Author: admin

ಹೊಸಪೇಟೆ(ವಿಜಯನಗರ): ನಗರದ ಅಮರಾವತಿಯ,ಗೀತಾ ಟೈಲರ್ ಹಿಂಭಾಗದಲ್ಲಿರುವ ಶರಣಂ ಆಸ್ಪತ್ರೆ ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ತಾತ್ಕಾಲಿಕವಾಗಿ ಮುಚ್ಚಲು ತಾಲೂಕು ಅರೋಗ್ಯಧಿಕಾರಿ ಆದೇಶ ಹೊರಡಸಿದ್ದಾರೆ. 9ವರ್ಷದ ಬಾಲಕನ ಸಾವಿಗೆ ಸಂಬಂಧಿಸಿ ನಗರದ ಶರಣಂ ಆಸ್ಪತ್ರೆ ಕೆಪಿಎಂಇ ಕಾಯ್ದೆ ಉಲ್ಲಂಘಿಸಿದೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಅವರು ಆದೇಶ ನೀಡಿದ್ದಾರೆ. ಯಾರಾದರೂ ಒಳ ರೋಗಿಗಳು ಶರಣಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಲ್ಲಿ ತಕ್ಷಣವೇ ಅವರನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪತ್ರದ ಸೂಚನೆಯಂತೆ ಶರಣಂ ಆಸ್ಪತ್ರೆಯ ವೈದ್ಯರಾದ ಡಾ. ವಿನಯರಾಘವೇಂದ್ರ ಇವರಿಗೆ ತಾತ್ಕಾಲಿಕವಾಗಿ ಆಸ್ಪತ್ರೆ ಮುಚ್ಚಲು ನೋಟಿಸ್ ನೀಡಲಾಗಿದೆ. ಅವರು 24 ಗಂಟೆಗಳ ಕಾಲಾವಧಿ ಕೇಳಿದ್ದಾರೆ. ನಂತರ ನಿಯಮಗಳ ಪ್ರಕಾರ ಮುಚ್ಚಲಾಗುವುದು ಎಂದು ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಾಧಿಕಾರಿ ಡಾ. ಶಂಕರ್ ನಾಯಕ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಅಮೆರಿಕದ ಇಯೊವಾ ರಾಜ್ಯದ ಪುಟ್ಟ ಪಟ್ಟಣವಾದ ಗ್ರೀನ್‌ ಫೀಲ್ಡ್‌ ನಲ್ಲಿ ಬೀಸಿದ ಭೀಕರ ಬಿರುಗಾಳಿಗೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಕಾರು ಮತ್ತಿತರ ವಾಹನಗಳು ಚೆಲ್ಲಾಪಿಲ್ಲಿಯಾಗಿ ಚದುರಿಬಿದ್ದಿವೆ. ಸುಮಾರು 2 ಸಾವಿರ ಜನಸಂಖ್ಯೆಯ ಗ್ರೀನ್‌ ಫೀಲ್ಡ್ ಪಟ್ಟಣವನ್ನು ವ್ಯಾಪಕ ವಿನಾಶವನ್ನುಂಟು ಮಾಡಿದ ಬಿರುಗಾಳಿ ಆನಂತರ ಪೂರ್ವಾಭಿಮುಖವಾಗಿ ಚಲಿಸಿದ್ದು, ಇಲಿನಾಯ್ಸ್ ಹಾಗೂ ವಿಸ್ಕೊನ್‌ಸಿನ್ ರಾಜ್ಯಗಳ ಹಲವು ಭಾಗಗಳಲ್ಲಿ ಹಾವಳಿಯೆಬ್ಪಿಸಿದೆ. ಈ ಎರಡೂ ರಾಜ್ಯಗಳ ಹಲವೆಡೆ ವಿದ್ಯುತ್‌ಕಂಬಗಳು ಉರುಳಿಬಿದ್ದಿದ್ದು, ಸಾವಿರಾರು ಜನರು ವಿದ್ಯುತ್ ಇಲ್ಲದೆಯೇ ದಿನಕಳೆಯಬೇಕಾಯಿತು. ಗ್ರೀನ್‌ಫೀಲ್ಡ್‌ ನಲ್ಲಿ ಬಿರುಗಾಳಿಯ ಹೊಡೆತಕ್ಕೆ ಆಸ್ಪತ್ರೆಯೊಂದು ಧರಾಶಾಯಿಯಾಗಿದ್ದು 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆನಂತರ ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆಯೆಂದು ಇಯೊವಾ ರಾಜ್ಯದ ಗಸ್ತುದಳದ ಸಾರ್ಜಂಟ್ ಅಲೆಕ್ಸ್ ಡಿಂಕ್ಲಾ ತಿಳಿಸಿದ್ದಾರೆ. ಬಿರುಗಾಳಿಯ ಹಾವಳಿಗೆ ಸಾವುಗಳು ಸಂಭವಿಸಿರುವುದು ದೃಢಪಟ್ಟಿದೆಯೆಂದು ಅವರು ಹೇಳಿದ್ದಾರೆ. ಬಿರುಗಾಳಿ ಹಾವಳಿಯ ನಂತರ ನಾಪತ್ತೆಯಾದವರಿದ್ದರೆ ಆ ಬಗ್ಗೆ ವರದಿಯೂ ನೀಡುವಂತೆಯೂ ಅವರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಅಮೆರಿಕದ…

Read More

ಬೆಂಗಳೂರು: ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದಡಿ ಇಲ್ಲಿನ ರಾಜಗೋಪಾಲನಗರ ಠಾಣೆಯ ಎಎಸ್‍ಐ ಸೇರಿ ಇಬ್ಬರನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಎಎಸ್‍ಐ ರಾಮಲಿಂಗಯ್ಯ ಹಾಗೂ ಹೆಡ್ ಕಾನ್‍ಸ್ಟೇಬಲ್ ಪ್ರಸನ್ನ ಕುಮಾರ್ ಅಮಾನತುಗೊಂಡವರು. ಮೇ 20ರ ರಾತ್ರಿ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಯ್ಸಳ ಸಿಬ್ಬಂದಿ ಗಸ್ತಿನಲ್ಲಿರುವಾಗ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅದನ್ನು ಗಮನಿಸಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಪೊಲೀಸರನ್ನು ಕಂಡು ‘ಕಳ್ಳ.. ಕಳ್ಳ.. ಪೊಲೀಸ್ ಕಳ್ಳ’ ಎಂದು ಕೂಗಿಕೊಂಡಿದ್ದರು. ಕೂಗಾಟ ಕೇಳುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ವಾಹನ ಸಮೇತ ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು. ಮೊಬೈಲ್ ‍ನಲ್ಲಿ ಸೆರೆಹಿಡಿದಿದ್ದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಪೊಲೀಸ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಸಂಬಂಧ ಮಾಹಿತಿ ಅರಿತು ತನಿಖೆ ನಡೆಸಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ನೀಡಿದ ವರದಿ…

