Author: admin

ಮಂಡ್ಯದಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ನರ್ಸ್ ಸ್ಫೋಟಕ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಆರೋಪಿಗಳು 25-30 ಸಾವಿರ ರೂ.ಗೆ ಕಂದಮ್ಮಗಳ ಉಸಿರು ನಿಲ್ಲಿಸುತ್ತಿದ್ದರು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಯಾವ ಮಗು ಅನ್ನುವುದನ್ನು ಪತ್ತೆ ಹಚ್ಚಿ ಆರೋಪಿಗಳು ಹೇಳುತ್ತಿದ್ದರು. ಹೆಣ್ಣು ಮಗು ಅಂತ ಕಂಡ ಕೂಡಲೇ ಅದನ್ನು ತಿಳಿಸುತ್ತಿದ್ದರು. ಹೆಣ್ಣು ಮಗು ಬಗ್ಗೆ ನಿರಾಸಕ್ತಿಯಿದ್ರೆ ಭ್ರೂಣ ಹತ್ಯೆ ಮಾಡ್ತಿದ್ದರು ಎಂದು ವಿಚಾರಣೆ ವೇಳೆ ಕರಾಳ ದಂಧೆಯ ಬಗ್ಗೆ ಬಂಧಿತ ನರ್ಸ್ ಬಾಯ್ಬಿಟ್ಟಿದ್ದಾರೆ. ಸ್ಕಾನಿಂಗ್ ಸೆಂಟರ್​ ಗಳಿಗೆ ಬರುವ ಗರ್ಭಿಣಿಯರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಎರಡನೇ ಮಗುವಿನ ಸ್ಕ್ಯಾನಿಂಗ್​ ಗೆ ಬಂದವರಿಗೆ ಈ ರೀತಿಯಾಗಿ ಮಾಡಲಾಗುತ್ತಿತ್ತು. ಹೆಣ್ಣು ಮಗು ಬಗ್ಗೆ ನಿರಾಸಕ್ತಿ ತೋರಿಸಿದ್ರೆ ಭ್ರೂಣ ಲಿಂಗ ಪರೀಕ್ಷೆ ಮಾಹಿತಿ ನೀಡುತ್ತಿದ್ದರು. ಪ್ಲಾನ್ ಮಾಡಿ ತಂತ್ರ ರೂಪಿಸುತ್ತಿದ್ದರು. ಒಪ್ಪಿಕೊಂಡ್ರೆ ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸಲಾಗುತ್ತಿತ್ತು. ಹೆಣ್ಣು ಭ್ರೂಣ ಎಂದು ಖಚಿತವಾದ್ರೆ ಪಾಂಡವಪುರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಿ ಬಳಿಕ ಸರ್ಕಾರಿ ಹೆಲ್ತ್…

Read More

ಫ್ರಾನ್ಸ್‌ ನಲ್ಲಿ ನಡೆಯುತ್ತಿರುವ 2024ರ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದಿದ್ದಾರೆ. ನೇರಳೆ ಬಣ್ಣದ ಕಾರ್ಡೆಲಿಯಾ ಜಂಪ್‌ಸೂಟ್​ ದಿರಿಸಿನಲ್ಲಿ ನಟಿ ಬೆಕ್ಕಿನ ನಡಿಗೆಯಲ್ಲಿ ಮಿಂಚಿದ್ದಾರೆ. ಕೇನ್ಸ್‌ ಗೆ ಹೊರಡುವ ಮೊದಲು ಶೋಭಿತಾ ಧೂಳಿಪಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಫೋಟೋಸ್ ​ಗೆ ಮನೋಹರವಾದ ಪೋಸ್ ನೀಡಿದರು. ಅಲ್ಲಿಂದ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶ ಪಡೆದರು. ನೇರಳೆ ಬಣ್ಣದ ಸುಂದರ ದಿರಿಸಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು. ಶೋಭಿತಾ ಧೂಳಿಪಾಲ ಧರಿಸಿದ್ದ ಆಕರ್ಷಕವಾದ ಜಂಪ್‌ ಸೂಟ್​ ಅನ್ನು ವಿನ್ಯಾಸಕಿ ನಮ್ರತಾ ಜೋಶಿಪುರ ವಿನ್ಯಾಸ ಮಾಡಿದ್ದಾರೆ. ಇಂತಹದ್ದೇ ದಿರಿಸನ್ನು ಕಳೆದ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್‌ ನಲ್ಲಿ ನಟಿ ಅಥಿಯಾ ಶೆಟ್ಟಿ ಪ್ರದರ್ಶಿಸಿದ್ದರು. ಈ ಉಡುಪಿನ ಬೆಲೆ 1.8 ಲಕ್ಷ ರೂಪಾಯಿ ಆಗಿದೆ. ಕ್ಯಾನೆಸ್​ ಫಿಲ್ಮ್​ ಫೆಸ್ಟ್​ ನಲ್ಲಿ ಶೋಭಿತಾ ಮ್ಯಾಗ್ನಮ್ ಇಂಡಿಯಾ ಐಸ್ ಕ್ರೀಮ್ ಬ್ರ್ಯಾಂಡ್​ ಅನ್ನು…

Read More

ಬೆಂಗಳೂರು: ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರೋ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ. ಮನೋಜ್, ತರುಣ್, ಕಿರಣ್ ಸೇರಿ ಓರ್ವ ಅಪ್ರಾಪ್ತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೋಜ್ ಎಂಬಾತ ತಿಂಗಳ ಹಿಂದೆ ವಿಜಯ್ ಮೊಬೈಲ್ ಕಸಿದು ವಾಪಸ್ ಕೊಟ್ಟು ತಮಾಷೆ ಮಾಡಿದ್ದನಂತೆ. ಇದಾದ ಬಳಿಕ ಕಳೆದ ವಾರ ಒಂದೇ ಬಾರ್​ ನಲ್ಲಿ ಮದ್ಯಪಾನ ಮಾಡಲು ಮನೋಜ್ ಮತ್ತು ವಿಜಯ್ ಸೇರಿದ್ದರು. ಈ ವೇಳೆ ವಿಜಯ್ ಮೊಬೈಲ್ ಕಸಿದುಕೊಂಡಿದ್ದ ವಿಚಾರ ಪ್ರಸ್ತಾಪಿಸಿ ತಮಾಷೆ ಮಾಡಿದ್ದಾನಂತೆ. ಇದೇ ವಿಚಾರಕ್ಕೆ ಕೋಪಗೊಂಡ ಮನೋಜ್ ಮೂವರನ್ನ ಕರೆದುಕೊಂಡು ಬಂದು ತನಗೆ ಅವಮಾನ ಮಾಡ್ತೀಯ ಅಂತ ಮಚ್ಚಿನಿಂದ ವಿಜಯ್​ ಮೇಲೆ ಮನೋಜ್ ಹಲ್ಲೆ ಮಾಡಿದ್ದಾನಂತೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾನೆ. ವಿಜಯ್ ದೂರಿನ ಆಧಾರದ ಮೇಲೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಅರೆಸ್ಟ್​ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ತುಮಕೂರು: ರಸ್ತೆ ಕಾಮಗಾರಿಗೆ ಪೂರ್ವ ನಿಯೋಜಿತವಾಗಿ ಸುರಕ್ಷತೆ ಕೈಗೊಳ್ಳದ ಕಾರಣ, ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವ ಘಟನೆ ತುಮಕೂರು ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೈರೇನಹಳ್ಳಿಯಲ್ಲಿ ಹಾದು ಗೌರಿಬಿದನೂರು ಕೊರಟಗೆರೆ ಹೋಗುವ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಮನೆಯೊಳಗೆ ಹರಿದ ಚರಂಡಿ ನೀರಿನಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯೊಳಗಿದ್ದ ಅಪಾರ ಪ್ರಮಾಣ ಧವಸ ಧಾನ್ಯ, ದಿನಬಳಕೆ ವಸ್ತುಗಳು ನೀರು ಪಾಲಾಗಿದೆ. ಹೆದ್ದಾರಿ ಎತ್ತರ ಹೆಚ್ಚಿಸಿ, ಚರಂಡಿ ಕಾಮಗಾರಿ ಪೂರ್ಣಗೊಳಿಸದೇ ಇರೋದೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸ್ಥಳದಲ್ಲಿ ರಸ್ತೆ ಕುಸಿತದಿಂದ ಸಿಎನ್ ಜಿ ವಾಹನ ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ಅಶ್ಲೀಲ ವೀಡಿಯೋ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ತಲೆ ಮರೆಸಿಕೊಂಡಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಶೇಷ ತನಿಖಾ ದಳ (SIT) ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಜರ್ಮನಿಯಿಂದ ಲಂಡನ್ ಗೆ ತೆರಳಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ. ಸದ್ಯ ಇಂಗ್ಲೆಂಡ್ ನಲ್ಲಿರುವ ಭಾರತೀಯ ಉದ್ಯಮಿಯ ಸಹಾಯ ಪಡೆದುಕೊಂಡು ಪ್ರಜ್ವಲ್ ರೇವಣ್ಣ ಮತ್ತು ಅವರ ಇಬ್ಬರು ಗೆಳೆಯರು ರೈಲು ಮೂಲಕ ಜರ್ಮನಿಯ ಮ್ಯೂನಿಚ್ ಮೂಲಕ ಲಂಡನ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಸದ್ಯ ದುಬೈ ಮೂಲದ ಓರ್ವ ಹಾಗೂ ಬೆಂಗಳೂರು ಮೂಲದ ಸ್ನೇಹಿತರು ಪ್ರಜ್ವಲ್ ಜೊತೆಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರೂ ಕೂಡ ಪ್ರಜ್ವಲ್ ಜೊತೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಈಗಾಗಲೇ ಎರಡು ಸಲ ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ಹೇಳಲಾಗಿತ್ತು. ಸದ್ಯ ಪ್ರಜ್ವಲ್ ಕುಟುಂಬಸ್ಥರಿಂದಲೇ ವಾಪಸ್…

Read More

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆ ಸಂಬಂಧ, ಭಾರತ ಚುನಾವಣಾ ಆಯೋಗವು ಹಿರಿಯ ಐ.ಎ.ಎಸ್. ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನು ನೇಮಕ ಮಾಡಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಅನಿಲ್ ಕುಮಾರ್ ಟಿ.ಕೆ. (ಐಎಎಸ್) ಹಾಗೂ ಹರ್ಷ ಗುಪ್ತ (ಐಎಎಸ್) ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದ್ದು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ರುದ್ರೇಶ್.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ. ಸುದರ್ಶನ್ ಅವರು ಸಹಾಯಕ ಅಧಿಕಾರಿಗಳಾಗಿರುತ್ತಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗೆ ಡಾ. ರವಿಶಂಕರ್ ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದ್ದು, ಮೈಸೂರಿನ ಅಬಕಾರಿ ಉಪ ಆಯುಕ್ತರಾದ ಎಸ್.ನಾಗರಾಜಪ್ಪ ಅವರು ಸಹಾಯಕ ಅಧಿಕಾರಿಗಳಾಗಿರುತ್ತಾರೆ. ಮೂರು ಕ್ಷೇತ್ರಗಳ ಚುನಾವಣಾ ವೀಕ್ಷಕರು ಈಗಾಗಲೇ ಚುನಾವಣಾ ಕೆಲಸ-ಕಾರ್ಯಗಳ ವೀಕ್ಷಣೆ ನಡೆಸುತ್ತಿದ್ದು, ಸದರಿ ಚುನಾವಣಾ ಚುನಾವಣಾ ವೀಕ್ಷಕರನ್ನು…

Read More

ತುಮಕೂರು: ಜಿಲ್ಲೆಯ ವಿವಿಧಡೆ ಕಳೆದ ರಾತ್ರಿ ಭಾರಿ ಮಳೆಯಾಗಿದ್ದು ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕಿನಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ವೇದಾವತಿ ನದಿ ನೀರಿನ ಹರಿವು ಹೆಚ್ಚಾಗಿದೆ.  ನೆರೆ ಜಿಲ್ಲೆಯ ಚಿತ್ರದುರ್ಗದ ಹೊಸದುರ್ಗ ದಲ್ಲಿ ಹರಿಯುವ ವೇದಾವತಿ ನದಿ ನೀರು ವಿವಿ ಸಾಗರ ಸೇರುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸೈಜ್ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ಬಳಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕೋರೆ ಕಾರ್ಮಿಕರಾದ ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿಗಳಾದ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃತಪಟ್ಟಿದ್ದಾರೆ. ಕಾರ್ಕಳ ಪುರಸಭೆಯ ಮಾಜಿ ಸದಸ್ಯರೊಬ್ಬರ ಮಾಲೀಕತ್ವದ ನಿಟ್ಟೆಯ ಭ್ರಾಮರಿ ಕ್ರಾಸ್ ಬಳಿಯ ಕಲ್ಲು ಕೋರೆಯಲ್ಲಿ ಶಿಲೆ ಕಲ್ಲು ಲೋಡ್ ಮಾಡಿಕೊಂಡು ಮಂಗಳೂರಿನ ಕಡೆ ತೆರಳುತ್ತಿದ್ದಾಗ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಭೀಕರ ಸಂಭವಿಸಿದೆ. ಅಪಘಾತದ ಸಂದರ್ಭದಲ್ಲಿ ಕಾರ್ಮಿಕರು ಹಿಂಬದಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ. ಲಾರಿ ಪಟ್ಟಿಯಾಗುತ್ತಿದ್ದಂತೆಯೇ ಕಲ್ಲುಗಳು ಕಾರ್ಮಿಕರಾದ ಕರಿಯಪ್ಪ ಮತ್ತು ನರಿಯಪ್ಪ ಎಂಬವರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ತಂಡವು ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ಈ ಸಲ ಕಪ್‌ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ ಸಿಬಿ 27 ರನ್ ‌ಗಳ ಗೆಲುವು ದಾಖಲಿಸಿತು. ಒಂದು ವೇಳೆ ಪಂದ್ಯ ಸೋತು 201 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್‌ ಸಿಬಿ ಬೌಲರ್‌ ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್‌ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್‌ಗಳ ಅಂತರದಲ್ಲಿ ಗಾಯಕ್‌ವಾಡ್‌ ಪಡೆ ಪ್ಲೇ-ಆಫ್‌ನಿಂದ ಮುಗ್ಗರಿಸಿತು. ಬೆಂಗಳೂರು ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಪಂದ್ಯ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿತು. ತವರಿನಲ್ಲೇ ಆರ್‌ ಸಿಬಿ ಅಭಿಮಾನಿಗಳಿಗೆ ಭರ್ಜರಿ ಗೆಲುವಿನ ಗಿಫ್ಟ್‌ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌…

Read More

ನವದೆಹಲಿ: ಪ್ರಧಾನಿ ಮೋದಿ ಹಾಗೂ ಅವರ ಸಚಿವರು ವಿಮಾನಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾದರೆ, ದೇಶಾದ್ಯಂತ ಮಹಿಳೆಯರು ಯಾಕೆ ಉಚಿತ ಬಸ್‌ ಪ್ರಯಾಣ ಮಾಡಬಾರದು ಎಂದು ನವದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮಧ್ಯಂತರ ಜಾಮೀನಿನ ಮೇಲೆ ಕೇಜ್ರಿವಾಲ್‌ ಹೊರಗಿದ್ದಾರೆ. ಉಚಿತ ಬಸ್‌ ಪ್ರಯಾಣ ಕುರಿತ ಮೋದಿ ಹೇಳಿಕೆಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಸಿಎಂ ಕೇಜ್ರಿವಾಲ್‌ ಟಾಂಗ್‌ ಕೊಟ್ಟಿದ್ದಾರೆ. ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದನ್ನು ಪ್ರಧಾನಿ ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. ದೇಶಾದ್ಯಂತ ಉಚಿತ ಬಸ್ ಪ್ರಯಾಣವನ್ನು ಪರಿಚಯಿಸಬೇಕೆಂದು ಮಹಿಳೆಯರು ಬಯಸುತ್ತಾರೆ.  ಆದರೆ ಪ್ರಧಾನಿ ಮತ್ತು ಅವರ ಮಂತ್ರಿಗಳು ಉಚಿತ ವಿಮಾನ ಪ್ರಯಾಣವನ್ನು ಪಡೆಯಬಹುದಾದರೆ, ದೇಶಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಏಕೆ ಪಡೆಯಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರ ಸಂದರ್ಶನದ ವೀಡಿಯೋ ಕ್ಲಿಪ್ ಅನ್ನು ನವದೆಹಲಿ ಸಿಎಂ ಹಂಚಿಕೊಂಡಿದ್ದಾರೆ. ಉಚಿತ ಬಸ್ ಪ್ರಯಾಣ ಕಲ್ಪಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಹೇಳಲಾಗಿದೆ. ನಮ್ಮತುಮಕೂರಿನ…

Read More