Subscribe to Updates
Get the latest creative news from FooBar about art, design and business.
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
- ಸಾಲ ಸೌಲಭ್ಯ: ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
- ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
Author: Ganesh Tumkuru
ಸರಗೂರು: ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ಶರತ್ ಅವರು, ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ ಎಂದು ತಿಳಿಸುತ್ತಾ, ತಾಯಂದಿರು ಹಾಗೂ ಗರ್ಭಿಣಿಯರಿಗೆ ಸ್ತನ್ಯಪಾನದ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು. ನವಜಾತ ಶಿಶುವಿಗೆ ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲುಣಿಸುವುದು ಅತ್ಯಂತ ಅಗತ್ಯವಾಗಿದ್ದು, ಆರಂಭದಲ್ಲಿ ಬರುವ ಹಳದಿ ಬಣ್ಣದ ಹಾಲು (ಕೊಲೊಸ್ಟ್ರಮ್) ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೂಲ್ಯ ಆಹಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು. ಹುಟ್ಟಿದ ಮೊದಲ ಆರು ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು ಹಾಗೂ ಈ ಸಮಯದಲ್ಲಿ ನೀರು, ಜೇನುತುಪ್ಪ ಅಥವಾ ಇತರೆ ಯಾವುದೇ ಆಹಾರಗಳನ್ನು ನೀಡಬಾರದು ಎಂದು ಡಾ. ಶರತ್ ಸ್ಪಷ್ಟಪಡಿಸಿದರು. ಆರು ತಿಂಗಳ ನಂತರ ಪೂರಕ ಆಹಾರ ಆರಂಭಿಸಿದರೂ, ಮಗುವಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು…
ಸರಗೂರು: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ (ಹೆಚ್ಚಿನ ಅಪಾಯದ ಶಿಶುಗಳ ಬೆಳವಣಿಗೆ ಮತ್ತು ಆರೈಕೆ ಕ್ಲಿನಿಕ್) ಅನ್ನು ಗುರುವಾರ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್ (ಯುಸಿಎಲ್ಎ), ಪ್ರೇಮಧಾರ ಫೌಂಡೇಶನ್ (ಅಮೆರಿಕ), ಎಎಸಿ ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಈ ವಿಶೇಷ ಕೇಂದ್ರವನ್ನು ಆರಂಭಿಸಲಾಗಿದೆ. ಕಾರ್ಯಕ್ರಮವನ್ನು ಡಾ. ಸುಪ್ರಿಯಾ ಬಾವಿಶೆಟ್ಟಿ, ಸಮುದಾಯದ ಪೋಷಕ ಪ್ರತಿನಿಧಿ ಕಾವ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಜೈನ್ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ಶ್ರಾಫ್ ಜಂಟಿಯಾಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳ ತಜ್ಞ ಡಾ. ಕುಮಾರ್ ಜಿ.ಎಸ್., “ಮಗುವಿಗೆ ಕನಿಷ್ಠ ಎರಡು ವರ್ಷಗಳ ಕಾಲ ತಾಯಿಯ ಎದೆಹಾಲು ನೀಡುವುದರಿಂದ ಬುದ್ಧಿಶಕ್ತಿ ಹಾಗೂ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ. ನವಜಾತ ಶಿಶುಗಳಲ್ಲಿ ಹುಟ್ಟುವಾಗ ಉಂಟಾಗುವ ಉಸಿರುಗಟ್ಟುವಿಕೆ, ಅಳದಿರುವುದು, ಮೆದುಳಿನ ಸೋಂಕು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವಂತಹ ತೊಂದರೆಗಳನ್ನು ಹೊಸ ತಂತ್ರಜ್ಞಾನದ ನೆರವಿನಿಂದ ಆರಂಭದಲ್ಲೇ…
ಕೊರಟಗೆರೆ: ತಾಲೂಕಿನ ಸಿದ್ದರಬೆಟ್ಟದಲ್ಲಿದ್ದ ಹಳೆಯ ಸ್ನೇಹಿತನನ್ನು ಮಾತನಾಡಿಸಿಕೊಂಡು ಬೈಕ್‌ನಲ್ಲಿ ವಾಪಸ್ ಹಿಂತಿರುಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಅರಣ್ಯ ಇಲಾಖೆ ನರ್ಸರಿ ಸಮೀಪದ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ 17 ವರ್ಷದ ಚೇತನ್ ಎಂಬ ವಿದ್ಯಾರ್ಥಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಜೊತೆಯಲ್ಲಿದ್ದ 17 ವರ್ಷದ ಅಮರೀಶ್ ಹಾಗೂ ಯಶ್ವಂತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ನೇಹಿತನನ್ನು ಭೇಟಿಯಾಗಿ ಸಿದ್ದರಬೆಟ್ಟದಿಂದ ವಾಪಸ್ ಬರುವಾಗ ನರ್ಸರಿ ಬಳಿಯ ತಿರುವಿನಲ್ಲಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮರದ ತುಂಡಿಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ತೋವಿನಕೆರೆ 108 ಆಂಬುಲೆನ್ಸ್ ಸಿಬ್ಬಂದಿ ಉಮಾದೇವಿ ಹಾಗೂ ಶಿವಕುಮಾರ್ ಅವರು ಅಪಘಾತವನ್ನು ಕಂಡು ತಕ್ಷಣವೇ ಗಾಯಾಳುಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.…
ತುಮಕೂರು / ಮಧುಗಿರಿ: ಬಾಡಿಗೆ ಕಾರು ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಅಪರಾಧಿಗೆ ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಮೂಲದ, ಪ್ರಸ್ತುತ ಆನೇಕಲ್ ತಾಲೂಕಿನ ಅತ್ತಿಬೆಲೆಯ ಅಣ್ಣಯ್ಯಪ್ಪ ಲೇಔಟ್ ನಲ್ಲಿ ವಾಸವಿದ್ದ ವೀರೇಂದ್ರ ಪಿ (24) ಶಿಕ್ಷೆಗೆ ಗುರಿಯಾದ ಅಪರಾಧಿ. 2021ರ ಜನವರಿ 29ರ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ನಿಸಾರ್ ಅಹಮದ್ (39) ಅವರು ತಮ್ಮ ಕಾರಿನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಅಪರಾಧಿ ವೀರೇಂದ್ರ, ಕಾರನ್ನು ಕಳವು ಮಾಡಿ, ನಂಬರ್ ಪ್ಲೇಟ್ ಬದಲಾಯಿಸಿ ಮಾರಿ ಬರುವ ಹಣದಲ್ಲಿ ತನ್ನ ಅಕ್ಕನ ಮದುವೆ ಮಾಡಲು ಸಂಚು ರೂಪಿಸಿದ್ದ. ಅದರಂತೆ, ಪ್ರಯಾಣಿಕನ ಸೋಗಿನಲ್ಲಿ ಬಂದ ವೀರೇಂದ್ರ, ಬೆಂಗಳೂರಿನಿಂದ ತುಮಕೂರಿಗೆ ತಲುಪಿಸಲು ₹3,300 ಬಾಡಿಗೆ ಮಾತನಾಡಿ ಕಾರನ್ನೇರಿದ್ದ. ಜ.30ರ ಮಧ್ಯರಾತ್ರಿ ಸುಮಾರು 1.30 ಗಂಟೆಗೆ ಕೊರಟಗೆರೆಯ ತುಂಬಾಡಿ…
ತಿಪಟೂರು: ತಿಪಟೂರು ಗ್ರಾಮಾಂತರ ತಾಲೂಕಿನ ಬಿಳಿಗೆರೆ ವಲಯದ ಕುಪ್ಪುರು ಕಾರ್ಯಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರದಿಂದ ₹2,00,000 (ಎರಡು ಲಕ್ಷ ರೂಪಾಯಿ) ಮಂಜೂರಾಗಿದೆ. ಸಂಘದ ನಿರ್ಮಾಣ ಕಾರ್ಯಕ್ಕೆ ಸಹಕಾರ ಕೋರಿ ಸಮಿತಿಯವರು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಪೂಜ್ಯರು, ಕ್ಷೇತ್ರದ ಪ್ರಸಾದ ರೂಪದಲ್ಲಿ ಈ ಧನಸಹಾಯವನ್ನು ಮಂಜೂರು ಮಾಡಿದ್ದಾರೆ. ಈ ಮಂಜೂರಾತಿ ಪತ್ರವನ್ನು ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಸಂಘದ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿ, ಶ್ರೀ ಕ್ಷೇತ್ರದ ವಿವಿಧ ಜನಪರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ತಿಪಟೂರು ಗ್ರಾಮಾಂತರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಕೆ. ಅವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರಾದ ವಿಶ್ವಾರಾಧ್ಯ, ಕಾರ್ಯದರ್ಶಿ ತೊಂಟಾರಾಧ್ಯ, ಉಪಾಧ್ಯಕ್ಷರಾದ ಗೌರಮ್ಮ, ನಿರ್ದೇಶಕರಾದ ಕುಪ್ಪುರುಲಿಂಗಯ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಅಲ್ಲದೆ, ಬಿಳಿಗೆರೆ ವಲಯದ ಮೇಲ್ವಿಚಾರಕರಾದ ರಮೇಶ್ ಜಿ., ಸೇವಾಪ್ರತಿನಿಧಿ ಗೀತಾ,…
ಬೀದರ್: ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ ಸುರೇಖಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಉಪ ಕಾರ್ಯದರ್ಶಿಯಾಗಿದ್ದ ಸುರೇಖಾ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಬೀದರ್ ಗೆ ವರ್ಗಾಯಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಎಚ್. ಅವರು ಆಗಸ್ಟ್ 5ರಂದು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದಾರೆ. ಈ ಹಿಂದೆ ಬೀದರ್ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ ಸುರೇಖಾ ಅವರು ಅದೇ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಬೀದರ್‌ನ ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಪೂರ್ಣ ಪ್ರಮಾಣದಲ್ಲಿ ನೂತನ ಅಪರ ಜಿಲ್ಲಾಧಿಕಾರಿಯಾಗಿ ಮರುನೇಮಕಗೊಂಡಿದ್ದಾರೆ. ಇನ್ನು ಬೀದರ್ ಅಪರ ಜಿಲ್ಲಾಧಿಕಾರಿಯಾಗಿದ್ದ ಕೆಎಎಸ್ (ಸೂಪರ್ ಟೈಂ ಸ್ಕೇಲ್) ಅಧಿಕಾರಿ ಶಿವಾನಂದ ಬಿ.ಕರಾಳೆ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…
ರಾಘವೇಂದ್ರ ಅಡಿಗ ಎಚ್ಚೆನ್. ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ (HCG), ಬೆಂಗಳೂರು, ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಅನ್ನು ಬಳಸಿಕೊಂಡು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯನ್ನು ಪ್ರಾರಂಭಿಸಿದೆ. ಈ ಮಹತ್ವದ ಮೈಲಿಗಲ್ಲಿನೊಂದಿಗೆ, ಎಚ್‌ಸಿಜಿಯು ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳ ರೋಗಿಗಳಿಗೆ ಎಂಆರ್–ಮಾರ್ಗದರ್ಶಿತ ಹೊಂದಾಣಿಕೆಯ ವಿಕಿರಣ ಚಿಕಿತ್ಸೆಗೆ ಪ್ರವೇಶವನ್ನು ಒದಗಿಸಿದೆ. ಇದರ ಮೂಲಕ ವಿಕಿರಣ ಚಿಕಿತ್ಸಾ ಕ್ಷೇತ್ರದಲ್ಲಿನ ಅತ್ಯಂತ ಮುಂದುವರಿದ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಲ್ಲಿ ಒಂದನ್ನು ಅಗತ್ಯವಿರುವ ರೋಗಿಗಳಿಗೆ ಒದಗಿಸುವ ಮೂಲಕ, ಅವರಿಗೆ ಸುಧಾರಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುತ್ತದೆ. ಯುನಿಟಿಯು ಉನ್ನತ-ಕ್ಷೇತ್ರದ 1.5 ಟೆಸ್ಲಾ ಎಂಆರ್‌ಐ ಸ್ಕ್ಯಾನರ್ ಅನ್ನು ರೇಖೀಯ ವೇಗವರ್ಧಕದೊಂದಿಗೆ ಸಂಯೋಜಿಸುತ್ತದೆ. ಇದರಿಂದ ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಗಡ್ಡೆ ಮತ್ತು ಅದರ ಸುತ್ತಮುತ್ತಲಿನ ಅಂಗರಚನಾ ರಚನೆಯನ್ನು ನೈಜ ಸಮಯದಲ್ಲಿ ದೃಶ್ಯೀಕರಿಸಲು ಸಾಧ್ಯವಾಗುತ್ತದೆ. ಇದು ಚಿಕಿತ್ಸಾ ತಂಡಕ್ಕೆ ಒಂದು ಚಿಕಿತ್ಸಾ ಅವಧಿಯಿಂದ ಮುಂದಿನ ಚಿಕಿತ್ಸಾ ಅವಧಿಯವರೆಗೆ ಉಂಟಾಗುವ ಅಂಗರಚನಾ ಬದಲಾವಣೆಗಳಿಗೆ ಅನುಗುಣವಾಗಿ ಚಿಕಿತ್ಸಾ ಯೋಜನೆಯನ್ನು ಆನ್‌ಲೈನ್‌ನಲ್ಲಿ ಹೊಂದಾಣಿಕೆ ಮಾಡಲು ಅವಕಾಶ ನೀಡುತ್ತದೆ.…
ಹೊಳೆನರಸೀಪುರ: ನೂತನ ವಸತಿ ಸಚಿವರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಇಂದು ಹೊಳೆನರಸೀಪುರ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸಿದರು. ಈ ಶುಭ ಸಂದರ್ಭದಲ್ಲಿ ತಾಲೂಕಿನ ಜನತೆ ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಸೇಬಿನ ಹಾರ ಹಾಕಿ ಅತ್ಯಂತ ವಿಜೃಂಭಣೆಯಿಂದ ಸಚಿವರನ್ನು ಸ್ವಾಗತಿಸಿದರು. ಆಗಮನದ ನಂತರ ಹಾಸನ ಜಿಲ್ಲೆಯ ಸಂಸದರಾದ ಎಂ. ಶ್ರೇಯಸ್ ಪಟೇಲ್ ಹಾಗೂ ವಸತಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಜಂಟಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ತದನಂತರ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ವಿವಿಧ ಭಾಗಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಮತ್ತು ಸದಸ್ಯರು, ಯುವ ಕಾಂಗ್ರೆಸ್ ಮುಖಂಡರು, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕಿನ ವಿವಿಧ ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಶುಭ ಕೋರಿದರು. ವರದಿ:…
ಗದಗ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ್ (H.K. Patil) ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಗದಗ-ಬೆಟಗೇರಿ ನಗರಸಭೆಯ 22 ಕಾಂಗ್ರೆಸ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ಸಿ.ಎ. ಶ್ರೀಧರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ರಾಜೀನಾಮೆ ನೀಡಿದ 22 ಸದಸ್ಯರಲ್ಲಿ 17 ಮಂದಿ ಕಾಂಗ್ರೆಸ್ನಿಂದ ಗೆದ್ದ ಜನಪ್ರತಿನಿಧಿಗಳಾಗಿದ್ದರೆ, ಉಳಿದ 5 ಮಂದಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಎಚ್.ಕೆ. ಪಾಟೀಲ್ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ರಾಜ್ಯ ಮತ್ತು ಗದಗ ಜಿಲ್ಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಂತಹ ಹಿರಿಯ ನಾಯಕನನ್ನು ಸಂಪುಟದಿಂದ ಕೈಬಿಟ್ಟಿರುವುದು ತೀವ್ರ ಅನ್ಯಾಯ ಎಂದು ಬೆಂಬಲಿಗರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ…
ಬೆಂಗಳೂರು: ಕರ್ನಾಟಕ ಆಡಳಿತಾರೂಢ ಕಾಂಗ್ರೆಸ್ ಪಾರ್ಟಿಯಲ್ಲಿ ಆಂತರಿಕ ಭಿನ್ನಮತ ಮತ್ತೆ ಬಹಿರಂಗಗೊಂಡಿದ್ದು, ತುಮಕೂರು ಜಿಲ್ಲೆಯ ನಾಯಕರ ನಡುವಿನ ಜಗಳ ಬೀದಿಗೆ ಬಂದಿದೆ. ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಾಲಿನ ಬದಲಾಗಿ ವಿರೋಧ ಪಕ್ಷದ ಸಾಲಿನಲ್ಲಿ ತಮಗೆ ಆಸನ ನಿಗದಿಪಡಿಸುವಂತೆ ಕೋರಿರುವುದು ಪಕ್ಷದ ಒಳಗೆ ತೀವ್ರ ಸಂಚಲನ ಮೂಡಿಸಿದೆ. ಹಿರಿಯ ನಾಯಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ವಿಧಾನಸಭಾ ಸ್ಪೀಕರ್ ಅವರಿಗೆ ಪತ್ರ ಬರೆದು ವಿರೋಧ ಪಕ್ಷದ ಸಾಲಿನಲ್ಲಿ ಆಸನ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸು) ಅವರು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಆಡಳಿತ ಹಾಗೂ ಸಂಪುಟ ಸ್ಥಾನ ಹಂಚಿಕೆ ವಿಚಾರದಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಅಸಮಾಧಾನ ತೀವ್ರಗೊಂಡಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ…