Subscribe to Updates
Get the latest creative news from FooBar about art, design and business.
- ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!
- ಮುಳ್ಳಯ್ಯನಗಿರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಟಿ: 13 ಪ್ರವಾಸಿಗರು ಅದೃಷ್ಟವಶಾತ್ ಪಾರು!
- ಥಿಯೇಟರ್ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ
- ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ಆರ್.ವಿ.ದೇಶಪಾಂಡೆ
- ಇಂಧನ ದರ ಏರಿಕೆ: ರಾಜಕೀಯ ಮಾಡದೆ ವ್ಯಾಟ್ ಕಡಿಮೆ ಮಾಡಿ; ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಒತ್ತಾಯ
- ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಎಚ್ಚರಿಕೆ!
- ಬೇಸಿಗೆ ಕಾಲದಲ್ಲಿ ಲಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ಹೇಗೆ?
- ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ: ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ
Author: admin
ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಜಭವನದ ಮಹಿಳಾ ಸಿಬ್ಬಂದಿ ರಾಜ್ಯಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಮಾಡಿರುವ ಮಹಿಳೆ 2019 ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರದಂದು ರಾಜ್ಯಪಾಲರು ತಮ್ಮನ್ನು ಭೇಟಿ ಮಾಡಿ ತಮ್ಮ ಪದೋನ್ನತಿ ಬಗ್ಗೆ ಚರ್ಚೆ ಮಾಡಿದ್ದರು. ಈ ವೇಳೆ ತಮಗೆ ಅಹಿತಕರ ಅನುಭವವಾಗಿದೆ ಎಂದು ಹೇಳಿದ್ದಾರೆ. ದೂರಿನ ಪ್ರಕಾರ, ಒಂದು ವಾರದ ಹಿಂದೆ ರಾಜ್ಯಪಾಲರು ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಹೇಳಿದ್ದಾರೆ. ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಮೊದಲು ಮಹಿಳೆ ರಾಜಭವನ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ನಾವು ದೂರು ಸ್ವೀಕರಿಸಿದ್ದೇವೆ, ತನಿಖೆ ನಡೆಸುತ್ತಿದ್ದೇವೆ. ನಾವು ಕಾನೂನು ಇಲಾಖೆಯ ಸಾಂವಿಧಾನಿಕ ತಜ್ಞರೊಂದಿಗೆ ಈ ವಿಷಯದ ಬಗ್ಗೆ ಸಮಾಲೋಚಿಸುತ್ತಿದ್ದೇವೆ. ಮಹಿಳೆಯ ಆರೋಪದ ಪ್ರಕಾರ, ರಾಜಭವನದಲ್ಲಿ…
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಅರೆಸ್ಟ್ ಮಾಡುವುದು ಕಷ್ಟವೇನಲ್ಲ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಮಲೈ..!
