Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ವೀಡಿಯೋ ಸಂವಾದದಲ್ಲಿ ಸಿಎಂ ಮಾತನಾಡಿ, “ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು. ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ. ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ. ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಚುನಾವಣಾ ಸಿದ್ಧತೆ ಜನವರಿಯಲ್ಲೇ ಶುರುವಾಗಿತ್ತು. ನೀತಿ ಸಂಹಿತೆ ಜೂನ್ ಆರರವರೆಗೆ ಇದೆ. ಆದರೂ ತುರ್ತು ಕೆಲಸಗಳಿಗೆ ಗಮನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. 500 ಕ್ಕೂ ಹೆಚ್ಚು ಘೋಷಣೆಗಳನ್ನು ಮಾಡಲಾಗಿದೆಬಜೆಟ್ ಘೋಚಣೆಗಳಿಗೆ ಸಂಬಂಧಿಸಿದಂತೆ ಜೂನ್ ಕೊನೆಯ ವೇಳೆಗೆ ಆದೇಶ ಹೊರ ಬರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ಆಗಬೇಕು.…
ತುಮಕೂರು: ದೇಶದ 50 ನಗರಗಳ ಐಪಿಎಲ್ ಕ್ರಿಕೆಟ್ ಅಭಿಮಾನಿಗಳನ್ನು ಒಂದೆಡೆ ಸೇರಿಸುವ ಫ್ಯಾನ್ ಪಾರ್ಕ್ ಗಳ ಪೈಕಿ ತುಮಕೂರು ಕೂಡ ಒಂದಾಗಿದ್ದು ಮೇ 24 ಮತ್ತು 26ರಂದು ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿಶೇಷವಾದ ದೊಡ್ಡ ಪರದೆಗಳಲ್ಲಿ ನೇರಪ್ರಸಾರದ ಸ್ಟೇಡಿಯಂ ಅನುಭವವನ್ನು ನೀಡಲು ಐಪಿಎಲ್ ಮುಂದಾಗಿದೆ. ಇದರ ಪ್ರವೇಶ ಉಚಿತವಾಗಿದ್ದು ಸಂಗೀತ ಮರ್ಚೆ ಆಹಾರ ಮಳಿಗೆಗಳು ಪಾನೀಯ ಐಪಿಎಲ್ ಅಧಿಕೃತ ಪ್ರಯೋಜಕತ್ವಗಳಿಂದ ಮೋಜು ಮತ್ತು ಉತ್ಸುಕತೆಯು ದುಪ್ಪಟ್ಟಾಗಲಿದೆ ಎನ್ನುತ್ತಾರೆ ಸಿಬ್ಬಂದಿ ಆನಂದ ದತ್ತ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ಸೀಸಂ ಕೂಡ ಹಿಂದಿಗಿಂತ ದೊಡ್ಡದಾಗಿರುತ್ತದೆ. ಈ ಬಾರಿ ಫ್ಯಾನ್ ಪಾರ್ಕ್ ಗಳಲ್ಲಿ ಕ್ರೇಜಿ ಮೋಜಿನ ಅನುಭವವನ್ನು 10 ಲಕ್ಷಕ್ಕೂ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಪಡೆಯಲಿದ್ದಾರೆ” ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹಾಸನ: ಸಿನಿಮೀಯ ರೀತಿಯಲ್ಲಿ ಡಿವೈಎಸ್ ಪಿ ಒಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ದೋಚಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ. ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ. ಮುರಳೀಧರ್ ಖಾತೆಯಿಂದಲೇ 15,98,761 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಗೆ ಮುರಳೀಧರ್ ದೂರು ದಾಖಲಿಸಿದ್ದಾರೆ. ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯಶಾಖೆ ಹಾಗೂ ಭಾಗಮಂಡಲದ ಕೆನರಾಬ್ಯಾಂಕ್ ನ ಶಾಖೆಯಲ್ಲಿ ಪಿ.ಕೆ. ಮುರಳೀಧರ್ ಖಾತೆಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1:30ರ ವೇಳೆಗೆ ಡಿವೈಎಸ್ ಪಿ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್ ಗಳು ಬಂದಿವೆ. ಇದಾದ ನಂತರ ತಮ್ಮ ಗಮನಕ್ಕೇ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಮಡಿಕೇರಿಯಲ್ಲಿರುವ ಕೆನರಾ ಬ್ಯಾಂಕ್ ಮುಖ್ಯಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25…
