Author: admin

ಕೊರಟಗೆರೆ: ಕೊರಟಗೆರೆ ಪಟ್ಟಣದ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಹಸಿಲ್ದಾರ್ ಮಂಜುನಾಥ್ ಕೆ. ಪೂಜೆ ಸಲ್ಲಿಸಿ ರೈತರಿಗೆ ಮೇವು ವಿತರಣೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಭೀಕರ ಬರಗಾಲದಿಂದ ಮಳೆ ಬೆಳೆ ಇಲ್ಲದೆ ಜಾನುವಾರಗಳಿಗೆ ಮೇವು ಇಲ್ಲದೆ ಆಹಾಕಾರ ಸೃಷ್ಟಿ ಯಾಗಿರುವ ಕಾರಣ, ಈಗಾಗಲೇ ರಾಜ್ಯ ಸರ್ಕಾರವು ಕೊರಟಗೆರೆ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಈಗಾಗಲೇ ತಾಲೂಕಿನ ಬುಕ್ಕಪಟ್ಟಣ ದೊಡ್ಡಮ್ಮ ದೇವಿ ಹಾಗೂ ಕ್ಯಾಮೇನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ, ಮೇವು ಬ್ಯಾಂಕ್ ಪ್ರಾರಂಭವಾಗಿದ್ದು, ಅಲ್ಲಿನ ಸುತ್ತಮುತ್ತ ಗ್ರಾಮಗಳ ರೈತರು ಜಾನುವಾರುಗಳಿಗೆ ಮೇವನ್ನು  ಪಡೆದುಕೊಳ್ಳುತ್ತಿದ್ದಾರೆ. ಇದೀಗ ಕೊರಟಗೆರೆ ಪಟ್ಟಣದ ಶ್ರೀ ಬೈಲಾಂಜನೇಯ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಮೇವು ಬ್ಯಾಂಕ್ ಇಂದಿನಿಂದ ಪ್ರಾರಂಭವಾಗಿದ್ದು, ಕಸಬಾ ಹೋಬಳಿಯ ರೈತರು ಹಾಗೂ ಸುತ್ತಮುತ್ತ ಹಳ್ಳಿಗಳ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈಗ ತಾನೇ ಎಲ್ಲಾ ಕಡೆ ವರುಣನ ಕೃಪೆ ನಮಗೆ ಆಗುತ್ತಿದೆ. ಉತ್ತಮ ಮಳೆಯಾಗಿ ಜಾನುವಾರಗಳಿಗೆ…

Read More

ಟೆಹ್ರಾನ್:‌ ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಜರ್ ಬೈಜಾನ್‍ ನ ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನವಾಗಿತ್ತು. ಕಡಿದಾದ ಪರ್ವತ ಶ್ರೇಣಿಯ ಕಣಿವೆ ಭಾಗದಲ್ಲಿ ಪ್ರತಿಕೂಲ ವಾತಾವರಣದ ನಡುವೆ ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಡ್ರೋನ್ ಮೂಲಕ ಪತನಗೊಂಡ ಹೆಲಿಕಾಪ್ಟರ್ ಅವಶೇಷ ಪತ್ತೆ ಮಾಡಲಾಗಿತ್ತು. ಹೆಲಿಕಾಪ್ಟರ್ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿ ತಿಳಿಸಿದ್ದರು. ಹೆಲಿಕಾಪ್ಟರ್ ಅಪಘಾತದ ನಂತರ ಶೋಧ ಕಾರ್ಯಾಚರಣೆಯಲ್ಲಿ ಇಂದು ಮೃತದೇಹಗಳನ್ನು ಸಾಗಿಸುತ್ತಿರುವ ತುಣುಕನ್ನು ಅಲ್ಲಿನ ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿದೆ. ಸೋಮವಾರ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಶೋಧ ತಂಡಗಳು ಅವಶೇಷಗಳನ್ನು ಪತ್ತೆ ಮಾಡಿದ ನಂತರ ರೈಸಿ ಮತ್ತು ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿ ತಿಳಿಸಿದ್ದಾರೆ. ಇರಾನ್‌ ನ ಸುದ್ದಿ ಸಂಸ್ಥೆಯು ರೈಸಿ ಹಾಗೂ ಇತರರ ಸಾವುಗಳನ್ನು ದೃಢಪಡಿಸಿದೆ. ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರನ್ನು ಹೊತ್ತ…

