Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಮಂಡ್ಯ: ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿದ್ದ ವ್ಯಕ್ಯಿಯನ್ನು ವಂಚಿಸಿ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರದಲ್ಲಿ ಜರುಗಿದೆ. ಬ್ಯಾಂಕ್ ನಿಂದ 7.5 ಲಕ್ಷ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವೇಳೆ ಕಾರು ನಿಲ್ಲಿಸಿ ಸಿನಿಮೀಯ ರೀತಿ ಹಣ ದರೋಡೆ ಮಾಡಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಿಮ್ಮ ಕಾರ್ ನಿಂದ ಇಂಧನ ಸೋರಿಕೆಯಾಗುತ್ತಿದೆ ಎಂದು ಕಾರ್ ನಿಲ್ಲಿಸಿ ಕೃತ್ಯ ನಡೆಸಲಾಗಿದೆ. ಕಾರು ನಿಲ್ಲಿಸಿ ಇಂಧನ ಸೋರಿಕೆ ತಪಾಸಣೆಗೆ ತೆರಳುತ್ತಿದ್ದಂತೆ ಕಾರಿನಲ್ಲಿ ಹಣದ ಬ್ಯಾಗ್ ಸಮೇತ ಪರಾರಿ ಆಗಿದ್ದಾರೆ. ಕ್ಯಾತೇಗೌಡನದೊಡ್ಡಿಯ ಕೃಷ್ಣೇಗೌಡ ಹಣ ಕಳೆದುಕೊಂಡವರು ಎನ್ನಲಾಗಿದೆ. ಈ ಸಂಬಂಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ವ್ಯಕ್ತಿಯಿಂದ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರಿಂದ ಕೃತ್ಯ ನಡೆಸಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಸರಗೂರು: ಕಳೆದ ಒಂದು ವಾರದಿಂದ ಕಾಡಂಚಿನ ಗ್ರಾಮೀಣ ಭಾಗದಲ್ಲಿ ಹಾದನೂರು ಗ್ರಾಮದಲ್ಲಿ ಗುಡುಗು ಸಹಿತ ಸುರಿದ ಭಾರೀ ಗಾಳಿ ಮಳೆಗೆ ಮರ ಮತ್ತು ವಿದ್ಯುತ್ ಕಂಬಗಳು ಮನೆಯ ಮೇಲೆ ಬಿದ್ದಿದೆ. ಮನೆಗಳು ಕುಸಿದು ಬಿದ್ದು ವಾಹನ ಮತ್ತು ಜನರ ಸಂಚಾರ ಅಸ್ತವ್ಯಸ್ತವಾಗಿದೆ. ತಾಲ್ಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಶುಕ್ರವಾರ ದಂದು ಸಂಜೆ ಸುರಿದ ಗಾಳಿ ಮಳೆಯಿಂದ ರಸ್ತೆ ಹಾಗೂ ಮನೆಯ ಬದಿಯಲ್ಲಿ ಲೈನ್ ಕಂಬಗಳು ಹಾಗೂ ಮರ ಮನೆಯ ಮೇಲೆ ಬಿದ್ದಿವೆ. ಮತ್ತು ಪಕ್ಕದಲ್ಲಿ ಇದ್ದ ಮನೆಯ ಮೇಲೆ ಮರದ ಕೊಂಬೆ ಮುರಿದು ಬಿದ್ದು, ಸಂಪೂರ್ಣ ನೆಲಕಚ್ಚಿದೆ. ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿರುಗಾಳಿಗೆ ಸರೋಜಾ, ಚಂದ್ರಮ್ಮ, ಕಾಳಮ್ಮ ಎಂಬುವವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದುಬಿದ್ದಿದೆ.ಕೆಲ್ಲಯ್ಯ ಎಂಬುವರ ಮನೆಯ ಮೇಲೆ ಮರ ಮತ್ತು ಕರೆಂಟ್ ಕಂಬದ ಲೈನ್ ಬಿದ್ದು 20 ಶೀಟುಗಳು ಹಾಗೂ 100 ಕ್ಕೂ ಹೆಚ್ಚು ಹೆಂಚುಗಳು ಹಾರಿ ಹೋಗಿದೆ. ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ.…
ದಾವಣಗೆರೆ: ಗಂಡ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗು ನಾಪತ್ತೆಯಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಕೇಸ್ ತಲೆನೋವು ತಂದಿದೆ. ದಾವಣಗೆರೆ ನಗರದ ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಲ್ಲಿರುವ ಡೋರ್ ನಂ 1182, ಬಸವರಾಜಪ್ಪ ಎಸ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ. 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಬಳಿಕ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ. ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ದೂರು ನೀಡಿದ್ದಾರೆ. ತಾಯಿ ರುದ್ರವ್ವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ನಾಗವೇಣಿ ಅವರು ನಾವು ಸುರಕ್ಷಿತವಾಗಿದ್ದೇವೆ, ವೈಯಕ್ತಿಕ ಕಾರಣಗಳಿಂದ ಮನಸ್ಸಿಗೆ ನೋವಾಗಿದೆ.…
ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಜೈ ಹನುಮಾನ ಗರಡಿ ಮನೆ ನೂರು ವರ್ಷಕ್ಕೆ ಕಾಲು ಇಟ್ಟ ಗರಡಿ ಮನೆ. ಶ್ರೀ ರಬಕವಿ ಜೈ ಹನುಮಾನ ಗರಡಿ ಮನೆಯಲ್ಲಿ ಸಾವಿರಾರು ಕುಸ್ತಿಪಟುಗಳು ತಮ್ಮ ಕುಸ್ತಿ ಪ್ರದರ್ಶನ ಮಾಡಿ, ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೋಗಿ ಕುಸ್ತಿ ಕ್ರೀಡೆ ಮತ್ತು ಜಾತ್ರಾ ಮಹೋತ್ಸವ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ನಾನಾ ರೀತಿಯ ಬಹುಮಾನಗಳನ್ನು ಪಡೆದುಕೊಂಡಿದ್ದು ಇತಿಹಾಸ ನಿರ್ಮಿಸಿದೆ. ಈ ಗರಡಿ ಮನೆಯಲ್ಲಿ ಬೆಳೆದು ಸುಮಾರು 50ಕ್ಕೂ ಹೆಚ್ಚು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಾತಿ ಭೇದಭಾವ ಇಲ್ಲದೆ ಎಲ್ಲರೂ ನನ್ನವರು ಎಂದು ತಿಳಿದುಕೊಂಡು ಇಲ್ಲಿ ಪ್ರತಿನಿತ್ಯ ಈ ಗರಡಿ ಮನೆಗೆ ಬಂದು ಕುಸ್ತಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಈ ಗರಡಿ ಮನೆಯಲ್ಲಿ ನೂರಕ್ಕೂ ಹೆಚ್ಚು ಕುಸ್ತಿಪಟ್ಟುಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದ ಅಂಚಿನಲ್ಲಿ ಈ ರಬಕವಿ ಗರಡಿ ಮನೆ ಇದೆ. ಕುಸ್ತಿಪಟುಗಳಾಗಿ ಹೊರಹೊಮ್ಮಿ ಸದ್ಯದಲ್ಲಿ ಇಂಡಿಯನ್…
ಬೆಂಗಳೂರು: ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಜೂ. 1 ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೂನ್ 1 ರಿಂದ 4 ರ ವೆರೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಲಿದ್ದು ಮತ್ತೆ ಜೂನ್ 5 ಬಾರ್ ಓಪನ್ ಆಗಲಿದೆ. ಮತ್ತೆ ಜೂನ್ 6 ನೇ ತಾರೀಖು ಮದ್ಯ ಮಾರಾಟ ಬಂದ್ ಇರಲಿದೆ. ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ಹಿನ್ನೆಲೆ ಜೂನ್ 1 ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3 ರ ವರೆಗೆ ಕ್ಲೋಸ್ ಮಾಡುವಂತೆ ಆದೇಶ ನೀಡಲಾಗಿದೆ. ಮತ್ತೆ ಜೂನ್ 4 ರಂದು ಲೋಕಸಭೆಯ ಮತ ಎಣಿಕೆ ಇರುವ ಕಾರಣ ಅಂದು ಸಹ ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್ ಶಾಪ್ ಕ್ಲೋಸ್ ಆಗಲಿದೆ. ಇನ್ನು ಜೂನ್ 6 ರಂದು ಎಂಎಲ್ ಸಿ ಮತ ಎಣಿಕೆ ಇರೋದಿಂದ ಅಂದು ಸಹ ಡ್ರೈ…
ಬೆಂಗಳೂರು: ನಗರದಲ್ಲಿ ಸರ್ಕಾರದ ಅಧೀನದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಸರ್ಕಾರದ ಲಾಂಛನ, ಚಿಹ್ನೆಗಳನ್ನು ಅಳವಡಿಸಿರುವುದು ಕಂಡುಬರುತ್ತಿದೆ. ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಈ ಬಗ್ಗೆ ನೂರಾರು ಪ್ರಕರಣಗಳು ದಾಖಲಾಗಿವೆ. ಇಂತಹ ನೋಂದಣಿ ಫಲಕಗಳನ್ನು ತೆರವುಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಿ, ಜೂನ್ ಒಂದರಿಂದ ಕಾರ್ಯಾಚರಣೆಗೊಳಿಸಲು ಪ್ಲಾನ್ ಮಾಡಿದೆ. ಮೊದಲಿಗೆ 500, ಎರಡನೇ ಬಾರಿ ಒಂದು ಸಾವಿರ ರೂಪಾಯಿ ಅದಾದ ನಂತರ ವಾಹನವನ್ನು ಸೀಜ್ ಮಾಡಲಾಗುತ್ತದೆ. ಸಾರಿಗೆ ಇಲಾಖೆಯ ನಿಯಮದಂತೆ, ಕೇವಲ ಸರ್ಕಾರಿ ವಾಹನಗಳಿಗೆ ಅಂದರೇ ಜಿ ಸಿರೀಸ್ ಇರೋ ನಂಬರ್ ಪ್ಲೇಟ್ ಇರೋ ವಾಹನಗಳಲ್ಲಿ ಮಾತ್ರ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಇರಬೇಕು. ಅದನ್ನು ಹೊರತು ಪಡಿಸಿ, ಸರ್ಕಾರದ ಅಧೀನದಲ್ಲಿ ಬರೋ ಸರ್ಕಾರಿ ನಿಗಮ, ಮಂಡಳಿ, ಸಂಸ್ಥೆ, ಲೋಕಲ್ ಬಾಡಿ, ಮುನ್ಸಿಪಲ್ ವಾಹನಗಳಲ್ಲಿಯೂ ಸರ್ಕಾರದ ಲಾಂಛನ ಬಳಕೆಗೆ ಅವಕಾಶವಿಲ್ಲ. ಉದಾಹರಣೆಗೆ ಕೆಎಸ್ಆರ್ ಟಿಸಿ ನಿಗಮವಾದರೂ ಅಧಿಕಾರಿಗಳು ಸರ್ಕಾರದ ಚಿಹ್ನೆ, ಹೆಸರು…
ದಾವಣಗೆರೆ: ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದು ಠಾಣೆಗೆ ನುಗ್ಗಿ ವಸ್ತುಗಳನ್ನ ಸಂಬಂಧಿಕರ ಧ್ವಂಸಗೊಳಿಸಿದ ಘಟನೆ ಜರುಗಿದೆ. ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್(30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಅದಿಲ್ ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ. ಇದೀಗ ಅದಿಲ್ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಸಾವನ್ನಪ್ಪಿದ ಅರೋಪಿ ಸಂಬಂಧಿಕರನ್ನು ಚನ್ನಗಿರಿ ಡಿವೈಸ್ಪಿ ಪ್ರಶಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ “ಇಂಡಿಯನ್ 2” ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರ ಪ್ರತಿಷ್ಠಿತ ROMEO PICTURES ಮೂಲಕ ಬಿಡುಗಡೆಯಾಗಲಿದೆ. ಹೆಸರಾಂತ ROMEO PICTURES ಅವರು “ಇಂಡಿಯನ್ 2” ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕಮಲ್ ಹಾಸನ್ ಅಭಿನಯದ “ಇಂಡಿಯನ್ 2” ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ROMEO PICTURES ನ ರಾಹುಲ್ ತಿಳಿಸಿದ್ದಾರೆ. ಪ್ರಖ್ಯಾತ ವಿತರಣಾ ಸಂಸ್ಥೆಯಾದ ROMEO PICTURES ಅಜಿತ್ ಕುಮಾರ್ ಅವರ “ನೆರ್ಕೊಂಡ ಪಾರವ”, “ಥುನಿವು”, ಉದಯನಿಧಿ ಸ್ಟಾಲಿನ್ ಅವರ “ನೆಂಜುಕು ನೀಧಿ” ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ. ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಈ ಚಿತ್ರವನ್ನು ನಿರ್ಮಿಸಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್…
ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ, ವಿದ್ಯುತ್ ತಂತಿ ತಾಕಿದ್ದ ಕ್ರೀಡಾ ಸಾಧನವೊಂದನ್ನು ಮುಟ್ಟಿ ಇಬ್ಬರು ಮಕ್ಕಳು ವಿದ್ಯುತ್ ಅಪಘಾತಕ್ಕೆ ಬಲಿಯಾಗಿರುವ ಘಟನೆ ಕೊಯಂಬತ್ತೂರಿನ ಸರವಣಂಪಟ್ಟಿಯ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಸೇನಾ ಕಲ್ಯಾಣ ವಸತಿ ಸಂಘವು ಈ ಅಪಾರ್ಟ್ ಮೆಂಟ್ ನ ಮಾಲಕತ್ವ ಹೊಂದಿದೆ. ಈ ಘಟನೆಯು ತುದಿಯಲೂರ್ ರಸ್ತೆಯ ರಾಮನ್ ವಿಹಾರ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದಕ್ಕೆ ಹೊಂದಿಕೊಂಡಿರುವ ಉದ್ಯಾನವನದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಸಂಜೆ 6.30ರ ಸುಮಾರಿಗೆ ನಡೆದಿದ್ದು, ಕೂಡಲೇ ವಸತಿ ಗೃಹದ ನಿವಾಸಿಗಳು ವಿದ್ಯುತ್ ಅಪಘಾತಕ್ಕೆ ಗುರಿಯಾಗಿದ್ದ ಮಕ್ಕಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ, ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ಮಕ್ಕಳನ್ನು ಬಾಲಚಂದ್ರ ಎಂಬುವವರ ಪುತ್ರಿ ವಿಯೋಮಾ ಪ್ರಿಯ(8) ಹಾಗೂ ಜಿಯನೇಶ್ ಎಂಬುವವರ ಪುತ್ರ ಪ್ರಶಾಂತ್(6) ಎಂದು ಗುರುತಿಸಲಾಗಿದೆ. ಪ್ರತ್ಯೇಕ ಖಾಸಗಿ ಶಾಲೆಗಳಲ್ಲಿ ಮೃತ ಬಾಲಕಿ ಹಾಗೂ ಬಾಲಕನು ಕ್ರಮವಾಗಿ ಮೂರನೆಯ ತರಗತಿ ಹಾಗೂ ಎಲ್ ಕೆ ಜಿ ವ್ಯಾಸಂಗ…
ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ 2024-25ನೇ ಸಾಲಿಗೆ ಶಾಲಾ ಮಕ್ಕಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳೇ ಕಳಪೆಯಿಂದ ಕೂಡಿವೆ. ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದ ಇನ್ನಿತರ ವಿಭಾಗಗಳ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಸಮವಸ್ತ್ರ ಬಟ್ಟೆಗಳ ಮಾದರಿಗಳನ್ನು ಪರಿಶೀಲಿಸಿರುವ ಕೇಂದ್ರೀಯ ರೇಷ್ಮೆ ಮಂಡಳಿಯು ಈಗಾಗಲೇ ಹಲವು ಜಿಲ್ಲೆಗಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಿರಸ್ಕರಿಸಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಿಗೆ ಪತ್ರ (ಅ.ಸ.ಪ. ಸಂ; ಇಪಿ 170 ಯೋಸಕ 2024) ಬರೆದಿದ್ದಾರೆ. ಈ ಪತ್ರದ ಪ್ರತಿಯು the-file. in’ಗೆ ಲಭ್ಯವಾಗಿದೆ. ಸಮವಸ್ತ್ರ ಹೊಲಿಗೆ ವೆಚ್ಚವನ್ನೂ ಪೋಷಕರಿಂದಲೇ ಭರಿಸಿಕೊಂಡಿರುವ ಸರಕಾರವು ಇದೀಗ ಪೂರೈಕೆ ಮಾಡಿರುವ ಸಮವಸ್ತ್ರವು ಕಳಪೆಯಿಂದ ಕೂಡಿದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯ ಕುರಿತು ಸಚಿವ ಮಧು ಬಂಗಾರಪ್ಪ ಅವರೂ…