ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ಸಂಬಂಧ ಸಚಿವ ರಾಜಣ್ಣ ಪುತ್ರ ಡಿಜಿಪಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಹನಿಟ್ರ್ಯಾಪ್ ಗೆ ಬಂದವರು ತಮ್ಮ ಹತ್ಯೆಗೆ ಯತ್ನಿಸಿದ್ರು ಎಂದು ರಾಜೇಂದ್ರ ರಾಜಣ್ಣ ಹೊಸ ತಿರುವು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ. ಸಚಿವರು ಕೂಡ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನನ್ನ ಮೇಲೆ ಹನಿಟ್ರ‍್ಯಾಪ್ ಆಗಿಲ್ಲ, ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಾ ಇತ್ತು ಎಂದು ಹೇಳಿದರು.
ನವೆಂಬರ್ 16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕೋಕೆ ಸ್ವಲ್ಪ ಜನ ಬಂದಿದ್ರು. ಆ ಸಂದರ್ಭದಲ್ಲಿ ಹತ್ಯೆ ಮಾಡಲು ಪ್ರಯತ್ನ ಮಾಡಿದ್ರು ಎಂದು ಸೋಮ, ಭರತ್ ಇಬ್ಬರ ಹೆಸರನ್ನು ಉಲ್ಲೇಖ ಮಾಡಿದರು.
ನನಗೆ ಇದು ಜನವರಿಯಲ್ಲಿ ಮಾಹಿತಿ ಸಿಕ್ಕಿತು. ನನ್ನ ಆಪ್ತರ ಮೂಲಕ ಆಡಿಯೋ ಸಿಕ್ಕಿತು. ಆಡಿಯೋದಲ್ಲಿ 5 ಲಕ್ಷ ಸುಪಾರಿ ನೀಡಿದ್ರು. ಮೂರು ಜನ ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಈ ಸಂಬಂಧ ಎಸ್ಪಿಗೆ ದೂರು ನೀಡಲು ಡಿಜಿ ಹೇಳಿದ್ದಾರೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4