Read More

ಭಾನುವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹೀಂ ರಯಿಸೀ ಹಾಗೂ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದುಲಹಿಯಾನ್ ಹಾಗೂ ಇತರ ಆರು ಮಂದಿಯ ಅಂತ್ಯಕ್ರಿಯೆಯ ಪ್ರಯುಕ್ತ ಆಯೋಜಿಸಲಾದ ಪ್ರಾರ್ಥನಾ ಸಭೆಯ ನೇತೃತ್ವವನ್ನು, ಇರಾನ್‌ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ವಹಿಸಿದ್ದರು. ಈ ವೇಳೆ ಲಕ್ಷಾಂತರ ಮಂದಿ ಭಾಗಿಯಾಗಿ ನಾಯಕನಿಗೆ ವಿದಾಯ ಹೇಳಿದರು. ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದ್ದು, ಈ ವೇಳೆ ಮೃತರನ್ನು ಇರಿಸಲಾಗಿದ್ದ ಮೃತದೇಹಪೆಟ್ಟಿಗೆಗಳ ಮೇಲೆ ಇರಾನ್‌ ನ ರಾಷ್ಟ್ರಧ್ವಜಗಳನ್ನು ಹೊದಿಸಿ ಗೌರವ ಸೂಚಿಸಲಾಯಿತು. ಇರಾನ್ ಅಧ್ಯಕ್ಷರ ಅಂತಿಮ ಯಾತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸುವುದು ಹಾಗೂ ಆನ್‌ ಲೈನ್ ‌ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಇದೇ ವೇಳೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾಮೂಹಿಕ ಪ್ರಾರ್ಥನೆಯ ಸಂದರ್ಭ ಇರಾನ್‌ ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮುಖ್‌ ಬೀರ, ಅಯಾತೊಲಾ ಖಾಮಿನೈ ಅವರ ಬಳಿ ಶೋಕತಪ್ತರಾಗಿ ನಿಂತಿರುವುದು ಕಂಡುಬಂದಿತು. ಬಳಿಕ…

Read More

ಹಾಸನ: ಎಂದೂ ಹಾಸನ ಜನ ನನ್ನ ಕೈ ಬಿಡಲ್ಲ ಎಂದು ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, “ನಮಗೆ ಜಿಲ್ಲೆಯ ಜನ ಹಲವು ದಶಕಗಳಿಂದ ಆಶೀರ್ವಾದ ಮಾಡಿದ್ದಾರೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಎಲ್ಲರೂ ನನಗೆ ಸಹಕಾರ ಕೊಟ್ಟಿದ್ದಾರೆ. ಈ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದರು. ನಮಗೆ ದಶಕಗಳಿಂದ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದು, ನನ್ನ ವಿರುದ್ಧದ ಕೇಸ್‌ ಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಏನೂ ಮಾತನಾಡಲ್ಲ” ಎಂದರು. ನ್ಯಾಯಾಲಯಕ್ಕೆ ಗೌರವ ಕೊಡುತ್ತೇನೆ. ಮುಂದೆ ಮಾತನಾಡುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಆದ್ದರಿಂದ ನಾನು ಏನು ಮಾತನಾಡಲ್ಲ ಎಂದರು. ನಾನು ಬದುಕಿರುವವರೆಗೂ ನನ್ನನ್ನ ಜನ ಕೈ ಬಿಡೋದಿಲ್ಲ ಅನ್ನೋ ವಿಶ್ವಾಸ ಇದೆ. ನಾನು, ಕುಮಾರಸ್ವಾಮಿ ದೇವೇಗೌಡರು ಎಲ್ಲರೂ ಅವರ ಜೊತೆ ಇರುತ್ತೇವೆ. ಜಿಲ್ಲೆಯ ಜನ ದೇವೇಗೌಡರಿಗೆ 60 ವರ್ಷ ರಾಜಕೀಯವಾಗಿ ಬೆಂಬಲ ನೀಡಿದ್ದಾರೆ. ಈ ಜಿಲ್ಲೆಯ ಜನರ…

Read More

ಬೆಂಗಳೂರು: ಸ್ಕೂಟರ್‌ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಸರ್ಜಾಪುರ ರಸ್ತೆಯಲ್ಲಿ ಜರುಗಿದೆ. ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿವೆ. ಕೆಲವು ವರದಿಯಾಗುತ್ತಿವೆ, ಕೆಲವು ಗಮನಕ್ಕೆ ಬರದೇ ಹೋಗುತ್ತಿವೆ. ಅಖಿಲ್ ಸಾಬು ಎಂಬವರು ಸರ್ಜಾಪುರ ರಸ್ತೆಯಲ್ಲಿ ಅನುಭವಿಸಿದ ಯಾತನೆಯನ್ನು ನಗರ ಪೊಲೀಸರು, ಗೃಹ ಸಚಿವರಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ದೂರು‌‌ ನೀಡಿದ್ದಾರೆ. ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್ ‌ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಕಾರಿನ ಎಡಭಾಗದ ಕಿಟಕಿಯನ್ನು ಆರೋಪಿ ಹೆಲ್ಮೆಟ್‌ ನಿಂದ ಹೊಡೆದು ಒಡೆದು ಹಾಕಿದ್ದಾನೆ. ಆಗ ಕಾರಿನಲ್ಲಿದ್ದ ಅಖಿಲ್ ಪತ್ನಿ ಹಾಗೂ ಮಗುವಿನ ಕೈಗೆ ಗಾಯವಾಗಿದೆ. ಇದನ್ನು ಪ್ರಶ್ನೆ ಮಾಡಿದ ಅಖಿಲ್ ಮೇಲೂ ಹಲ್ಲೆ ಎಸಗಲಾಗಿದ್ದು,…

Read More

ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹೋರಾಟಗಾರ್ತಿ ವಿಧಿವಶರಾಗಿದ್ದಾರೆ. ಇವರು ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡಿ ಸಂಘಟನೆ ಮಾಡಿದ್ದರು. ಇನ್ನು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು. ಕಬ್ಬಿನ ಬಾಕಿ ಬಿಲ್ ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ, ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಜಯಶ್ರೀ ಕುರಿತು ಹಗುರವಾಗಿ ಮಾತಾಡಿ ಟೀಕೆಗೆ ಒಳಗಾಗಿದ್ದರು. ಇನ್ನೂ ಅನಾರೋಗ್ಯದಿಂದ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ(40) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಶ್ರೀ ಗುರನ್ನವರ ಅವರು ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಒಣ ಮರ ಏಕೆ ಬಿಟ್ಕೊಂಡಿದ್ದೀರಿ? ಅನಾಹುತ ಆಗ್ಲಿ ಅಂತನಾ? ಎಂಬುದಾಗಿ ಬೆಂಗಳೂರು ಸಿಟಿ ರೌಂಡ್ಸ್ ವೇಳೆಯಲ್ಲಿ ಅಧಿಕಾರಿಗಳನ್ನು ಸಿಎಂ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಿದರು. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್, ಜಯನಗರ ಹಾಗೂ ಬಿಟಿಎಂ ನಿಂದ ಬನಶಂಕರಿ ಹೋಗುವ ಮಾರ್ಗದಲ್ಲಿ ಸಂಚಾರ ದಟ್ಟನೆಯಿಂದ ನಿತ್ಯ ಉದ್ಯೋಗ ಹಾಗೂ ಇನ್ನಿತರ ಕಾರಣಗಳಿಗಾಗಿ ಈ ರಸ್ತೆಯಲ್ಲಿ ತೆರಳುವ ಸಾವಿರಾರು ವಾಹನ ಸವಾರರಿಗೆ ಅನಾನುಕೂಲ ಆಗುತ್ತಿತ್ತು. ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರದ ಬಿಟಿಎಂ ಮೆಟ್ರೋಸ್ಟೇಷನ್ ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ – 2 ಟೈರ್ ವ್ಯವಸ್ಥೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಿಲ್ಕ್…

Read More

ತುಮಕೂರು: ಭೀಕರವಾಗಿ ಸಂಭವಿಸಿದ್ದ ಗ್ಯಾಸ್ ಸ್ಟವ್ ಸ್ಪೋಟ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಕುಣಿಗಲ್ ಪಟ್ಟಣದ ಕೋಟೆ ನಿವಾಸಿಗಳಾದ ಕುಶಾಲ್ (11), ಶಿವಣ್ಣ (45) ಮೃತಪಟ್ಟವರು ಆಗಿದ್ದಾರೆ. ರವಿಕುಮಾರ್ ಎಂಬುವರು ಕಾರ ಪುರಿ ವ್ಯಾಪಾರಿ ಮಾಡುತ್ತಿದ್ದರು. ಈ ವೇಳೆ ಪುರಿ ಹುರಿಯಲು ಹಾಗೂ ಅಡುಗೆ ಮಾಡಲು 4 ಕೆಜಿ ಗ್ಯಾಸ್ ಸ್ಟವ್ ಬಳಸುತ್ತಿದ್ದರು. 17 ತಾರೀಕಿನಂದು ರವಿಕುಮಾರ್ ಹೆಂಡತಿ ಶೃತಿಯವರು, ಮಗಳು ಹೇಮಲತಾಳನ್ನು ಟ್ಯೂಷನ್ ಗೆ ಬಿಡಲು, ಮನೆಯಿಂದ ಹೊರಗೆ ಬರುತ್ತಿದ್ದಂತೆ ಮನೆಯಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿತ್ತು. ಒಳಗೆ ಹೋಗಿ ನೋಡಿದಾಗ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಈ ವೇಳೆ ಮನೆಯಲ್ಲಿ ಇದ್ದ ಕುಶಾಲ್, ಶೃತಿ, ಹೇಮಲತಾ, ಶಿವಣ್ಣ, ಮಂಜಮ್ಮ ಸಮೀನಾ ಗಾಯಗೊಂಡಿದ್ದರು. ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕುಶಾಲ್ ಹಾಗೂ ಶಿವಣ್ಣ ಮೃತಪಟ್ಟಿದ್ದಾರೆ. ಸಿಲಿಂಡರ್…

Read More

ತುಮಕೂರು: ಬರೋಬ್ಬರಿ 19 ವಷಗಳಿಂದ ತಲೆಮರೆಸಿಕೊಂಡಿದ್ದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ನಕ್ಸಲ್‌ ದಾಳಿಯ ರೂವಾರಿ, ನಕ್ಸಲ್ ಕೊತ್ತಗೆರೆ ಶಂಕರನನ್ನು‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2005ರ ಫೆಬ್ರವರಿ 10ರಂದು ರಾತ್ರಿ 10.30ರ ವೇಳೆಯಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ಪೊಲೀಸ್‌ ಕ್ಯಾಂಪ್‌ ಮೇಲೆ ಸುಮಾರು 300 ಜನ ಮಾವೋಯಿಸ್ಟ್‌ ನಕ್ಸಲೀಯರು ಬಂದೂಕುಗಳು, ಬಾಂಬ್‌ , ಹ್ಯಾಂಡ್‌ ಗ್ರೇನೇಡ್‌ ಗಳೊಂದಿಗೆ ದಾಳಿ ನಡೆಸಿದ್ದರು. ಕತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಕೊಲೆ ಮಾಡಿ, 5ಮಂದಿ ಪೊಲೀಸ್‌ ಸಿಬ್ಬಂದಿಗೆ ಗಾಯಗಳನ್ನು ಮಾಡಿದ್ದರು. ಕ್ಯಾಂಪಿನ ಹೊರಗೆ ನಿಂತಿದ್ದ ಖಾಸಗಿ ಬಸ್‌ ನ ಕ್ಲೀನರ್‌ ನನ್ನು ಸಹ ಕೊಲೆ ಮಾಡಿ, ಕ್ಯಾಂಪ್‌ ನಲ್ಲಿದ್ದ ಬಂದೂಕುಗಳು ಮತ್ತು ಗುಂಡುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ತಿರುಮಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈ ಪ್ರಕರಣದಲ್ಲಿ 32 ಮಂದಿ ತಲೆ ಮರೆಸಿಕೊಂಡಿದ್ದು ಇವರ ಮೇಲೆ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More