ಸಾಮಾನ್ಯವಾಗಿ ಸೆಕೆ ಆದಾಗ ಅಮೆರಿಕನ್ ಡಾಲರ್ ನೋಟಿನಲ್ಲಿ ಹಣೆ ಒರೆಸಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಹಾಗೂ ಇನ್ನಿತರ ಆಟಗಾರರ ಜೊತೆ ಇರುವಾಗ ಹೀಗೆ ವರ್ತಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವಾಗ ಆಜಂ ಖಾನ್ ಸಂವೇದನಾ ರಹಿತವಾಗಿ ವರ್ತಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಯುವ ಬ್ಯಾಟರ್ ಆಜಂ ಖಾನ್ ಇದರಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಏನಾಗುತ್ತಿದೆ ಎಂದು ಬಾಬರ್ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಆಜಂ ಭಾರಿ ಸೆಕೆ ಇದೆ ಎಂದು ಹೇಳುತ್ತಾ ನೋಟಿನಿಂದ ಹಣೆ ಒರೆಸಿಕೊಳ್ಳುತ್ತಿರುವುದು ಕಂಡುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಿಗ್ ಬಾಸ್ ಬಳಿಕ ಡ್ರೋನ್ ಪ್ರತಾಪ್ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಇದರ ಜೊತೆಗೆ ವ್ಲಾಗ್ ಮಾಡಿ ಕೆಲ ದೇಶಗಳ ವೈವಿದ್ಯತೆಯನ್ನು ಡಾ.ಬ್ರೋ ಮಾದರಿಯಲ್ಲಿ ತಿಳಿಸುತ್ತಿದ್ದಾರೆ. ಇದರ ಜೊತೆಗೆ ಈ ಸಲದ ಪ್ರತಾಪ್ ಜನ್ಮದಿನದಂದು ವಿಶೇಷವಾಗಿ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. “ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾರಾದರೂ ಬಡವರಿಗೆ 5 ಜನಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ನಿಮ್ಮಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆಯಿದ್ದರೆ ನಮಗೆ ಮೆಸೇಜ್ ಮಾಡಬಹುದು ಅಥವಾ ಕಮೆಂಟ್ ಮಾಡಿ ತಿಳಿಸಬಹುದು” ಎಂದು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ -10 ರನ್ನರ್ ಅಪ್ ಆದ ಬಳಿಕ ವೇದಿಕೆಯಲ್ಲೇ ಅವರು, ಬಿಗ್ ಬಾಸ್ ನಿಂದ ಬಂದ ಹಣವನ್ನು ಬಡವರ ಸಹಾಯಕ್ಕಾಗಿ ಬಳಸುತ್ತೇನೆ ಎಂದು ಹೇಳಿದ್ದರು ಮತ್ತು ಮಾಡುತ್ತಿದ್ದಾರೆ.…
