ಬೆಂಗಳೂರು: ಸಣ್ಣ ಸಣ್ಣ ವಿಚಾರಕ್ಕೂ ರಾಜೀನಾಮೆ ಕೇಳುವುದು ಬಿಜೆಪಿಯವರಿಗೆ ಚಾಳಿಯಾಗಿದೆ. ಹೊಸ ವರ್ಷಕ್ಕಾದರೂ ಅವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಅವರು, ಡೆತ್ ನೋಟ್ನಲ್ಲಿ ಕಾರ್ಪೊರೇಟರ್ ಹೆಸರು ಬರೆದಿದ್ದಾರೆ. ಅನೇಕ ಜನರು ನಮ್ಮ ಜೊತೆಗೂ ಫೋಟೋ ತೆಗೆಸಿಕೊಳ್ತಾರೆ. ಹಾಗಾಂತ ಪ್ರಿಯಾಂಕ್ ಖರ್ಗೆ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಅವರು ಹೇಳಿದರು.
ಸಣ್ಣ ವಿಷಯಕ್ಕೂ ರಾಜೀನಾಮೆ ಕೊಡಬೇಕು ಅನ್ನೋದು ಬಿಜೆಪಿಯ ಚಾಳಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳು ಬೇರೆ ಬೇರೆಯವರ ಜೊತೆ ಇರುತ್ತಾರೆ. ಬಿಜೆಪಿಯವರಿಗೆ ಬೇರೆ ಉದ್ಯೋಗ ಇಲ್ಲ. ಪೊಲೀಸ್ ಠಾಣೆ ಮುಂದೆ ಹೋಗೋದು ಪ್ರತಿಭಟನೆ ಮಾಡೋದು, ಸುಮ್ಮನೆ ಆರೋಪ ಮಾಡೋದು ಅಷ್ಟೇ ಕೆಲಸ. ಪ್ರಿಯಾಂಕ್ ಖರ್ಗೆ ಮೇಲೆ ಏನಾದ್ರೂ ಆರೋಪ ಇದೆಯಾ ಹೇಳಿ? ಎಲ್ಲೋ ನಡೆದಿದ್ದಕ್ಕೆ ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx