ಪಾವಗಡ: ಮುಂದಿನ ವರ್ಷದ ಒಳಗೆ ಪಾವಗಡ ತಾಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸಲಾಗುವುದು ಎಂದು ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದರು.
ಸೋಮವಾರ ತುಮುಲ್ ಮಾಜಿ ನಿರ್ದೇಶಕ ಬೆಳ್ಳಿ ಬಟ್ಟುಲು ಚಂದ್ರಶೇಖರ ರೆಡ್ಡಿ ಅವರ ಖಾಸಗಿ ಕಾರ್ಯಕ್ರಮ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ ನಂತರ ಅವರು, ಮೊದಲು ಅರಣ್ಯ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ವೀಕ್ಷಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಚಂದ್ರಶೇಖರರೆಡ್ಡಿ ಅವರ ಮನೆಯ ಗೃಹಪ್ರವೇಶ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮನೆಯ ಮುಂಭಾಗ ತೆಂಗಿನ ಸಸಿ ನೆಟ್ಟು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ನೆಲೆಸಿರುವ ನಾಗಲಮಡಿಕೆಯ ಅಂತಃ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ಬೇಕಾಗುವ ಅನುದಾನವನ್ನು ನನ್ನ ಶಕ್ತಿ ಮೀರಿ ನೀಡಲಾಗುವುದು. ಜೀರ್ಣೋದ್ಧಾರದ ಗುದ್ಲಿ ಪೂಜೆಗೆ ನಾನೇ ಆಗಮಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ತುಮುಲ್ ಮಾಜಿ ನಿರ್ದೇಶಕ ಚಂದ್ರಶೇಖರ್ ರೆಡ್ಡಿ ಅವರ ಕುಟುಂಬದಿಂದ ಸನ್ಮಾನಿಸಿ ಗೌರವಿಸಿದರು. ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮತ್ತು ಬಿ.ಕೈ.ಹಳ್ಳಿ ಗ್ರಾಮದ ಮುಖಂಡ ಮಂಜುನಾಥರೆಡ್ಡಿ, ಬಿ.ಕೈ.ಹಳ್ಳಿ ಗ್ರಾಮದ ಕಾಮನ ದುರ್ಗದ ಬೆಟ್ಟದ ತಪಲಿನಲ್ಲಿ ಕೆರೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ಅನುದಾನ ಬಿಡುಗಡೆ ಮತ್ತು ಸಹಕಾರಕ್ಕೆ ಮನವಿ ಮಾಡಿದರು.
ಈ ವೇಳೆ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಡುಕೋಂಡಲು, ಮಧುಗಿರಿ ವಿಭಾಗದ ಉಮಾ, ಪ್ರಾದೇಶಿಕ ಅರಣ್ಯ ಅಧಿಕಾರಿ ಟಿ.ಎನ್. ರಾಕೇಶ್, ಸಾಮಾಜಿಕ ಅರಣ್ಯ ಅಧಿಕಾರಿ ಕೆ.ಎನ್. ಹರ್ಷಿತ. ಎ.ಶಂಕರರೆಡ್ಡಿ ಕಲ್ಪವೃಕ್ಷ ರವಿ, ಸಂಗೀತ ನಾಗಾರ್ಜುನ ರೆಡ್ಡಿ, ಡಿ.ವೇಲುರಾಜು, ಲಕ್ಷ್ಮಿನರಸಪ್ಪ, ಮಧುಗಿರಿ ವಿಎಸ್ ಎಸ್ ಎನ್ ಅಧ್ಯಕ್ಷ ಗೋವಿಂದರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚಿಕ್ಕೋಬರೆಡ್ಡಿ, ಜೈ ಶಂಕರರೆಡ್ಡಿ, ಭಾಸ್ಕರ್ ರೆಡ್ಡಿ ಮತ್ತಿತರರಿದ್ದರು.
ಅಂತಃ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿಗೆ ಸಚಿವರು ಸಹಕರಿಸಿದ್ದಾರೆ: ಅವರು ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ, ಅಂತಃ ಸುಬ್ರಹ್ಮಣ್ಯ ಸ್ವಾಮಿಯ ಜೀರ್ಣೋದ್ಧಾರಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಎಲ್ಲ ರೀತಿಯ ಸಹಕಾರ ನೀಡ್ತು ಮತ್ತು ನೂತನ ಸಮಿತಿ ರಚಿಸಲು ಸಹ ಸಮ್ಮತಿ ಸೂಚಿಸಿದ್ದಾರೆ. ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಜೀರ್ಣೋದ್ಧಾರಕ್ಕೆ ಮುುಂದಾಗಿರುವುದರಿಂದ ಪಾವಗಡ ತಾಲೂಕಿನ ಭಕ್ತರ ಹೃದಯದಲ್ಲಿ ಅವರು ಶಾಶ್ವತವಾಗಿ ನೆನೆಯುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಬರಪೀಡಿತ ಪಾವಗಡ ತಾಲೂಕನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ತುಂಗಭದ್ರಾ ಏಡದಂಡೆ ಕಾಲುವೆಯನ್ನು ತರಿತಗತಿಯಲ್ಲಿ ಪೂರ್ಣಗೊಳಿಸಿ ಮುಂದಿನ ವರ್ಷದ ಒಳಗೆ ನೀರು ಹರಿಸಲಾಗುವುದು. ಈಗಾಗಲೇ ತುಮಕೂರು ಮತ್ತು ಚಿತ್ರದುರ್ಗವರೆಗೂ ನೀರು ಹರಿಸಿದ್ದು ಮುಂದಿನ ವರ್ಷದ ಒಳಗೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
— ರಾಮಲಿಂಗಾರೆಡ್ಡಿ, ಅರಣ್ಯ ಸಚಿವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
