ಮಂಗಳೂರು: ನಕ್ಸಲರ ಶರಣಾಗತಿ ಪ್ರಕ್ರಿಯೆ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅನುಮಾನ ವ್ಯಕ್ತಪಡಿಸಿದ್ದು, ನಿಯಮ ಉಲ್ಲಂಘಿಸಿ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಎನ್ ಕೌಂಟರ್ ನಲ್ಲಿ ಮೃತಪಟ್ಟ ವಿಕ್ರಮ್ ಗೌಡ ಅವರಿಗೆ ಸೇರಿದ್ದು ಎನ್ನಲಾಗಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸರ್ಕಾರದ ಬಳಿ ಉತ್ತರವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ನಕ್ಸಲೀಯರು ಶರಣಾಗುವುದು ಎಂದರೆ ಅದು ನಂಬಿದ ತತ್ವ ಮತ್ತು ಸಿದ್ದಾಂತಕ್ಕೆ ಮಾಡಿದ ಮೋಸ. ದುಡಿಯುವ ಜನರಿಗೆ ದ್ರೋಹ ಮಾಡಿದಂತೆ. ದುಡ್ಡು ಮಾಡಲು ಹೋಗುತ್ತಾರೆ ಎಂದು ಜನರು ಆಡಿಕೊಳ್ಳುತ್ತಾರೆ. ನಮ ಜೊತೆ ಮಾತುಕತೆಗೆ ಬನ್ನಿ ಎಂದು ಸರ್ಕಾರ ಆಹ್ವಾನಿಸುತ್ತಿದೆ. ಲಕ್ಷಗಟ್ಟಲೇ ಹಣ ಕೊಡುತ್ತೇವೆ ಎನ್ನುತ್ತಾರೆ. ನಾವು ಸರ್ಕಾರದ ಪ್ಯಾಕೇಜ್ ಒಪ್ಪಿಕೊಂಡು ಶರಣಾಗುವುದೆಂದರೆ ನಮನ್ನು ನಾವು ಮಾರಿಕೊಂಡಂತೆ ಎಂದು ವಿಕ್ರಮ್ ಗೌಡ ಹೇಳಿರುವ ಆಡಿಯೋ ಬಹಿರಂಗಗೊಂಡಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.
ಈ ಹಿಂದೆಯೂ ಚಿಕ್ಕಮಗಳೂರಿನಲ್ಲಿ ನಕ್ಸಲ್ ಶರಣಾಗತಿ ಪ್ರಕ್ರಿಯೆ ಮಾಡಲಾಗಿದೆ. ಇದೊಂದು ದೊಡ್ಡ ಪ್ರಕ್ರಿಯೆ, ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಪಾಲಿಸಿ ಕೂಡಾ ಇದೆ. ನಕ್ಸಲ್ ಶರಣಾಗತಿಯ ಮೊದಲು ಹಲವು ಚರ್ಚೆಗಳನ್ನು ನಡೆಸಬೇಕಿದೆ. ಅವರು ಜೀವನದಲ್ಲಿ ಏನು ಆಗಬೇಕು ಎನ್ನೋದನ್ನು ನಿರ್ಧರಿಸಿಯೇ ಬರುತ್ತಾರೆ. ಅವರಿಗೆ ತರಬೇತಿ, ಬ್ಯಾಂಕ್ ಸಾಲ ಸೌಲಭ್ಯಗಳ ವ್ಯವಸ್ಥೆ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕಿದೆ. ಆ ನಂತರ ನಕ್ಸಲರ ಶರಣಾಗತಿ ಆಗುತ್ತಾರೆ ಎಂದು ಹೇಳಿದರು.
ಈ ಎಲ್ಲ ಚರ್ಚೆಯ ಬಳಿಕ ಅವರ ಮೇಲಿದ್ದ ಕೇಸುಗಳನ್ನು ಅವರು ಎದುರಿಸಬೇಕು. ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಷರತ್ತುಗಳೂ ಇವೆ. ಅವರು ಜಿಲ್ಲಾಡಳಿತ ಅಥವಾ ಪೊಲೀಸ್ ಠಾಣೆಯಲ್ಲಿ ಶರಣಾಗಬೇಕು ಎನ್ನುವ ನಿಯಮ ಇದೆ. ಪೊಲೀಸರಿಗೆ ಹಲವು ವರ್ಷಗಳಿಂದ ಬೇಕಾದ ನಕ್ಸಲರಾಗಿರುತ್ತಾರೆ. ಆದರೆ ಮುಖ್ಯಮಂತ್ರಿಗಳ ಮುಂದೆ ನಡೆದ ನಕ್ಸಲ್ ಶರಣಾಗತಿ ಪ್ರಕ್ರಿಯೆಯ ಮೇಲೆ ಸಹಜವಾಗಿ ಸಂಶಯ ಮೂಡುತ್ತದೆ ಎಂದರು.
ನಕ್ಸಲರ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭ ಕೆಲವೊಂದು ಶರತ್ತುಗಳಿರುತ್ತವೆ. ಆದರೆ ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್ ಶರಣಾಗತಿಯ ಬಗ್ಗೆ ಸ್ವಲ್ಪ ಅನುಮಾನ ಮೂಡಿಸಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx