Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಬೆಂಗಳೂರು: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಗಾದೆ ಮಾತನ್ನ ನೀವೆಲ್ರೂ ಕೇಳಿರುತ್ತೀರ. ಅದೇ ರೀತಿ ಇಲ್ಲಿ ಜೊತೆ ಜೊತೆಯಾಗಿ ಆಟವಾಡುತ್ತಾ ಬೆಳೆದ ಅಣ್ಣ ಆನ್ಲೈನ್ ಗೇಮ್ ಚಟಕ್ಕೆ ಒಡಹುಟ್ಟಿದ ತಮ್ಮನನ್ನೆ ಬರ್ಬರವಾಗಿ ಕೊಂದು ಮುಗಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಇಂತಹದೊಂದು ಘೋರ ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ. ಪ್ರಾಣೇಶ್ ಕೇವಲ ಹದಿನೈದು ವರ್ಷದ ಈತ ತನ್ನ ಅಣ್ಣ ಶಿವಕುಮಾರ್ ನಿಂದಲೇ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಆಂದ್ರಪ್ರದೇಶದ ಕರ್ನೂಲಿನ ಸೂಳೆಕೆರಿ ಗ್ರಾಮದ ನಿವಾಸಿಯಾದ ಈತ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಿಗಾ ಸಮೀಪದ ಕತ್ರಿಗುಪ್ಪೆ ಬಳಿ ಇದೇ ತಿಂಗಳು ಹದಿನೈದನೇ ತಾರೀಖು ಕೊಲೆಯಾಗಿದ್ದಾನೆ. ಅಜ್ಜಿ ಜೊತೆ ವಾಸವಿದ್ದ ಪ್ರಾಣೇಶ್ ಎರಡು ವಾರಗಳ ಹಿಂದೆ ತಮ್ಮ ತಂದೆ ತಾಯಿ ಮತ್ತು ಅಣ್ಣ ಗಾರೆ ಕೆಲಸ ಮಾಡುತ್ತಿದ್ದ ಕತ್ರಿಗುಪ್ಪೆಗೆ ರಜೆ ಕಳೆಯಲು ಬಂದಿದ್ದಾನೆ. ಆದ್ರೆ ಅಪ್ಪ ಅಮ್ಮ ಅಣ್ಣ ಗಾರೆ ಕೆಲಸಕ್ಕೆ ಹೋದರೆ ಬಾಲಕ ಪ್ರಾಣೇಶ್…
ಶಿವಮೊಗ್ಗ: ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಕೆರೆಯ ಹೋಳು ಹಾಗೂ ಮಣ್ಣನ್ನು ಸೂಕ್ತ ಪ್ರಾಧಿಕಾರದ ಅನುಮತಿ ಇಲ್ಲದೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಕೆರೆ ಹೂಳು ಹಾಗೂ ಮಣ್ಣಿನ ಅನಧಿಕೃತ ಸಾಗಾಣಿಕೆ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸುವುದಾಗಿ ಸೂಚಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿಗಳಿಗೆ, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನು ಉಪಯೋಗಿಸಲು, ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮ ಪಂಚಾಯತ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳು ಅರ್ಜಿಯನ್ನು ಪರಿಶೀಲಿಸಿ, ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು/ಮಣ್ಣಿನ ಅಂದಾಜು…
ಇಂಡಿ: “ಸರ್ಕಾರದ ಕೆಲಸ ದೇವರ ಕೆಲಸ” ಇದು ಶಕ್ತಿ ಸೌಧ ವಿಧಾನ ಸೌಧದ ಮುಂದೆ ಹಾಕಿರುವ ಘೋಷ ವಾಕ್ಯ. ಆದರೆ, ಸರ್ಕಾರದ ಕೆಲಸ ದೇವರ ಕೆಲಸವಲ್ಲ ಎಂಬಂತೆ ವರ್ತಿಸುತ್ತಿರುವ ಇಂಡಿ ಪುರಸಭೆ ಕಾರ್ಯಾಲಯದ ಸಿಬ್ಬಂದಿ ದರ್ಬಾರು ನೋಡಿದರೆ ಹೇಳತೀರದು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆ ಕಾರ್ಯಾಲಯ ಶನಿವಾರ 12 ಘಂಟೆ. ಆದರೂ ಇಲ್ಲಿ ಕಾಣುವ ಕುರ್ಚಿಗಳೆಲ್ಲ ಖಾಲಿ ಖಾಲಿ ಎನ್ನುವದು ವಿಪರ್ಯಾಸ ಸಂಗತಿ .ಇಲ್ಲಿನ ನೌಕರರು ಆಫೀಸ್ ಗೆ ಬಂದ್ರೆ ಬರ್ತಾರೆ. ಇಲ್ಲ ಅಂದ್ರೆ ಇಲ್ಲ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲ. ಯಾರ ಭಯವೂ ಇಲ್ಲ. ಹೀಗೆ ಕಳ್ಳಾಟವಾಡಿಕೊಂಡು ತಿಂಗಳಾಯಿತು. ಅಂದರೆ ಕೈ ತುಂಬಾ ಸಂಬಳ ಜೇಬಿಗಿಳಿಸಿಕೊಳ್ಳತಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿ ಇದ್ದರೆ ಅಧೋಗತಿ. ಇಲ್ಲಿ ಹೇಳೋರು ಇಲ್ಲ. ಕೇಳೋರು ಇಲ್ಲ. ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಸದ್ಯ ಇಲ್ಲಿನ ಜನರ ಹೇಳಿಕೆಯ ಪ್ರಕಾರ ಇಲ್ಲಿನ ಸಿಬ್ಬಂದಿಗಳು ಮನಸಿಗೆ ಬಂದಾಗ ಬರುತ್ತಾರೆ ಎಂದು ಮಾಧ್ಯಮದ ಎದುರು ಹೇಳಿರುತ್ತಾರೆ. ಇನ್ನಾದರೂ ಸಂಬಂಧಪಟ್ಟ…
ಬೆಂಗಳೂರು: ಟ್ರೋಲರ್ಸ್ ಮೇಲೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಕೆಂಗಣ್ಣು ಬೀರಿದ್ದು, ತಮ್ಮನ್ನು ಟ್ರೋಲ್ ಮಾಡಿದವರಿಗೆ ಹಿಡಿಶಾಪ ಹಾಕಿದ್ದಾರೆ. ಈ ಉಪಯೋಗ ಇಲ್ಲದ ಇರುವ ಕೆಲವರು ಟ್ರೋಲ್ ಮಾಡುತ್ತಾರೆ. ಕೆಟ್ಟ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುವುದು. ಟ್ರೋಲ್ ಮಾಡುವವರು ನಿಮ್ಮ ಜೀವಮಾನದಲ್ಲಿ ಉದ್ಧಾರಾಗಲ್ಲ. ಇನ್ಮೇಲಿಂದ ನಿಮಗೆ ನಮ್ಮ ಶಾಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಬಂಗಾರಪ್ಪನವರ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಬಂಗಾರಪ್ಪ, ನಿಮ್ಮ ನರೇಂದ್ರ ಮೋದಿ ಅವರಿಗೆ ಕನ್ನಡ ಬರುತ್ತಾ? ಇಲ್ಲಿ ಬಂದು ಕನ್ನಡ ಮಾತಾಡ್ತಾರೆ, ತಮಿಳುನಾಡಿಗೆ ಹೋಗಿ ತಮಿಳಲ್ಲಿ ಮಾತಾಡ್ತಾರೆ. ಯಾರೋ ಬರೆದು ಕೊಟ್ಟಿದ್ದನ್ನು ಹೇಳ್ತಾರೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕನ್ನಡವನ್ನು ಟ್ರೋಲ್ ಮಾಡುವುದರಿಂದ ನಿಮ್ಮ ಹೊಟ್ಟೆ ಏನು ತುಂಬಲ್ಲ ಎಂದಿದ್ದಾರೆ. ನನಗೆ ಕನ್ನಡ ಓದೋದು ಸ್ವಲ್ಪ ಕಷ್ಟ. ಆದರೆ, ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತೀನಿ. ಈಗ ಏನಾದ್ರೂ ತಡವರಿಸುತ್ತಿದ್ದೇನಾ? ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತೀನಿ ಅಂದಿದ್ದೆ, ಅನಿವಾರ್ಯವಾಗಿ…
ಬೆಂಗಳೂರು: ಐಪಿಎಲ್ 2024 ರಲ್ಲಿ ಆರ್ ಸಿಬಿ ಹಾಗೂ ಸಿಎಸ್ ಕೆ ವಿರುದ್ಧದ ಕಾಳಗ ವೀಕ್ಷಿಸಲು ಆರ್ ಸಿಬಿ ಮಹಿಳಾ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸಿದ್ದು, ವಿಶೇಷ ಆಕರ್ಷಣೆಯಾಗಿತ್ತು. ಈ ವರ್ಷ ಡಬ್ಲ್ಯೂ ಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಮಹಿಳಾ ತಂಡ ಕಪ್ ಗೆದ್ದು ಬೀಗಿತ್ತು. ಅದರಂತೆ ಈ ಬಾರಿ ಪುರುಷರ ತಂಡ ಕೂಡ ಕಪ್ ಗೆಲ್ಲಲಿದೆ ಎನ್ನುವ ನಿರೀಕ್ಷೆ ಮೂಡಿದೆ. ತಮ್ಮ ಗೆಲುವಿನ ನಂತೆ ಇದೀಗ ಪುರುಷರ ತಂಡಕ್ಕೆ ಸ್ಪೂರ್ತಿ ತುಂಬಲು ಸ್ಮ್ರತಿ ಮಂಧನ ನೇತೃತ್ವದ ಆರ್ ಸಿಬಿ ಮಹಿಳೆಯರ ಪಡೆ ಚಿನ್ನಸ್ವಾಮಿ ಮೈದಾನಕ್ಕೆ ಆಗಮಿಸಿದರು. ವಿಶೇಷವೆಂದರೆ ಇವರ ಜೊತೆಗೆ ಡೆಲ್ಲಿ ಮಹಿಳಾ ತಂಡದ ಜೆಮಿಮಾ ರೊಡ್ರಿಗಸ್ ಕೂಡಾ ಆರ್ ಸಿಬಿಗೆ ಚಿಯರ್ ಅಪ್ ಮಾಡಿದ್ದಾರೆ. ಈ ಫೋಟೋಗಳನ್ನು ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಸ್ಮ್ರತಿ ಮಂಧನ ಕನ್ನಡ ಭಾಷೆಯಲ್ಲಿರುವ ಆರ್ ಸಿಬಿ ಧ್ಯೇಯ ಗೀತೆಯನ್ನೂ ಪ್ರಕಟಿಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ತುಮಕೂರು: ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಾನಕ್ಕೆ ಇನ್ಫೋಸಿಸ್ ಮುಖ್ಯಸ್ಥೆ ಭೇಟಿ ನೀಡಿದ್ದಾರೆ. ಸುಧಾ ಮೂರ್ತಿ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಕ್ಷೇತ್ರಕ್ಕೆ ಸಂಬಂಧಿಕರೊಂದಿಗೆ ಆಗಮಿಸಿ ಮಹಾಲಕ್ಷ್ಮಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಅವರು ಸಾಮಾನ್ಯರಂತೆ ಬಂದು ಮಹಾಲಕ್ಷ್ಮಿ ತಾಯಿಗೆ ಪೂಜೆ ಸಲ್ಲಿಸಿದ್ದು, ಇದಾದ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಕೆಲಕಾಲ ಚರ್ಚೆ ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅವರಿಗೆ ಸನ್ಮಾನ ಮಾಡಲಾಯಿತು. ಸುಧಾಮೂರ್ತಿಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ಮುಖಂಡರು ಹಾಗೂ ಸದಸ್ಯರು ಸಾಥ್ ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. 4–5 ನೇ ವರ್ಷದ ಮಕ್ಕಳಿಗಾಗಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರವು ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್ ಕೆಜಿ, ಯುಕೆಜಿಯ ಹಾಗೂ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ತರಗತಿಗಳನ್ನು ನಡೆಸಲು ಮುಂದಾಗಿದೆ ಎನ್ನಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್ ಕೆಜಿ ಹಾಗೂ ಯುಕೆಜಿಯ ತರಗತಿಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಪ್ರಕಾರ ಆರಂಭಗೊಳ್ಳುತ್ತಿದ್ದು, ಪಾಲಕರು ಇದರ ಸದುಪಯೋಗ ಶಿಕ್ಷಣ ಇಲಾಖೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಹೆಚ್ಚಿದೆ. ಪ್ರಜ್ವಲ್ ರೇವಣ್ಣ ವಿರುದ್ಧ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಬಂಧನ ವಾರಂಟ್ ಹೊರಡಿಸಲಾಗಿದೆ. ರೇವಣ್ಣ ವಿರುದ್ಧ ಈಗಾಗಲೇ ಹೊರಡಿಸಲಾಗಿರುವ ಲುಕ್ ಔಟ್ ನೋಟಿಸ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಗಳ ಬಗ್ಗೆಯೂ ಎಸ್ ಐಟಿ ನ್ಯಾಯಾಲಯಕ್ಕೆ ತಿಳಿಸಿದ್ದು, ಮೂಲ ಚಾರ್ಜ್ ಶೀಟ್ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಎಸ್ ಐಟಿ ಸಲ್ಲಿಕೆ ಆಧಾರದ ಮೇಲೆ ನ್ಯಾಯಾಲಯ ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯ ಸರ್ಕಾರವು ಮದ್ಯದ ದರದಲ್ಲಿ ಮತ್ತೆ ಏರಿಕೆ ಮಾಡಲು ಮುಂದಾಗಿದ್ದು ಪ್ರಿಯರಿಗೆ ಶಾಕ್ ನೀಡಲು ತಯಾರಿ ನಡೆಸಿದೆ. ಆದರೆ ಅಚ್ಚರಿ ಏನಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಆಗುವ ವೇಳೆಗೆ ಸರ್ಕಾರ 3 ಸಲ ಬಿಯರ್ ದರ ಏರಿಕೆ ಮಾಡಿ ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿದೆ. 2023 ರ ವಿಧಾನಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈಗಾಗಲೇ ಮೂರು ಬಾರಿ ಬಿಯರ್ ಬೆಲೆಯನ್ನು ಹೆಚ್ಚಿಸಿದೆ. ಆರಂಭದಲ್ಲಿ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ನಂತರ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 185 ರಿಂದ ಶೇ.195ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಬಿಯರ್ ಬೆಲೆಗಳು ಪ್ರತಿ ಬಾಟಲಿಗೆ ರೂ 8 ರಿಂದ 15 ರೂಪಾಯಿಯಷ್ಟು ಏರಿಕೆಯಾಯಿತು. ಕಳೆದ ಏಳೆಂಟು ತಿಂಗಳುಗಳಲ್ಲಿ ಬಿಯರ್ ಬೆಲೆಯು ಪ್ರತಿ ಬಾಟಲಿಗೆ ಸುಮಾರು 40 ರೂ.ಗಳಷ್ಟು ಏರಿಕೆಯಾಗಿದೆ. ಅಂದಹಾಗೆ, ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಬಿಕ್ಕಟ್ಟು…
ಪಾವಗಡ: ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂದಿಸಿದ ಎಲ್ಲಾ ವೈದ್ಯಕೀಯ ಸೇವೆಗಳನ್ನು, ಸಮಾಜ ಸೇವಾ ಸಂಸ್ಥೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರು ಒಂದೇ ಸೂರಿನಡಿ ಸಿಗುವಂತೆ ಮಾಡಿ ಗ್ರಾಮೀಣ ಜನರಿಗೆ ಅರೋಗ್ಯ ಮೇಳವನ್ನು ನಡಿಸುತ್ತಿರುವುದು ಉಪಯೋಗಕಾರಿ ಸೇವಾ ಕಾರ್ಯ ಎಂದು ಸ್ಥಳೀಯ ಮುಖಂಡರಾದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಲ್. ಎಸ್. ನರಸರೆಡ್ಡಿ ಹೇಳಿದರು. ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಹೆಲ್ಪ್ ಸೊಸೈಟಿ ಪಾವಗಡ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಅರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಕರಾದ ಸಣ್ಣರಾಮರೆಡ್ಡಿ ಮಾತನಾಡುತ್ತ ಇಂತಹ ಅರೋಗ್ಯ ಮೇಳದಿಂದ ಆರ್ಥಿಕವಾಗಿ ಆಶಕ್ತ ರಗಿರುವವರಿಗೆ ಪ್ರಯೋಜನವಾಗಲಿದೆ ಎಂದರು. ಆಸರೆ ಫೌಂಡೇಶನ್ ಸದಸ್ಯರಾದ ಅಮಿಲಿನೇನಿ ನರಸಿಂಹಮೂರ್ತಿ ಮಾತನಾಡುತ್ತ ದೈನಂದಿನ ಬದುಕಿನ ಒತ್ತಡಗಳು ಹಾಗೂ ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ನಮ್ಮನ್ನು ಕಾಡುತ್ತಿದ್ದು ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ…