳಿ: ಗೃಹ ಬಳಕೆ ಸಿಲಿಂಡರ್ ಬಳಕೆ, ಅವಧಿ ಮೀರಿದ ಚಾಕಲೇಟ್ ಪತ್ತೆ
- ಬೀದರ್: ಪಶು ವೈದ್ಯಕೀಯ ವಿವಿಯಲ್ಲಿ ₹45 ಕೋಟಿ ಹಗರಣ; ವಿಶ್ರಾಂತ ಕುಲಪತಿ ಸೇರಿ ಆರು ಜನರ ಬಂಧನ!
- ಚಿಕ್ಕನಾಯಕನಹಳ್ಳಿ: 35ಕ್ಕೂ ಹೆಚ್ಚು ಲಂಬಾಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ
- ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು
- ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!
Author: admin
ನಕಲಿ ಶಿವಸೇನೆಯವರು ನನ್ನನ್ನು ಮಣ್ಣಿನಲ್ಲಿ ಹೂತು ಹಾಕುವ ಕನಸುಕಾಣುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಒಂದೆಡೆ ಪ್ರಧಾನಿ ಮೋದಿ ನಿಮ್ಮನ್ನು ಸಮಾಧಿ ಮಾಡುತ್ತಾರೆ ಎಂದು ಹೇಳಿಕೆ ನೀಡುತ್ತಾರೆ ಇನ್ನೊಂದೆಡೆ ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದೆ. ಮೋದಿಯನ್ನು ಮಣ್ಣಿನಲ್ಲಿ ಹೂತು ಹಾಕುವ ಕನಸುಕಾಣುತ್ತಿದ್ದಾರೆ ಎಂದರು. ನಕಲಿ ಶಿವಸೇನೆಯ ರಾಜಕೀಯ ಭವಿಷ್ಯ ನೆಲಕಚ್ಚಿದೆ. ದೇಶದ ತಾಯಂದಿರು ಮತ್ತು ಸಹೋದರಿಯರು ಮೋದಿಯನ್ನು ರಕ್ಷಿಸುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಶಿವಸೇನೆಯ ನಕಲಿ ಸದಸ್ಯರು ಬಾಂಬ್ ಸ್ಫೋಟದ ಅಪರಾಧಿಗಳನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಿಹಾರದಲ್ಲಿ ತಿರುಗಾಡುತ್ತಿದ್ದಾರೆ ಎಂದರು. ಈ ಜನರು ಬಾಳಾಸಾಹೇಬ್ ಠಾಕ್ರೆ ಅವರನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ನಾನು ಕಾಂಗ್ರೆಸ್ ನಂತಹ ರಾಜಮನೆತನದಂತಹ ದೊಡ್ಡ ಕುಟುಂಬದಿಂದ ಬಂದವನಲ್ಲ, ನಾನು ಬಡತನದಲ್ಲಿ ಬೆಳೆದೆ. ನೀವು ಎಷ್ಟು ಕಷ್ಟ ಅನುಭವಿಸಿದ್ದೀರಿ ಎಂಬುದು ನನಗೆ…
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಇಬ್ಬರು ಹೆಂಡತಿಯರು ಇದ್ದವರಿಗೆ 2 ಲಕ್ಷ ನೆರವು ನೀಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಕಾಂತಿಲಾಲ್ ಹೇಳಿದ್ದಾರೆ. ನರೇಂದ್ರ ದಾಭೋಲ್ಕರ್ ಹತ್ಯೆ ಕೇಸ್:11 ವರ್ಷಗಳ ನಂತರ ತೀರ್ಪು ನೀಡಿದ ಕೋರ್ಟ್!. ಪಕ್ಷವು ಅಧಿಕಾರಕ್ಕೆ ಬಂದರೆ ಪಕ್ಷದ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡಲಾಗುವುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬ ಮಹಿಳೆಯ ಖಾತೆಗೆ 1 ಲಕ್ಷ ರೂ. ಜಮಾ ಮಾಡಲಾಗುವುದು. ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು, ಇಬ್ಬರು ಪತ್ನಿಯರಿರುವವರಿಗೆ 2 ಲಕ್ಷ ರೂಪಾಯಿ ನೀಡಲಾಗುವುದು ಎಂದರು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿತು ಪಟ್ವಾರಿ ಅವರ ಸಮ್ಮುಖದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ ನ ಪ್ರಣಾಳಿಕೆಯಂತೆ ಮಹಿಳೆಯರು ಬಡತನ ರೇಖೆಗಿಂತ ಕೆಳಗಿರುವ ವಿಭಾಗದಿಂದ ಹೊರಬರುವವರೆಗೆ ಮಹಾಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 8,500 ರೂ. ನೀಡಲಾಗುವುದು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್…
ಬಸವಣ್ಣನವರು ರಚಿಸಿದ ವಚನಗಳು ಸಮಾಜದಲ್ಲಿನ ಅಸಮಾನತೆ, ಜಾತಿಯತೆಯನ್ನು ತೊಡೆದು ಹಾಕಲು ಪ್ರೇರಕವಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡ ಮುನ್ನಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಮೂಢನಂಬಿಕೆ, ಕಂದಾಚಾರ, ಸಮಾಜದ ಲೋಪ ದೋಶಗಳನ್ನು ತಿದ್ದುವ ಮೂಲಕ ಅಂದಿನ ಶರಣ ಸಮುದಾಯದ ನೇತೃತ್ವ ವಹಿಸಿದ ಬಸವಣ್ಣನವರ ಕೊಡುಗೆ ಅನನ್ಯವಾದುದು. ಸ್ತ್ರೀ ಅಸಮಾನತೆ ಯನ್ನು ಖಂಡಿಸಿ ಸ್ತ್ರೀಯರಿಗೂ ಸಮಾತೆಗೆ ಪ್ರೇರೇಪಿಸಿದರು ಎಂದು ತಿಳಿಸಿದರು. ಬಸವಣ್ಣನವರ ವಚನಗಳು ಸಮಾಜದ ಶುದ್ದಿಯ ಆಂದೋಲನಕ್ಕೆ ಪ್ರೇರಣೆಯಾಗಿವೆ. ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆಯ ಮೂಲವಾದ ಅನುಭವ ಮಂಟಪ ಸ್ಥಾಪಿಸಿ ಜನಸಾಮಾನ್ಯರೆಲ್ಲರೂ ವರ್ಣ, ವರ್ಗ ಭೇಧವಿಲ್ಲದೆ ಒಂದೆಡೆ ಸೇರಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾನತೆಯ ಸಂಸ್ಕೃತಿಗೆ ಮುನ್ನುಡಿ ಬರೆದವರು ಎಂದರು. ಬಸವಣ್ಣನವರ ತತ್ತ್ವ ಸಿದ್ದಾಂತಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ವ್ಯವಸ್ಥೆ, ಮಹಿಳೆಯರ ಸಮಾನತೆಗಾಗಿ ಹೋರಾಡಿದ…
ನರೇಂದ್ರ ದಾಭೋಲ್ಕರ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ 11 ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಮೂವರು ಖುಲಾಸೆಗೊಂಡಿದೆ. ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯ ಮುಖ್ಯಸ್ಥ ನರೇಂದ್ರ ದಾಭೋಲ್ಕರ್ ಅವರನ್ನು 20 ಆಗಸ್ಟ್ 2013 ರಂದು ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪುಣೆಯಲ್ಲಿ ದಾಭೋಲ್ಕರ್ ಹತ್ಯೆಯ ನಂತರ, ಫೆಬ್ರವರಿ 2015 ರಲ್ಲಿ ಗೋವಿಂದ್ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್ ನಲ್ಲಿ ಕೊಲ್ಲಾಪುರದಲ್ಲಿ ಎಂಎಂ ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 2017 ರಲ್ಲಿ ಬೆಂಗಳೂರಿನ ತಮ್ಮ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಬಾಂಬೆ ಹೈಕೋರ್ಟಿನ ಆದೇಶದ ನಂತರ 2014 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ತನಿಖೆಯನ್ನು ವಹಿಸಿಕೊಂಡಿತು ಮತ್ತು ಜೂನ್ 2016 ರಲ್ಲಿ ಹಿಂದೂ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಗೆ…
ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯದಲ್ಲಿ 14 ವರ್ಷದ ಬಾಲಕಿಯ ಮೇಲೆ ಹತ್ತು ಮಂದಿ ಅಪ್ರಾಪ್ತರು ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಎಲ್ಲಾ ಹತ್ತು ಆರೋಪಿಗಳು 11 ಮತ್ತು 16 ರ ನಡುವಿನ ವಯಸ್ಸಿನವರು ಎನ್ನಲಾಗಿದೆ. ಕೊರ್ಟ್ರಿಜ್ಕ್ ನಗರದಲ್ಲಿ ಬಾಲಕಿ ತನ್ನ ಗೆಳೆಯನೊಂದಿಗೆ ಹೊರಗಡೆ ಹೋಗಿದ್ದಳು. ಅಲ್ಲಿ ಆತನ ಹಲವು ಸ್ನೇಹಿತರು ಕೂಡ ಬಂದಿದ್ದರು. ಏಪ್ರಿಲ್ 2 ರಿಂದ ಏಪ್ರಿಲ್ 6ರ ನಡುವೆ 10 ಮಂದಿ ಅಪ್ರಾಪ್ತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಓರ್ವ ಬಾಲಕನಿಗೆ 11 ವರ್ಷ ಆತ ತುಂಬಾ ಚಿಕ್ಕವನಾದ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಬಂಧಿಸಲಾಗಿದೆ ಮತ್ತು ಬಾಲಾಪರಾಧಿ ನ್ಯಾಯಾಲಯವು ಕ್ರಮ ಕೈಗೊಂಡಿದೆ. ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ವರ್ಷಗಳ ಹಿಂದೆ ಈಸ್ಟ್ ಫ್ಲಾಂಡರ್ಸ್‌ನ ಘೆಂಟ್ ನಲ್ಲಿ ಇದೇ ರೀತಿಯ ಪ್ರಕರಣವು ನಡೆದಿತ್ತು. ಬೆಲ್ಜಿಯಂ ಸರ್ಕಾರವು ಜೂನ್ 2021…
ಭಾರತದಲ್ಲಿ ಎಲ್ಲೆಲ್ಲಿ ಬೆಲೆಯೇರಿಕೆ ಇದೆಯೋ ಅಲ್ಲೆಲ್ಲ ಮಧ್ಯಮವರ್ಗದವರೇ ಇದರ ಭಾರವನ್ನು ಹೊರಬೇಕಾಗುತ್ತದೆ. ಅಡುಗೆಗೆ ತರಕಾರಿಗಳು ಅತ್ಯಂತ ಮುಖ್ಯವಾಗಿ ಬೇಕಾಗುತ್ತದೆ. ಟೊಮೆಟೊ ಮತ್ತು ಈರುಳ್ಳಿ ಇಲ್ಲದೆ ಯಾವುದೇ ಅಡುಗೆಯ ಖಾದ್ಯ ರುಚಿ ಇರುವುದಿಲ್ಲ. ಆದರೆ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಟೊಮೆಟೊ ಮತ್ತು ಈರುಳ್ಳಿ ಮಾತ್ರವಲ್ಲ, ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಅತ್ಯಂತ ಸಾಮಾನ್ಯ ತರಕಾರಿ ಆಲೂಗಡ್ಡೆ ಕೂಡ ಸಾಕಷ್ಟು ದುಬಾರಿಯಾಗಿದೆ. ಈ ತರಕಾರಿಗಳ ಬೆಲೆ ಏಕೆ ಹೆಚ್ಚುತ್ತಿದೆ ಎಂದು ತಿಳಿಯೋಣ. ಕಳೆದ ಕೆಲವು ವರ್ಷಗಳಿಂದ ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಬೇಕಾಯಿತು. ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತ ಸರ್ಕಾರ ಈರುಳ್ಳಿ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಆದರೆ ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಈರುಳ್ಳಿ ಮೇಲೆ ಹೇರಿದ್ದ ನಿಷೇಧವನ್ನು ಸರ್ಕಾರ ಹಿಂಪಡೆದಿದೆ. ಈರುಳ್ಳಿ ರಫ್ತಿಗೆ ಹಠಾತ್ ರೋಗ ಕಾಣಿಸಿಕೊಂಡ ಕಾರಣ ಈರುಳ್ಳಿ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಈ ವರ್ಷದ ಜನವರಿಯಲ್ಲಿ ಟೊಮೆಟೊ…
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ವಕೀಲ ದೇವರಾಜೇಗೌಡನನ್ನು ಹಿರಿಯೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧ ಕೇಸ್ ದಾಖಲಾಗಿತ್ತು. ಇಂದು ಅದೇ ಮಹಿಳೆ ವಿರುದ್ಧ ದೇವರಾಜೇಗೌಡ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೇವರಾಜೇಗೌಡ ಹಿರಿಯೂರು ಠಾಣೆ ಪೊಲೀಸರ ವಶದಲ್ಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ವಕೀಲ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಕೇಸ್ ನ ವಿಚಾರಗಳು ಬಹಿರಂಗವಾಗಿವೆ. ಏಪ್ರಿಲ್ 1 ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ಥ ಮಹಿಳೆಯಿಂದ ದೂರು ನೀಡಲಾಗಿತ್ತು. ಸೈಟ್ ಮಾರಾಟ ಮಾಡಿಸಿಕೊಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೀಗಾಗಿ ಮಹಿಳೆ…
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯು 56 ಮಂದಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ನ(ಎಐಸಿಸಿಟಿಯು) ರಾಜ್ಯ ಸದಸ್ಯೆ ಮೈತ್ರೇಯಿ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡರ್ ಗಳಾಗಿ ಕೆಲಸ ಮಾಡುತ್ತಿರುವ 56 ಕಾರ್ಮಿಕರು ಮಾರ್ಚ್ ಮತ್ತು ಎಪ್ರಿಲ್ ನ ವೇತನಕ್ಕಾಗಿ ಒತ್ತಾಯ ಮಾಡಿದ್ದಕ್ಕಾಗಿ ಕಾನೂನು ಬಾಹಿರವಾಗಿ ಈ ಕಾರ್ಮಿಕರನ್ನು ವಜಾಗೊಳಿಸಲಾಗಿದೆ. ಈ ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ಮಹಿಳೆಯರಾಗಿದ್ದು ದಲಿತ ಮತ್ತು ತುಳತಕ್ಕೊಳಪ್ಪಟ್ಟ ಸಮುದಾಯಗಳಿಗೆ ಸೇರಿದವರಿದ್ದಾರೆ ಎಂದರು. ಕಾರ್ಮಿಕರು ಕಳೆದ 10ರಿಂದ 30ವರ್ಷಗಳ ನಡುವೆ ಕೆಲಸ ಮಾಡುತ್ತಿದ್ದಾರೆ, ಆದರೆ ಅವರ ಹಕ್ಕುಗಳನ್ನು ನಿರಾಕರಿಸಲು ಗುತ್ತಿಗೆ ಕಾರ್ಮಿಕರು ಎಂದು ಕರೆಯುತ್ತಾರೆ, ಆದರೆ ವಾಸ್ತವವಾಗಿ ಅವರು ಕಾಯಂ ಕಾರ್ಮಿಕರು ಮಾಡುವ ಕೆಲಸವನ್ನೇ ಮಾಡುತ್ತಿದ್ದರೆ. ವಿಕ್ಟೋರಿಯಾಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಈ ಕಾರ್ಮಿಕರು ಕೊರೋನ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಕೋವಿಡ್ ವಿರುದ್ಧ ಹೋರಾಡಿದ…
ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿ, ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸತ್ಯ(20) ಎಂಬಾತ ಮೃತಪಟ್ಟ ಯುವಕ. ಈತ ಸಂಪಂಗಿರಾಮನಗರ ನಿವಾಸಿಯಾಗಿದ್ದು, ಫ್ಲಂಬರ್ ಕೆಲಸ ಮಾಡಿಕೊಂಡಿದ್ದ. ಅದೇ ಏರಿಯಾದಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ, ಬಾಲಕಿಯು ಅಪ್ರಾಪ್ತೆ ಆಗಿರುವುದರಿಂದ ಆತನ ಮನೆಯವರು ಮಗಳ ತಲೆಕೆಡಿಸಿದ್ದಾನೆಂದು ದೂರು ನೀಡಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟೆಕ್ಕಣ್ಣನವರ್ ತಿಳಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಸಂಪಂಗಿರಾಮನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲ ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಸತ್ಯ, ಮತ್ತೆ ಅಪ್ರಾಪ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಇದು ಆಕೆಯ ಮನೆಯವರೆಗೆ ಗೊತ್ತಾಗಿ ಗಲಾಟೆಯಾಗಿದೆ ಎನ್ನಲಾಗಿದೆ. ಮೇ 9ರವರೆಗೂ ಮನೆಯಲ್ಲಿದ್ದ ಸತ್ಯ ಶುಕ್ರವಾರ ಬೆಳಗ್ಗೆ ಕಟ್ಟಡದವೊಂದರ ಸಂದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ…
ಕಲಬುರಗಿ: ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. 223 ತಾಲೂಕುಗಳನ್ನು ಈಗಾಗಲೇ ಬರಪೀತ ತಾಲೂಕುಗಳೆಂದು ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮುಂಗಾರು ವಿಳಂಬವಾಗಲಿದೆ. ಪ್ರಯುಕ್ತ ಈಗಾಗಲೇ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುತ್ತದೆ. ಮುಂದಿನ ಎರಡು ತಿಂಗಳುಗಳ ವರೆಗೆ ಜನರಿಗೆ ಹಾಗೂ ಜಾನುವಾರುಗಳಿಗೆ ಶುದ್ಧವಾದ ಹಾಗೂ ಸಮರ್ಪಕ ಕುಡಿಯುವ ನೀರು ನಿರ್ವಹಣೆ ಅವಶ್ಯಕವಾಗಿರುತ್ತದೆ. ಆದ್ದರಿಂದ ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು, ಇಲಾಖಾ ಸಚಿವರಿಗೆ ಅನುಮತಿ ನೀಡಲು ಕೋರುತ್ತಾ ಸದರಿ ಸಭೆ ಹಾಗೂ ಸಭೆಯ ನಿರ್ಧಾರಗಳನ್ನು ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಲು ಕೋರುತ್ತಿರುವುದಾಗಿ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…