ಬೀದರ್: ನಗರದ ಭೀಮನಗರ ನಿವಾಸಿಯಾದ ಆರುತಿ (28) ಎಂಬ ಯುವತಿ ಕಾಣೆಯಾಗಿದ್ದು, ಅವರ ಮಾಹಿತಿ ದೊರೆತಲ್ಲಿ ತಿಳಿಸುವಂತೆ ಎಂದು ಬೀದರ್ ಉಪನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಆರುತಿ ಅವರು ಜ.24 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದು, ಅವರು 5 ಅಡಿ ಎತ್ತರವಾಗಿದ್ದು ಸಾಧಾರಣ ಮೈಕಟ್ಟು , ಗೋಧಿ ಮೈಬಣ್ಣ, ಕಪ್ಪು ಕೂದಲು, ಉದ್ದ ಮುಖ, ಅಗಲ ಹಣೆ ಉಳ್ಳವರಾಗಿದ್ದಾರೆ. ಕಾಣೆಯಾದ ಸಮಯದಲ್ಲಿ ಮೈಮೇಲೆ ಚಾಕಲೇಟ್ ಕಲರ್ ಚೆಕ್ಸ್ ಚೂಡಿದಾರ ಸಲ್ವಾರ್ ಮತ್ತು ಟಾಪ್ ಧರಿಸಿರುವ ಇವರು ಕನ್ನಡ, ಹಿಂದಿ, ಮಾರಾಠಿ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ
ಈ ಕಾಣೆಯಾದ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಬೀದರ್ ನಗರ ಪೊಲೀಸ್ ಠಾಣೆಯ ಪಿ ಎಸ್ ಐ ಮೊಬೈಲ್ ಸಂಖ್ಯೆ: 9480803445 ಗೆ ಸಂಪರ್ಕಿಸುವಂತೆ ಕೋರಲಾಗಿದೆ
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4