Author: admin

ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಹುಬ್ಬಳ್ಳಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೇಗೀಡಾದ ಇಬ್ಬರು ಯುವತಿಯರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ, ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಪಕ್ಷದವರು ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಅನೇಕ ವಿಚಾರಗಳನ್ನು ತಮ್ಮ ಮುಂದೆ ಹೇಳಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಕೃತ್ಯಕ್ಕೆ ಕಾರಣ ಏನೆಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದರು. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂಬ ಉದ್ದೇಶದಿಂದ ಈ ಎರಡು ಕೊಲೆ ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ. ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆರೋಪಗಳು ಬರಬಹುದು. ಹೀಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದರು. ವಿಪಕ್ಷದವರು ನೇಹಾ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣಕಟ್ಟುವ ಪ್ರಯತ್ನ ಮಾಡಿದರು. ಅನೇಕರ ಹೇಳಿಕೆಯನ್ನು ಪೊಲೀಸ್ ಇಲಾಖೆ ಗಮನಿಸಿದೆ. ಪ್ರಕರಣದ ಆರೋಪಿ ಯಾವ ಉದ್ದೇಶಕ್ಕಾಗಿ ಕೃತ್ಯ ಎಸಗಿದ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಮೂಲಾಂಶವನ್ನು ತನಿಖೆಯಿಂದ…

Read More

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರ್ಕಾರ ಬಂತು – ಜನರ ಮುಖದಲ್ಲಿ ಹರ್ಷ ಹೋಯಿತು ಎಂದು ಲೇವಡಿ ಮಾಡಿದ್ದಾರೆ. ಒಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ಅಥವಾ ತಮ್ಮ ಸರ್ಕಾರದ ಅವಧಿ ಮುಗಿದುದ್ದಕ್ಕೆ ಬೈಬೈ-ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ. ಸಿದ್ದರಾಮಯ್ಯ ಅವರ ಮುಖದ ಕಳೆ ನೋಡಿದ್ರೆ, ಕಾಂಗ್ರೆಸ್‌ ಸರ್ಕಾರದ ಅವಧಿ ಮುಗಿದಂತೆ ಕಾಣ್ತಿತ್ತು ಎಂದು ಕುಟಕಿದ್ದಾರೆ. ಕಾಂಗ್ರೆಸ್ ಲೂಟಿ – ಎಷ್ಟು ಕೋಟಿ? ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ.…

Read More

ಹಾಸನ: ಪೆನ್ ಡ್ರೈ ಪ್ರಕರಣದಲ್ಲಿ ದೇವೇಗೌಡ ಇನ್ನೂ ಸ್ಯೂಸೈಡ್ ಮಾಡಕೊಂಡು ಸಾಯಲಿಲ್ಲ ಅನ್ನೋ ಶಿವರಾಮೇಗೌಡ ಮಾತನಾಡಿದ್ರು ಅನ್ನೋ ವಿಚಾರಕ್ಕೆ ಸದ್ಯ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸದ್ಯ ಈ ಬೆಳವಣಿಗೆ ನಡುವೆ ರೇವಣ್ಣ ಕಾರು ಚಾಲಕ ಕಾರ್ತಿಕ್ ಮತ್ತು ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಕಾರ್ತಿಕ್ ಅನ್ನೋ ವ್ಯಕ್ತಿ ಶಿವರಾಮೇಗೌಡ ಗೆ ಕರೆ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ. ದೇವೇಗೌಡರಿಂದ ಸಂಸದನಾಗಿ ದೇವೇಗೌಡರ ಸಾವು ಬಯಸಿದ್ದು ಸರೀನಾ? ದೇವೇಗೌಡರ ಸಾವು ಬಯಿದ್ರೆ ನೀವೇ ಸ್ಯುಸೈಡ್ ಮಾಡಿಕೊಳ್ಳುತ್ತಿರಾ ಅಂತ ಸಖರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನವರಿಗೆ ಮಾರಾಟ ಆಗಿರೋ ಟೀವಿಲಿ ಕ್ಷಮೆ ‌ಕೇಳೋದಲ್ಲ. ಪ್ರೆಸ್ ಮೀಟ್ ಮಾಡಿ ಕ್ಷಮೆ ಕೇಳಿ. ಇಲ್ಲ ನೀವು ಹೇಳಿದ್ದೀರಾ ಎಂದು ಒಪ್ಪಿಕೊಳ್ಳಿ ಎಂದು ಕಾರ್ತಿಕ್ ಹೇಳಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕರ್ನಾಟಕ ಪಬ್ಲಿಕ್ ಸ್ಕೂಲ್ ಬಗ್ಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ನೂರು ಶಾಲೆಗಳನ್ನು ಇಡೀ ರಾಜ್ಯಾದ್ಯಂತ ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ 3,000 ಶಾಲೆ ತೆರೆಯುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಎಸ್‍ಎಸ್‍ಎಲ್‍ ಸಿ ಪರೀಕ್ಷೆ ಗ್ರೇಸ್ ಮಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಅವರು. ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. 20 ಗ್ರೇಸ್ ಮಾರ್ಕ್ ಯಾವತ್ತೂ ಇರುತ್ತಾ ಎಂದು ಹಲವರಿಗೆ ಸಂಶಯ ಇದೆ. ಉಡುಪಿ, ದಕ್ಷಿಣ ಕನ್ನಡ ಯಾವತ್ತೂ ಟಾಪರ್ಸ್ ಆಗಿ ಇರುತ್ತಿದ್ದರು. ನಂತರ ರಿಸಲ್ಟ್ ನಲ್ಲಿ ಇಳಿಮುಖವಾಯಿತು. ಈಗ ಮತ್ತೆ ಉಡುಪಿ, ಮಂಗಳೂರು ಟಾಪರ್ಸ್ ಆಗಿದ್ದಾರೆ ಎಂದರು. ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿದ್ದೇವೆ. ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಗತ್ಯವಿದ್ದವರು ಎರಡು ಮತ್ತು ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರೇಸ್ ಮಾರ್ಕ್ ಪಡೆದವರು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ. ಗ್ರೇಸ್ ಮಾರ್ಕ್ ನೀಡಿರುವುದು ಈ ವರ್ಷಕ್ಕೆ ಮಾತ್ರ. ನಾವೀಗ…

Read More

ಬೆಂಗಳೂರು: ಸಂಪುಟ ಪುನರ್ ರಚನೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಸದ್ಯಕ್ಕೆ ಸಂಪುಟ ಪುನರ್ ರಚನೆ ಇಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಿನಿಮಮ್ 15, ಮ್ಯಾಕ್ಸಿಮಮ್ 20 ಗೆಲ್ತೀವಿ. ಬಿಜೆಪಿಯ    ವರ ರೀತಿ, ಯಡಿಯೂರಪ್ಪ ರೀತಿ 28ಕ್ಕೆ 28 ಗೆಲ್ತೀವಿ ಅಂತ ಹೇಳಲ್ಲ ಎಂದು ಬಿಎಸ್ ವೈ ರೀತಿ ಮಿಮಿಕ್ರಿ ಮಾಡಿದ್ರು. ಇದೇ ವೇಳೆ ನೀವು ಪ್ರಧಾನ ಮಂತ್ರಿ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು. ಜಾತಿ ಗಣತಿಯನ್ನ‌ ಸ್ವೀಕಾರ ಮಾಡಿದ್ದೇವೆ. ನಾನು ವರದಿಯನ್ನು ನೋಡಿಯೂ ಇಲ್ಲ. ಕ್ಯಾಬಿನೆಟ್ ‌ಮುಂದೆ ಇಟ್ಟು ಚರ್ಚೆ ಆಗಬೇಕು.…

Read More

ಬೆಂಗಳೂರು: ನನ್ನ ಸುತ್ತಮುತ್ತಲಿನ 40 ಜನರ ಫೋನ್ ಗಳನ್ನು ರಾಜ್ಯ ಸರಕಾರ ಟ್ಯಾಪ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣ್ಣ ಅವರ ಫೋನ್ ಸೇರಿದಂತೆ ನನ್ನ ಸುತ್ತಮುತ್ತ ಇರುವ ಎಲ್ಲರ ಫೋನ್ ಗಳನ್ನೂ ಸರಕಾರ ಟ್ಯಾಪ್ ಮಾಡಿಸುತ್ತಿದೆ. ನನ್ನ ಫೋನ್ ಕೂಡ ಟ್ಯಾಪ್ ಆಗುತ್ತಿದೆ ಎಂದು ದೂರಿದರು. ರಾಜಕೀಯವಾಗಿ ನಮ್ಮ ಕುಟುಂಬವನ್ನು ಮುಗಿಸಲೇಬೇಕು ಎಂದು ಈ ಸರಕಾರ ತೀರ್ಮಾನಕ್ಕೆ ಬಂದಿದೆ. ಅದು ಆಡಿಯೋ ಟೇಪುಗಳಲ್ಲಿಯೇ ಬಯಲಾಗಿದೆ. ಹೀಗಾಗಿ ನಮ್ಮ ಕುಟುಂಬದ ಎಲ್ಲರ ಮೊಬೈಲ್ ಫೋನ್ ಗಳನ್ನು ಸರಕಾರ ಕದ್ದಾಲಿಕೆ ಮಾಡಿಸುತ್ತಿದೆ. ಯಾರನ್ನೂ ಇವರು ಬಿಟ್ಟಿಲ್ಲ, ಎಲ್ಲರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಫೋನ್ ಟ್ಯಾಪ್ ಮಾಡುವಂಥ ಮುಟ್ಟಾಳ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಲ್ಲ ಎಂದು ಮಾಧ್ಯಮಗಳು ಗಮನ ಸೆಳೆದಾಗ, ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ ಡಿಕೆಶಿ ಹೇಳೋದು…

Read More

ಬೆಂಗಳೂರು: ಬೇರೆಯವರ ಹೆಸರಲ್ಲಿ ಸಿಮ್ ಪರ್ಚೇಸ್ ಮಾಡಿ ವಿದೇಶಕ್ಕೆ ಸಾಗಿಸುತ್ತಿದ್ದವನನ್ನು ಕಸ್ಟಮ್ಸ್ ಅಧಿಕಾರಿಗಳು ಏರ್ ಪೋರ್ಟ್ ನಲ್ಲಿ ಲಾಕ್ ಮಾಡಿದ್ದಾರೆ. ಶ್ರೀನಿವಾಸ್ ಎಂಬಾತ ಬಂಧಿತ ಆರೋಪಿ ಎನ್ನಲಾಗಿದೆ. ಆನ್ ಲೈನ್ ವಂಚನೆಗೆ ದೇಶಿ ಸಿಮ್ ಕಾರ್ಡ್ ಸಂಗ್ರಹಿಸಿ ವಿದೇಶಕ್ಕೆ ಆರೋಪಿ ಮಾರಾಟ ಮಾಡುತ್ತಿದ್ದ. ಭಾರತದಲ್ಲಿನ ಸಿಮ್ ಕಾರ್ಡ್ ಖರೀದಿಸಿ ವಿದೇಶಕ್ಕೆ ಸಾಗಾಟ ಮಾಡುತ್ತಿದ್ದ. ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಪರಿಶೀಲನೆ ವೇಳೆ ಕಿಲಾಡಿ ಸಿಕ್ಕಿ ಬಿದ್ದಿದ್ದಾನೆ. ವಿಶಾಖಪಟ್ಟಣದಿಂದ ವಿಯೆಟ್ನಾಂಗೆ ಸಿಮ್ ಕಾರ್ಡ್ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಭಾರತೀಯ ಸಿಮ್ ಕಾರ್ಡ್ ಬಳಸಿಕೊಂಡು ಇಲ್ಲಿನ ಜನರಿಗೆ ಮೆಸೇಜ್, ಕರೆಗಳ ಮೂಲಕ ವಂಚನೆಗೆ ಯತ್ನಿಸುತ್ತಿರುವುದು ತಿಳಿದು ಬಂದಿದೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೇರೆ ಬೇರೆ ವ್ಯಕ್ತಿಗಳಿಂದ ಸಿಂಗಲ್ ಆಗಿ ಸಿಮ್ ಕಾರ್ಡ್ ಪಡೆದಿರೋ ಬಗ್ಗೆ ಮಾಹಿತಿ ದೊರೆತಿದೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಬೆಂಗಳೂರು: ಏರ್ಪೋರ್ಟ್ ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿ ಪ್ರಯಾಣಿಕನೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಯಾಣಿಕ ಹರಿಯಾಣ ಮೂಲದ ರಾಜೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜಧಾನಿ ಬೆಂಗಳೂರಿನ ಕೆಐಎಎಲ್ ಏರ್ಪೋರ್ಟ್ ನಲ್ಲಿ ಪ್ರಯಾಣಿಕನ ಅವಾಂತರ ಕಂಡು ಬಂದಿದೆ. ಬಾಂಬ್ ಇದೆ ಅಂತಾ ಜೋಕ್ ಮಾಡಿ ಪ್ರಯಾಣಿಕ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಪೊಲೀಸರಿಗೆ ಅಧಿಕಾರಿಗಳು ಒಪ್ಪಿಸಿದ್ದಾರೆ. ಬೆಂಗಳೂರಿನಿಂದ ಪುಣೆಗೆ ರಾಜೇಶ್ ಕುಮಾರ್ ಹೊರಟಿದ್ದ. ಟರ್ಮಿನಲ್-2 ನಲ್ಲಿ ಚೆಕ್ ಇನ್ ವೇಳೆ ಅವಾಂತರ ಕಂಡು ಬಂದಿದೆ. ಚೆಕ್ ಇನ್ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕ ಹೇಳಿದ್ದ. ಇದರಿಂದ ಆತಂಕಗೊಂಡು ಪ್ರಯಾಣಿಕನ ಬ್ಯಾಗ್ ತಪಾಸಣೆ ಮಾಡಿದ್ದಾರೆ. ನಂತರ ಪ್ರಯಾಣಿಕನನ್ನ ಕೆಐಎಎಲ್ ಪೊಲೀಸರಿಗೆ ಅಧಿಕಾರಿಗಳು ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಚೆಕ್ ಇನ್ ವೇಳೆ ಜೋಕ್ ಮಾಡಿದ್ದಾಗಿ ಪ್ರಯಾಣಿಕ ಹೇಳಿದ್ದಾನೆ. ರಾಜೇಶ್ ಕುಮಾರ್ ವಿರುದ್ಧ ಕೆಐಎಎಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಬಂಧನ ಪ್ರಕ್ರಿಯೆ ಮುಗಿಸಿ ಸ್ಟೇಷನ್ ಬೇಲ್…

Read More

ಸತತ ಆರು ಪಂದ್ಯಗಳನ್ನು ಗೆಲ್ಲೋ ಮೂಲಕ ಅಸಾಧ್ಯವನ್ನು ಸಾಧ್ಯವನ್ನಾಗಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಗೆ ಅರ್ಹತೆ ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ತನ್ನ ಪಾಲಿನ ಕಡೇ ಲೀಗ್ ಪಂದ್ಯದಲ್ಲಿ ಬದ್ಧ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 27 ರನ್ ‌ಗಳ ಜಯ ದಾಖಲಿಸಿ ಅಭಿಮಾನಿ ಬಳಗದ ಮನದಲ್ಲಿ ಮಿಂಚಿನ ಸಂಚಲ ಉಂಟು ಮಾಡಿತು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ ಸಿಬಿ ತಂಡಕ್ಕೆ ಮುಂದಿನ ಸುತ್ತಿನ ಅರ್ಹತೆ ಪಡೆಯಲು ಕನಿಷ್ಠ 18 ರನ್ ‌ಗಳ ಗೆಲುವಿನ ಅಗತ್ಯವಿತ್ತು. ಅಂತಯೇ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚಾಲೆಂಜರ್ಸ್‌ 218 ರನ್‌ ಗಳ ಬೃಹತ್‌ ಮೊತ್ತವನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಸಿಎಸ್‌ ಕೆ ತಂಡವನ್ನು…

Read More

ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಅವರು ಸೋಮವಾರ ಮತ ಚಲಾವಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ. ಜಾರ್ಖಂಡ್ ನ ಹಝಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ “ಸಾಂಸ್ಥಿಕ ಕಾರ್ಯ ಮತ್ತು ಚುನಾವಣಾ ಪ್ರಚಾರ”ದಲ್ಲಿ ಕೂಡಾ ಪಾಲ್ಗೊಂಡಿಲ್ಲ ಎಂದು ಶೋಕಾಸ್ ನೋಟಿಸ್ ನಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಸಿನ್ಹಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಪ್ರತಿಷ್ಠಿತ ಕ್ಷೇತ್ರವನ್ನು ಪ್ರಸ್ತುತ ಅವರು ಪ್ರತಿನಿಧಿಸುತ್ತಿದ್ದಾರೆ. “ಹಝಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ನೀವು ಸಾಂಸ್ಥಿಕ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿಯನ್ನು ಕೂಡಾ ತೋರಿಸಿಲ್ಲ. ಮತ ಚಲಾಯಿಸಬೇಕು ಎಂಬ ಭಾವನೆ ಕೂಡಾ ನಿಮಗೆ ಬಂದಿಲ್ಲ. ನಿಮ್ಮ ನಡತೆಯಿಂದ ಪಕ್ಷದ ಘನತೆಗೆ ಧಕ್ಕೆ ಬಂದಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್ನಲ್ಲಿ ಹೇಳಿದ್ದಾರೆ. ಎರಡು ದಿನಗಳ ಒಳಗಾಗಿ…

Read More