ಸುಜಾತ(42) ಎಂಬವರು ಹಲವರಿಗೆ ಅಂಗಾಂಗ ದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಮನೆಯಲ್ಲಿ ತನ್ನ ಮಕ್ಕಳಿಗೆ ಅನ್ನ ಬಡಿಸುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದು ಬ್ರೈನ್ ಡೆಡ್ ಆಗಿದ್ದ ಸುಜಾತ ಹೃದಯ, ಯಕೃತ್ತು ಹಾಗೂ ಎರಡು ಕಿಡ್ನಿಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಮೃತ ಸುಜಾತಾ ಅಂಗಾಂಗ ದಾನದಿಂದ ಆರು ಜೀವಗಳನ್ನು ಉಳಿಸಿದ್ದಾರೆ ಎನ್ನಲಾಗಿದೆ. ಈ ಮಹಿಳೆ ಯಾದಾದ್ರಿ ಭುವನಗಿರಿ ಜಿಲ್ಲೆ ಆಲೇರು ಮಂಡಲದ ಬಹದ್ದೂರ್ ಪೇಟೆಯವರು ಎಂದು ವರದಿ ತಿಳಿಸಿದೆ. ಕುಟುಂಬ ಸದಸ್ಯರಿಗೆ ಅನ್ನ ಬಡಿಸುವಾಗ ಸುಜಾತಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಆಲೇರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸುಜಾತಾಳನ್ನು ಪರೀಕ್ಷಿಸಿ ಉತ್ತಮ ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಚಿಕಿತ್ಸೆಗಾಗಿ ಹೈದರಾಬಾದ್ ನ ಯಶೋದಾ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ದಿನಗಳ ನಂತರ ವೈದ್ಯರು ಆಕೆಯ ಬ್ರೈನ್ ಡೆಡ್ ಎಂದು ದೃಢಪಡಿಸಿದ್ದರು. ಇದರೊಂದಿಗೆ ವೈದ್ಯರು, ಅಂಗಾಂಗ ದಾನದ ಜೀವದಾನ ಟ್ರಸ್ಟ್ ಬಗ್ಗೆ ಆಕೆಯ ಕುಟುಂಬ…
ದೆಹಲಿಯಲ್ಲಿರುವ ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ಪೊಲೀಸ್ ಕಂಟ್ರೋಲ್ ರೂಮ್ ಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಕೂಡಲೇ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ದೆಹಲಿ ಪೊಲೀಸರು ಮೇ 1 ರಂದು ರಾಜಧಾನಿ ನಗರದ ಸುಮಾರು 150 ಶಾಲೆಗಳಿಗೆ ಕಳುಹಿಸಲಾದ ಬಾಂಬ್ ಬೆದರಿಕೆ ಇಮೇಲ್ ಗಳ ಐಪಿ (ಇಂಟರ್ನೆಟ್ ಪ್ರೋಟೋಕಾಲ್) ವಿಳಾಸವನ್ನು ಪತ್ತೆಹಚ್ಚಿದ್ದಾರೆ. ಬೃಹತ್ ಸ್ಥಳಾಂತರಿಸುವಿಕೆ ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರೇರೇಪಿಸಿದ ಈ ವಂಚಕ ಇಮೇಲ್ ಗಳನ್ನು ಬುಡಾಪೆಸ್ಟ್ ನಲ್ಲಿ ಪತ್ತೆಹಚ್ಚಲಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲೂ ವಾರಕ್ಕೆ 4 ರಿಂದ 4 ಬಾಂಬ್ ಬೆದರಿಕೆಗಳು ಬರುತ್ತಿರುವುದು ವರದಿಯಾಗುತ್ತಿವೆ. ಈ ನಡುವೆ ದೆಹಲಿಯಲ್ಲಿರುವ ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ರಕ್ಷಕರಿಗೇ ರಕ್ಷಣೆಯ ಅವಶ್ಯಕತೆಯ ವಿಚಿತ್ರ ಕೇಸ್ ವೊಂದು ಬೆಳಕಿಗೆ ಬಂದಿದೆ. ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ್ದಾರೆ ಎಂಬ ಕೋಪಕ್ಕೆ ಬಾಣಸವಾಡಿ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಎಸಿಪಿಗೆ ಪೊಲೀಸ್ ಪೇದೆ ಚಾಕುವಿನಿಂದ ಇರಿದು ಕೊಲೆ ಮಾಡೋದಾಗಿ ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೇಣುಕಾ ನಾಯಕ್ ಜೀವ ಬೆದರಿಕೆ ಹಾಕಿದ ಪೊಲೀಸ್ ಪೇದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರೌಡಿಶೀಟರ್ ಕಾರ್ತಿಕೇಯನ್ ಹತ್ಯೆಯಾಗಿತ್ತು. ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಪೊಲೀಸ್ ಪೇದೆಗಳಾದ ಸಂತೋಷ್, ಪುಟ್ಟಸ್ವಾಮಿ, ವಿನೋದ್ ರನ್ನು ಪೂರ್ವವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಅಮಾನತುಗೊಳಿಸಿದ್ದರು ಎನ್ನಲಾಗಿದೆ. ಬೆದರಿಕೆ ಹಾಕಿದ್ದ ಪೊಲೀಸ್ ಪೇದೆ ರೇಣುಕಾ ನಾಯಕ್ ರನ್ನೂ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಈ ವಿಷಯ ತಿಳಿದು ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಗೆ ಪೇದೆ ರೇಣುಕಾ ನಾಯಕ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.…
ವಾಷಿಂಗ್ಟನ್: ಅಮೆರಿಕದಲ್ಲಿ ಗರಿಷ್ಠ ವೇತನ ಪಡೆಯುವ ಸಿಇಓಗಳ ಪಟ್ಟಿಯಲ್ಲಿ ಭಾರತ ಸಂಜಾತ, ಪಾಲೊ ಆಲ್ಟೊ ನೆಟ್ವರ್ಕ್ಸ್ ನ ಸಿಇಓ ನಿಕೇಶ್ ಅರೋರಾ ಎರಡನೇ ಸ್ಥಾನದಲ್ಲಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಬಿಡುಗಡೆ ಮಾಡಿರುವ ಗರಿಷ್ಠ ವೇತನ ಪಡೆಯುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅರೋರ ಅವರ ಒಟ್ಟು ವೇತನ 151.43 ದಶಲಕ್ಷ ಡಾಲರ್ ಆಗಿದೆ. ಭಾರತೀಯ ಮೂಲದ ಎಕ್ಸಿಕ್ಯೂಟಿವ್ ಗಳು ಅಗ್ರ 500 ಮಂದಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, 17 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಡೋಬ್ ಸಿಇಓ ಶಂತನು ನಾರಾಯಣ್ 11ನೇ ಸ್ಥಾನದಲ್ಲಿದ್ದು, ಅರೋರಾ ಅವರ ಸನಿಹದಲ್ಲಿದ್ದಾರೆ. ಭಾರತದಲ್ಲೇ ಹುಟ್ಟಿ ಬೆಳೆದ ನಾರಾಯಣ್ 44.93 ದಶಲಕ್ಷ ರೂಪಾಯಿ ಗಳಿಸಿದ್ದಾರೆ. ಕುತೂಹಲಕರ ವಿಚಾರವೆಂದರೆ ಟೆಕ್ ದಿಗ್ಗಜ ಟೆಸ್ಲಾದ ಎಲಾನ್ ಮಸ್ಕ್ ಮತ್ತು ಆಲ್ಫಾಬೆಟ್ ನ ಸುಂದರ್ ಪಿಚೈ 2023ರಲ್ಲಿ ಅಸಂಪ್ರದಾಯಿಕ ವೇತನ ಸಂರಚನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಮಸ್ಕ್ ಅವರು ಯಾವುದೇ ವೇತನ ಪಡೆದಿಲ್ಲ ಎಂದು ವರದಿಯಾಗಿದ್ದರೆ, ಪಿಚೈ 8.80 ದಶಲಕ್ಷ ವೇತನ ಮಾತ್ರ ಪಡೆದಿದ್ದಾರೆ.…
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್ ಸಿ ಬಿ ತಂಡವನ್ನು ಸೋಲಿಸಿ 2ನೇ ಕ್ವಾಲಿಫಯರ್ ಪ್ರವೇಶಿಸಿತು. ಆ ಮೂಲಕ ಈ ಸಲವೂ ಆರ್ ಸಿ ಬಿ ಕಪ್ ನಿಂದ ವಂಚಿತವಾಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್( 36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಬುಧವಾರ ನಡೆದ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ ಅಂತರದಿಂದ ಮಣಿಸಿತು. ಈ ಫಲಿತಾಂಶದೊಂದಿಗೆ ರಾಜಸ್ಥಾನ ತಂಡ ಮೇ 24ರಂದು ಚೆನ್ನೈನಲ್ಲಿ ನಡೆಯುವ 2ನೇ ಕ್ವಾಲಿಫೈಯರ್ ನಲ್ಲಿ ಆಡಲು ಅರ್ಹತೆ ಪಡೆದಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಸೋಲಿನೊಂದಿಗೆ ಆರ್ ಸಿಬಿ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಸಂಕ್ಷಿಪ್ತ ಸ್ಕೋರ್: ರಾಯಲ್…