ಖಾಸಗಿ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದರಿಂದ, ಅವರನ್ನು ಬಂಧಿಸಿ ಕರೆತರಲು ಕೇಂದ್ರ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶ ಮಾಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಮಾಜಿ ಐಪಿಎಸ್ ಅಧಿಕಾರಿ, ತಮಿಳನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಅಣ್ಣಮಲೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯವಿಧಾನದ ಪ್ರಕಾರ, ಎಸ್ಐಟಿ ಅಥವಾ ಸಿಐಡಿ ಸಿಬಿಐಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಅಥವಾ ಇಂಟರ್ಪೋಲ್ ನೆರವು ಪಡೆಯಲು ರಾಜ್ಯ ಸರ್ಕಾರ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು. ಬಳಿಕ ರೆಡ್ ಕಾರ್ನರ್ ಜಾರಿಗೊಳಿಸಲಾಗುತ್ತದೆ. ಆಗ ಆರೋಪಿ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೆ ಕೂಡಲೆ ಅವನನ್ನು ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಬಳಿಕ ಆರೋಪಿ ಬೇಕಾಗಿರುವ ಠಾಣೆಗೆ ಮಾಹಿತಿ ನೀಡುತ್ತಾರೆ. ನಾನು ಕರ್ನಾಟಕದ ಸೇವೆ ಸಲ್ಲಿಸುತ್ತಿರುವಾಗ ಭೂಗತ ಪಾತಕಿ ಬನ್ನಂಜೆ ರಾಜನನ್ನು ಮೊರಾಕೊದಿಂದ ಪ್ರಧಾನಿಗೆ ಯಾವುದೇ ಪತ್ರ ಬರೆಯದೆ ಬಂಧಿಸಿ ಕರೆತಂದೆವು ಎಂದರು. ದೇಶದ…
ಬಿರುಬೇಸಿಗೆಯಲ್ಲಿ ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ಹಾಕಿಸಬೇಡಿ ಎಂದು ವಾಹನ ಸವಾರರಿಗೆ ಇಂಡಿಯನ್ ಆಯಿಲ್ ಕಂಪನಿ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆಟೋಮೊಬೈಲ್ ತಯಾರಕರು ಕಾರ್ಯಕ್ಷಮತೆಯ ಅಗತ್ಯತೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಅಂಶಗಳೊಂದಿಗೆ ಸುತ್ತುವರಿದ ಪರಿಸ್ಥಿತಿಗಳ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ ಇಂಧನ ಟ್ಯಾಂಕ್‌ನಲ್ಲಿ ಸೂಚಿಸಲಾದ ಗರಿಷ್ಠ ಪರಿಮಾಣವು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಚಳಿಗಾಲ ಅಥವಾ ಬೇಸಿಗೆಯನ್ನು ಲೆಕ್ಕಿಸದೆ ತಯಾರಕರು ನಿರ್ದಿಷ್ಟಪಡಿಸಿದ ಗರಿಷ್ಠ ಮಿತಿಯವರೆಗೆ ವಾಹನಗಳಲ್ಲಿ ಇಂಧನ ತುಂಬುವುದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಫುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ತುಂಬಿಸಬೇಡಿ ಎಂದು ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಗ್ಯಾಸ್ ಹೊರಹೋಗಲು ಟ್ಯಾಂಕ್‌ನಲ್ಲಿ ಜಾಗವಿರುತ್ತದೆ. ಇಂಧನವು ಉಷ್ಣತೆಯ ವ್ಯತ್ಯಾಸಗಳೊಂದಿಗೆ ವಿಸ್ತರಿಸುವುದು ಮತ್ತು ಸಂಕುಚಿತಗೊಳ್ಳುವುದು ಆಗುತ್ತದೆ. ಅದು ಬೆಂಕಿ ಸಂಪರ್ಕಕ್ಕೆ ಬರದ ಹೊರತು ಎಂದಿಗೂ ಸ್ವತಃ ಸ್ಫೋಟಗೊಳ್ಳುವುದಿಲ್ಲ. ಆಧುನಿಕ ಇಂಧನ ಟ್ಯಾಂಕ್ ಗಳನ್ನು…
ವಿಶೇಷವೆಂದರೆ ಬಿಳಿ ಮೂಲಂಗಿಯಂತೆಯೇ ಕಪ್ಪು ಮೂಲಂಗಿಯನ್ನೂ ಬೆಳೆಯಲಾಗುತ್ತದೆ. ಮೊದಲು ಹಸುವಿನ ಗೊಬ್ಬರವನ್ನು ಹೊಲಕ್ಕೆ ಹಾಕುತ್ತಾರೆ. ಇದರ ನಂತರ ಭೂಮಿಯನ್ನು ಹಲವಾರು ಬಾರಿ ಉಳುಮೆ ಮಾಡಲಾಗುತ್ತದೆ. ನಂತರ ಜಾಗ ಸಮತಟ್ಟಾಗುತ್ತದೆ. ಇದರ ನಂತರ ಬೀಜಗಳನ್ನು ನೆಡಲಾಗುತ್ತದೆ. ಬಳಿಕ ಗದ್ದೆಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಹೊಲದಲ್ಲಿ ನೀರು ಸಂಗ್ರಹವಾದರೆ ಬೆಳೆ ಹಾಳಾಗುತ್ತದೆ. ಹಾಗಾಗಿ ಹೊಲಕ್ಕೆ ನೀರುಣಿಸುವ ವ್ಯವಸ್ಥೆ ಮಾಡಬೇಕು. ಒಂದು ಎಕರೆಯಲ್ಲಿ ಕಪ್ಪು ಮೂಲಂಗಿ ಬೆಳೆಯಲು 30 ರಿಂದ 35 ಸಾವಿರ ರೂಪಾಯಿ ಬೇಕಾಗುತ್ತದೆ. ಆದರೆ ಕಪ್ಪು ಮೂಲಂಗಿಯ ಇಳುವರಿ ಎರಡು ತಿಂಗಳಲ್ಲಿ ಬರುತ್ತದೆ. ಎರಡು ತಿಂಗಳ ನಂತರ ನೀವು ಕಪ್ಪು ಮೂಲಂಗಿಯನ್ನು ಮಾರಾಟ ಮಾಡುವ ಮೂಲಕ ಚೆನ್ನಾಗಿ ಹಣ ಗಳಿಸಬಹುದು. ಒಂದು ಎಕರೆಯಲ್ಲಿ 70 ರಿಂದ 80 ಕ್ವಿಂಟಲ್ ಮೂಲಂಗಿ ಇಳುವರಿ ಸಿಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಕಪ್ಪು ಮೂಲಂಗಿಗೆ ಬೇಡಿಕೆ ಅತ್ಯಧಿಕವಾಗಿದೆ. ಕಪ್ಪು ಮೂಲಂಗಿಯಲ್ಲಿ ನಾರಿನಂಶ ಸಮೃದ್ಧವಾಗಿದೆ : ಕಪ್ಪು ಮೂಲಂಗಿ ವಾಸ್ತವವಾಗಿ ಒಂದು ರೀತಿಯ ತರಕಾರಿಯಾಗಿದೆ. ಇದನ್ನು ಸ್ಪ್ಯಾನಿಷ್…
ಸ್ಟೇಷನ್ ನಲ್ಲಿ ಮಹಿಳೆಯೊಬ್ಬರು ಇನ್ಸ್ಪೆಕ್ಟರ್ ಗೆ ಕಪಾಳ ಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ನಡೆದಿದೆ. ಇನ್ಸ್ ಪೆಕ್ಟರ್ ರವಿ ಅವರಿಗೆ ಫೌಜೀಯಾ ಎಂಬಾಕೆ ಕಪಾಳ ಮೋಕ್ಷ ಮಾಡಿದ್ದು, ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟ್ ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದೆ. ಈ ವೇಳೆ ಸ್ಟೇಷನ್ ಆವರಣದಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಈ ವೇಳೆ ಡ್ಯೂಟಿಯಲ್ಲಿದ್ದ ಇನ್ಸ್ ಪೆಕ್ಟರ್ ರವಿ ಗಲಾಟೆ ಮಾಡದಂತೆ ವಾರ್ನ್ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್ಸ್ಪೆಕ್ಟರ್ ಕಪಾಳಕ್ಕೆ ಹೊಡೆದಿದ್ದಾರೆ. ಘಟನೆ ಸಂಬಂಧ ಫೌಜೀಯ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಜ್ಞಾನಭಾರತಿ ಠಾಣೆ ಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇನ್ನೂ ಆರೋಪಿ ಫೌಜೀಯ ಮಾಮವ ಸಂಘಟನೆ ಕಾರ್ಯಕರ್ತೆ ಅಂತ ಹೇಳಾಲಗ್ತಿದ್ದು. ಸದ್ಯ ಮೂವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…
