Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಹುಬ್ಬಳ್ಳಿ: ಹುಬ್ಬಳ್ಳಿ ನವನಗರದ ಶಿವಾನಂದ ನಗರದಲ್ಲಿ ಕೌಟುಂಬಿಕ ಕಲಹ ಹಿನ್ನಲೆ ಪೊಲೀಸ್ ಕಾನ್ಸ್ಟೇಬಲ್ ಜೊತೆ ಮಹಿಳೆ ನೇಣಿಗೆ ಶರಣಾದ ಘಟನೆ ನಡೆದಿದೆ. ಕಾನ್ ಸ್ಟೇಬಲ್ ಮಹೇಶ್ ಹೆಸರೂರ್(31) ಮತ್ತು ವಿಜಯಲಕ್ಷ್ಮೀ ವಾಲಿ(30) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಕಾನ್ ಸ್ಟೇಬಲ್ ಮಹೇಶ್, ಮದುವೆ ಆಗಿದ್ದರೂ ವಿವಾಹಿತ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಮೃತ ಮಹೇಶ್ ಈಗಾಗಲೇ ಬೇರೆ ಹುಡುಗಿ ಜೊತೆಗೆ ಮದುವೆ ಆಗಿದ್ದ. ಹೀಗಿದ್ದರೂ ವಿಜಯಲಕ್ಷ್ಮಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಹೆಂಡತಿ ಬಿಟ್ಟು ವಿಜಯಲಕ್ಷ್ಮಿಯೊಂದಿಗೆ ಕಳೆದ 15 ದಿನದಿಂದ ಬೇರೆ ಮನೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ವಿಜಯಲಕ್ಷ್ಮಿ ಜೊತೆಗೆ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ವಿಜಯಲಕ್ಷ್ಮಿ ಶನಿವಾರ ರಾತ್ರಿ ಮನೆಯಿಂದ ಹೋಗಿದ್ದಳು. ಹನುಮಂತನಗರದಲ್ಲಿ ವಿಜಯಲಕ್ಷ್ಮಿ ವಾಸವಿದ್ದಳು. ವಿದ್ಯಾನಗರದ ಚೇತನ ಕಾಲೇಜು ಎದುರಿಗೆ ಪಡ್ಡು ಮಾರಿ ಜೀವನ ನಡೆಸುತ್ತಿದ್ದಳು. ವಿಜಯಲಕ್ಷ್ಮಿ ಈಗಾಗಲೇ ಲವ್ ಮ್ಯಾರೇಜ್ ಮಾಡಿಕೊಂಡಿದ್ದಳು. ಎರಡು ಮಕ್ಕಳು ಸಹ ಇವೆ.…
ಬೆಂಗಳೂರು: ರೇವ್ ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ ಸಹ ಭಾಗಿಯಾಗಿದ್ದರು. ಆದರೆ, ಯಾವುದೇ ಜನಪ್ರತಿಧಿಗಳು ಭಾಗಿಯಾಗಿರಲಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ರೇವ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ಪಾರ್ಟಿ ನಡೆಯುತ್ತಿರುವುದನ್ನು ತಿಳಿದುಕೊಂಡು ಸಿಸಿಬಿ ಪೊಲೀಸರು, ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಪತ್ತೆಗೆ ತರಬೇತಿ ಪಡೆದಿರುವ ಶ್ವಾನದಳದ ನೆರವು ಪಡೆಯಲಾಗಿದೆ. ನೂರಕ್ಕೂ ಅಧಿಕ ಜನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದಾಳಿ ವೇಳೆ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಘಟನಾ ಸ್ಥಳದ ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ. ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ವೀಡಿಯೋ ಮಾಡಿರುವುದರ ಕುರಿತು ‘ಅವರು ಯಾವ ಸಂದರ್ಭದಲ್ಲಿ…
ಮೂಲಂಗಿಯು ಮೂಲ ಬೆಳೆಯಾಗಿದ್ದು, ಇದನ್ನು ಬೇಯಿಸಿ ಹಾಗೂ ಹಸಿದಾಗಿಯೂ ಸೇವಿಸಲಾಗುತ್ತದೆ. ಹಸಿ ಮೂಲಂಗಿಯು ಖಾರವಾಗಿ, ಹೆಚ್ಚು ಜ್ಯೂಸಿಯಾಗಿದ್ದು ಸಲಾಡ್ ರೀತಿಯಲ್ಲಿಯೂ ಸೇವಿಸಲಾಗುತ್ತದೆ. ಇದು ನಮ್ಮ ಪಾರಂಪರಿಕ ಆಹಾರ ತರಕಾರಿಗಳಲ್ಲಿ ಒಂದಾಗಿದ್ದು, ಹಲವು ಖಾಯಿಲೆಗಳಿಗೆ ಇದನ್ನು ಮದ್ದಾಗಿಯೂ ಉಪಯೋಗಿಸಲಾಗುತ್ತದೆ. ಕೇವಲ ಮೂಲಂಗಿಯಲ್ಲಷ್ಟೇ ಅಲ್ಲದೆ ಇದರ ಎಲೆಯೂ ಆರೋಗ್ಯಕ್ಕೆ ಒಳ್ಳೆಯದು. ಈ ಹಸಿರೆಲೆಯೂ ತಿನ್ನಲು ಒಗರು ಒಗರಾಗಿದ್ದು, ಪಲ್ಯ, ಜ್ಯೂಸ್, ಸಲಾಡ್ ರೂಪದಲ್ಲಿ ಸೇವಿಸಬಹುದಾಗಿದೆ. ಮೂಲಂಗಿಯ ಪ್ರಯೋಜನಗಳು: ನಿರ್ವಿಶೀಕರಣ ಸುಧಾರಿಸುತ್ತೆ: ಮೂಲಂಗಿಯು ಕರುಳು ಮತ್ತು ಹೊಟ್ಟೆಗೆ ಬಹಳ ಉತ್ತಮ ಆಹಾರವಾಗಿದೆ. ಇದು ರಕ್ತ ಶುದ್ಧ ಮಾಡುವುದರ ಜೊತೆಗೆ ದೇಹದಲ್ಲಿನ ವೇಸ್ಟ್ ಮತ್ತು ವಿಷವನ್ನು ತೆಗೆದುಹಾಕುತ್ತದೆ. ರಕ್ತಕ್ಕೆ ಹೊಸ ಆಮ್ಲಜನಕ ಪೂರೈಸುವುದರಿಂದ ಕಾಮಾಲೆ ಇರುವವರಿಗೆ ಸಂಭವಿಸುವ ಕೆಂಪು ರಕ್ತ ಕಣಗಳ ನಾಶವನ್ನು ಕಡಿಮೆ ಮಾಡುತ್ತದೆ. ಕಪ್ಪು ಮೂಲಂಗಿಯೂ ಕಾಮಾಲೆಗೆ ಇನ್ನೂ ಒಳ್ಳೆಯದಾಗಿದ್ದು, ಇದರ ಎಲೆಗಳು ಹಲವು ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಪೈಲ್ಸ್: ಪೈಲ್ಸ್ ಸಮಸ್ಯೆ ಇರುವವರಿಗೆ ಡಾಕ್ರ‍್ಗಳು ಸಾಮಾನ್ಯವಾಗಿ ಹಸಿ ಮೂಲಂಗಿ ಸೇವಿಸಲು ಹೇಳುತ್ತಾರೆ. ಏಕೆಂದರೆ ಇದರಲ್ಲಿ…
ಬೆಂಗಳೂರು: ಗ್ಯಾಸ್ ಸಿಲಿಂಡರ್ ಹೊಂದಿರುವ ಕುಟುಂಬಗಳಿಗೆ ಶಾಕ್ ಎದುರಾಗಿದ್ದು, ಇನ್ಮುಂದೆ ಕೆಲವು ನಿಯಮ ಕಡ್ಡಾಯವಾಗಿದೆ. ಹೌದು. ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ. ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು. ತಕ್ಷಣವೇ KYC ನ್ನು ಪೂರ್ಣಗೊಳಿಸಿ. ಕೇಂದ್ರದ ಹೊಸ ನಿಯಮದಿಂದಾಗಿ ನಕಲಿ ದಾಖಲೆಗಳನ್ನು ನೀಡಿ ಸಿಲಿಂಡರ್ ಪಡೆದುಕೊಳ್ಳುತ್ತಿದ್ದವರ ಸಿಲಿಂಡರ್ ಬ್ಲಾಕ್ ಮಾಡಲಿದ್ದಾರೆ. ಆನ್ ಲೈನ್ ಬುಕ್ಕಿಂಗ್ ಇರುವುದಿಲ್ಲ. ಹೊಸ ನಿಯಮಗಳ ಪ್ರಕಾರ ಯಾವುದೇ ಮನೆಯಲ್ಲಿ ಒಂದೇ ಹೆಸರಿನ ಎರಡು ಮತ್ತು ಅದಕ್ಕಿಂತ ಹೆಚ್ಚು ಸಿಲಿಂಡರ್ ಗಳಿದ್ದರೆ ಎರಡನೇ ಸಿಲಿಂಡರ್ ಸ್ವಯಂಚಾಲಿತವಾಗಿ ಬ್ಲಾಕ್ ಆಗುವುದು ಸ್ಪಷ್ಟ. ಅಂದರೆ ಒಂದು ಮನೆಯಲ್ಲಿ ಒಂದೇ ಹೆಸರಿನ ಸಿಲಿಂಡರ್ ಮಾತ್ರ ಇರುತ್ತದೆ. ಎಲ್ಲಾ ಅಕ್ರಮ ಸಂಪರ್ಕಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಬಯಸಿದೆ. ಅಂತಹವರನ್ನು ಗುರುತಿಸಲು…
ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್ ಬಳಿ ಕಾಮಗಾರಿ ಹಿನ್ನೆಲೆ ಏರ್ ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ನಿಂದ ಪ್ಯಾಲೇಸ್ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಸಲುವಾಗಿ ಇಂದು ರಾತ್ರಿ 11ರಿಂದ ನಾಳೆ ಬೆಳಗಿನ ಜಾವ 3ರವರೆಗೆ ಸಂಚಾರ ನಿರ್ಬಂಧ ಹೊರಡಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಬಸವೇಶ್ವರ ಜಂಕ್ಷನ್ ನಿಂದ ಬಳ್ಳಾರಿ ರಸ್ತೆ ಕಡೆ ಹೋಗುವವರು ಬಸವೇಶ್ವರ ಜಂಕ್ಷನ್, ಓಲ್ಡ್ ಹೈ ಗ್ರೌಂಡ್ ಜಂಕ್ಷನ್, ಕಲ್ಪನಾ ಜಂಕ್ಷನ್, ಎಮ್ ಸಿಸಿ ಕಾಲೇಜು, ವಸಂತನಗರ ಕೆಳ ಸೇತುವೆ, ಚಕ್ರವರ್ತಿ ಲೇಔಟ್, ಬಿಡಿಎ ಅಂಡರ್ ಪಾಸ್, ಬಿಎಸ್ ರಾಜು ರಸ್ತೆ, ಜಟಕಾ ಸ್ಟ್ಯಾಂಡ್ ಮೂಲಕ ಬಳ್ಳಾರಿ ರಸ್ತೆ ಪ್ರವೇಶ ಮಾಡಬಹುದು. ಇನ್ನು ಬಸವೇಶ್ವರ ಜಂಕ್ಷನ್, ಕಲ್ಪನಾ ಜಂಕ್ಷನ್, ಚಂದ್ರಿಕಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ಅಂಡರ್ ಪಾಸ್, ಜಯಮಹಲ್ ರಸ್ತೆ, ಮೇಖ್ರಿ ಸರ್ಕಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.…
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ಆಕಸ್ಮಿಕವಾಗಿ ಸಿಡಿದು ರಾಯಚೂರು ಮೂಲದ ಯೋಧರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಾನ್ವಿ ತಾಲೂಕಿನ ಆರ್.ಜಿ. ಕ್ಯಾಂಪ್‌ನ ಯೋಧ ರವಿಕಿರಣ್(37) ಹುತಾತ್ಮರಾದವರು ಎಂದು ಗುರುತಿಸಲಾಗಿದೆ. ಚೆನ್ನೈ ಏರ್ ಪೋರ್ಟ್ ಸಮೀಪದ ಕಲ್ಪಾಕ್ಕಂ ಬಳಿ ಈ ದುರ್ಘಟನೆ ನಡೆದಿದೆ. ಚೆನ್ನೈನಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಾಗಿದೆ. ನೈಟ್ ಡ್ಯೂಟಿ ಮುಗಿಸಿ ಕ್ಯಾಂಪ್ ನತ್ತ ತೆರಳುವ ವೇಳೆ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಗನ್ ಆಕಸ್ಮಿಕವಾಗಿ ಸಿಡಿದಿದೆ. ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ ರೈಫಲ್‌ನ ಬುಲೆಟ್ ರವಿಕಿರಣ್ ಕುತ್ತಿಗೆಯ ಭಾಗಕ್ಕೆ ತಗುಲಿದೆ ಎನ್ನಲಾಗಿದೆ. ಕೇಂದ್ರೀಯ ಔದ್ಯಮಿಕ ಭದ್ರತಾ ಸಂಸ್ಥೆ (CISF) ಯೋಧರಾದ ರವಿಕಿರಣ್ ಕಲ್ಪಾಕ್ಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಂಗನ ವಿಡಿಯೋವೊಂದು ವೈರಲ್ ಆಗಿದ್ದು, ಬೈಕ್ ನ ಮೇಲೆ ಕುಳಿತು ಅದರ ಕನ್ನಡಿಯಲ್ಲಿ ತನ್ನ ಮುಖವನ್ನು ಕಂಡು ವಿಚಿತ್ರವಾಗಿ ವರ್ತಿಸಿ ಚೇಷ್ಟೆ ಮಾಡಿದೆ. ಹೊಟ್ಟೆ ಹುಣ್ಣಾಗಿಸುವ ನಕ್ಕು, ನೆಟ್ಟಿಗರು ಈ ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಹೀಗೆ ಬೈಕಿನಲ್ಲಿ ಮಂಗವೊಂದು ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು ನಾಚಿಕೊಳ್ಳುವ ಕೋತಿಯ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ರಾಮ್ ಮೌರ್ಯ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನಾ ಬಗೆಯ ಕಮೆಂಟ್ ಗಳು ಬಂದಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮದುವೆ ಮಂಟಪದಲ್ಲಿಯೇ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಮತ್ತು ಕೈಯಿಂದ ಥಳಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅದೇ ರೀತಿಯ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತನ್ನ ಮಾಜಿ ಗೆಳತಿಯ ಮದುವೆ ಆರತಕ್ಷತೆಗೆ ಬಂದ ಯುವಕ ಮಂಟಪದಲ್ಲಿಯೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆ ರಾಜಸ್ಥಾನ್ ಚಿತ್ತೋರ್ ಗಢ ಜಿಲ್ಲೆಯ ಭಿಲ್ವಾರದಲ್ಲಿ ನಡೆದಿದ್ದು, ವಧು ವರರಿಗೆ ವಿಶ್ ಮಾಡುವ ನೆಪದಲ್ಲಿ ಸ್ಟೇಜ್ ಹತ್ತಿದ ವಧುನಿನ ಮಾಜಿ ಪ್ರಿಯಕರ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಹಲ್ಲೆ ನಡೆಸಿರುವ ಆರೋಪಿ ಶಂಕರ್ ಲಾಲ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ವಧು ಮತ್ತು ಶಂಕರ್ ಲಾಲ್ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇವರಿಬ್ಬರ…
ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೆಚ್.ಬೈರಾಪುರ ಗ್ರಾಮದಲ್ಲಿ ಬಿದ್ದ ಭಾರೀ ಮಳೆಗೆ, ತಿಪಟೂರು-ಹುಳಿಯಾರು ರಸ್ತೆ ಮಧ್ಯದ ಹೆಚ್. ಬೈರಾಪುರದ ಗ್ರಾಮದ ಮಧ್ಯಭಾಗದಲ್ಲಿರುವ ಎರಡು ಸೇತುವೆಗಳು, ಆಪಿನಕಟ್ಟೆ ಹಳ್ಳ ಮತ್ತು ಕುನ್ನಿರಕಟ್ಟೆ ಹಳ್ಳದ ಬಳಿ ಹಳ್ಳದಿಂದ ನೀರು ಬರುತ್ತಿದ್ದು, ಹುಳಿಯಾರು ಮಾರ್ಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಈ ಎರಡು ಕೆರೆಯ ನೀರುಗಳು ಈ ಸೇತುವೆ ಮಾರ್ಗ ಬರುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮತ್ತು ದಾರಿ ಹೋಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ಈ ಭಾಗದಲ್ಲಿ ವಾಹನ ಸಂಪೂರ್ಣ ದಟ್ಟಣೆಯಾಗಿದೆ. ಈ ಸೇತುವೆಗಳು ತೀರ ಚಿಕ್ಕದಾಗಿದ್ದು,ಮಳೆ ಬಂದಾಗಲೆಲ್ಲ ಪದೇ ಪದೇ ಈ ರೀತಿ ತೊಂದರೆಗಳು ಅನುಭವಿಸುವಂತಾಗಿದೆ. ಎರಡೂ ಸೇತುವೆಗಳನ್ನು ಮೇಲ್ಸೇತುವೆಗಳಾಗಿ ನಿರ್ಮಾಣ ಮಾಡಿ ರೈತರು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯಾದಗಿರಿ: ತಾಲೂಕಿನ ಅಬ್ಬೇತುಕುರ ಗ್ರಾಮದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಿದ್ದಪ್ಪ(45) ಎಂಬುವವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕೂಡಲೇ ಕುಟುಂಬದವರು ಗಾಯಾಳುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ್ದಕ್ಕೆ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಕೇವಲ ವೈದ್ಯಕೀಯ ಸಿಬ್ಬಂದಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸಾವು ಬದುಕಿನ ಮದ್ಯೆ ವ್ಯಕ್ತಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ವಿರುದ್ಧ ಜನರು ಕಿಡಿಕಾರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296