Read More

ಕೆಲವರು ದೇಹವನ್ನು ಆಟದ ಗೊಂಬೆಯಂತೆ ತಮಗೆ ಬೇಕಾದ ರೀತಿಯಲ್ಲಿ ಅಥವಾ ಪ್ರಸ್ತುತ ಟ್ರೆಂಡ್ ಗಳಿಗೆ ತಕ್ಕಂತೆ ಬದಾಲಾಯಿಸಿಕೊಳ್ಳುವುದು ವಾಡಿಕೆ. ಅಮೆರಿಕದ ವ್ಯಕ್ತಿಯೊಬ್ಬರು ಇತ್ತೀಚಿಗಷ್ಟೇ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟುಗಳನ್ನು ಸೇರಿಸಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹ್ಯಾರಿ ಹೂಫ್‌ ಕ್ಲೋಪೆನ್ ಎಂಬ ವ್ಯಕ್ತಿ ಇದೀಗಾ ಒಟ್ಟು 6 ಮೊಲೆ ತೊಟ್ಟುಗಳನ್ನು ಹೊಂದಿದ್ದಾರೆ. ಪ್ರಾರಂಭದಲ್ಲಿ ದೇಹ ಮಾರ್ಪಾಡು ತಜ್ಞ ಸ್ಟೀವ್ ಹಾವರ್ತ್ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟು ಹಾಕುವ ಸರ್ಜರಿಗೆ ಒಳಗಾಗಿದ್ದ, ಆದರೆ ಅದು ವಿಫಲವಾಗಿತ್ತು. ಬಳಿಕ ಕೊಲೊರಾಡೋ ಮೂಲದ ಟ್ಯಾಟೂ ಕಲಾವಿದ ಏಂಜೆಲ್‌ ಸಿಲಿಕೋನ್ ಇಂಪ್ಲಾಂಟ್‌ಗಳನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಹಚ್ಚೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಗಾಢನಿದ್ದೆಯಲ್ಲಿದ್ದ ಗೆಳೆಯನ ಗುಪ್ತಾಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿ ಎಸೆದಿರುವ ಘಟನೆ ಅಮೆರಿಕದ ಕೊಲೋರಡೋ ಪ್ರದೇಶದಲ್ಲಿ ವರದಿಯಾಗಿದೆ. ತನ್ನನ್ನು ನೆಮ್ಮದಿಯಿಂದ ಮಲಗುವುದಕ್ಕೆ ಬಿಡದಿದ್ದ ಕಾರಣ ಮತ್ತು ಆತ ಮತ್ತೆ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಬಾಯ್ ಫ್ರೆಂಡ್ ನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ. ಹೊಟೇಲ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಶೆಂಟಿಂಗ್ ಗೋ ಎಂಬ 32ವರ್ಷದ ಮಹಿಳೆ ತನ್ನ ಬಾಯ್ ಫ್ರೆಂಡ್ ಅನ್ನು ಹಲವು ಬಾರಿ ಚುಚ್ಚಿದ್ದಾಳೆ. ಬಳಿಕ ಅವನ ಗುಪ್ತಾಂಗವನ್ನು ಕಟ್ ಮಾಡಿ ಎಸೆದಿದ್ದಾಳೆ. ಈ ವಿಚಾರ ತಿಳಿದ ಹೊಟೇಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಬಂದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಗುಪ್ತಾಂಗವನ್ನು ಕತ್ತರಿಸಲಾಗಿತ್ತು. ಕತ್ತರಿಸಿಲಾಗಿದ್ದ ಗುಪ್ತಾಂಗ ಬೆಡ್ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಕೊಲೆಯಾದ ವ್ಯಕ್ತಿ, ಶೆಂಟಿಂಗ್ ಗೋ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡನೇ ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದ.…

Read More

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆಸಿದ ದಾಳಿಯಲ್ಲಿ, ಒಬ್ಬ ಸಾಮಾನ್ಯ ಶೂ ವ್ಯಾಪಾರಿಯ ಮನೆಯಿಂದ 40 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 500 ರೂ. ನೋಟುಗಳ ಹಲವು ಬಂಡಲ್‌ಗಳನ್ನು ಹೊರತೆಗೆದಿದ್ದಾರೆ. ಇತ್ತೀಚೆಗೆ ದೇಶದಲ್ಲಿ ನಡೆದ 2ನೇ ಅತಿದೊಡ್ಡ ದಾಳಿಯೂ ಇದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಅಕ್ರಮ ಮರಳು ದಂಧೆ ನಡೆಯುತ್ತಿದ್ದ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆ, ಬೃಹತ್ ಅಕ್ರಮ ಮರಳು ಅಡ್ಡಾದ ಮೇಲೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ದಾಳಿ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ದೇವದುರ್ಗ ತಾಲೂಕಿನ ಚಿಕ್ಕರಾಯಕುಂಪಿಯಲ್ಲಿ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20,033 ಮೆಟ್ರಿಕ್ ಟನ್ ನಷ್ಟು ಮರಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜಮೀನು ಮಾಲೀಕರಾದ ಚಂದ್ರಮ್ಮ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ದಾಳಿ ವೇಳೆ ಸುಮಾರು 1,58,26,070 ರೂ. ಮೊತ್ತದ ಅಕ್ರಮ ಮರಳು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಾಲಿವುಡ್ ಮತ್ತು ಟಾಲಿವುಡ್‌ ನಲ್ಲಿ ಬೇಡಿಕೆಯ ನಟಿ ಜಾನ್ವಿ ಕಪೂರ್ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ ಸಿನಿಮಾ ಪ್ರಚಾರವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಜ್ಯೂ. ಎನ್‌ಟಿಆರ್, ರಾಮ್ ಚರಣ್, ಸೂರ್ಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ. ಸದ್ಯ ‘ಚಿಕ್ಕವಯಸ್ಸಿನಲ್ಲಿ ಅಶ್ಲೀಲ ವೆಬ್‌ ಸೈಟ್‌ ನಲ್ಲಿ ನನ್ನ ಫೋಟೋ ಹಾಕಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರಚಾರದ ಸಂದರ್ಶನ ವೇಳೆ, 12 -13 ವರ್ಷ ವಯಸ್ಸಿನಲ್ಲಿರುವಾಗ ಸೋಷಿಯಲ್ ಮೀಡಿಯಾದಿಂದಾಗಿ ಲೈಂಗಿಕವಾಗಿ ನಾನು ಸಮಸ್ಯೆ ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಆಗ ನನಗೆ ಚಿಕ್ಕ ವಯಸ್ಸು. ಒಮ್ಮೆ ನನ್ನ ತಾಯಿ ಮತ್ತು ತಂದೆಯೊಂದಿಗೆ ಈವೆಂಟ್‌ ಗೆ ಹೋಗಿದ್ದೆ. ಆ ಚಿತ್ರಗಳು ಇಂಟರ್‌ ನೆಟ್ ‌ನಲ್ಲಿ ವೈರಲ್ ಆಗಿತ್ತು. ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ ಸೈಟ್ ‌ಗಳಲ್ಲಿ ಹಾಕಿದ್ದರು ಎಂದಿದ್ದಾರೆ. ಆದರೆ ಇದು ಮಾರ್ಫ್ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ…

Read More

ಸುಮಾರು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಬತ್ತಿ ಹೋಗಿದ್ದ ಕಾವೇರಿ, ಇದೀಗ ಮತ್ತೆ ಮೈ ತುಂಬಿ ಹರಿಯುತ್ತಿದೆ. ತೀವ್ರ ಬರದಿಂದಾಗಿ ಹರಿಯುವಿಕೆಯನ್ನೇ ನಿಲ್ಲಿಸಿದ್ದ ಜೀವನದಿಯಾಗಿದ್ದ ಕಾವೇರಿಗೆ ಮತ್ತೆ ಜೀವಕಳೆ ಬಂದಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಮಾತ್ರವಲ್ಲ, ಕೊಡಗಿನ ಹೆಚ್ಚಿನ ಎಲ್ಲಾ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಕೊಡಗು ಮತ್ತೆ ಜಲರಾಶಿಯಿಂದ ಜನರನ್ನು ಆಕರ್ಷಿಸುತ್ತಿದೆ. ವಿಶೇಷವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳು ಕುಡಿಯುವ ನೀರಿಗಾಗಿ ಆಹಾಕಾರ ಉಂಟಾಗಿತ್ತು. ಆದರೆ ಇದೀಗ ಕಾವೇರಿಯಲ್ಲಿ ನೀರು ಹರಿಯುತ್ತಿರುವುದು ಸದ್ಯ ನೀರಿನ ಬವಣೆ ದೂರವಾಗುವಂತೆ ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಜೀವನದಲ್ಲಿ ನಾವು ಎಷ್ಟೋ ಕಷ್ಟಗಳನ್ನು ಅನುಭವಿಸುತ್ತೇವೆ. ಆದರೆ ಇಲ್ಲೊಂದು ಕಡೆ ತಾಯಿ-ಮಗಳು ಅನುಭವಿಸಿದ ಕಷ್ಟದ ಎದುರು ನಮ್ಮ ಕಷ್ಟ ಏನಿಲ್ಲ ಅನ್ನಿಸಿಬಿಡುತ್ತೆ. ಹೌದು, ಮಗಳು ವಿಶೇಷ ಚೇತನ ಯುವತಿ, ಆಕೆ ಹೆಸರು ಪ್ರಗತಿ(32 ವರ್ಷ). ತಾಯಿಯ ಹೆಸರು ಜಯಂತಿ ಶೆಟ್ಟಿ(61 ವರ್ಷ). ಇವರು ಕುಂದಾಪುರದ ಗೋಪಾಡಿ ಗ್ರಾಮದ ಮೂಡು ಗೋಪಾಡಿಯ ದಾಸನಹಾಡಿಯ ನಿವಾಸಿ. ವಿಶೇಷ ಚೇತನ ಹುಡುಗಿಗೆ ತಾಯಿ ಆಸರೆಯಾಗಿದ್ದರು. ಇವರಿಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ. ತಾಯಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ತನಕ ಈ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ಕೊಳೆತ ವಾಸನೆ ಹೊಡೆಯುತ್ತಿದ್ದದರಿಂದ ಸ್ಥಳೀಯರು ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರೆಲ್ಲರು ಸೇರಿ ವಿಶೇಷ ಚೇತನ ಯುವತಿಯನ್ನು ರಕ್ಷಣೆ ಮಾಡ್ತಾರೆ. ಆದರೆ ದುರಾದೃಷ್ಟವಶಾತ್ ಪ್ರಗತಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಪತಿಯ ಸಾವಿನ ಬಳಿಕ ದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ವಿಶೇಷ ಚೇತನ ಪುತ್ರಿ ಪ್ರಗತಿಯೊಂದಿಗೆ ನೆಲೆಸಿದ್ದರು. ಈಕೆ…

Read More

ಪತಂಜಲಿಯ ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ನಂತರ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಅಧಿಕಾರಿಯೊಬ್ಬರು ಮತ್ತು ಇತರ ಇಬ್ಬರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಸಿಲುಕಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಯೋಗ ಗುರು ಬಾಬಾ ರಾಮ್‌ ದೇವ್ ಮತ್ತು ಇತರರಿಗೆ ನೀಡಿರುವ ನ್ಯಾಯಾಂಗ ನಿಂದನೆ ನೋಟಿಸ್‌ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಲಯವು ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ಅಜಯ್ ಜೋಶಿಗೆ ತಲಾ 10,000 ರೂ. ದಂಡ ವಿಧಿಸಿದರೆ, ಅಭಿಷೇಕ್ ಕುಮಾರ್ 25,000 ರೂ. ಮತ್ತು ಪಾಠಕ್ 5,000 ರೂ. ದಂಡ ವಿಧಿಸಲಾಗಿದೆ. ಸೆಪ್ಟೆಂಬರ್ 17, 2019 ರಂದು ಲೀಲಾಧರ್ ಪಾಠಕ್ ಅವರ ಅಂಗಡಿಯಿಂದ ಸಂಗ್ರಹಿಸಲಾದ ಮಾದರಿಗಳನ್ನು ರುದ್ರಪುರದ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ಫಲಿತಾಂಶಗಳು ಉತ್ಪನ್ನದ ಗುಣಮಟ್ಟವನ್ನು ಬಹಿರಂಗಪಡಿಸಿದವು, ನಂತರ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಮೂವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮೂವರು ಆರೋಪಿಗಳು ತಮ್ಮ…

Read More