Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ದೂರದರ್ಶನ ಕಿಸಾನ್ ಚಾನೆಲ್ (ಡಿಡಿ ಕಿಸಾನ್) ಶೀಘ್ರದಲ್ಲಿ 50 ಭಾಷೆಗಳಲ್ಲಿ ಮಾತನಾಡಬಲ್ಲ ಇಬ್ಬರು ಕೃತಕ ಬುದ್ದಿ ಮತ್ತೆ (ಎಐ)ಯ ಆ್ಯಂಕರನ್ನು ನಿಯೋಜಿಸಲಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. ಎಐ ಕ್ರಿಶ ಹಾಗೂ ಎಐ ಭೂಮಿ ಎಂಬ ಈ ಎರಡು ಎಐ ನಿರೂಪಕರು ಕಂಪ್ಯೂಟರ್ ಗಳಾಗಿದ್ದು, ಇವು ಮನುಷ್ಯರಂತೆಯೇ ಕೆಲಸ ಮಾಡುತ್ತವೆ. ಆದರೆ, ಮನುಷ್ಯನಿಗೆ ಭಿನ್ನವಾಗಿ ಯಾವುದೇ ದಣಿವು ಆಯಾಸವಿಲ್ಲದೆ ಇವುಗಳು 365 ದಿನಗಳ ಕಾಲ 24 ಗಂಟೆ ಸುದ್ದಿಯನ್ನು ಓದಬಲ್ಲರು. ಇದರೊಂದಿಗೆ ದೂರದರ್ಶನ ಕಿಸಾನ್ ಚಾನೆಲ್ ಕೃತಕ ಬುದ್ಧಿಮತ್ತೆ (ಎಐ)ಯ ನಿರೂಪಕರನ್ನು ಹೊಂದಿರುವ ದೇಶದ ಮೊದಲ ಸರಕಾರಿ ಟಿ.ವಿ. ಚಾನೆಲ್ ಆಗಲಿದೆ ಎಂದು ಸಚಿವಾಲಯ ತಿಳಿಸಿದೆ. ಡಿ.ಡಿ. ಕಿಸಾನ್ ಭಾರತ ಸರಕಾರ ಆರಂಭಿಸಿದ ದೇಶದ ಏಕೈಕ ಟಿ.ವಿ. ಚಾನಲ್ ಆಗಿದೆ. ಈ ಚಾನೆಲ್ ಅನ್ನು 2015 ಮೇ 26ರಂದು ಆರಂಭಿಸಲಾಗಿತ್ತು. ಹೊಸ ಎಐ ನಿರೂಪಕರು ಮೇ 26ರಂದು ಚಾನೆಲ್ ನ ಒಂಬತ್ತನೇ ವಾರ್ಷಿಕೋತ್ಸವದಂದು ಸುದ್ದಿಗಳನ್ನು ಓದಲು…
ಭಾರತೀಯ ಹಿರಿಯರ ಪುರುಷರ ತಂಡದ ಕೋಚ್ ಹುದ್ದೆಯ ಆಫರ್ ನ್ನು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಹಾಗೂ ಜಸ್ಟಿನ್ ಲ್ಯಾಂಗರ್ ನಿರಾಕರಿಸಿದ್ದಾರೆ ಎಂಬ ವರದಿಯನ್ನು ನಿರಾಕರಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕೋಚಿಂಗ್ ಆಫರ್ ನೊಂದಿಗೆ ಯಾವುದೇ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಕ್ರಿಕೆಟ್ ಮಂಡಳಿಯು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ನಾವು ಅಂತರ್ ರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಮಾತನಾಡುವಾಗ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಿಂತ ಮಿಗಿಲಾದ ಪ್ರತಿಷ್ಠಿತ ಹುದ್ದೆ ಯಾವುದು ಇರಲಾರದು. ಟೀಮ್ ಇಂಡಿಯಾ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಅಭಿಮಾನಿಗಳನ್ನು ಹೊಂದಿದ್ದು, ನಿಜವಾಗಿಯೂ ಭಾರೀ ಬೆಂಬಲವನ್ನು ಹೊಂದಿದೆ. ಒಂದು ಶತಕೋಟಿ ಅಭಿಮಾನಿಗಳ ಆಕಾಂಕ್ಷೆಗಳನ್ನು ಈಡೇರಿಸುವುದು ಒಂದು ದೊಡ್ಡ ಗೌರವವಾಗಿದೆ. ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಸೂಕ್ತ ಅಭ್ಯರ್ಥಿಯನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ ಎಂದು ಶುಕ್ರವಾರ ಹೇಳಿಕೆಯೊಂದರಲ್ಲಿ ಜಯ್ ಶಾ ತಿಳಿಸಿದ್ದಾರೆ. ನಾನಾಗಲಿ, ಬಿಸಿಸಿಐಯಾಗಲಿ ಕೋಚಿಂಗ್ ಆಫರ್ ನೊಂದಿಗೆ ಯಾವುದೇ ಮಾಜಿ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ. ನಿರ್ದಿಷ್ಟ ಮಾಧ್ಯಮ…
ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ನನ್ನ ಹೃದಯಕ್ಕೆ ಅತ್ಯಂತ ಹತ್ತಿರ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ
ದುಬೈ: ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಜೂನ್ ನಲ್ಲಿ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ ಎಂದು ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಶುಕ್ರವಾರ ಪ್ರಕಟಿಸಿದೆ. ಯುವರಾಜ್ ಸಿಂಗ್, ಕ್ರಿಸ್ ಗೇಲ್ ಹಾಗೂ ಉಸೇನ್ ಬೋಲ್ಟ್ ಅವರನ್ನೊಳಗೊಂಡ ರಾಯಭಾರಿಗಳ ಗುಂಪಿಗೆ ಅಫ್ರಿದಿ ಹೊಸ ಸೇರ್ಪಡೆಯಾಗಿದ್ದಾರೆ. 2007ರಲ್ಲಿ ನಡೆದ ಮೊದಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ತಂಡ ಫೈನಲ್ ಗೆ ತಲುಪಿ ಭಾರತವನ್ನು ಎದುರಿಸಲು ಹಾಗೂ 2009ರ ಆವೃತ್ತಿಯ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗುವಲ್ಲಿ ಅಫ್ರಿದಿ ಪ್ರಮುಖ ಪಾತ್ರವಹಿಸಿದ್ದರು. ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ. ಮೊದಲ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿರುವುದು ಹಾಗೂ 2009ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿರುವುದು ನನ್ನ ವೃತ್ತಿಜೀವನದ ಕೆಲವು ಸ್ಮರಣೀಯ ಕ್ಷಣಗಳಾಗಿವೆ. ಟಿ20 ವಿಶ್ವಕಪ್ ಇತ್ತೀಚೆಗಿನ…
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ನ್ಯಾಯಾಧೀಶೆಯಾಗಿ ಆಂಧ್ರ ಮೂಲದ ಜಯಾ ಬಡಿಗ ನೇಮಕಗೊಂಡಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡ ಪ್ರಥಮ ತೆಲುಗು ಮಹಿಳೆಯಾಗಿ ಜಯಾ ಗುರುತಿಸಿಕೊಂಡಿದ್ದಾರೆ. ಆಂಧ್ರದ ಮಚಲೀಪಟ್ಟಣಂ ಕ್ಷೇತ್ರದ ಮಾಜಿ ಸಂಸದ ಬಡಿಗ ರಾಮಕೃಷ್ಣ ಅವರ ಪುತ್ರಿಯಾಗಿರುವ ಜಯಾ, ನ್ಯಾಯಾಧೀಶೆಯಾಗಿ ನೇಮಕಗೊಂಡ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಮಾತೃಭಾಷೆ ತೆಲುಗಿನಲ್ಲಿ ಸ್ವಾಗತಿಸಿ ಸಂಸ್ಕೃತದ ಅಸತೋಮ ಸದ್ಗಮಯ ಪ್ರಾರ್ಥನೆಯೊಂದಿಗೆ ಮಾತು ಮುಗಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹೊಸದಿಲ್ಲಿ: ಮೇ 7ರಂದು ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುವುದಕ್ಕೂ ಮುನ್ನ, ಬಿಜೆಪಿ ಕಾರ್ಯಕರ್ತ ಭುವನೇಶ್ ಕುಮಾರ್ ವಾರ್ಷ್ಣೆ ಎಂಬಾತ ಪೊಲೀಸರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ವೀಡಿಯೊವೊಂದನ್ನು ಆಸ್ಟ್ರೇಲಿಯಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಬಿಡುಗಡೆ ಮಾಡಿದೆ. ಇದರೊಂದಿಗೆ ಈ ವೀಡಿಯೊದ ನೈಜತೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿದ್ದೇವೆ ಎಂದೂ ಆ ಸುದ್ದಿ ವಾಹಿನಿ ಹೇಳಿಕೊಂಡಿದೆ. ಎಬಿಸಿ ನ್ಯೂಸ್ ಸುದ್ದಿ ವಾಹಿನಿಯ ದಕ್ಷಿಣ ಏಶಿಯಾ ಬ್ಯೂರೊ ಮುಖ್ಯಸ್ಥೆ ಹಾಗೂ ಬಾತ್ಮೀದಾರೆ ಮೇಘನಾ ಬಾಲಿ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊ ದೃಶ್ಯಾವಳಿಯಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಏನೆಲ್ಲ ಮಾಡಬೇಕು ಎಂಬ ಯೋಜನೆಯನ್ನು ವಾರ್ಷ್ಣೆ ಹಂಚಿಕೊಳ್ಳುತ್ತಿರುವುದು ಸೆರೆಯಾಗಿದೆ. ಈ ವೀಡಿಯೊ ದೃಶ್ಯಾವಳಿಗೆ, “ಎಬಿಸಿಯು ಭುವನೇಶ್ ಕುಮಾರ್ ವಾರ್ಷ್ಣೆ ಎಂಬಾತ ಮೇ 7ರಂದು ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಪೊಲೀಸರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಲಂಚ ನೀಡಲು ಯೋಜನೆ ರೂಪಿಸುತ್ತಿರುವ ವೀಡಿಯೊವೊಂದು ಲಭ್ಯವಾಗಿದ್ದು, ಅದನ್ನು ಪರಿಶೀಲಿಸಿದ್ದೇವೆ. ಈ ಶೀರ್ಷಿಕೆಯ ಕೆಳಗಿರುವ…
ಬೆಂಗಳೂರು: COMEDK UGET ಫಲಿತಾಂಶ 2024 ಇಂದು ಪ್ರಕಟಿಸಿಸಲಾಗಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ರ್ಯಾಂಕ್ ಕಾರ್ಡ್‌ಗಳ ಸಂಖ್ಯೆಯನ್ನು COMEDK ನ ಅಧಿಕೃತ ವೆಬ್‌ಸೈಟ್ comedk.org ನಲ್ಲಿ ಪರಿಶೀಲನೆ ಮಾಡಬಹುದು. ಇನ್ನು ಪರೀಕ್ಷೆಯಲ್ಲಿ ಮೊದಲ 10 ರ್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರು. ಮೊದಲ ರ್ಯಾಂಕ್ ಬೆಂಗಳೂರಿನ ಬಾಲಸತ್ಯ ಸರವಣನ್ ಪಡೆದುಕೊಂಡಿದ್ದಾರೆ. 2024ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 12 ರಂದು ಪರೀಕ್ಷೆ ನಡೆದಿತ್ತು. ಕಾಮೆಡ್ ಕೆ ಕೀ ಉತ್ತರಗಳನ್ನು ಮೇ 21ರಂದು ಬಿಡುಗಡೆ ಮಾಡಿತ್ತು. ದೇಶಾದ್ಯಾಂತ 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಂಜಿನಿಯರಿಂಗ್ ಯುಜಿ ಸೀಟುಗಳನ್ನು ಕೋರಿ 1,18,005 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 1,03,799 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು.…
ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ, ಸುಭಿರ್ ಮಲ್ಲಿಕ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್ ಸೈಟ್‌ನಲ್ಲಿ ಫೈನ್ ವಿಭಾಗದಲ್ಲಿ ಒಂದಷ್ಟು ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಕಿ ಶೋಧಿಸಿದ್ದಾರೆ. ಆಗ ದಂಡ ಬಾಕಿರುವ ವಾಹನಗಳ ಸಂಖ್ಯೆಗಳನ್ನು ಗುರುತಿಸಿಕೊಂಡು, ಅವುಗಳನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್ ಸೈಟ್ ಗಳಲ್ಲಿ ದಾಖಲಿಸಿ, ವಾಹನಗಳ ಮಾಲೀಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. ಬಳಿಕ ನಿರ್ದಿಷ್ಟ ವಾಹನ ಮಾಲೀಕರ ವಾಟ್ಸ್ ಆ್ಯಪ್ ಗೆ ನಾವು ಟ್ರಾಫಿಕ್ ಪೊಲೀಸರು ಹೇಳಿಕೊಂಡು ದಂಡ ಕಟ್ಟುವಂತೆ ಕ್ಯೂಆರ್ ಕೋಡ್ ಸಮೇತ ಸಂದೇಶ ಹಾಗೂ ಮೃತ ಭಕ್ತರಾಮ್ ಗುರುತಿನ ಚೀಟಿ ಕೂಡ ಕಳುಹಿಸಿದ್ದರು. ಅದನ್ನು ನಂಬಿದ ನೂರಾರು ಮಂದಿ ದಂಡ ಪಾವತಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ದೂರು ನೀಡಿದ್ರು. ಈ ಸಂಬಂಧ ಆಕೆ…
ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲು ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡುತ್ತಿದೆ. ಗೋಲ್ಡನ್ ವೀಸಾ ಹೊಂದಿರುವವರನ್ನು 10 ವರ್ಷಗಳ ಕಾಲ ಯುಎಇ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಅನೇಕ ಭಾರತೀಯ ನಟರಿಗೆ ಗೋಲ್ಡನ್ ವೀಸಾ ನೀಡಲಾಗಿದೆ. ಇದೀಗ ಖ್ಯಾತ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ಕಳೆದ ವರ್ಷ 2018 ರಿಂದ ಗೋಲ್ಡನ್ ವೀಸಾ ನೀಡಲಾಗುತ್ತಿದೆ. ಬಾಲಿವುಡ್ ನಟರಾದ ಸಂಜಯ್ ದತ್, ಶಾರುಖ್ ಖಾನ್, ಮಲಯಾಳಂ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮತ್ತು ಗಾಯಕಿ ಚಿತ್ರಾ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಹಿಂದಿ ನಟಿ ಊರ್ವಶಿ ರೌಟೇಲಾ ಮತ್ತು ನಟಿ ಮೀರಾ ಜಾಸ್ಮಿನ್ ಅವರಿಗೂ ಗೋಲ್ಡನ್ ವೀಸಾ ನೀಡಲಾಗಿತ್ತು. ಸದ್ಯ ವೆಟ್ಟೈಯಾನ್ ಚಿತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್ ವಿಹಾರಕ್ಕೆಂದು ದುಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಬುಧಾಬಿಯಲ್ಲಿ ನಡೆದ…
ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಣಿಕೆನಹಳ್ಳಿ ಗ್ರಾಮ ದೇವತೆ ಕೆಂಪಮ್ಮ ದೇವಾಲಯದ ದಲಿತರ ಪ್ರವೇಶದ ವಿಚಾರದಲ್ಲಿ, ಗೊಂದಲಗಳು ಸೃಷ್ಟಿಯಾಗಿದ್ದು ಅಧಿಕಾರಿಗಳು ಕೆಲವು ಸ್ವಹಿತಾಸಕ್ತಿ ವಹಿಸಿ ಗ್ರಾಮಕ್ಕೆ ಮುಜುಗರನ್ನುಂಟು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್ಮರಿಯ ಅಭಿಪ್ರಾಯಪಟ್ಟರು. ಕುಣಿಕೆನಹಳ್ಳಿ ದೇವಾಲಯದ ಆವರಣದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದಲೂ ಸಂಪ್ರದಾಯ ಬದ್ಧವಾಗಿ ಪೂಜಾ ವಿಧಾನಗಳು ಹಬ್ಬ ಹರಿದಿನ ಜಾತ್ರೆಗಳು ನಡೆದುಕೊಂಡು ಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರಲ್ಲಿ ಯಾವುದೇ ಸಮುದಾಯದ ಜನರಿಗೆ ತಾರತಮ್ಯವನ್ನು ಮಾಡದಿದ್ದರೂ ಕೂಡ, ಅಧಿಕಾರಿಗಳು ಕೆಲವು ಸಮಾಜಸ್ವಾಸ್ತ್ಯ ಕೆಡಿಸುವ ವ್ಯಕ್ತಿಗಳ ಮಾತು ಕೇಳಿ ಗ್ರಾಮಕ್ಕೆ ಆಗಮಿಸಿ ಗ್ರಾಮಕ್ಕೆ ಹಾಗೂ ಗ್ರಾಮಸ್ಥರಿಗೆ ಮುಜುಗರವನ್ನು ಉಂಟುಮಾಡಿದ್ದು ಈ ವಿಚಾರ ಗ್ರಾಮಸ್ಥರಿಗೆ ಬಹಳ ನೋವನ್ನು ತಂದಿದೆ ಎಂದು ತಿಳಿಸಿ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರುಗಳ ಸಭೆಯನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಬಹುದಾಗಿತ್ತು. ಅದನ್ನು ಮಾಡದೆ ಅಧಿಕಾರಿಗಳು ಏಕಾಏಕಿ ಪೊಲೀಸರ ಸರ್ಪಗಾವಲಿನಲ್ಲಿ ದಲಿತರನ್ನು ದೇವಾಲಯ ಪ್ರವೇಶವನ್ನು ಮಾಡಿಸುವ…
ಬೆಂಗಳೂರು: ನಿಗೂಢತೆ ಹೊಂದಿದ್ದ ಸಾವು ಅದು. ಪೊಲೀಸರಿಗೇ ಹಾಗು ವೈದ್ಯರಿಗೇ ಕನ್ಪ್ಯೂಸ್ ಆಗುವಷ್ಟರ ಮಟ್ಟಿಗೆ ಈ ಕೃತ್ಯ ನಡೆದಿದೆ. ಆದರೆ ಇದು ಉದ್ದೇಶಪೂರ್ವಕವಾಗಿ ನಡೆದ ಹತ್ಯೆ ಅಲ್ಲ. ಅದೊಂದು ಸಾಕ್ಷಿ ಇಲ್ಲದಿದ್ದರೆ ಇದೊಂದು ಆತ್ಮಹತ್ಯೆ ಎಂದೇ ವರದಿಯಾಗಿರ್ತಿತ್ತು. ಅಷ್ಟಕ್ಕೂ ನಡೆದ ಘಟನೆ ಏನು. ಯಾವುದು ಆ ಸಾಕ್ಷಿ? ಡಿಟೇಲ್ಸ್ ಇಲ್ಲಿದೆ. ಸುಬ್ರಹ್ಮಣ್ಯಪುರ ಪ್ರಬುಧ್ಯ ಸಾವು ಪ್ರಕರಣ ಕೊನೆಗೂ ನಿಗೂಢತೆ ಬಯಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸರು, ಅಪ್ರಾಪ್ತ ಬಾಲಕನನ್ನ ಬಂಧಿಸಿದ್ದಾರೆ. ಆತ್ಮಹತ್ಯೆಯಂತೆ ಬಿಂಬಿತವಾದ ಕೇಸ್ ಕೊನೆಗೂ ಸಾಲ್ವ್ ಆಗಿದ್ದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನ ವಿಚಾರಣೆ ನಡೆಸಿ ರಿಮ್ಯಾಂಡ್ ಹೋಂಗೆ ಕಳಿಸಲಾಗಿದೆ. ಪ್ರಬುದ್ಧಾಳ ತಾಯಿ ಸೌಮ್ಯ, ಘಟನೆ ಬಗ್ಗೆ ಗೊತ್ತಾದ ಕೂಡಲೇ ಇದೊಂದು ಕೊಲೆ ಎಂದೇ ಆರೋಪಿಸಿ ಅದೇ ರೀತಿ ಪ್ರಕರಣ ದಾಖಲಿಸಿದ್ದರು. ಪೊಲೀಸರಿಗೂ ಕೂಡ ಈ ಪ್ರಕರಣದಲ್ಲಿ ಇಬ್ಬದಿ ನೀತಿ ಇತ್ತು. ಮನೆ ಮುಂಭಾಗದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದಾಗಲೂ ಯಾರ ಚಲನವಲನಗಳು ಇರಲಿಲ್ಲ. ಆದರೆ ಅದೊಂದು ಸಿಸಿಟಿವಿ ಹಾಗು ಪೊಲೀಸರ ಶಂಕೆ ಅಪ್ರಾಪ್ತನ ಕೃತ್ಯ…