Subscribe to Updates
Get the latest creative news from FooBar about art, design and business.
- NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಜು. 29ರಂದು ಔರಾದ್ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
- ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
- ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
- ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
- ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
- ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
Author: admin
ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾ ಸಿಟಿ ಮಾಲ್‌ನ 4ನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಗುರುತು ಪತ್ತೆಯಾಗಿಲ್ಲ. ಕೂಡಲೇ ಅಲ್ಲಿದ್ದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ನಾಲ್ಕನೇ ಮಹಡಿಯಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಗೀತಾ ಆದಾಪುರಮಠ(14) ಹಾಗೂ ರುದ್ರಯ್ಯ(10) ಮೃತ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿ ಅಕ್ಕ-ತಮ್ಮ ಹಾಗೂ ಅವರ ಅಜ್ಜ, ಅಜ್ಜಿ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೆ ಅಜ್ಜಿ ಪಾರಾಗಿದ್ದಾರೆ. ಇನ್ನು ಅದೃಷ್ಟವಶಾತ್ ಮನೆ ಬೀಳುವ ಕೆಲವೇ ಕ್ಷಣಗಳ ಮೊದಲು ಅಜ್ಜ ಮನೆಯಿಂದ ಹೊರಗಡೆ ಹೋಗಿದ್ದ, ಅಜ್ಜಿ ಸಹ ಒಳಗಿಂದ ಹೊರಗಡೆ ಬಂದು ಕುಳಿತಿದ್ದಳು. ಹೀಗಾಗಿ ಅಜ್ಜ-ಅಜ್ಜಿ ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಇತ್ತ ಮೃತ ಮಕ್ಕಳ ತಂದೆ-ತಾಯಿ ಮಕ್ಕಳಿಗೆ ಶಾಲೆಗೆ ಹೋಗಿ ಎಂದು ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗಿದ್ದರು. ಆದರೆ, ಇವತ್ತು ಮೊದಲ ದಿನ ಎಂದು ಶಾಲೆಗೆ ಹೋಗದೇ ಮಕ್ಕಳು ಮನೆಯಲ್ಲೆ ಇದ್ದರು. ಕಾರ್ಯಾಚರಣೆ ನಡೆಸಿ, ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಮೃತದೇಹ ಹೊರತೆಗೆಯಲಾಗಿದ್ದು, ಇಳಕಲ್ ತಾಲೂಕು ಆಸ್ಪತ್ರೆಗೆ ಎರಡು ಮಕ್ಕಳ ಮೃತದೇಹವನ್ನು ರವಾನೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನಸ್ಥರಾಗಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಒತ್ತಡಗಳಿಂದ ಬಿಡುವು ಪಡೆದು ಪ್ರಕೃತಿಯ ಪ್ರಶಾಂತ ತಾಣದಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಿದ್ದಾರೆ. ಸುಮಾರು 45 ಗಂಟೆಗಳ ಕಾಲ ಮೋದಿ ಅವರು ಕನ್ಯಾಕುಮಾರಿಯಲ್ಲಿ ಇರಲಿದ್ದು ಭಾರೀ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಸುಮಾರು 2,000 ಪೊಲೀಸರ ಹೊರತಾಗಿ ವಿವಿಧ ಭದ್ರತಾ ಏಜೆನ್ಸಿಗಳು ಕಟ್ಟುನಿಟ್ಟಿನ ನಿಗಾ ವಹಿಸುತ್ತಿದೆ. ಅಷ್ಟೇ ಅಲ್ಲ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಕಡಲ ಗಡಿಗಳಲ್ಲಿ ಕಣ್ಗಾವಲಿದೆ. 2019ರಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈಗ ಕನ್ಯಾಕುಮಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತಿರುಪತಿ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಪತ್ನಿ ಸೋನಲ್ ಶಾ ಜೊತೆಗೆ, ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಅಮಿತ್ ಶಾ ಸಾಷ್ಟಾಂಗ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ “ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಯು ಪ್ರತಿಯೊಬ್ಬರ ಜೀವನದಲ್ಲಿ ಮೇಲಿರಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ” ಎಂದು ಬರೆದುಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚಂಡೀಗಢ: ಹರಿಯಾಣದ ಗುರುಗ್ರಾಮ್ ನಲ್ಲಿರುವ ಜವಳಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಜವಳಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿ ಸಂಭವಿಸಿದೆ. ಆದರೆ ಈ ಅವಘಡದಲ್ಲಿ ಯಾವುದೇ ಸಾವು -ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ತಕ್ಷಣ ಎಲ್ಲ ಸಿಬ್ಬಂದಿ ಹೊರಗೆ ಬಂದರು ಎನ್ನಲಾಗಿದೆ. ಮನೇಸರ್ ನಲ್ಲಿರುವ ಈ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಢಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮನೇಸರ್ ನ ಸೆಕ್ಟರ್ 8 ರಲ್ಲಿನ ಪ್ಲಾಟ್ ಸಂಖ್ಯೆ 408 ರಲ್ಲಿ ಇರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಗುರುವಾರ ಸಂಜೆ 5.30ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಸುಮಾರು 35 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಆದರೆ ಗಾಳಿಯ ರಭಸಕ್ಕೆ ಬೆಂಕಿ ವ್ಯಾಪಿಸಿದ್ದು ನಿಯಂತ್ರಿಸಲು ಕಷ್ಟವಾಯಿತು. ಗುರುಗ್ರಾಮ್…
ಶ್ರೀನಗರ: ಉತ್ತರ ಪ್ರದೇಶದ ಹತ್ರಾಸ್ ನಿಂದ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಮೃತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇನ್ನೂ ಘಟನೆಯಲ್ಲಿ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಮ್ಮುವಿನ ಉಪಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಘಟನೆ ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸಹ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಾಸ್ ಡೈಲಾಗ್ ಗಳಿಂದ ಮತ್ತು ಅತಿಯಾದ ಗ್ರಾಫಿಕಲ್ ಫೈಟ್ ಸೀನ್ ನಿಂದ ಹೆಚ್ಚು ಖ್ಯಾತಿ ಗಳಿಸಿರುವ ತೆಲುಗು ನಟ ಬಾಲಕೃಷ್ಣ ನಟಿ ಅಂಜಲಿ ಅವರೊಂದಿಗೆ ವೇದಿಕೆಯೊಂದರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗ್ಯಾಂಗ್ಸ್ ಆಫ್ ಗೋದಾವರಿ ‘ಸಿನಿಮಾ ಪ್ರೀ-ರಿಲೀಸ್’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ವೇದಿಕೆಗೆ ಆಗಮಿಸಿದ ವೇಳೆ ನಟಿ ನೇಹಾ ಶೆಟ್ಟಿ ಹಾಗೂ ನಟಿ ಅಂಜಲಿ ವೇದಿಕೆಯಲ್ಲಿ ನಿಂತಿದ್ದರು. ಈ ವೇಳೆ ಬಾಲಕೃಷ್ಣ ಅಂಜಲಿ ಅವರನ್ನು ಏಕಾಏಕಿ ತಳ್ಳಿದ್ದಾರೆ. ಇದರಿಂದ ಅಂಜಲಿ ಗಾಬರಿಗೊಂಡರು. ಬಳಿಕ ನಗುವಿನೊಂದಿಗೆ ಆ ಘಟನೆಯನ್ನು ಮರೆಮಾಚಿರುವ ದೃಶ್ಯಗಳು ಕಂಡುಬಂದಿದೆ. ಇದೀಗ ಬಾಲಕೃಷ್ಣರವರ ನಡವಳಿಕೆಯ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಲು ಬಯಸುತ್ತಾರೆ. ಆದರೆ ಮಾಹಿತಿ ಕೊರತೆಯಿಂದ ಬಹುತೇಕ ರೈತರು ಗೊಂದಲದಲ್ಲಿದ್ದಾರೆ. ನೀವೂ ಕೂಡ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಅಂತಹ ಕೃಷಿಯ ಬಗ್ಗೆ ಹೇಳುತ್ತೇವೆ. ಈ ಕೃಷಿ ಮಾಡುವುದರಿಂದ ನೀವು ಲಕ್ಷಗಟ್ಟಲೆ ಲಾಭ ಗಳಿಸಬಹುದು. ಏಲಕ್ಕಿ ಕೃಷಿ: ನಾವು ಏಲಕ್ಕಿ ಬಗ್ಗೆ ಮಾತನಾಡುತ್ತಿದ್ದೇವೆ. ಏಲಕ್ಕಿಯು ಅಡುಗೆ ಪದಾರ್ಥವಾಗಿದ್ದು, ಇದು ಪ್ರತಿ ಮನೆಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿದೆ. ಏಲಕ್ಕಿಯನ್ನು ಅನೇಕ ವಸ್ತುಗಳಲ್ಲಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಔಷಧೀಯ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಏಲಕ್ಕಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಏಲಕ್ಕಿಗೆ ಬೇಡಿಕೆ: ಏಲಕ್ಕಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಏಲಕ್ಕಿ ಬೆಳೆಯುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು. ಭಾರತದಲ್ಲಿ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ…
ಗದಗ: ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ ಮಾಡುತ್ತಿರುವ ಹಿನ್ನೆಲೆ, ಗ್ರಾಮ ಪಂಚಾಯತಿ ವಿರುಧ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ತಿಮ್ಮಾಪೂರ ಗ್ರಾಮದಲ್ಲಿ ಸಮರ್ಪಕ ನೀರಿಲ್ಲದೇ ಜನತೆ ಪರದಾಟ ನಡೆಸಿದ್ದಾರೆ. ಒಳ್ಳೆ ನೀರು ಪೂರೈಕೆ ಮಾಡೋ ಬದಲು ಟ್ಯಾಂಕರ್ ಮೂಲಕ ಪ್ಲೋರೈಡ್ ಯುಕ್ತ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿಲ್ಲದೇ ಇರೋದ್ರಿಂದ ಅದೇ ನೀರನ್ನ ತುಂಬಿಕೊಳ್ಳಲು ಸಾಲುಗಟ್ಟಿ ಕೊಡ, ಬಿಂದಿಗೆ ಸಮೇತ ಮಹಿಳೆಯರು ಕ್ಯೂ ನಿಂತಿದ್ದಾರೆ. ನೀರಿಗಾಗಿ ಮಹಿಳೆಯರು ಜಗಳ ಮಾಡಿದ್ದಾರೆ. ಫ್ಲೋರೈಡ್ ಇಲ್ಲದ ಶುದ್ಧ ನೀರು ಸಪ್ಲೈ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹಾವಿನ ಭಯದಿಂದ ಕಂಗೆಟ್ಟು ಹೋಗುವ ಬದಲು ಮನೆಯ ಬಳಿ ಹಾವು ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಇದಕ್ಕಾಗಿ ಕೆಲವು ಗಿಡಗಳನ್ನು ನಿಮ್ಮ ಮನೆಯ ಅಕ್ಕ ಪಕ್ಕ ಬೆಳಸುವುದು ಬಹಳ ಉತ್ತಮ. ಅಂತಹ ಗಿಡಗಳ ಬಗ್ಗೆ ಮಾಹಿತಿ ಇಲ್ಲಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ತುಳಸಿ ಮತ್ತು ಸೇಜ್ ಎಲೆಗಳು ತಮ್ಮ ಪರಿಮಳಕ್ಕೆ ಪ್ರಸಿದ್ಧವಾದವು. ಇವುಗಳ ಪರಿಮಳ ಹಾವುಗಳಿಗೆ ಆಗಿ ಬರುವುದಿಲ್ಲ. ದೂರದಲ್ಲಿದ್ದರೂ ಕೂಡ ತುಳಸಿ ಗಿಡದ ಹಾಗೂ ಸೇಜ್ ಎಲೆಗಳ ವಾಸನೆಗೆ ಹಾವು ಹತ್ತಿರ ಕೂಡ ಸುಳಿಯಲು ಪ್ರಯತ್ನಿಸುವುದಿಲ್ಲ. ಹಾಗಾಗಿ ನಿಮ್ಮ ಮನೆಯ ಹೂಕುಂಡದಲ್ಲಿ ಅಥವಾ ಹಿತ್ತಲಿನಲ್ಲಿ ಇದನ್ನು ಬೆಳೆಸುವುದು ಉತ್ತಮ. ಕ್ಯಾಕ್ಟಸ್ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಮುಳ್ಳಿನ ಗಿಡ. ಪೂರ್ತಿ ಮುಳ್ಳು ತುಂಬಿರುವ ಕ್ಯಾಕ್ಟಸ್ ಗಿಡದ ಹತ್ತಿರ ಹಾವು ಬರುವುದಿಲ್ಲ. ನಿಮ್ಮ ಮನೆಯ ಅಕ್ಕ ಪಕ್ಕ ಯಾವುದೇ ಜಾಗದಲ್ಲಿ ನೀವು ಕ್ಯಾಕ್ಟಸ್ ಗಿಡವನ್ನು ಬೆಳೆಯಬಹುದು. ಹಾವು ನೆಲದಲ್ಲಿ ಹರಿದಾಡುವುದರಿಂದ ನೆಲದಿಂದ ಸ್ವಲ್ಪ ಎತ್ತರದಲ್ಲಿ ಕ್ಯಾಕ್ಟಸ್ ಗಿಡ ಇದ್ದರೆ ಸಾಕು. ಹಾವು…