Author: admin

ನ್ಯಾಯಾಲಯದ ಆದೇಶದಂತೆ ಪತ್ನಿ ಹಾಗೂ ವಿಶೇಷಚೇತನ ಮಗುವಿನ ಜೀವನೋಪಾಯಕ್ಕೆ ನಿಯಮಿತವಾಗಿ ಜೀವನಾಂಶ ಪಾವತಿ ಮಾಡದ ಪತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ. ಸಾಮಾನ್ಯವಾಗಿ ನ್ಯಾಯಾಲಯಗಳು ಜೀವನಾಂಶ ಪಾವತಿಸುವಂತೆ ಆದೇಶ ನೀಡುತ್ತವೆ. ಪಾವತಿ ಮಾಡದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ, ಈ ರೀತಿಯ ಜೀವನಾಂಶ ಪಾವತಿಸದ ಪತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿರುವುದು ಇದೇ ಮೊದಲು. ಇನ್ನು ಮುಂದೆ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿರುವವರು ಜೀವನಾಂಶ ಪಾವತಿಯಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದು. ಹೈಕೋರ್ಟ್ ಆದೇಶದಿಂದಾಗಿ ಪತಿ, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ 1,276 ಚದರ ಅಡಿ ಜಾಗದ ಆಸ್ತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗಡೆ ಅವರಿದ್ದ ವಿಭಾಗೀಯ ಪೀಠ ಮಾಸಿಕ ಜೀವನಾಂಶವಾಗಿ ತಲಾ 5,000 ರೂ. ಪಾವತಿಸುವಂತೆ ಸೂಚನೆ ನೀಡಿದೆ. ಪತಿಯ 1,276 ಚದರ ಅಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತ್ನಿಯು ಇತರೆ ಆಸ್ತಿ ವಿವರಗಳನ್ನು ಒದಗಿಸಿದರೆ, ಅದರಲ್ಲಿಯೂ ಭಾಗಿದಾರರಾಗಿರುತ್ತಾರೆ,”…

Read More

ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಬೈಕ್ ಸವಾರಿ ಮಾಡಿ ಹುಚ್ಚಾಟ ಮೆರೆದಿದ್ದ ಯುವಕನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾವಲ್ ಬೈರಸಂದ್ರ ಎಂ.ವಿ. ಲೇಔಟ್‌ ನ ಸಿಲಂಬರಸನ್, ಮೇ 17ರಂದು ರಾತ್ರಿ ತನ್ನ ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯಲಹಂಕದಿಂದ ಹೆಬ್ಬಾಳ ಕಡೆಗೆ ಬೈಕ್ ಚಾಲನೆ ಮಾಡಿಕೊಂಡು ಹೋಗಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ವಾಹನ ಸವಾರರು ಸಿಲಂಬರಸನ್ ಮತ್ತು ಆತನ ಪ್ರೇಯಸಿಯ ಹುಚ್ಚಾಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅಜಾಗರೂಕ ಚಾಲನೆ ಮತ್ತು ಅನುಚಿತ ವರ್ತನೆಗಾಗಿ ಬೈಕ್ ಸವಾರ ಸಿಲಂಬರಸನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದರು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆ ಕುರಿತು ನೆಟ್ಟಿಗರು ಚರ್ಚಿಸಿದ್ದರು. ಸಿಲಂಬರಸನ್ ಮತ್ತು ಆತನ ಪ್ರೇಯಸಿ ಹೆಲ್ಮೆಟ್ ಧರಿಸದೆ ಬೈಕ್‌ ನಲ್ಲಿ ಜಾಲಿ ರೈಡ್ ಮಾಡಿದ್ದರು. ಈ ವೀಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಿಲಂಬರಸನ್ ನನ್ನು…

Read More

ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ RSS ನಿಷೇಧ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ(J P Nadda), “ಬಿಜೆಪಿ, RSS ಒಂದನ್ನೊಂದು ಅವಲಂಬಿಸಿಯೇ ಇರಬೇಕೆಂದೇನಿಲ್ಲ. ಸ್ವತಂತ್ರವಾಗಿ ಚಿಂತಿಸುವ ರೀತಿ ಎರಡೂ ಬೆಳೆದು ನಿಂತಿದೆ” ಎಂದು ಹೇಳಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಉದ್ಧವ್ ಠಾಕ್ರೆ ಅವರು ‘ಶಿವಸೇನೆಯನ್ನು ಬಳಸಿ ಬಿಸಾಡಲು ಯತ್ನಿಸಿದ ರೀತಿಯ ಆಟವನ್ನು ಪ್ರಧಾನಿ ಮೋದಿಯವರು ಮುಂದಿನ ದಿನಗಳಲ್ಲಿ RSSನ ಜೊತೆಗೂ ಆಡಲಿದ್ದಾರೆ. ಹೀಗಾಗಿ ಮುಂದೆ ಮೋದಿ ಅಧಿಕಾರಕ್ಕೆ ಬಂದರೆ RSS ಬ್ಯಾನ್ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ RSS ನಿಷೇಧಿಸಿದ್ದರು. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ RSS ನಿಷೇಧಿಸುವುದು ಖಚಿತವೆಂದು ಹೇಳಿದ್ದಾರೆ. ಒಟ್ಟಾರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಕಾರ್ಯಕರ್ತರಿಗೆ ಅಪಾಯ…

Read More

ಬೆಂಗಳೂರು: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪೊಲೀಸರಿಂದ ಬಿಗಿಭದ್ರತೆ ಒದಗಿಸಲಾಗಿದೆ. ಪೆನ್ ಡ್ರೈವ್ ವಿಚಾರ ಮಾತನಾಡುವಾಗ ಮಾಜಿ ಸಂಸದರು ಜೆಡಿಎಸ್ ವರಿಷ್ಠರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ತಡರಾತ್ರಿ ಕಾರಿನಲ್ಲಿ ಬಂದ ಐದಾರು ಮಂದಿಯಿಂದ ಈ ಯತ್ನ ನಡೆದಿದೆ. ಪೊಲೀಸರು ಕಂಡು ಮನೆ ಮುಂದೆ ಮೊಟ್ಟೆ ಎಸೆದು ಪರಾರಿಯಾಗಿದ್ದಾರೆ. ಈ ನಡುವೆ ಪೊಲೀಸರ ಕಣ್ತಪ್ಪಿಸಿ ಅದಾಗಲೇ ಐದಾರು ಮೊಟ್ಟೆ ಎಸೆದಿದ್ದಾರೆ. ಸದ್ಯ ಮೊಟ್ಟೆ ಎಸೆಯಲು ಯತ್ನಿಸಿ ಪರಾರಿಯಾದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಮೊಟ್ಟೆ ಎಸೆಯಲು ಯತ್ನಿಸಿದವರಿಗೆ ಬಲೆ ಬೀಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಂದು ಮಾಜಿ ಸಚಿವ ರೇವಣ್ಣ ಕುರಿತ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.  42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಗೆ ಮತ್ತೆ ಜೈಲಾ ಅಥವಾ ಬೇಲಾ ಅನ್ನೋ ಕುತೂಹಲ ಮೂಡಿಸಿದೆ. 47 ವರ್ಷದ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೆಲವು ಅಶ್ಲೀಲ ವೀಡಿಯೊಗಳು ಹಾಸನ ಜಿಲ್ಲೆಯಾದ್ಯಂತ ಹರಿದಾಡಿದ್ದವು. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ ಬಳಿಕ ತಲೆಮರೆಸಿಕೊಂಡಿದ್ದಾರೆ. ಶಾಸಕರ ನಿವಾಸದಲ್ಲಿ ತಂದೆ ಮತ್ತು ಮಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಹಾಸನ ಅಶ್ಲೀಲ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದೇವರಾಜೇಗೌಡ ಎಸ್‌ಐಟಿ ಕಸ್ಟಡಿಯಲ್ಲಿರುವಾಗಲೇ ಹೊಸ ಆಡಿಯೋ ಸದ್ದು ಮಾಡಿದೆ.…

Read More

ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ಎದುರಾಗಿದ್ದು, ಚಿಕನ್ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ. ಇಷ್ಟು ದಿನ ತರಕಾರಿಗಳ ಬೆಲೆ‌ ಏರಿಕೆಯಾಗಿತ್ತು. ಇದೀಗ ‌ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್​ಗೆ 380 ರೂ ಆಗಿದೆ. ಕೆಜಿ ಮಟನ್​ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ‌‌ ಮಾಡಲಾಗಿದೆ. ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ‌‌ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ.‌ ಅಲ್ಲದೆ ಮದುವೆ ಸೀಜನ್​ ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ. ತರಕಾರಿ ಬೆಲೆ ಹೆಚ್ಚಾಗಿದೆ. ಇದೀಗ ಮಾಂಸ‌ದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು…

Read More

ಸಿಂಗಾಪುರದಲ್ಲಿ ಕೋವಿಡ್-19ರ ಹೊಸ ಅಲೆ ಕಾಣಿಸಿಕೊಂಡಿದೆ. ಪರಿಣಾಮ ಒಂದೇ ವಾರದಲ್ಲಿ 25,900 ಸೋಂಕಿನ ಪ್ರಕರಣ ದಾಖಲಾಗಿದ್ದು, ಮತ್ತೆ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ಓಂಗ್ ಯೆಕುಂಗ್ ಜನತೆಗೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್ ಸೋಂಕಿನ ಅಲೆ ಆರಂಭಿಕ ಹಂತದಲ್ಲಿದ್ದು ಸ್ಥಿರವಾಗಿ ಏರುತ್ತಿದೆ. ಮುಂದಿನ 2ರಿಂದ 4 ವಾರಗಳಲ್ಲಿ, ಅಂದರೆ ಜೂನ್ ಅಂತ್ಯದ ವೇಳೆಗೆ ಅಲೆ ಗರಿಷ್ಟ ಮಟ್ಟ ತಲುಪಲಿದೆ ಎಂದು ಓಂಗ್ ಎಚ್ಚರಿಕೆ ನೀಡಿದ್ದಾರೆ. ಮೇ 5ರಿಂದ 11ರವರೆಗಿನ ವಾರದಲ್ಲಿ 25,900 ಕೋವಿಡ್-19 ಸೋಂಕಿನ ಪ್ರಕರಣ ದಾಖಲಾಗಿದ್ದರೆ ಅದಕ್ಕಿಂತ ಹಿಂದಿನ ವಾರದಲ್ಲಿ 13,700ರಷ್ಟಿತ್ತು. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಸರಾಸರಿ 250ನ್ನು ದಾಟಿದ್ದು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ದಾಖಲಾಗುವ ದೈನಂದಿನ ಸರಾಸರಿ ಪ್ರಕರಣ 3 ಆಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಹಾಸಿಗೆಗಳನ್ನು ಕಾಯ್ದಿರಿಸುವ ಉದ್ದೇಶದಿಂದ ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಹಾಗೂ ಸೂಕ್ತ ರೋಗಿಗಳನ್ನು ಮನೆಗೆ ವಾಪಾಸು ಕಳುಹಿಸಿ ಸಂಚಾರಿ ಚಿಕಿತ್ಸಾಲಯದ ಸೇವೆ ಮುಂದುವರಿಸುವಂತೆ ಸೂಚಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ. ಕೋವಿಡ್-19 ಸೋಂಕಿನ…

Read More

ಪ್ರಸ್ತಾವಿತ ಸಂಸತ್ ಸುಧಾರಣೆ ಮಸೂದೆಯ ಬಗ್ಗೆ ತೈವಾನ್ ‍ನ ಸಂಸದರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಸಂಸದರೊಬ್ಬರು ಮಸೂದೆಯ ಪ್ರತಿಯನ್ನು ಅಧಿಕಾರಿಗಳ ಕೈಯಿಂದ ಎಳೆದುಕೊಂಡು ಸದನದ ಹೊರಗೆ ಓಡಿಹೋದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚುನಾಯಿತ ಅಧ್ಯಕ್ಷ ಲಾಯ್ ಚಿಂಗ್‍ ಟೆ ಶಾಸಕಾಂಗ ಬಹುಮತವಿಲ್ಲದೆ ಅಧಿಕಾರ ಸ್ವೀಕರಿಸುವ ಕೆಲವೇ ದಿನಗಳ ಮೊದಲು ತೈವಾನ್ ಸಂಸತ್ ಈ ಗದ್ದಲದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸರಕಾರದ ಮೇಲೆ ನಿಗಾ ವಹಿಸಲು ಸಂಸತ್‍ ಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ವಿರೋಧ ಪಕ್ಷಗಳ ಉದ್ದೇಶವಾಗಿದೆ. ಮಸೂದೆಯನ್ನು ಮತಕ್ಕೆ ಹಾಕುವುದಕ್ಕೂ ಮೊದಲೇ ಸದನದ ಹೊರಗೆ ಕೆಲವು ಸಂಸದರ ನಡುವೆ ವಾಗ್ಯುದ್ದ, ನೂಕಾಟ, ಪರಸ್ಪರರನ್ನು ಹಿಡಿದೆಳೆಯುವುದು ನಡೆದಿತ್ತು. ಬಳಿಕ ಸದನದ ಒಳಗೂ ಈ ಸನ್ನಿವೇಶ ಪುನರಾವರ್ತನೆಗೊಂಡಿದ್ದು ಸ್ಪೀಕರ್ ಆಸನದ ಸುತ್ತ ಸೇರಿದ ಕೆಲವು ಸಂಸದರು ಮಸೂದೆಯನ್ನು ವಿರೋಧಿಸಿ ಘೋಷಣೆ ಕೂಗಿದರೆ, ಇನ್ನು ಕೆಲವರು ಮೇಜಿನ ಮೇಲೇರಿ ಘೋಷಣೆ ಕೂಗುತ್ತಿದ್ದವರನ್ನು…

Read More

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಇನ್ವರ್ಟರ್ ಬಳಕೆ ಸಾಮಾನ್ಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಪವರ್ ಬ್ಯಾಕಪ್ ಅತ್ಯಗತ್ಯ. ಆದರೆ ಇನ್ವರ್ಟರ್ ಬಳಕೆ ಸಂದರ್ಭದಲ್ಲಿ ಕೆಲವು ನಿರ್ಲಕ್ಷ್ಯವು ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಇನ್ವರ್ಟರ್ ಸ್ಫೋಟಗೊಂಡು ನೆರೆಹೊರೆಯವರು ಗಾಯಗೊಂಡಿರುವ ಹಲವು ಪ್ರಕರಣಗಳು ನಡೆದಿವೆ. ಇನ್ವರ್ಟರ್ ಬ್ಯಾಟರಿಗಳಲ್ಲಿ ಸ್ಫೋಟಗಳು ಅಪರೂಪವಾಗಿದ್ದರೂ, ಸರಿಯಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ ಹಾನಿ ಸಂಭವಿಸಬಹುದು. ಇನ್ವರ್ಟರ್ ಅನ್ನು ಬಳಸುವ ಸರಿಯಾದ ಮಾರ್ಗವು ಇನ್ವರ್ಟರ್ ಸ್ಫೋಟದಂತಹ ಘಟನೆಗಳನ್ನು ತಪ್ಪಿಸಬಹುದು. ಹಾಗಾಗಿ ಇನ್ವರ್ಟರ್ ಬಳಸುವಾಗ ಮಾಡುವ ಕೆಲವು ತಪ್ಪುಗಳ ಬಗ್ಗೆ ಇಲ್ಲಿ ತಿಳಿಯೋಣ. ಇನ್ವರ್ಟರ್ ಓವರ್ ಚಾರ್ಜಿಂಗ್: ಇನ್ವರ್ಟರ್ ಬ್ಯಾಟರಿಯನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಚಾರ್ಜ್ ಮಾಡುವುದು ಅಪಾಯಕಾರಿ.  ಇದನ್ನು ತಪ್ಪಿಸಲು ಬ್ಯಾಟರಿ ತಯಾರಕರ ಚಾರ್ಜಿಂಗ್ ಸೂಚನೆಗಳನ್ನು ಯಾವಾಗಲೂ ಅನುಸರಿಸಿ. ಉತ್ತಮ ಚಾರ್ಜ್ ನಿಯಂತ್ರಕವನ್ನು ಬಳಸಿ. ಕಡಿಮೆ ನೀರಿನ ಮಟ್ಟ: ನಿಮ್ಮ ಬ್ಯಾಟರಿಯು ನೀರಿನ ಮೇಲೆ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಟರಿ ನೀರಿನ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ. ನೀರಿನ ಮಟ್ಟ ಕಡಿಮೆಯಿದ್ದರೆ, ಬ್ಯಾಟರಿ ಪ್ಲೇಟ್‌ಗಳು…

Read More

ಸರಗೂರು: ರಾಜ್ಯದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ರವರು, ಬದುಕಿನ ಹೆಚ್ಚುಕಾಲ ರಾಜಕೀಯದಲ್ಲಿಯೇ ಕಳೆದರು. ಅವರು ನಡೆಸಿದ ಹೋರಾಟಗಳು ದಲಿತರಿಗೆ ಹಾಗೂ ಶೋಷಿತ ಸಮುದಾಯಗಳಿಗೆ ಆಶಾಕಿರಣವಾಗಿತ್ತು. ಶ್ರೀನಿವಾಸ್ ಪ್ರಸಾದ್ ಅವರು ನೇರನುಡಿಗೆ ಹೆಸರಾದವರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲ್ಲೂಕಿನ ಪಟ್ಟಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವನದಲ್ಲಿ ಭಾನುವಾರದಂದು ಕೋಟೆ ಮತ್ತು ಸರಗೂರು ಆದಿಕರ್ನಾಟಕ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ, ಸ್ವಾಭಿಮಾನಿ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ರವರ ನುಡಿ ನಮನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು. ಸ್ವಾಭಿಮಾನಿ ಚಕ್ರವರ್ತಿ ವಿ. ಶ್ರೀನಿವಾಸಪ್ರಸಾದ್ ರವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬಹುದು ಎಂದರು. ಬದುಕಿನ ಕೊನೆಯ ಪಯಣವೇ ಸಾವು. ಹಾಗಾಗಿ ಸಾವಿಗೂ ಅವರು ಮಾಡಿದ ಎಲ್ಲಾ ಸಮುದಾಯ ಕಾರ್ಯಕ್ರಮಗಳು ನಿಲುವು ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದು ಹೇಳಿದರು. ನಗರ ಪಾಲಿಕೆ ಮಾಜಿ ಮಹಾಪೌರರು ಪುರುಷೋತ್ತಮ್…

Read More