ಪಾವಗಡ: ಮಧ್ಯಪ್ರದೇಶದ ಬುರ್ಹಾನ್ ಪುರ್ ದಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ್ , ಎ.ಪಿ.ಜೆ ಅಬ್ದುಲ್ ಕಲಾಂ ನ್ಯಾಷನಲ್ ಕೌನ್ಸಿಲ್ ಆಫ್ ಯಂಗ್ ಸೈಂಟಿಸ್ಟ್ , ರಾಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಮ್ಯಾಕ್ರೋ ವಿಷನ್ ಅಕಾಡೆಮಿ ಬುರ್ಹಾನ್ ಪುರ ರವರ ಸಂಯುಕ್ತ ಆಶ್ರಯದಲ್ಲಿ ನಡೆದ 5 ನೇ ಭಾರತೀಯ ಸೈನ್ಸ್ ಟೆಕ್ನೋ ಫೆಸ್ಟಿವಲ್ ( BSTF )– 2025ನಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದ ವೈಯಕ್ತಿಕ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ ಹತ್ತನೇ ತರಗತಿಯ ವಿಧ್ಯಾರ್ಥಿಯಾದ ಭರತ್.ಎಂ ತೃತೀಯ ಸ್ಥಾನವನ್ನು ಗಳಿಸಿದ್ದಾನೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾರತದ ಪ್ರಖ್ಯಾತ ವಿಜ್ಞಾನಿಗಳಾದ ಡಾ.ಜೆ.ಜೆ.ರಾವಲ್, ಡಾ.ಬಿ.ಕೆ.ತ್ಯಾಗಿ, ಡಾ.ದಿಲೀಪ್ ಬಟ್ , ಡಾ.ಡಿ.ಕೆ.ಪಾಂಡೆ, ಡಾ.ಪುಲಕೇಷಿ ಪ್ರಜಾಪತಿ, ಡಾ.ಚಂದ್ರಮೌಳಿ ಜೋಷಿ, ಹಾಗೆಯೇ ಏಷ್ಯಾ ಖಂಡದ ಪ್ರತಿಷ್ಟಿತ ಕಾಲೇಜ್ ಆದ ಮ್ಯಾಕ್ರೋ ವಿಷನ್ ಅಕಾಡೆಮಿಯ ಸಂಸ್ಥಾಪಕರಾದ ಆನಂದ್ ಪ್ರಕಾಶ್ ಚೌಕ್ಷೆ, NCTS ನ ರಾಷ್ಟೀಯ ಕಾರ್ಯದರ್ಶಿ ಸಂದೀಪ್ ಪಾಟೀಲ್ ಮತ್ತು NCTS ನ ದಕ್ಷಿಣ ಭಾರತದ ನಿರ್ದೇಶಕರಾದ ಎಸ್.ವಿ.ಬುರ್ಲಿ ಅಲ್ಲದೇ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಬಂಗಾರದ ಪದಕ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿ ತೃತೀಯ ಸ್ಥಾನಗಳಿಸಿ ಆಯ್ಕೆಯಾಗಿರುವುದಕ್ಕೆ ಕಾರಣೀಕರ್ತರಾದ ವಿಜ್ಞಾನ ಶಿಕ್ಷಕರಾದ ರೇಣುಕರಾಜ್.ಜಿ.ಹೆಚ್. ರವರನ್ನು ಮುಖ್ಯಶಿಕ್ಷಕರು, ಸಹ ಶಿಕ್ಷಕರು ,ಎಸ್.ಡಿ.ಎಂ.ಸಿ. ಅದ್ಯಕ್ಷರು , ಸರ್ವ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಊರಿನ ಸಮಸ್ತ ಗ್ರಾಮಸ್ಥರುಗಳು ಅಭಿನಂದಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx