Subscribe to Updates
Get the latest creative news from FooBar about art, design and business.
- NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಜು. 29ರಂದು ಔರಾದ್ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
- ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
- ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
- ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
- ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
- ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
Author: admin
ಬೆಂಗಳೂರು: ನಗರೀಕರಣದ ಎಫೆಕ್ಟ್ ನಿಂದಾಗಿ ನಗರ ಪ್ರದೇಶಗಳಲ್ಲಿ ಜಾತ್ರೆಯಂತಹ ಧಾರ್ಮಿಕ ಆಚರಣೆಗಳು ಅಪರೂಪ ಎನ್ನುವಂತಾಗಿದೆ. ಆದ್ರೆ ಬೆಂಗಳೂರಿನ ಈವೊಂದು ಗ್ರಾಮದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಶ್ರೀಸೀತಾರಾಮ ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿ ಪರಿವಾರ ಸಮೇತವಾಗಿ ಬ್ರಹ್ಮ ರಥೋತ್ಸವ ಆಚರಿಸಿದ್ದಾರೆ. ಅಷ್ಟಕ್ಕೂ ವಿಜೃಂಭಣೆಯಿಂದ ನಡೆದ ಬ್ರಹ್ಮ ರಥೋತ್ಸವ. ಹೌದು ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಈ ಬಾರಿ ಬ್ರಹ್ಮ ರಥೋತ್ಸವವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಸೀತಾರಾಮ ಲಕ್ಷ್ಮಣ ಮತ್ತು ವೀರಾಂಜನೆಯ ಸ್ವಾಮಿ ದೇವಾಲಯವೂ ತನ್ನದೆ ಆದ ವೈಶಿಷ್ಟ್ಯತೆಯನ್ನ ಹೊಂದಿದೆ. ಈ ಬಾರಿ ಪಲ್ಲಕ್ಕಿ ಉತ್ಸವಗಳ ಜೊತೆಗೆ ಮೊದಲನೇ ಬಾರಿಗೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ರಥದಿಂದ ಅದ್ದೂರಿ ಬ್ರಹ್ಮರಥೋತ್ಸವ ನಡೆಸಲಾಯಿತು. ದೇವಾಲಯದಿಂದ ರಥವನ್ನ ಭಕ್ತರು ಜೈಶ್ರೀರಾಮ್ ಘೋಷಣೆಗಳನ್ನ ಕೂಗುತ್ತ ರಥವನ್ನು ಎಳೆಯುವ ಮೂಲಕ ಸಾವಿರಾರು ಸಂಖ್ಯೆಯ ಭಕ್ತರು ದೇವರ ಕೃಪೆಗೆ ಪಾತ್ರರಾದರು. ಬ್ರಹ್ಮರಥೋತ್ಸವ ಹಿನ್ನೆಲೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ…
ಬೆಂಗಳೂರು: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅವ್ಯವಹಾರ ಹಾಗೂ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆ ಸಂಬಂಧ, ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದಲ್ಲಿ ಪ್ರತ್ಯೇಕ ಮೂರು ಅಪರಾಧ ಪ್ರಕರಣಗಳಲ್ಲಿ ಮೂರನೇ ಎಸ್ಐಟಿ ನಿಯೋಜಿಸದಂತಾಗಿದೆ. ಬಿಟ್ ಕಾಯಿನ್ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಇದೀಗ ವಾಲ್ಮೀಕಿ ನಿಗಮ ಲೆಕ್ಕಾಧಿಕಾರಿ ಸಾವು ಹಾಗೂ ಬಹುಕೋಟಿ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಇಂದು ವಿಶೇಷ ತನಿಖಾ ತಂಡ ರಚಿಸಲಾಗಿದೆ. ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಿದೆ. ನಗರ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್, ಬೆಂಗಳೂರು ನಗರ ಗುಪ್ತವಾರ್ತೆಯ ಎಸ್ಪಿ ಹರಿರಾಮ್, ಸಿಐಡಿ…
ಬೆಂಗಳೂರು: ಪಾಲಿಕೆ ಚುನಾವಣೆ ಮುನ್ಸೂಚನೆ ಕೂಡ ಸಿಗ್ತಿರೋ ಬೆನ್ನಲ್ಲೆ, ಚುನಾವಣೆ ಘೋಷಣೆಗೂ ಮೊದಲೇ ಬಾಕಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ. ಇನ್ನು ಲೋಕಸಭಾ ಚುನಾವಣೆ ಶುರುವಾದಾಗಿನಿಂದ ಪಾಲಿಕೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ರು. ಇದರಿಂದ ತೆರಿಗೆ ಬಾಕಿದಾರರು ಇನ್ನೂ ಟ್ಯಾಕ್ಸ್ ವಿಚಾರ ಚರ್ಚೆಗೆ ಬರಲ್ಲ ಅಂತಾ ಬಿಂದಾಸ್ ಆಗಿದ್ರು. ಆದ್ರೆ ಇದೀಗ ಬಾಕಿ ತೆರಿಗೆ ವಸೂಲಿಗೆ ತೆರೆಮರೆಯಲ್ಲೇ ಪ್ಲಾನ್ ರೆಡಿಮಾಡಿರೋ ಪಾಲಿಕೆ, ಜೂನ್ 7 ರ ನಂತರ ನೋಟಿಸ್ ನೀಡಿದ್ರೂ ಟ್ಯಾಕ್ಸ್ ಕಟ್ಟದವರಿಗೆ ಬಿಸಿ ಮುಟ್ಟಿಸೋಕೆ ತಯಾರಿ ನಡೆಸಿದೆ. ಸದ್ಯ ಈ ಹಿಂದೆ ಪ್ರತಿ ವಲಯದಲ್ಲಿ ಅತಿಹೆಚ್ಚು ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್ ಮಾಡಿದ್ದ ಪಾಲಿಕೆ, ಇದೀಗ ಆ ಪಟ್ಟಿಯಲ್ಲಿರೋ ಬಾಕಿದಾರರು ತೆರಿಗೆ ಪಾವತಿಸಿದ್ದಾರಾ, ಇಲ್ವಾ ಅನ್ನೋದನ್ನ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಪದೇ ಪದೇ ತೆರಿಗೆ ಬಾಕಿ ಉಳಿಸಿಕೊಂಡು ಲಾಕ್ ಆಗಿದ್ದ ಮಂತ್ರಿ ಮಾಲ್ ಸೇರಿದಂತೆ ಇತರೆ ಮಾಲ್, ಅಂಗಡಿ–ಮುಂಗಟ್ಟುಗಳ ತೆರಿಗೆ ಪಾವತಿಯನ್ನೂ ಪರಿಶೀಲಿಸಲಿದ್ದು, ತೆರಿಗೆ ಬಾಕಿದಾರರ ವಿರುದ್ಧ ಸಮರಕ್ಕೆ…
ಮಂಗನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಿ ದೃಷ್ಟಿ ಮರಳಿಸಿ ವೈದ್ಯರು ಮಾನವೀಯತೆ ಮೆರೆದ ಘಟನೆ ಹರಿಯಾಣದಲ್ಲಿ ನಡೆದಿದೆ. ಮನುಷ್ಯರಂತೆ ಮಂಗಕ್ಕೂ ಕೂಡ ಕಣ್ಣಿನ ಪೊರೆ ಸಮಸ್ಯೆ ಕಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಲುವಾಸ್ ನಲ್ಲಿನ ಅನಿಮಲ್ ಸರ್ಜರಿ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಆರ್ ಎನ್ ಚೌಧರಿ ಮಂಗವನ್ನು ಹಂಸಿಯ ಪ್ರಾಣಿ ಪ್ರೇಮಿ ಮುನೀಶ್ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಕ್ಕೆ ಕಣ್ಣು ಕಾಣದ ಹಿನ್ನೆಲೆಯಲ್ಲಿ ಹೇಗೋ ವಿದ್ಯುತ್ ತಂತಿ ಮೇಲೆ ಹಾರಿದ ಪರಿಣಾಮ ವಿದ್ಯುತ್ ಪ್ರವಹಿಸಿತ್ತು ಹೀಗಾಗಿ ಕುಂಟುತ್ತಾ ನಡೆಯುತ್ತಿತ್ತು ಎನ್ನಲಾಗಿದೆ. ಅದಕ್ಕೆ ಚಿಕಿತ್ಸೆ ಕೊಡಿಸಬೇಕೆಂದು ಕರೆದೊಯ್ದಾಗ ಕಣ್ಣು ಕಾಣಿಸದಿರುವುದು ಗೊತ್ತಾಗಿದೆ. ನಂತರ ಚಿಕಿತ್ಸೆಗಾಗಿ ಕೋತಿಯನ್ನು ಲುವಾಸ್ ನ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಕರೆದೊಯ್ದು, ಪರೀಕ್ಷೆ ನಡೆಸಿ ಎರಡು ಕಣ್ಣುಗಳಿಗೆ ಬಂದಿದ್ದ ಪೊರೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ವಿದೇಶದಿಂದ ಚಿನ್ನ ಕಳ್ಳಸಾಗಣೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿಂದೆ ಪ್ರಯಾಣಿಕರು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು. ಈಗ ವಿಮಾನದ ಗಗನ ಸಖಿ ಭಾಗಿಯಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಅದರಂತೆ ಮಸ್ಕತ್ ನಿಂದ ಕೇರಳ ರಾಜ್ಯದ ಕಣ್ಣೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೊಬ್ಬರು, ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಕೊಚ್ಚಿ ಫ್ಲೈಟ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಈ ಕುರಿತು ಅಲರ್ಟ್ ಆಗಿದ್ದ ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯನ್ನು ತಪಾಸಣೆ ನಡೆಸಿದ್ದಾರೆ. ಅದರಂತೆ ಆಕೆಯ ಗುದನಾಳದಲ್ಲಿ ಸುಮಾರು ೯೬೦ ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಕೂಡಲೇ ಅಧಿಕಾರಿಗಳು ಗಗನಸಖಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುರಭಿ ಎಂಬಾಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದು, ಮೇ 28 ರಂದು ಮಸ್ಕತ್ ನಿಂದ ಕಣ್ಣೂರಿಗೆ ಬಂದಿಳಿದಿದ್ದಾರೆ ಈ ವೇಳೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ವಿಚಾರ ಬೆಳಕಿಗೆ…
ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡಿ ಹರಿಬಿಡುವವರು ಹೆಚ್ಚಾಗಿದ್ದು, ಅವರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯೊಬ್ಬಳು ವಿಚಿತ್ರವಾಗಿ ನಡೆದುಕೊಂಡಿದ್ದು, ರೀಲ್ಸ್ ಗಾಗಿ ನೃತ್ಯ ಮಾಡಿದ್ದಾಳೆ ಎನ್ನಲಾಗಿದೆ. ಹಲವರು ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕುರುಕ್ಷೇತ್ರದ ‘ಆಪ್ ಕಾ ಆನಾ’ ಹಾಡಿನಲ್ಲಿ ಮಹಿಳೆಯೊಬ್ಬಳು ಸಲ್ವಾರ್ ಕುರ್ತಾ ಧರಿಸಿ ನೃತ್ಯ ಮಾಡಿದ್ದಾಳೆ. ಆಕೆಯ ಕೆಲವು ಭಂಗಿಗಳು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ. ಅನೇಕ ಜನರು ಅವಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತರರು ನೋಡಿಯೂ ನೋಡದಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ”ವೈರಸ್ ವಿಮಾನ ನಿಲ್ದಾಣವನ್ನು ತಲುಪಿದೆ” ಎಂಬ ಶೀರ್ಷಿಕೆಯಡಿ @desimojito ಎಂಬ ಹೆಸರಿನ ಬಳಕೆದಾರ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಟೀಕೆಗಳಿಗೆ ಕಾರಣವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಬಳ್ಳಾರಿ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಜಿಲ್ಲೆಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 08 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಜೂನ್ 04 ರಂದು ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜೂ.04 ರಂದು ಬೆಳಿಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರದ ಕಟ್ಟಡದಲ್ಲಿ 20 ಇವಿಎಂ ಸ್ಟ್ರಾಂಗ್ ರೂಂ ಮತ್ತು 02 ಅಂಚೆ ಮತಗಳ ಸ್ಟ್ರಾಂಗ್ ರೂಂಗಳಿದ್ದು, ಮತ ಎಣಿಕೆ ಕಾರ್ಯ ಒಟ್ಟು 08 ಹಾಲ್ ಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು. ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ…
ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಿಬ್ಬಂದಿ ಪಾವಗಡದಲ್ಲಿ ಪರಸ್ಪರ ಹೊಡೆದಾಡಿದ್ದ ಘಟನೆಗೆ ಸಂಬಂಧಿಸಿದಂತೆ ಕಿರಿಯ ಇಂಜಿನಿಯರ್ (ವಿ) ವರದರಾಜು, ಮೆಕಾನಿಕ್ ಗ್ರೇಡ್-1 ನರಸಿಂಹಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹೊಡೆದಾಡಿದ್ದ ಸಿಬ್ಬಂದಿಯನ್ನು ಅಮಾನತುಗೊಳಿಸಿ ತುಮಕೂರಿನ ಪ್ರಸರಣ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಮೇ 31 ರಂದು ಆದೇಶ ಹೊರಡಿಸಿದ್ದಾರೆ ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ. ಇದೇ ಪ್ರಕರಣ ಸಂಬಂಧ ಕೆಪಿಟಿಸಿಎಲ್ ನ ನೌಕರರಾದ ಕಿರಿಯ ಇಂಜಿನಿಯರ್ (ವಿ) ಶ್ರೀನಿವಾಸ, ಎಸ್.ಎ ಗ್ರೇಡ್-2 ಸಂತೋಷ ಎಂಬುವವರಿಗೆ ನೋಟಿಸ್ ಜಾರಿಮಾಡಲಾಗಿದೆ. ಪಾವಗಡದ ಪಟ್ಟಣದ ಹೊರವಲಯದ ತೋಟದಲ್ಲಿ ಮೇ 23ರಂದು ಕಚೇರಿ ಸಮಯದಲ್ಲೇ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದರು. ಈ ಪ್ರಕರಣ ಸಂಬಂಧ ಕೆಪಿಟಿಸಿಎಲ್ ಶಿಸ್ತು ಕ್ರಮ ಕೈಗೊಂಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುಮಕೂರು: ಜನಪರ ಮತ್ತು ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತಕ್ಕಾಗಿ ಮತ್ತು ಆ ಮೂಲಕ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಕೆ.ಆರ್.ಎಸ್. ಪಕ್ಷವು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಈ ಚುನಾವಣೆಯಲ್ಲಿ ಶಿಕ್ಷಕರು ಕೆ.ಆರ್.ಎಸ್. ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಶಿಕ್ಷಕರು ನಿರಂತರವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸಲು ದಕ್ಷ ಮತ್ತು ಪ್ರಾಮಾಣಿಕ ಆಡಳಿತದಿಂದ ಮಾತ್ರ ಸಾಧ್ಯ, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗವಿಲ್ಲ. ಈ ನಿಟ್ಟಿನಲ್ಲಿ ಕೆ.ಆರ್.ಎಸ್. ಪಕ್ಷವು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದು ಪಕ್ಷ ಹೇಳಿದೆ. ಪ್ರಸ್ತುತ ಅತಿಥಿ ಶಿಕ್ಷಕರ ಸಮಸ್ಯೆಯು ಬಹು ದೊಡ್ಡ ಸಮಸ್ಯೆಯಾಗಿದ್ದು, ಕಳೆದ ಮೂರು ದಶಕಗಳಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆಯೆ ವಿನಃ, ಈ ಯಾವ ಸರ್ಕಾರಗಳಿಗೂ ಬಗೆಹರಿಸಲು ಸಾಧ್ಯವಾಗಿಲ್ಲ ಮತ್ತು ಮುಂದೆಯೂ ಅವರಿಗೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇನ್ನು ರಾಜ್ಯದ ಸರ್ಕಾರಿ ಶಾಲಾ ಕಾಲೇಜು ಶಿಕ್ಷಕರ ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಮತ್ತು ಕಾಲಕಾಲಕ್ಕೆ ನೇಮಕಾತಿಗಳು ನಡೆಯುತ್ತಿಲ್ಲ. ಇದರಿಂದ ಈ ವರ್ಗದವರಲ್ಲಿ…
ಕೊಪ್ಪಳ: ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ಪಾದಯಾತ್ರೆಗೆ ಹೊರಟಿದ್ದವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಕೊಪ್ಪಳ ತಾಲೂಕಿನ ಕೆರಳ್ಳಿ ಫ್ಲೈಓವರ್ ಬಳಿ ಘಟನೆ ನಡೆದಿದೆ. ಡಿಕ್ಕಿ ರಭಸಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಯಮನೂರಪ್ಪ ಸಣ್ಣಮನಿ (34) ಮೃತ ದುರ್ದೈವಿಯಾಗಿದ್ದಾರೆ. ಯಮನೂರಪ್ಪ ಹಾಗೂ ಮಹಾಂತೇಶ್ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಯಮನೂರಪ್ಪ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್ ಫ್ಲೈಓವರ್ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಅವರ ಕಾಲಿನ ಪಾದವೇ ತುಂಡಾಗಿ ಬಿದ್ದಿತ್ತು. ಗಾಯಾಳು ಮಹಾಂತೇಶ್‌ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ನಮ್ಮತುಮಕೂರಿನ ಕ್ಷಣ…