ಜಾತಿನಿಂದನೆ ಕೇಸ್ ದಾಖಲಿಸಿದಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ. ನಿಖಿಲ್ ಪೂಜಾರಿ(23) ನೇಣು ಬಿಗಿದುಕೊಂಡು ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಕಳೆದ ಏ.27 ರಂದು ಮೃತ ನಿಖಿಲ್ ಸೇರಿ ಹಲವರ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರಿಂದ ಹೆದರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲ್ಕು ದಿನದ ಹಿಂದೆ ಲಾಡಮುಗುಳಿ ಗ್ರಾಮದಲ್ಲಿ ಜಾತ್ರೆಯೊಂದು ನಡೆದಿತ್ತು. ಈ ವೇಳೆ ಎರಡು ಸಮುದಾಯದ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದಾದ ಬಳಿಕ ಊರವರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತು. ಬಳಿಕ ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ದ ನರೋಣಾ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಸಮುದಾಯದ ಯುವಕರು ದೂರು ನೀಡಿದ್ದು, ಏ.27 ರಂದು ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಇದರಿಂದ ಹೆದರಿದ ನಿಖಿಲ್ ಪೂಜಾರಿ ನೇಣಿಗೆ ಶರಣಾಗಿದ್ದಾನೆ. ಇದೇ ವೇಳೆ ಕುಟುಂಬಸ್ಥರು ಹಾಗೂ ಸಮುದಾಯದವರು ನ್ಯಾಯಕ್ಕಾಗಿ ಮೃತದೇಹವನ್ನು ಕಲಬುರಗಿಗೆ ತರಲು ಮುಂದಾಗಿದ್ದಾರೆ ಎಂದು…
ಸಿಡಿಲು ಬಡಿದು ನವ ವಿವಾಹಿತ ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಗ್ರಾಮದ ಸೋಮಸುಂದರ್ (34) ಮೃತಪಟ್ಟವರು. ಕಡಬ ತಾಲೂಕಿನ ಸುಬ್ರಹ್ಮಣ್ಯದ ಪರ್ವತಮುಖಿ ನಿವಾಸಿಯಾಗಿರುವ ಸೋಮಸುಂದರ್ ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದರು. ಇವರು ಕೇವಲ 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ. ನಿನ್ನೆ ಸಂಜೆ ಸುರಿದ ಮಳೆ ಆರಂಭದ ಮೊದಲು ಗುಡುಗು ಗಾಳಿ ಬೀಸುತ್ತಿತ್ತು. ಆಗ ಮನೆಯಂಗಲದಲ್ಲಿದ್ದ ಒಣಗಿಸುತ್ತಿದ್ದ ಅಡಿಕೆಯನ್ನು ಸೋಮಸುಂದರ್ ರವರು ರಾಶಿ ಹಾಕಲು ತೆರಳಿದ್ದರು. ಆ ವೇಳೆ ಜೋರಾಗಿ ಸಿಡಿಲು ಬಡಿದಿದೆ. ಅವರು ಅಲ್ಲೇ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಡಬದ ಸಮುದಾಯ ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಆದರೆ ದುರದೃಷ್ಟವಶಾತ್ ಆ ವೇಳೆಗಾಗಲೇ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೇವಲ 10 ದಿನಗಳ ಹಿಂದೆ ಮದುವೆಯಾಗಿದ್ದ ಅವರ ದುರ್ಮರಣ ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಪ್ರತಿನಿತ್ಯ ಭೇಟಿ ಕೊಡುತ್ತಿದ್ದಾರೆ. ಇದೀಗ ಪಾಕಿಸ್ತಾನದಿಂದಲೂ ನೆನ್ನೆ ಬಾಲರಾಮನ ದರ್ಶನ ಪಡೆಯಲು ಹಲವರು ಆಗಮಿಸುತ್ತಿದರು. ಪಾಕಿಸ್ತಾನದ ಸಿಂಧಿ ಸಮುದಾಯದ 200 ಸದಸ್ಯರ ನಿಯೋಗ ಅಯೋಧ್ಯೆಗೆ ತಲುಪಿ ಬಾಲರಾಮನಿಗೆ ಪೂಜೆ ಸಲ್ಲಿಸಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಈ ನಿಯೋಗವು ಭಾರತಕ್ಕೆ ಒಂದು ತಿಂಗಳ ಧಾರ್ಮಿಕ ಪ್ರವಾಸದಲ್ಲಿದೆ. ಇದೀಗ ರಸ್ತೆ ಮಾರ್ಗವಾಗಿ ನೆನ್ನೆ ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ತಲುಪಲಿದೆ. ಈ ವೇಳೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ್ ಕಿ ಪೈಡಿಯಲ್ಲಿ ಅವರನ್ನು ಸ್ವಾಗತಿಸಿದರು. ಭಾರತದಿಂದ ಸಿಂಧಿ ಸಮುದಾಯದ 150 ಸದಸ್ಯರ ನಿಯೋಗವೂ ಅವರೊಂದಿಗೆ ಪ್ರಯಾಣಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನಿ ನಿಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಯಿತು. ಅವರಿಗಾಗಿ ಅಯೋಧ್ಯೆಯ ಉದಾಸಿನ್ ಋಷಿ ಆಶ್ರಮ ಮತ್ತು ಶಬರಿ ರಸೋಯಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ನಿಯೋಗವು ನೆನ್ನೆ ಸಂಜೆ ರಾಮ್…
ಕೆರೆ ಮೀನು ತಿಂದು ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಮೃತರನ್ನು ರವಿಕುಮಾರ (46), ಪುಟ್ಟಮ್ಮ 50) ಎಂದು ಗುರುತಿಸಲಾಗಿದೆ. ನೀರಿಲ್ಲದೆ ಬತ್ತಿ ಹೋಗಿದ್ದ ಬಸವನಹಳ್ಳಿ ಗ್ರಾಮದ ಕೆರೆಯ ಕೆಸರಿನಲ್ಲಿದ್ದ ಮೀನನ್ನು ಗ್ರಾಮಸ್ಥರು ಹಿಡಿದಿದ್ದರು. ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ ನಂತರ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಅಸ್ವಸ್ಥರನ್ನು ಅರಕಲಗೂಡು ಹಾಗೂ ಹಾಸನದ ಆಸ್ಪತ್ರೆಗೆ ದಾಖಲಿದ್ದು, ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮಹಿಳೆಯೊಬ್ಬರು ನೇಣು ಬಿಗಿದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ಭಾಗ್ಯಮ್ಮ(50) ಸಾವಿಗೆ ಶರಣಾದ ಮಹಿಳೆಯಾಗಿದ್ದಾರೆ. ಮೃತ ಮಹಿಳೆ ತಿಪಟೂರಿನ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ಸಾಲ ಪಡೆದು ಸಾಲ ಪಡೆದುಕೊಂಡಿದ್ದು, ಸಾಲ ಹಿಂದಿರುಗಿಸಲಾಗದೆ, ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಗಂಡ ನಿಧನರಾಗಿದ್ದು, ಒಬ್ಬರೇ ಜೀವನ ಸಾಗಿಸುತ್ತಿದ್ದರು. ಗ್ರಾಮದಲ್ಲಿ ಇದು ಮೂರನೇ ಘಟನೆ: ಈ ಗ್ರಾಮದಲ್ಲಿ ಈವರೆಗೆ ನಡೆದ ಘಟನೆಗಳಲ್ಲಿ ಇದು ಮೂರನೇ ಘಟನೆಯಾಗಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಯವರು ಕಮಿಷನ್ ಆಸೆಗೋಸ್ಕರ ಸುಮಾರು ಎಂಟರಿಂದ ಹತ್ತು ಜನ ಮಹಿಳೆಯರ ಗುಂಪು ಮಾಡಿ ಸಾಲ ವಿತರಿಸುತ್ತಿದ್ದು, ಬರಗಾಲದಲ್ಲಿ ಸಾಲ ಪಡೆದು ಪಾವತಿಸಲಾಗದೇ ಮಹಿಳೆಯರು ಜೀವ ಕಳೆದುಕೊಳ್ಳುವಂತಾಗಿದೆ. ಈಕೆಯ ಸಾವಿಗೆ ಕಾರಣರಾದ ಮೈಕ್ರೋ ಫೈನಾನ್ಸ್ ಕಂಪನಿಗಳ ಮತ್ತು ಸಿಬ್ಬಂದಿಗಳ ಮೇಲೆ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ…